Viral Video: ಐದು ಅಂತಸ್ತಿನ ಕಟ್ಟಡದಿಂದ ಜಿಗಿದ ಬೆಕ್ಕು...!; ವಿಡಿಯೋ ವೈರಲ್

ಚಿಕಾಗೊ ಎಂಗಲ್ವುಡ್ ನೆರೆಹೊರೆಯ ಕಟ್ಡಡದಲ್ಲಿ ಸಣ್ಣಗೆ ಬೆಂಕಿ ಕಾಣಿಸಿಕೊಂಡಿತ್ತು. ಕಟ್ಟಡದೊಳಗಿನ ವಸ್ತುಗಳು ಬೆಂಕಿಗೆ ಆಹುತಿಯಾಗುತ್ತಿದ್ದವು. ಹೊಗೆ ಸಣ್ಣಗೆ ಕಟ್ಟಡದಿಂದ ಹೊರಬರುತ್ತಿತ್ತು. ಈ ದೃಶ್ಯದ ವಿಡಿಯೋ ಮಾಡುತ್ತಿದ್ದ ವೇಳೆ ಬೆಕ್ಕು ಕಟ್ಟಡದಿಂದ ಹೊರಗೆ ಹಾರಿದೆ ಎಂದು ಸಿಎನ್‍ಎನ್ ವರದಿ ಮಾಡಿದೆ.

ಐದು ಅಂತಸ್ತಿನ ಕಟ್ಟಡದಿಂದ ಜಿಗಿದ ಬೆಕ್ಕು

ಐದು ಅಂತಸ್ತಿನ ಕಟ್ಟಡದಿಂದ ಜಿಗಿದ ಬೆಕ್ಕು

  • Share this:
    ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಕಟ್ಟಡದಿಂದ ಹೊರಕ್ಕೆ ಬೆಕ್ಕು ನೆಗೆದು ಪ್ರಾಣ ಉಳಿಸಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೌದು, ಚಿಕಾಗೋದ ಒಂದು ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಆ ವೇಳೆ ಬೆಕ್ಕೊಂದು ಐದನೇ ಅಂತಸ್ತಿನಿಂದ ಕಟ್ಡಡದ ಕಿಟಕಿಯಿಂದ ಹೊರಗಿನ ಕಾಂಪೌಂಡ್ ಹತ್ತಿರ ಹಾರಿದೆ. ಈ ವಿಡಿಯೋ ಚಿಕಾಗೋ ಫೈರ್ ಮೀಡಿಯಾ ಎಂಬ ಖಾತೆಯಲ್ಲಿ ಶೇರ್ ಆಗಿದೆ. ಈಗಾಗಲೇ ಇದನ್ನು ಒಂದು ಮಿಲಿಯನ್‍ಕ್ಕೂ ಹೆಚ್ಚು ವೀಕ್ಷಕರು ವೀಕ್ಷಿಸಿದ್ದು, ಬೆಕ್ಕಿನ ಸಾಹಸಕ್ಕೆ ಹಲವಾರು ಮಂದಿ ಬೆರಗಾಗಿದ್ದಾರೆ.

    ಚಿಕಾಗೊ ಎಂಗಲ್ವುಡ್ ನೆರೆಹೊರೆಯ ಕಟ್ಡಡದಲ್ಲಿ ಸಣ್ಣಗೆ ಬೆಂಕಿ ಕಾಣಿಸಿಕೊಂಡಿತ್ತು. ಕಟ್ಟಡದೊಳಗಿನ ವಸ್ತುಗಳು ಬೆಂಕಿಗೆ ಆಹುತಿಯಾಗುತ್ತಿದ್ದವು. ಹೊಗೆ ಸಣ್ಣಗೆ ಕಟ್ಟಡದಿಂದ ಹೊರಬರುತ್ತಿತ್ತು. ಈ ದೃಶ್ಯದ ವಿಡಿಯೋ ಮಾಡುತ್ತಿದ್ದ ವೇಳೆ ಬೆಕ್ಕು ಕಟ್ಟಡದಿಂದ ಹೊರಗೆ ಹಾರಿದೆ ಎಂದು ಸಿಎನ್‍ಎನ್ ವರದಿ ಮಾಡಿದೆ.

    ಈ ವಿಡಿಯೋ ನೋಡಿದರೆ ಕಪ್ಪುಬಣ್ಣದ ಬೆಕ್ಕು ಕಟ್ಟಡದಿಂದ ಹುಲ್ಲಿನ ಮೇಲೆ ಹಾರಿ ಹೋಗಿದೆ, ಅದಕ್ಕೆ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ತಿಳಿಯುತ್ತದೆ. ಇದನ್ನು 13 ಸಾವಿರಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದು, ಆರು ಸಾವಿರ ಮಂದಿ ರೀ ಟ್ವೀಟ್ ಮಾಡಿದ್ದಾರೆ. ಇದಕ್ಕೆ ನೂರಾರು ಜನ ಕಮೆಂಟ್ ಮಾಡಿದ್ದು, ಬೆಕ್ಕಿನ ನೆಗೆತಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.

    71 ವರ್ಷಗಳ ನಂತರ ಪತ್ತೆಯಾದ ಕ್ಯುರೋನ್‌ ಗ್ರಾಮ; ಇಟಲಿಯ ಈ ಹಳ್ಳಿಗೆ ದಾಂಗುಡಿ ಇಟ್ಟ ಪ್ರವಾಸಿಗರು ..!

    ಇದರಲ್ಲಿ ಡಿಟ್‍ಮೆಂಟಲ್‍ಫ್ಲೋಸ್ ಎಂಬುವವರು ಟ್ವೀಟ್ ಮಾಡಿ ಇದು ನನ್ನ ಹೀರೋ ಆಗಿಬಿಟ್ಟಿತು ಎಂದು ಹೇಳಿದರೆ, ಇನ್ನೊಬ್ಬರು ಕಪ್ಪು ಬೆಕ್ಕು ಹುಲ್ಲಿನ ಮೇಲೆ ಹಾರುವ ಮೊದಲು ಒಂದು ಸಣ್ಣ ವಸ್ತು ಹಾರಿದಂತೆ ಕಂಡಿತು. ಅದು ಬೆಕ್ಕಿನ ಮರಿಯಾಗಿರಬಹುದು. ಅದಕ್ಕೆ ಏನಾಯಿತು ಎಂಬುದು ತಿಳಿದಿಲ್ಲ ಎಂದು ಪಲಾಡಿನ್ 55 ಎಂಬುವವರು ಕೇಳಿದ್ದಾರೆ.

    ಮತ್ತೊಬ್ಬರು ಅದ್ಭುತ! ಆದರೆ ನಿಮ್ಮ ಯಾತನೆಯನ್ನು ಊಹಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇನ್ನೊಬ್ಬರು ನಾನು 80ರಲ್ಲಿ ಒಂದು ಬೆಕ್ಕನ್ನು ಸಾಕಿದ್ದೆ. ಅದು ಸುಮಾರು 10ನೇ ಮಹಡಿಯಿಂದ ಬಿದ್ದರೂ ಏನು ಆಗಿಲ್ಲ ಎಂಬಂತೆಯೇ ಇತ್ತು. ಯಾವುದೇ ಮೂಳೆ ಮುರಿತವಿಲ್ಲ ನೋವಿಲ್ಲ. ಆದರೂ ವೈದ್ಯರ ಬಳಿ ಕರೆದೊಯ್ದೆವು. ವೈದ್ಯರು ಕೆಲವು ಔಷಧಿ ನೀಡಿದರು. ಆದರೆ ಬೆಕ್ಕು ಎಂದಿನಂತೆಯೇ ಇತ್ತು. ಬೆಕ್ಕು ನಿಜವಾಗಿಯೂ ಅದ್ಭುತ ಎಂದು ಪಟ್ರಿಸಿಯಾ ಬಿಯಾನ್ಕೋ ಟ್ವೀಟ್ ಮಾಡಿದ್ದಾರೆ. ಇನ್ನು ಮತ್ತೊಬ್ಬ ನೆಟ್ಟಿಗರು ಈ ಬೆಕ್ಕು ಕಟ್ಟಡದಿಂದ ಜಿಗಿಯುವಾಗ ಮಿಯಾಂವ್ ಎಂದು ಶಬ್ದ ಮಾಡಿತೇ ಎಂದು ಕೇಳಿದ್ದಾರೆ.

    ಬೆಕ್ಕಿನ ಶರೀರದಲ್ಲಿ 230 ವಿವಿಧ ಎಲುಬುಗಳಿವೆ. ಇವೆಲ್ಲವೂ ಶರೀರವನ್ನು ಎಷ್ಟಾದರೂ ಬಾಗಿಸಲು ಅನುಕೂಲವಾಗುವಂತೆ ಜೋಡಿಸಲ್ಪಟಿವೆ. ಹಾಗಾಗಿ ಬೆಕ್ಕು ಎಷ್ಟು ದೂರ ಬೇಕಾದರೂ ನೆಗೆಯಬಹುದು. ಫೆಲಿಸ್ ಡೊಮೆಸ್ಟಿಕ ಎಂಬ ಜಾತಿಗೆ ಸೇರಿರುವ ಬೆಕ್ಕುಗಳಿಗೆ 18 ಉಂಗುರುಗಳಿದ್ದು, ಪಾದದ ಕೆಳಗೆ ಮೆದುವಾದ ಚರ್ಮ ಇರುತ್ತದೆ. ಈ ಉಗುರುಗಳು ನೆಲ, ಮರ ಇವುಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಸಹಾಯ ಮಾಡುವುದರಿಂದ ಇದು ಆರಾಮವಾಗಿ ಎಲ್ಲಿಂದ ಬೇಕಾದರೂ ನೆಗೆಯಬಹುದು.
    Published by:Latha CG
    First published: