Viral Photo: ಬೆಕ್ಕಿಗೂ ಸಿಕ್ತು US ವಿಶ್ವವಿದ್ಯಾಲಯದಿಂದ ಅಭಿನಂದನೆ! ಅಷ್ಟಕ್ಕೂ ಬೆಕ್ಕು ಮಾಡಿದ್ದೇನು?

ಫ್ರಾನ್ಸೆಸ್ಕಾ ಬೋರ್ಡಿಯರ್ ಎಂಬ ಯುವತಿ ಇತ್ತೀಚೆಗೆ ಆಸ್ಟಿನ್ ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಆದರೆ ಈ ಮೈಲಿಗಲ್ಲನ್ನು ಸಾಧಿಸಿದ್ದು ಇವರೊಬ್ಬರೆ ಅಲ್ಲ ಬಿಡಿ, ಏಕೆಂದರೆ ಇವರ ಜೊತೆ ಇವರ ಮನೆಯಲ್ಲಿ ಸಾಕಿಕೊಂಡ ಬೆಕ್ಕು ಸಹ ಇವರ ಜೊತೆ ಎಲ್ಲದರಲ್ಲಿ ಪಾಲ್ಗೊಂಡಿದೆ ಎಂದು ಹೇಳಲಾಗುತ್ತಿದೆ.

ಯುಎಸ್ ವಿಶ್ವವಿದ್ಯಾಲಯದಿಂದ ಅಭಿನಂದನೆ ಪಡೆದ ಬೆಕ್ಕು

ಯುಎಸ್ ವಿಶ್ವವಿದ್ಯಾಲಯದಿಂದ ಅಭಿನಂದನೆ ಪಡೆದ ಬೆಕ್ಕು

  • Share this:
ಸಾಮಾನ್ಯವಾಗಿ ನಾವು ಯಾವುದಾದರೂ ವಿಶ್ವವಿದ್ಯಾಲಯದಿಂದ (University) ಪದವಿಯನ್ನು ಪಡೆದರೆ ನಮಗೆ ಅವರು ಪದವಿಯನ್ನು (Graduation) ನೀಡಲು ವಿದ್ಯಾರ್ಥಿಗಳಿಗಾಗಿ (Students) ಒಂದು ಸಮಾರಂಭವನ್ನು ಹಮ್ಮಿಕೊಳ್ಳುವುದುಂಟು. ಹೀಗೆ ಯುಎಸ್ ಕಾಲೇಜಿನೊಂದರಲ್ಲಿ (US College) ನಡೆದ ಪದವಿ ಪ್ರದಾನ ಸಮಾರಂಭದಲ್ಲಿ Ceremony) ಸಾವಿರಾರು ವಿದ್ಯಾರ್ಥಿಗಳು ಕಪ್ಪು ಬಣ್ಣದ ದೊಡ್ಡ ಉಡುಪನ್ನು (Dress) ಧರಿಸಿ ಅದಕ್ಕೆ ತಕ್ಕಂತೆ ಟೋಪಿಯನ್ನು (Hat) ಸಹ ಧರಿಸಿದ್ದರು. ಆದರೆ ಅಲ್ಲಿ ಎಲ್ಲರ ಗಮನ ಸೆಳೆದದ್ದು ಮಾತ್ರ ವಿಚಿತ್ರವಾಗಿ ಕಾಣುತ್ತಿರುವ ಕಪ್ಪು ಬಟ್ಟೆ ಧರಿಸಿದ್ದ ಒಂದು ಬೆಕ್ಕು (Cat) ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು (Surprise).

ಆನ್‌ಲೈನ್ ತರಗತಿಗಳಿಗೆ ಹಾಜರಾದ ಬೆಕ್ಕು
ಫ್ರಾನ್ಸೆಸ್ಕಾ ಬೋರ್ಡಿಯರ್ ಎಂಬ ಯುವತಿ ಇತ್ತೀಚೆಗೆ ಆಸ್ಟಿನ್ ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಆದರೆ ಈ ಮೈಲಿಗಲ್ಲನ್ನು ಸಾಧಿಸಿದ್ದು ಇವರೊಬ್ಬರೆ ಅಲ್ಲ ಬಿಡಿ, ಏಕೆಂದರೆ ಇವರ ಜೊತೆ ಇವರ ಮನೆಯಲ್ಲಿ ಸಾಕಿಕೊಂಡ ಬೆಕ್ಕು ಸಹ ಇವರ ಜೊತೆ ಎಲ್ಲದರಲ್ಲಿ ಪಾಲ್ಗೊಂಡಿದೆ ಎಂದು ಹೇಳಲಾಗುತ್ತಿದೆ. ಹೌದು.. ‘ಸುಕಿ’ ಎಂಬ ಹೆಸರಿನ ಮುದ್ದಾದ ಸಾಕು ಬೆಕ್ಕು ಫ್ರಾನ್ಸೆಸ್ಕಾ ಅವರೂಂದಿಗೆ ಆನ್‌ಲೈನ್ ತರಗತಿಗಳಿಗೆ ಹಾಜರಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಫೋಟೋ
ಪದವಿ ಪ್ರದಾನ ಸಮಾರಂಭಕ್ಕಾಗಿ ಧರಿಸಿದ್ದ ತನ್ನ ಮತ್ತು ತನ್ನ ಮುದ್ದಾದ ಬೆಕ್ಕಿನ ಮನಸ್ಸಿಗೆ ಮುದ ನೀಡುವಂತಹ ಫೋಟೋಗಳನ್ನು ಫ್ರಾನ್ಸೆಸ್ಕಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. "ನನ್ನ ಬೆಕ್ಕು, ನಾನು ಪಾಲ್ಗೊಂಡ ಪ್ರತಿಯೊಂದು ಜೂಮ್ ವೀಡಿಯೋ ಉಪನ್ಯಾಸದಲ್ಲಿ ನನ್ನ ಜೊತೆ ಹಾಜರಾಗಿದೆ, ಆದ್ದರಿಂದ ನಾವಿಬ್ಬರೂ ಆಸ್ಟಿನ್ ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಒಟ್ಟಿಗೆ ಪದವಿ ಪಡೆಯಲಿದ್ದೇವೆ" ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಸುಕಿಯ ಇತ್ತೀಚಿನ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಜನ
ಈ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಾಗಿನಿಂದಲೂ ಈ ಫೋಟೋಗಳು ತುಂಬಾನೇ ವೈರಲ್ ಆಗಿವೆ. ಹಲವಾರು ಇಂಟರ್ನೆಟ್ ಬಳಕೆದಾರರು ಸುಕಿಯ ಇತ್ತೀಚಿನ ಸಾಧನೆ ಮತ್ತು ಮುದ್ದಾದ ಪದವಿ ಉಡುಗೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ವಿಶ್ವವಿದ್ಯಾಲಯ ಕೂಡ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿ "ನಿಮ್ಮಿಬ್ಬರಿಗೂ ಅಭಿನಂದನೆಗಳು" ಎಂದು ಹೇಳಿದೆ.

ಇದನ್ನೂ ಓದಿ: Viral Photo: ಆಗಷ್ಟೇ ಪದವಿ ಪಡೆದ ತಂದೆಯ ಫೋಟೋವನ್ನು ಹೆಮ್ಮೆಯಿಂದ ಕ್ಲಿಕ್ಕಿಸಿದ ಪುಟಾಣಿ

ಒಬ್ಬ ಬಳಕೆದಾರರು ಈ ಫೋಟೋಗಳನ್ನು ನೋಡಿ "ಬೇರೆ ಖಾತೆಯ ಮೂಲಕ ನನ್ನ ಫೀಡ್ ನಲ್ಲಿ ಈ ಫೋಟೋಗಳನ್ನು ನೋಡಿದೆ. ಇದು ನನಗೆ ತುಂಬಾನೇ ಖುಷಿ ಕೊಟ್ಟಿತು. ಅಭಿನಂದನೆಗಳು" ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು "ಇದು ನಾನು ಇತ್ತೀಚೆಗೆ ನೋಡಿದ ಅತ್ಯಂತ ಸುಂದರವಾದ ಮತ್ತು ಅತ್ಯಂತ ಖುಷಿ ಕೊಡುವ ವಿಷಯವಾಗಿದೆ. ನಿಮ್ಮಿಬ್ಬರಿಗೂ ಅಭಿನಂದನೆಗಳು" ಎಂದು ಕಾಮೆಂಟ್ ಮಾಡಿದ್ದಾರೆ.

ಬೆಕ್ಕಿನ ಬಗ್ಗೆ ಫ್ರಾನ್ಸೆಸ್ಕಾ ಹೇಳಿದ್ದು ಹೀಗೆ
ಬೋರ್ಡಿಯರ್, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ, ತನ್ನ ಕಾಲೇಜಿನ ದಿನಗಳ ಹೆಚ್ಚಿನ ಭಾಗವನ್ನು ಮನೆಯಲ್ಲಿಯೇ ಕಳೆಯಬೇಕಾಯಿತು ಎಂದು ಹೇಳಿದರು. "ನಾನು ಹೆಚ್ಚಿನ ಸಮಯ ನನ್ನ ಅಪಾರ್ಟ್ಮೆಂಟ್ ನಲ್ಲಿದ್ದೆ ಮತ್ತು ನನ್ನ ಪಕ್ಕದಲ್ಲಿಯೇ ನನ್ನ ಬೆಕ್ಕು ಇರುತ್ತಿತ್ತು. ನಾನು ನನ್ನ ಜೂಮ್ ವೀಡಿಯೋದಲ್ಲಿ ಪಾಠ ಕೇಳಬೇಕಾದರೂ ಅದು ನನ್ನ ಜೊತೆಯಲ್ಲಿಯೇ ಯಾವಾಗಲೂ ನನ್ನ ಲ್ಯಾಪ್‌ಟಾಪ್ ಬಳಿ ಕುಳಿತು ಕೊಳ್ಳುತ್ತಿದ್ದಳು" ಎಂದು ಅವರು ಹೇಳಿದರು.

ಇದನ್ನೂ ಓದಿ: Viral Video: ಹೇ, ಅದು ನನ್ನ ಬೆಡ್ ಎದ್ದೇಳು- ಮಾವುತನ ಜೊತೆ ಆನೆಮರಿಯ ಕ್ಯೂಟ್ ಫೈಟ್! ವಿಡಿಯೋ ವೈರಲ್

'ಸುಕಿ ನನ್ನ ವಿಶೇಷ ಪದವೀಧರೆ'
ಪದವಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ನನಗೆ ತಿಳಿದಾಗ ನನ್ನ ಜೊತೆಯಲ್ಲಿ ನನ್ನ ಸುಕಿಯನ್ನು ಕರೆದುಕೊಂಡು ಹೋಗಲು ನಾನು ನಿರ್ಧರಿಸಿದೆ ಎಂದು ಫ್ರಾನ್ಸೆಸ್ಕಾ ಬೋರ್ಡಿಯರ್ ಹೇಳಿದರು. "ಸುಕಿ ನನ್ನ ವಿಶೇಷ ಪದವೀಧರೆ" ಎಂದು ಅವರು ಮಾಧ್ಯಮ ಸಂಸ್ಥೆಗೆ ತಿಳಿಸಿದರು.
ಇದಲ್ಲದೆ, ಆನ್‌ಲೈನ್ ನಲ್ಲಿ ಸುಕಿಗೆ ಒಪ್ಪುವ ಸ್ವಂತ ಟೋಪಿ ಮತ್ತು ಗೌನ್ ಅನ್ನು ಖರೀದಿಸಲು ಸಾಧ್ಯವಾಯಿತು ಎಂದು ಅವರು ಹೇಳಿದರು. ಆ ಬಟ್ಟೆ ಅದಕ್ಕೆ ಬಹುತೇಕ ನಿಖರವಾಗಿ ಹೊಂದಿಕೆಯಾಗುವಂತಿತ್ತು ಎಂದು ಹೇಳಿದರು. ತನ್ನ ಬೆಕ್ಕನ್ನು ಟೆಕ್ಸಾಸ್ ವಿಶ್ವವಿದ್ಯಾಲಯದ ಸ್ಪ್ರಿಂಗ್ 2022 ರ ಪದವಿ ತರಗತಿಯ ಗೌರವ ಸದಸ್ಯರನ್ನಾಗಿ ಮಾಡಲು ನಾನು ಬಯಸುತ್ತೇನೆ ಎಂದು ಅವರು ಹೇಳಿದರು.
Published by:Ashwini Prabhu
First published: