Viral Video: ಅರೆ, ಹೀಗೂ ಮಲಗುತ್ತಾ ಬೆಕ್ಕು? ವೈರಲ್ ಆಗ್ತಿದೆ ಈ ಮುದ್ದು ಬೆಕ್ಕಿನ ಮರಿಯ ಸ್ಟೈಲ್

ಈ ವಿಡಿಯೋದಲ್ಲಿ ಈ ಬೆಕ್ಕು ವಿಶಿಷ್ಟವಾದ ರೀತಿಯಲ್ಲಿ ಮಲಗಿದ್ದು, ನೋಡಿದರೆ ನಿಮಗೆ ನಗು ಬರುತ್ತದೆ. ಸಾಮಾನ್ಯವಾಗಿ ಬೆಕ್ಕುಗಳು ಒಂದು ಮಗ್ಗುಲಲ್ಲಿ ಬಾಗಿ ಮಲಗುತ್ತವೆ, ಆದರೆ ಈ ಬೆಕ್ಕು ಅಂಗಾತ ಮಲಗಿದೆ ಮತ್ತು ಅದರ ಮುಖವನ್ನು ಕಿಟಕಿಯ ಕಡೆ ಮಾಡಿದ್ದು, ತನ್ನ ಮುಂದಿನ ಕಾಲುಗಳನ್ನು ದೂರ ಹರಡಿದೆ ಎಂದು ಹೇಳಬಹುದು.

ವೈರಲ್ ವಿಡಿಯೋ

ವೈರಲ್ ವಿಡಿಯೋ

  • Share this:
ಬೆಕ್ಕುಗಳು ಅದರಲ್ಲೂ ಮನೆಯಲ್ಲಿ ಸಾಕಿಕೊಂಡಿರುವ ಬೆಕ್ಕುಗಳು (Cats) ನೋಡುವುದಕ್ಕೆ ತುಂಬಾನೇ ಮುದ್ದಾಗಿ ಮತ್ತು ತುಂಟಾಟಗಳನ್ನು ಮಾಡುತ್ತ ನಮ್ಮನ್ನು ರಂಜಿಸುತ್ತಾ ಇರುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಬೆಕ್ಕುಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮ(Social media)ದಲ್ಲಿ ಆಗಾಗ್ಗೆ ಬರುತ್ತಲೇ ಇರುತ್ತವೆ. ಕಳೆದ ವಾರ ಸಾಮಾಜಿಕ ಮಾಧ್ಯಮದಲ್ಲಿ ಪುಟ್ಟ ಮಗುವಿಗೆ ಮನೆಯಲ್ಲಿ ಸಾಕಿಕೊಂಡ ಒಂದು ಬೆಕ್ಕು ಮಸಾಜ್ ಮಾಡುತ್ತಿರುವ ಕ್ಯೂಟ್ ವಿಡಿಯೋವೊಂದನ್ನು (Video) ನೋಡಿ ನೆಟ್ಟಿಗರು (Netizens) ಫುಲ್ ಫಿದಾ ಆಗಿದ್ದರು. ಆ ವಿಡಿಯೋದಲ್ಲಿ ಕಪ್ಪು ಬೆಕ್ಕು ಆ ಮಗುವಿನ ಬೆನ್ನು ಉಜ್ಜಿ ಮಸಾಜ್ ಮಾಡುತ್ತಿರುವುದನ್ನು ನಾವು ನೋಡಬಹುದಾಗಿತ್ತು.

ಹೀಗೆ ಈ ಬೆಕ್ಕುಗಳು ಮಾಡುವ ಚೇಷ್ಟೆಗಳು ಒಂದೆರಡಲ್ಲ ಬಿಡಿ, ಕೆಲವೊಮ್ಮೆ ಮನೆಯ ಮಕ್ಕಳ ಜೊತೆಯಲ್ಲಿ ಚೆನ್ನಾಗಿ ಆಟ ಆಡಿಕೊಂಡು ಇರುತ್ತವೆ ಮತ್ತು ಕೆಲವೊಮ್ಮೆ ಇಂತಹ ತುಂಟಾಟಗಳನ್ನು ಮಾಡುತ್ತಾ ಇರುತ್ತವೆ. ಒಟ್ಟಿನಲ್ಲಿ ಇಂತಹ ವಿಡಿಯೋಗಳು ನೋಡುಗರ ಮನಸ್ಸಿಗೆ ಮುದವನ್ನು ನೀಡುವುದಂತೂ ಗ್ಯಾರಂಟಿ ಎಂದು ಹೇಳಬಹುದು.

ಮುದ್ದಾದ ಬೆಕ್ಕಿನ ವಿಡಿಯೋ

ಇಂತಹ ವಿಡಿಯೋಗಳನ್ನು ನಾವು ಬೆಳಗ್ಗೆ ಬೆಳಗ್ಗೆ ನೋಡಿದರೆ ಇಡೀ ದಿನ ನಮ್ಮ ಮನಸ್ಥಿತಿಯನ್ನು ಚೆನ್ನಾಗಿಡುತ್ತವೆ ಎಂದು ಹೇಳಬಹುದು. ನೀವು ಮತ್ತೆ ಈಗ ಅಂತಹದೇ ಒಂದು ಬೆಕ್ಕಿನ ಮರಿಯನ್ನು ಒಳಗೊಂಡ ಮುದ್ದಾದ ವಿಡಿಯೋವನ್ನು ಹುಡುಕುತ್ತಿದ್ದರೆ, ನೀವು ಅದೃಷ್ಟವಂತರು ಅಂದುಕೊಳ್ಳಿರಿ. ಏಕೆಂದರೆ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋ ನೋಡಿ ನೀವು ನಗದೆ ಸುಮ್ಮನಿರಲು ಸಾಧ್ಯವೇ ಇಲ್ಲ ಎಂದು ಹೇಳಬಹುದು.

ಹೀಗೂ ಮಲಗುತ್ತಾ ಬೆಕ್ಕು?

ಏಕೆಂದರೆ ಈ ವಿಡಿಯೋದಲ್ಲಿ ಈ ಬೆಕ್ಕು ವಿಶಿಷ್ಟವಾದ ರೀತಿಯಲ್ಲಿ ಮಲಗಿದ್ದು, ನೋಡಿದರೆ ನಿಮಗೆ ನಗು ಬರುತ್ತದೆ. ಸಾಮಾನ್ಯವಾಗಿ ಬೆಕ್ಕುಗಳು ಒಂದು ಮಗ್ಗುಲಲ್ಲಿ ಬಾಗಿ ಮಲಗುತ್ತವೆ, ಆದರೆ ಈ ಬೆಕ್ಕು ಅಂಗಾತ ಮಲಗಿದೆ ಮತ್ತು ಅದರ ಮುಖವನ್ನು ಕಿಟಕಿಯ ಕಡೆ ಮಾಡಿದ್ದು, ತನ್ನ ಮುಂದಿನ ಕಾಲುಗಳನ್ನು ದೂರ ಹರಡಿದೆ ಎಂದು ಹೇಳಬಹುದು.

ಬೆಕ್ಕಿಗಾಗಿಯೇ ಇನ್​ಸ್ಟಾಗ್ರಾಮ್ ಪೇಜ್

ಈ ಕ್ಲಿಪ್ ಅನ್ನು ಮೂಲತಃ ಜನವರಿಯಲ್ಲಿ ವಿನ್ಸ್ಟನ್ ಬ್ರಿಟೀಷ್ ಬಾಯ್ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಇರುವ ಬೆಕ್ಕಿಗೆ ಈ ಪುಟವನ್ನು ಸಮರ್ಪಿಸಲಾಗಿದೆ.

ನೆಟ್ಟಿಗರನ್ನು ಸೆಳೆದ ವಿಡಿಯೋ

ಇನ್‌ಸ್ಟಾಗ್ರಾಮ್ ತಮ್ಮ ಸರಣಿಯ ಭಾಗವಾಗಿ ತಮ್ಮ ಅಧಿಕೃತ ಇನ್‌ಸ್ಟಾ ಪುಟದಲ್ಲಿ ಪೋಸ್ಟ್ ಮಾಡಿದ ನಂತರ ಈ ವಿಡಿಯೋ ಇತ್ತೀಚೆಗೆ ಜನರ ಗಮನವನ್ನು ಮತ್ತೆ ಸೆಳೆಯಿತು ಎಂದು ಹೇಳಬಹುದು. "ವಿನ್‌ಸ್ಟನ್ ತನ್ನ ಪ್ರತಿ ದಿನದ ಊಟದ ನಂತರ ನಿದ್ದೆಯ ಬಗ್ಗೆ. ಅದು ಯಾವುದೇ ಗಟ್ಟಿಯಾದ ಮೇಲ್ಮೈಗಳಲ್ಲಿ ಮಲಗಲು ಇಷ್ಟಪಡುತ್ತದೆ ಮತ್ತು ನಾವು ಅದಕ್ಕಾಗಿ ಖರೀದಿಸಿದ ಎಲ್ಲಾ ಮೃದುವಾದ ದಿಂಬುಗಳನ್ನು ನಿರ್ಲಕ್ಷಿಸುತ್ತದೆ"ಎಂದು ವಿಡಿಯೋ ಜೊತೆಯಲ್ಲಿ ಶೀರ್ಷಿಕೆಯೊಂದರಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: Viral Video: ಮಗಳ ಮದುವೆಗೆ ಫುಲ್ ಖುಷ್, ಊ ಅಂಟಾವಾ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಅಪ್ಪ

ಕೆಲವು ದಿನಗಳ ಹಿಂದೆ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಹಂಚಿಕೊಂಡಾಗಿನಿಂದ, ಈ ಕ್ಲಿಪ್ ಸುಮಾರು 1.1 ಮಿಲಿಯನ್‌ಗಿಂತಲೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ ಮತ್ತು ಈ ಸಂಖ್ಯೆ ತ್ವರಿತವಾಗಿ ಹೆಚ್ಚುತ್ತಿದೆ ಎಂದು ಹೇಳಬಹುದು. ಮುದ್ದಾದ ಬೆಕ್ಕಿನ ವಿಡಿಯೋವು ವಿವಿಧ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಲು ಜನರನ್ನು ಪ್ರೇರೇಪಿಸಿದೆ. ಕೆಲವರು ಜೋರಾಗಿ ನಗುವ ಎಮೋಜಿಗಳನ್ನು ಬಳಸಿ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದರೆ, ಇನ್ನೂ ಕೆಲವರು ಬೆಂಕಿ ಎಮೋಟಿಕಾನ್‌ಗಳ ಸಹಾಯದಿಂದ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Snakes Video: ನಾನು ಕೊಡಲ್ಲ, ಎರಡು ನನಗೆ ಬೇಕೆಂದು ಕೋಳಿ ಮರಿಯನ್ನ ಹೊತ್ತೊಯ್ದ ನಾಗರಾಜ: ವಿಡಿಯೋ ನೋಡಿ

ನಂತರ ಬೆಕ್ಕು ಮಲಗಿರುವ ಅಸಾಮಾನ್ಯವಾದ ಭಂಗಿಯನ್ನು ನೋಡಿ ಕೆಲವರು ತಮ್ಮ ಹೃದಯದ ಭಾವನೆಗಳನ್ನು ಪೋಸ್ಟ್ ಮಾಡಿದ್ದಾರೆ. ಉಲ್ಲಾಸಭರಿತ ಮುದ್ದಾದ ವಿಡಿಯೋವನ್ನು ತೋರಿಸಲು ಅನೇಕರು ಇತರರನ್ನು ಟ್ಯಾಗ್ ಮಾಡಿದ್ದಾರೆ. "ಇಲ್ಲಿ ಏನೂ ನಡೆಯುತ್ತಿಲ್ಲ! ಕೇವಲ ಬೆಕ್ಕಿನ ಕಿರುನಿದ್ರೆ" ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಬರೆದಿದ್ದಾರೆ. "ಮಗುವಿನಂತೆ ಮಲಗುವುದು" ಎಂದು ಇನ್ನೊಬ್ಬರು ಪೋಸ್ಟ್ ಮಾಡಿದ್ದಾರೆ.
Published by:Divya D
First published: