Viral News: ಅಮೆರಿಕಾದ ಹೆಲ್ ಪಟ್ಟಣದ ಮೇಯರ್ ಈ ಬೆಕ್ಕು, ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್

ಮನುಷ್ಯರು ಮೇಯರ್ ಆಗುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲಿ ಒಂದು ಅಮೆರಿಕದ ಪಟ್ಟಣಕ್ಕೆ ಒಂದು ದಿನದ ಮಟ್ಟಿಗೆ ಒಂದು ಬೆಕ್ಕು ಮೇಯರ್ ಆಗಿದ್ದು ನಿಜಕ್ಕೂ ಆಶ್ಚರ್ಯ ಹುಟ್ಟಿಸುವಂತದ್ದೆ ಆಗಿದೆ.

ಮೇಯರ್​ ಬೆಕ್ಕು

ಮೇಯರ್​ ಬೆಕ್ಕು

  • Share this:
ಇತ್ತೀಚೆಗೆ ನಾವು ಈ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಮನೆಯಲ್ಲಿ (Home) ಸಾಕಿಕೊಂಡಿರುವ ಬೆಕ್ಕಿನ ಮರಿಗಳು (Cat) ಮತ್ತು ಬೆಕ್ಕುಗಳ ತುಂಟಾಟದ ವೀಡಿಯೋಗಳನ್ನು ತುಂಬಾನೇ ನೋಡುತ್ತಿದ್ದೇವೆ. ಒಟ್ಟಿನಲ್ಲಿ ಬೆಕ್ಕುಗಳು ಇಂಟರ್ನೆಟ್ (Internet) ಅನ್ನು ಆಳುತ್ತಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಇಲ್ಲೊಂದು ಬೆಕ್ಕು ಒಂದು ಪಟ್ಟಣವನ್ನೇ (City) ಒಂದು ದಿನದ ಮಟ್ಟಿಗೆ ಆಳುತ್ತದೆ ಎಂದು ಹೇಳಿದರೆ, ನಿಮಗೆ ಆಶ್ಚರ್ಯವಾಗುವುದು ಖಂಡಿತ. ಅಮೆರಿಕದ ಮಿಚಿಗನ್ ನಲ್ಲಿರುವ ಹೆಲ್ ಎಂಬ ಪಟ್ಟಣದಲ್ಲಿ ಬೆಕ್ಕು ಒಂದು ದಿನದ ಮಟ್ಟಿಗೆ ಮೇಯರ್ ಆಗಿದೆಯಂತೆ ಎಂದು ಹೇಳಲಾಗುತ್ತಿದೆ ನೋಡಿ. ಈಗ ಈ ಆಶ್ಚರ್ಯಕರವಾದ ತಮಾಷೆಯ ಘಟನೆಯು ಆನ್‌ಲೈನ್ ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ ಎಂದು ಹೇಳಬಹುದು.

ಮನುಷ್ಯರು ಮೇಯರ್ ಆಗುವುದನ್ನು ನಾವು ನೋಡಿದ್ದೇವೆ, ಆದರೆ ಇಲ್ಲಿ ಒಂದು ಅಮೆರಿಕದ ಪಟ್ಟಣಕ್ಕೆ ಒಂದು ದಿನದ ಮಟ್ಟಿಗೆ ಒಂದು ಬೆಕ್ಕು ಮೇಯರ್ ಆಗಿದ್ದು ನಿಜಕ್ಕೂ ಆಶ್ಚರ್ಯ ಹುಟ್ಟಿಸುವಂತದ್ದು ಆಗಿದೆ. ಒಂದು ವಿಶೇಷವಾದ ಕಾರ್ಯಕ್ರಮದಿಂದಾಗಿ ಈ ಬೆಕ್ಕು ಮೇಯರ್ ಸ್ಥಾನವನ್ನು ಅಲಂಕರಿಸಲು ಸಾಧ್ಯವಾಯಿತು. ಅದರ ವೆಬ್‌ಸೈಟ್ ಪ್ರಕಾರ, ಈ ವ್ಯವಸ್ಥೆಯ ಅಡಿಯಲ್ಲಿ, ಮನುಷ್ಯರು ಅಥವಾ ಸಾಕುಪ್ರಾಣಿಯಾಗಿರಲಿ ಒಂದು ದಿನ ಅಥವಾ ಒಂದು ಗಂಟೆಗಳ ಕಾಲ ಈ ಸ್ಥಳದ ಮೇಯರ್ ಆಗಬಹುದು ಎಂದು ಬರೆದಿತ್ತು.

ಒಂದು ದಿನದ ಮಟ್ಟಿಗೆ ಬೆಕ್ಕು ಮೇಯರ್

"ನೀವು ನಿಮ್ಮನ್ನು ಅಥವಾ ಬೇರೊಬ್ಬರನ್ನು ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಬಹುದು, ಏಕೆಂದರೆ ಇದು ಒಂದು ದೊಡ್ಡ ಉಡುಗೊರೆಯನ್ನು ನೀಡುತ್ತದೆ. ಆದರೆ ಮುನ್ಸೂಚಕರಾಗಿರಿ, ಜನರ ಸೇವೆಯನ್ನು ಚೆನ್ನಾಗಿ ಮಾಡಿ, ಇಲ್ಲದಿದ್ದರೆ ನಾವು ಅದೇ ದಿನ ನಿಮ್ಮನ್ನು ವಾಗ್ದಂಡನೆಗೆ ಗುರಿ ಪಡಿಸುತ್ತೇವೆ" ಎಂದು ವೆಬ್‌ಸೈಟ್ ನಲ್ಲಿ ವಿವರಿಸಲಾಗಿದೆ. ಮೇಯರ್ ಆದರೆ ಅವರು ಪಡೆಯುವ ವಸ್ತುಗಳನ್ನು ಸಹ ಇಲ್ಲಿ ಉಲ್ಲೇಖಿಸಲಾಗಿದೆ ಎಂದು ಇದರಲ್ಲಿ ಬರೆಯಲಾಗಿತ್ತು.

ಹೆಲ್ ಪಟ್ಟಣದ ಮೇಯರ್​

"ನಮ್ಮ ಪೂರ್ತಿ ಒಂದು ದಿನದ ಹೆಲ್ ಪಟ್ಟಣದ ಮೇಯರ್ ಅವರಿಗೆ ಟಿ-ಶರ್ಟ್, ಮಗ್, ಬ್ಯಾಡ್ಜ್, ವ್ಯಾಲೆಟ್ ಕಾರ್ಡ್, ಹೆಲ್ ಪಟ್ಟಣದಲ್ಲಿ ಒಂದು ಆಸ್ತಿಯ ಮಾಲೀಕತ್ವ ಎಲ್ಲವನ್ನೂ ನೀಡಲಾಗುತ್ತದೆ. ವಾಗ್ದಂಡನೆಗೆ ಒಳಗಾಗಿದ್ದಕ್ಕಾಗಿ ಘೋಷಣೆ ಪ್ರಮಾಣ ಪತ್ರಗಳು, ಹೆಲ್ ಪಟ್ಟಣದಲ್ಲಿ ನಿಮ್ಮ ಹೆಸರು ತುಂಬಾನೇ ಜನಪ್ರಿಯವಾಗುತ್ತದೆ. ನಮ್ಮ ಮಿನಿ ಟರ್ಮ್ ಎಂದರೆ ಒಂದು ಗಂಟೆಯ ಸಲುವಾಗಿ ಮೇಯರ್ ಆದರೆ ಅವರು ಪ್ರಮಾಣ ಪತ್ರಗಳು ಮತ್ತು ಮಗ್ ಎರಡನ್ನೂ ಪಡೆಯುತ್ತಾರೆ" ಎಂದು ವೆಬ್‌ಸೈಟ್ ನಲ್ಲಿ ತಿಳಿಸಲಾಗಿತ್ತು.

ಇದನ್ನೂ ಓದಿ: Cute Baby: ನಿದ್ದೆಯಿಂದ ಎದ್ದ ತಕ್ಷಣ ಅಜ್ಜ ಕರೆಯೋ ಸದ್ದು ಕೇಳಿತು, ಈ ಮಗುವಿನ ಪ್ರತಿಕ್ರಿಯೆ ನೋಡಿ

ಆನ್‌ಲೈನ್ ಸೆನ್ಸೆಷನ್ ಆಗಿ ಬದಲಾಯಿತು

ಈ ಕಾರ್ಯಕ್ರಮದ ಲಾಭವನ್ನು ಪಡೆದುಕೊಂಡು, ಜಿಂಕ್ಸ್ ಎಂಬ ಬೆಕ್ಕಿನ ಒಡತಿ ಮಿಯಾ ಅವರು ಈ ಬೆಕ್ಕಿನ ಹೆಸರನ್ನು ಮೇಯರ್ ಸ್ಥಾನಕ್ಕೆ ನೋಂದಾಯಿಸಿದರು ಮತ್ತು ಮೇಯರ್ ಆಗಲು ಹಣವನ್ನು ಸಹ ಪಾವತಿಸಿದರು. ಮಿಯಾ 2018 ರಲ್ಲಿ ಈ ಬೆಕ್ಕನ್ನು ರಕ್ಷಿಸಿದ್ದರು ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ. ಅವಳು ಶೀಘ್ರದಲ್ಲಿಯೇ ಆ ಬೆಕ್ಕಿನ ವೀಡಿಯೋಗಳನ್ನು ಮತ್ತು ಫೋಟೋಗಳನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದಳು ಮತ್ತು ಆ ಬೆಕ್ಕು ನೋಡ ನೋಡುತ್ತಿದ್ದಂತೆಯೇ ಆನ್‌ಲೈನ್ ಸೆನ್ಸೆಷನ್ ಆಗಿ ಬದಲಾಯಿತು ಎಂದು ಹೇಳಲಾಗುತ್ತಿದೆ.

ಮೇಯರ್ ಆಗಿ ಅವರ ಮೊದಲ ಆಜ್ಞೆ ಏನು

"ಬೆಕ್ಕನ್ನು ನಾನು ಮನೆಗೆ ತಂದಾಗ ಅದು ದೊಡ್ಡ ಕಣ್ಣುಗಳನ್ನು ಹೊಂದಿತ್ತು. ಅದು ದೊಡ್ಡದಾದರೂ ಸಹ ಅದರ ಕಣ್ಣುಗಳು ಚಿಕ್ಕದಾಗಲಿಲ್ಲ ಮತ್ತು ದೊಡ್ಡ ಪಾದಗಳನ್ನು ಸಹ ಅದು ಹೊಂದಿದೆ ಎಂದು ನಾನು ಗಮನಿಸಿದೆ. ಆದರೆ ಪಶುವೈದ್ಯರು ಬೆಕ್ಕು ಆರೋಗ್ಯವಾಗಿದೆ ಎಂದು ಹೇಳಿದರು. ಹೆಚ್ಚಿನ ಬೆಕ್ಕುಗಳಂತೆ ಇದು ಚುರುಕಾಗಿಲ್ಲ ಮತ್ತು ಸ್ವಲ್ಪ ವಿಕಾರವಾಗಿದೆ. ಒಂದು ವರ್ಷದ ಹಿಂದೆಯಷ್ಟೇ ತನ್ನ ಕಾಲುಗಳನ್ನು ಬಳಸಿಕೊಂಡು ಹೇಗೆ ನಡೆಯುವುದು ಎಂದು ಕಲಿಯಿತು" ಎಂದು ಅವಳು ಹೇಳಿದಳು. ಜಿಂಕ್ಸ್ ಹೇಗೆ ಮೇಯರ್ ಆಗಲಿದ್ದಾರೆ ಎಂದು ಎಲ್ಲರಿಗೂ ತಿಳಿಸುವ ವೀಡಿಯೋವನ್ನು ಸಹ ಅವರು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Viral News: ಗೊರಿಲ್ಲಾಗೆ ಸ್ಮಾರ್ಟ್​ಫೋನ್ ಗೀಳು, ಫೋನ್ ನೋಡ್ತಾ ಕೂತ್ರೆ ಏಳೋದೇ ಇಲ್ಲ

"ಮೇಯರ್ ಮರೆತು ಬಿಡಿ, ಅಧ್ಯಕ್ಷ ಸ್ಥಾನಕ್ಕೆ ಹೋಗೋಣ" ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಮೇಯರ್ ಆಗಿ ಅವರ ಮೊದಲ ಆಜ್ಞೆ ಏನು" ಎಂದು ಇನ್ನೊಬ್ಬರು ತಮಾಷೆಯಾಗಿ ಕೇಳಿದರು.
Published by:Pavana HS
First published: