HOME » NEWS » Trend » CAT ATTACKS PILOT IN COCKPIT FORCING SUDANESE FLIGHT TO MAKE EMERGENCY LANDING STG LG

ಪೈಲಟ್ ಮೇಲೆ ಏಕಾಏಕಿ ದಾಳಿ ಮಾಡಿದ ಬೆಕ್ಕು; ವಿಮಾನ ತುರ್ತು ಭೂಸ್ಪರ್ಶ..!

ವಿಮಾನ ಟೇಕ್ ಆಫ್ ಆಗಿ ಸುಮಾರು ಅರ್ಧ ಗಂಟೆ ಕಳೆದಿತ್ತು. ಈ ವೇಳೆ ಅದೆಲ್ಲಿಂದಲೋ ಬಂದು ಕಾಕ್‍ಪಿಟ್ ಪ್ರವೇಶಿಸಿದ ಬೆಕ್ಕು ಪೈಲಟ್ ಮೇಲೆ ಏಕಾಏಕಿ ದಾಳಿ ನಡೆಸಿದೆ. ವಿಮಾನ ಸಿಬ್ಬಂದಿ ಬೆಕ್ಕು ಹಿಡಿಯಲು ಪ್ರಯತ್ನ ಪಟ್ಟು ಸುಸ್ತಾಗಿ ಹೋಗಿದ್ದಾರೆ. ಆದರೆ ಅವರ ಕೈಗೆ ಬೆಕ್ಕು ಸಿಗದೆ ಆಟವಾಡಿಸಿದೆ.

news18-kannada
Updated:March 2, 2021, 1:23 PM IST
ಪೈಲಟ್ ಮೇಲೆ ಏಕಾಏಕಿ ದಾಳಿ ಮಾಡಿದ ಬೆಕ್ಕು; ವಿಮಾನ ತುರ್ತು ಭೂಸ್ಪರ್ಶ..!
ಸಾಂದರ್ಭಿಕ ಚಿತ್ರ
  • Share this:
ತಾಂತ್ರಿಕ ದೋಷ ಅಥವಾ ಪ್ರಯಾಣಿಕರ ಆರೋಗ್ಯದಲ್ಲಿ ಏರುಪೇರಾದಾಗ ಮಾತ್ರ ವಿಮಾನಗಳು ತುರ್ತು ಭೂಸ್ಪರ್ಶ ಮಾಡಿರುವುದನ್ನು ನೀವು ಕೇಳಿದ್ದೀರಿ. ಆದರೆ ಸುಡಾನ್‍ನಲ್ಲಿ ಬೆಕ್ಕೊಂದು ಆಗಸದಲ್ಲಿ ಹಾರುತ್ತಿದ್ದ ವಿಮಾನವನ್ನೇ ಭೂಮಿಗೆ ಇಳಿಯುವಂತೆ ಮಾಡಿದೆ.

ಹೌದು, ಈ ಸುದ್ದಿ ಕೇಳಿದರೆ ನಿಮ್ಮ ಮೊಗದಲ್ಲಿ ನಗೆ ಮೂಡಿರಬಹುದು. ಅದ್ಹೇಗೆ ಬೆಕ್ಕು ವಿಮಾನವನ್ನು ಕೆಳಗಿಳಿಸಿತು ಎಂದು ನಿಮಗೆ ಆಶ್ಚರ್ಯ ಕೂಡ ಆಗಬಹುದು. ಅಪರೂಪದಲ್ಲೇ ಅಪರೂಪವಾಗಿ ನಡೆದಿರುವ ಈ ಕುತೂಹಲಕಾರಿ ಘಟನೆ ನಡೆದಿರುವುದು ಸುಡಾನ್ ದೇಶದ ಖಾರ್ಟೌಮ್ ನಲ್ಲಿ. ನೂರಾರು ಪ್ರಯಾಣಿಕರಿದ್ದ ವಿಮಾನವು ಖಾರ್ಟೌಮ್‍ನಿಂದ ಪ್ರಯಾಣ ಬೆಳೆಸಿದ ಕೆಲವೇ ನಿಮಿಷಗಳ ಅಂತರದಲ್ಲಿ ಅದೇ ನಿಲ್ದಾಣಕ್ಕೆ ವಾಪಸ್ ಆಗಿ ಲ್ಯಾಂಡ್ ಆಗಿದೆ. ಇದಕ್ಕೆ ಕಾರಣವಾಗಿದ್ದು ಒಂದು ಪುಟ್ಟ ಬೆಕ್ಕು ಎಂಬ ವಿಚಾರವು ಇದೀಗ ಅಧಿಕಾರಿಗಳಿಗೆ ಮತ್ತು ಪ್ರಯಾಣಿಕರಲ್ಲಿ ಅಚ್ಚರಿ ಮೂಡಿಸಿದೆ.

Corona Virus: ಕೊರೋನಾ ಸೋಂಕಿಗೆ ಬಲಿಯಾದ ಬಿಜೆಪಿ ಸಂಸದ ನಂದ ಸಿಂಗ್ ಚೌಹಾಣ್

ಅಷ್ಟಕ್ಕೂ ಏನು ನಡೆಯಿತು ಅಂತೀರಾ..? ವಿಮಾನ ಟೇಕ್ ಆಫ್ ಆಗಿ ಸುಮಾರು ಅರ್ಧ ಗಂಟೆ ಕಳೆದಿತ್ತು. ಈ ವೇಳೆ ಅದೆಲ್ಲಿಂದಲೋ ಬಂದು ಕಾಕ್‍ಪಿಟ್ ಪ್ರವೇಶಿಸಿದ ಬೆಕ್ಕು ಪೈಲಟ್ ಮೇಲೆ ಏಕಾಏಕಿ ದಾಳಿ ನಡೆಸಿದೆ. ವಿಮಾನ ಸಿಬ್ಬಂದಿ ಬೆಕ್ಕು ಹಿಡಿಯಲು ಪ್ರಯತ್ನ ಪಟ್ಟು ಸುಸ್ತಾಗಿ ಹೋಗಿದ್ದಾರೆ. ಆದರೆ ಅವರ ಕೈಗೆ ಬೆಕ್ಕು ಸಿಗದೆ ಆಟವಾಡಿಸಿದೆ. ಬಳಿಕ ಅನಿವಾರ್ಯವಾಗಿ ಯುಟರ್ನ್ ತೆಗೆದುಕೊಂಡು ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡುವಂತೆ ಪೈಲಟ್‌ಗೆ ಸೂಚಿಸಲಾಯಿತು. ಹೀಗಾಗಿ ವಿಮಾನ ವಾಪಸ್ ಖಾರ್ಟೌಮ್ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು.
Youtube Video

ಕತಾರ್‌ನ ರಾಜಧಾನಿ ದೋಹಾಕ್ಕೆ ತೆರಳುವ ಈ ವಾಣಿಜ್ಯ ವಿಮಾನವು ಸುಡಾನ್ ಟಾರ್ಕೊ ವಿಮಾನಯಾನ ಸಂಸ್ಥೆಗೆ ಸೇರಿದ್ದಾಗಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆಂದು ತಿಳಿದುಬಂದಿದೆ. ವಿಮಾನ ಪ್ರಯಾಣಕ್ಕೆ ಅಡ್ಡಿ ಪಡಿಸಿದ ಈ ಬೆಕ್ಕು ಯಾರಿಗೆ ಸೇರಿದ್ದು? ಅದು ಕಾಕ್‍ಪಿಟ್ ಪ್ರವೇಶಿಸಿದ್ದು ಹೇಗೆ ಎಂಬುದಕ್ಕೆ ಸರಿಯಾದ ಉತ್ತರ ಇನ್ನೂ ಸಿಕ್ಕಿಲ್ಲ. ವರದಿಗಳ ಪ್ರಕಾರ ಹಿಂದಿನ ರಾತ್ರಿ ಖಾರ್ಟೌಮ್ ವಿಮಾನ ನಿಲ್ದಾಣದ ಹ್ಯಾಂಗರ್ನಲ್ಲಿ ನಿಲುಗಡೆ ಮಾಡಿದ್ದಾಗ ಬೆಕ್ಕು ವಿಮಾನದೊಳಗೆ ಪ್ರವೇಶಿಸಿರಬಹುದೆಂದು ಶಂಕಿಸಲಾಗಿದೆ.
Published by: Latha CG
First published: March 2, 2021, 1:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories