Viral News: ಹೆಲ್ಮೆಟ್ ಧರಿಸಿ ಬೈಕ್ ಸವಾರಿ ಮಾಡಿದ ಜಾಣಬೆಕ್ಕು..! ಅಯ್ಯೋ ಎಷ್ಟೊಂದು ಮುದ್ದು

ಇಲ್ಲೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಹರಿದಾಡುತ್ತಿದ್ದು, ಇದರಲ್ಲಿ ಒಂದು ಪುಟ್ಟ ಬೆಕ್ಕು ತನ್ನ ಒಡೆಯನೊಂದಿಗೆ ಮನೆಯಿಂದ ಹೊರಗೆ ಮೋಟರ್ ಸೈಕಲ್ ಮೇಲೆ ಕುಳಿತು ಸವಾರಿ ಮಾಡುವಾಗ ಹೆಲ್ಮೆಟ್ ಧರಿಸಿ, ಗಟ್ಟಿಯಾಗಿ ಪೆಟ್ರೋಲ್ ಟ್ಯಾಂಕ್ ಮೇಲೆ ತನ್ನ ಮುಂದಿನ ಎರಡು ಕಾಲುಗಳನ್ನು ಒಳ್ಳೆ ಕೈಗಳಂತೆ ಹಿಡಿದುಕೊಂಡು ಕೂತಿದೆ.

ರೈಡ್ ಮಾಡುತ್ತಿರೋ ಬೆಕ್ಕು

ರೈಡ್ ಮಾಡುತ್ತಿರೋ ಬೆಕ್ಕು

  • Share this:
ಸಾಮಾನ್ಯವಾಗಿ ನಾವು ದ್ವಿಚಕ್ರ ವಾಹನವನ್ನು (Two wheeler) ಮನೆಯಿಂದ ಹೊರ ತೆಗೆದಾಗ ಮನೆಯಲ್ಲಿರುವ ಹಿರಿಯರು ಹೇಳುವ ಮೊದಲ ಮಾತು ‘ಹೆಲ್ಮೆಟ್ ಧರಿಸಿ ಗಾಡಿ ಓಡಿಸಿ, ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸಬೇಡಿ’ (Wear Helmet) ಅಂತ. ಆದರೂ ಇಲ್ಲೇ ಹೋಗಿ ಕೂಡಲೇ ಬಂದು ಬಿಡ್ತೀವಿ ಅಂತ ಮೋಟರ್ ಸೈಕಲ್ ಶುರು ಮಾಡಿಕೊಂಡು ಅಲ್ಲಿಂದ ಬೇಗನೆ ಹೊರಡುತ್ತೇವೆ. ಆದರೆ ಹೆಲ್ಮೆಟ್ ಇಲ್ಲದ ಸವಾರಿ ಒಮ್ಮೊಮ್ಮೆ ನಮ್ಮ ಪ್ರಾಣಕ್ಕೆ ಕುತ್ತು ತರುವುದುಂಟು ಎಂಬುದನ್ನು ಪ್ರತಿಯೊಬ್ಬರು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶವಾಗಿದೆ. ಸಂಚಾರಿ ಪೊಲೀಸರು (Traffic police) ಸಹ ವಾಹನ ಸವಾರರಿಗೆ ಹೆಲ್ಮೆಟ್ ಧರಿಸಿ, ಪ್ರಾಣವನ್ನು ಕಾಪಾಡಿಕೊಳ್ಳಿರಿ ಎಂದು ಅರಿವು ಮೂಡಿಸುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.

ಅಲ್ಲಲ್ಲಿ ವಾಹನಗಳನ್ನು ಅಡ್ಡಗಟ್ಟಿ ನಿಲ್ಲಿಸಿ ವಾಹನ ಸವಾರರು ಹೆಲ್ಮೆಟ್ ಧರಿಸಿದ್ದಾರೋ, ಇಲ್ಲವೋ ಅಂತ ಪರಿಶೀಲಿಸಿ ಬಿಡುವುದುಂಟು. ಇಷ್ಟಾದರೂ ಎಷ್ಟೋ ಜನರು ಅಸಡ್ಡೆಯಿಂದ ಮೋಟರ್ ಸೈಕಲ್ ಚಲಾಯಿಸುವಾಗ ಹೆಲ್ಮೆಟ್ ಇಲ್ಲದೆಯೇ ಹಾಗೇ ವೇಗವಾಗಿ ಚಲಾಯಿಸುವಾಗ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿರುವವರನ್ನು ಮತ್ತು ತಮ್ಮ ಪ್ರಾಣವನ್ನೇ ಕಳೆದು ಕೊಂಡವರನ್ನು ನಾವು ನೋಡಿರುತ್ತೇವೆ.

ಹೆಲ್ಮೆಟ್ ಹಾಕೋ ಬೆಕ್ಕು

ಈ ಹೆಲ್ಮೆಟ್ ಧರಿಸುವುದರ ಬಗ್ಗೆ ಈಗೇಕೆ ಇಷ್ಟೊಂದು ಪೀಠಿಕೆ ಹಾಕುತ್ತಿದ್ದೇವೆ ಎಂದು ನಿಮಗೆ ಪ್ರಶ್ನೆಯೊಂದು ಮೂಡಬಹುದು. ಬನ್ನಿ..ಬುದ್ದಿವಂತ ಪ್ರಾಣಿ ಎಂದು ಕರೆಸಿಕೊಳ್ಳುವ ಈ ಮನುಷ್ಯನಿಗೆ ಇಲ್ಲದ ಆ ಸಾಮಾನ್ಯ ಅರಿವು ಒಂದು ಚಿಕ್ಕ ಪ್ರಾಣಿಗಿದೆ ಎನ್ನುವುದನ್ನು ತೋರಿಸುತ್ತೇವೆ.

ಗಟ್ಟಿಯಾಗಿ ಪೆಟ್ರೋಲ್ ಟ್ಯಾಂಕ್ ಮೇಲೆ ಕಾಲಿಟ್ಟು ಕೂತ ಬೆಕ್ಕು

ಈ ಕೂಲ್ ಕ್ಯಾಟ್‌ನ ವಿಡಿಯೋ ನಿಮಗೆ ಅದ್ಭುತ ಅಂತಾನೂ ಅನ್ನಿಸಬಹುದು ಮತ್ತು ಇದು ನಿಮ್ಮನ್ನು ನಗಿಸದೇ ಬಿಡದು ಎಂದು ಹೇಳಬಹುದು. ಇಲ್ಲಿ ಪುಟ್ಟ ಬೆಕ್ಕು ತನ್ನ ಒಡೆಯನೊಂದಿಗೆ ಹೊರಗೆ ಹೋಗುವಾಗ ಪುಟ್ಟ ಹೆಲ್ಮೆಟ್ ಅನ್ನು ಧರಿಸಿ ತುಂಬಾನೇ ಮುದ್ದಾಗಿ ಕಾಣುತ್ತಿದೆ.

ಟಿಕ್​ಟಾಕ್ ವಿಡಿಯೋ

ಈ ಪುಟ್ಟ ವಿಡಿಯೋವನ್ನು ಐದು ದಿನಗಳ ಹಿಂದೆ ಮೂಲತಃ ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಲಾಯಿತು ಮತ್ತು ನಂತರ ಇದನ್ನು ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಮತ್ತೆ ಹಂಚಿಕೊಳ್ಳಲಾಯಿತು. ಈ ವಿಡಿಯೋ ಪ್ರಾರಂಭದಲ್ಲಿ ರಸ್ತೆಯ ಬದಿಯಲ್ಲಿ ಒಂದು ಬೈಕ್ ಅನ್ನು ನಿಲ್ಲಿಸಿದ್ದು, ಅದರ ಮೇಲೆ ಆ ಪುಟ್ಟ ಬೆಕ್ಕು ಕ್ಯೂಟ್ ಆಗಿ ಚಿಕ್ಕ ಹೆಲ್ಮೆಟ್ ಅನ್ನು ಧರಿಸಿ ನೇರವಾಗಿ ಕುಳಿತಿದೆ.

ಇದನ್ನೂ ಓದಿ: Viral Video: ಈ ಬೆಕ್ಕು ಮಗುವಿನ ಬೆನ್ನ ಮೇಲೆ ಕುಳಿತು ಮಾಡುತ್ತಿರೋದಾದ್ರೂ ಏನು ಅಂತ ನೀವೇ ಒಮ್ಮೆ ನೋಡಿ

ನಂತರ ಈ ಆಸಕ್ತಿದಾಯಕ ವಿಡಿಯೋ ಹಾಗೆ ಮುಂದುವರೆದಂತೆ ಹೆಲ್ಮೆಟ್ ಧರಿಸಿದ ಬೆಕ್ಕು ತನ್ನ ಒಡೆಯನೊಂದಿಗೆ ಬೈಕ್ ಸವಾರಿ ಹೋಗುತ್ತಿರುವುದನ್ನು ನೋಡಬಹುದು ಮತ್ತು ಇಲ್ಲಿ ಈ ಬೆಕ್ಕು ಎಷ್ಟು ಆರಾಮವಾಗಿ ಕುಳಿತುಕೊಂಡಿದೆ ಎಂದು ನೋಡುವುದೇ ಒಂದು ಚೆಂದ ಎಂದು ಹೇಳಬಹುದು.


View this post on Instagram


A post shared by @chrisvanssis


ಯಾವುದೇ ಶೀರ್ಷಿಕೆಯಿಲ್ಲದೆ ಹಂಚಿಕೊಳ್ಳಲಾಗಿದ್ದರೂ, ಈ ವಿಡಿಯೋ ಮಾತ್ರ ನೋಡುಗರಿಗೆ ಸಂಪೂರ್ಣವಾದ ಮನರಂಜನೆ ನೀಡುತ್ತದೆ ಎಂದು ಹೇಳಬಹುದು. ಈ ವೀಡಿಯೋ ಹಂಚಿಕೊಂಡಾಗಿನಿಂದ, ಕ್ಲಿಪ್ 10,000 ಕ್ಕೂ ಹೆಚ್ಚು ಲೈಕ್‌ಗಳನ್ನು ಸಂಗ್ರಹಿಸಿದೆ ಮತ್ತು ಈ ಸಂಖ್ಯೆ ಇನ್ನೂ ಹೆಚ್ಚುತ್ತಿದೆ ಎಂದು ಹೇಳಬಹುದು. ಬರೀ ಲೈಕ್ ಮಾಡುವುದಷ್ಟೇ ಅಲ್ಲದೆ ಅನೇಕ ನೆಟ್ಟಿಗರು ವಿವಿಧ ಕಾಮೆಂಟ್‌ಗಳನ್ನು ಸಹ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Viral Story: ಈತ 9 ಪತ್ನಿಯರ ಮುದ್ದಿನ ಗಂಡ! ಆದರೀಗ ಒಬ್ಬಾಕೆಗೆ ವಿಚ್ಛೇದನ​ ಬೇಕಂತೆ!

"ಓ ದೇವರೇ ಇದು ತುಂಬಾನೇ ಮುದ್ದಾದ ಬೆಕ್ಕು" ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಬರೆದಿದ್ದರೆ, "ಎಷ್ಟು ಕೂಲ್ ಆಗಿದೆ ಇದು" ಅಂತ ಇನ್ನೊಬ್ಬರು ಪೋಸ್ಟ್ ಮಾಡಿದ್ದಾರೆ. "ಎಂತಹ ಒಳ್ಳೆಯ ಬೆಕ್ಕು” ಎಂದು ಮೂರನೆಯವರು ಹೇಳಿದ್ದಾರೆ.
Published by:Divya D
First published: