Viral News: 40 ಪೈಸೆಗಾಗಿ ಎಂಪೈರ್ ಹೋಟೆಲ್ ವಿರುದ್ಧ ಕೇಸು ದಾಖಲಿಸಿದ ವಕೀಲ

Empire Hotel: ನರಸಿಂಹಮೂರ್ತಿ ಅವರು ಗ್ರಾಹಕ ಸೇವಾ ನ್ಯಾಯಾಲಯದಲ್ಲಿ ದಾವೆ ಕಹೂಡಿಕೆ ಮಾಡಿರುವುದಕ್ಕೆ ಆಕ್ಷೇಪಣೆ ಮಾಡಿರುವ ಎಂಪೈರ್ ಹೋಟೆಲ್ , ಆರ್‌ಬಿಐ ಮಾರ್ಗಸೂಚಿ ಅನ್ವಯ 40 ಪೈಸೆ ಪಡೆದಿದ್ದೇವೆ

ಸಾಂಧರ್ಬಿಕ ಚಿತ್ರ

ಸಾಂಧರ್ಬಿಕ ಚಿತ್ರ

  • Share this:
    ಕಳೆದ ಕೆಲವು ದಿನಗಳ ಹಿಂದಷ್ಟೇ ಪಶ್ಚಿಮ ಬಂಗಾಳದಲ್ಲಿ(West Bengal) ಹೆಚ್ಚುವರಿ ಹಣ(Money) ಪಡೆದಿದ್ದಕ್ಕೆ ಕೇಸ್ ಹಾಕಿ ₹2 ರೂಪಾಯಿ ಪರಿಹಾರವನ್ನು(Compensation) ವ್ಯಕ್ತಿಯೊಬ್ಬ ಪಡೆದಿದ್ದ ಘಟನೆ ಎಲ್ಲಾ ಕಡೆ ವೈರಲ್ ಆಗಿತ್ತು.. ಇದಕ್ಕೂ ಮುಂಚೆ ಕೋಳಿ(Hen) ಗಾಗಿ ಹೆಚ್ಚುವರಿ ಹಣ ಪಡೆದು ಸೀಟ್ ನೀಡದೆ ಇದ್ದರೂ ಬಸ್ ಕಂಡಕ್ಟರ್(Conductor) ಮೇಲೆ ಪ್ರಯಾಣಿಕನೊಬ್ಬ(Passenger) ಕೇಸ್ ದಾಖಲಿಸಿ ನ್ಯಾಯ ಪಡೆದಿದ್ದ ಘಟನೆ ನಡೆದಿತ್ತು.. ಈಗ ಕೇವಲ 40 ಪೈಸೆಗಾಗಿ ಪ್ರಸಿದ್ದ ಎಂಪೈರ್ ಹೋಟೆಲ್(Empire Hotel) ವಿರುದ್ಧ ಗ್ರಾಹಕನೊಬ್ಬ ಕೇಸ್ ಹಾಕಿರುವ ಘಟನೆ ನಡೆದಿದೆ.. ಬೆಂಗಳೂರಿನ(Bengaluru) ಪ್ರಸಿದ್ಧ ಹೋಟೆಲ್ ಗಳಲ್ಲಿ ಒಂದಾದ ಎಂಪೈರ್ ಹೋಟೆಲ್ ಬಿರಿಯಾನಿಗೆ 40 ಪೈಸೆ ಹೆಚ್ಚು ಹಣ ಪಡೆದಿದೆ ಎಂದು ಬೆಂಗಳೂರಿನ ವಕೀಲಸಾಬ್ ಕಂ ಸಾಮಾಜಿಕ ಕಾರ್ಯಕರ್ತ ಸಮರ ಸಾರಿದ್ದಾರೆ.ಅರೆ ಇದೇನಪ್ಪಾ ಕೇವಲ 40 ಪೈಸೆಗಾಗಿ ಹೋಟೆಲ್ ಮೇಲೆ ಕೇಸ್ ಹಾಕುವುದು ಎಂದರೇನು ಅಂತ ನಿಮಗೆ ಅನ್ನಿಸಬಹುದು.. ಆದ್ರೆ ಹೆಚ್ಚುವರಿ ಹಣ ಪಡೆದಿದ್ದಾರೆ ಎನ್ನುವ ಕಾರಣಕ್ಕಾಗಿ 40 ಪೈಸೆ ವಾಪಸ್ ಕೊಡಿಸಿ ಎಂದು ವಕೀಲ್ ಸಾಬ್ ಕೋರ್ಟಿನಲ್ಲಿ ದಾವೆ ಹೂಡಿದ್ದಾರೆ.

    ಏನಿದು ಪ್ರಕರಣ...?

    ಎಂಜಿ ರಸ್ತೆಯಲ್ಲಿರುವ ಎಂಪೈರ್ ಹೋಟೆಲ್ ಗೆ ವಕೀಲ್ ಸಾಬ್ ನರಸಿಂಹಮೂರ್ತಿ ಅವರು ಇತ್ತೀಚಿಗೆ ಹೋಗಿದ್ದಾರೆ. ಅಲ್ಲಿ ಬಿರಿಯಾನಿ ಆರ್ಡರ್ ಮಾಡಿ ತಿಂದಿದ್ದಾರೆ.. ಕೊನೆಗೆ ಬಿಲ್ ಕೊಟ್ಟಾಗ ಬಿರಿಯಾನಿ ಬಿಲ್ ಜಿಎಸ್ ಟಿ ಒಳಗೊಂಡಂತೆ 264.60 ರೂ. ಆಗಿದೆ. ಬಿಲ್ ಪಾವತಿ ಮಾಡಿದಾಗ ಎಂಪೈರ್ ಹೋಟೆಲ್‌ನವರು 265 ರೌಂಡ್ ಫಿಗರ್ ಮಾಡಿ ಹೆಚ್ಚುವರಿ 40 ಪೈಸೆ ಪಡೆದಿದ್ದಾರೆ. ಇದಕ್ಕೆ ತರಕಾರು ಮಾಡಿದ ನರಸಿಂಹಮೂರ್ತಿ, ನೀವು ನನ್ನಿಂದ ಯಾಕೆ 40 ಪೈಸೆ ಹೆಚ್ಚುವರಿ ತೆಗೆದುಕೊಂಡಿದ್ದೀರಾ? ನನ್ನ ಬಾಕಿ 40 ಪೈಸೆ ವಾಪಸು ಕೊಡಿ, ನನಗೆ ಮಾತ್ರವಲ್ಲ, ಎಲ್ಲಾ ಗ್ರಾಹಕರಿಗೂ ನೀವು ಕೊಡಬೇಕು ಎಂದು ಕೇಳಿದ್ದಾರೆ. ಇದಕ್ಕೆ ಕ್ಯಾರೆ ಎನ್ನದ ಎಂಪೈರ್ ಆಡಳಿತ ಮಂಡಳಿ ಸುಮ್ಮನಾಗಿದ್ದಾರೆ.

    ಇದನ್ನೂ ಓದಿ: H&M ಶೋರೂಂನಲ್ಲಿ ಬಟ್ಟೆಗಳ ಮೇಲೆ ಹೇನು, ಕ್ರಿಮಿ-ಕೀಟ! ಅಂಗಡಿ ಕ್ಲೋಸ್

    ಗ್ರಾಹಕ ವೇದಿಕೆ ನ್ಯಾಯಾಲಯದಲ್ಲಿ ದಾವೆ..

    ನರಸಿಂಹಮೂರ್ತಿ ಅವರಿಗೆ 40 ಪೈಸೆ ವಾಪಸ್ ನೀಡದೆ ಇದ್ದಿದ್ದಕ್ಕೆ ರೊಚ್ಚಿಗೆದ್ದ ಅವರು ಗ್ರಾಹಕರ ವೇದಿಕೆ ನ್ಯಾಯಾಲಯದಲ್ಲಿ ಎಂಪೈರ್ ಹೋಟೆಲ್ ವಿರುದ್ಧ ದಾವೆ ಹೂಡಿದ್ದಾರೆ. ಜಿಎಸ್‌ಟಿ ತೆರಿಗೆ ಸೇರಿ ಅದರ ಮೊತ್ತ 264.60 ಪೈಸೆ. ನನ್ನಿಂದ ಹೆಚ್ಚುವರಿ 40 ಪೈಸೆ ಪಡೆದಿದ್ದಾರೆ. ಕೇಳಿದರೆ ಕೊಟ್ಟಿಲ್ಲ. ನನ್ನ ಒಬ್ಬನಿಂದ ನಲವತ್ತು ಪೈಸೆ ಒಂದು ದಿನಕ್ಕೆ ಹೆಚ್ಚುವರಿ ಪಡೆದರೆ, ವರ್ಷದಲ್ಲಿ ಎಷ್ಟು ಮಂದಿ ಬಿರಿಯಾನಿ ತಿನ್ನುತ್ತಾರೆ. ಎಷ್ಟು ಹಣ ಹೆಚ್ಚುವರಿಯಾಗಿ ಪಡೆದಂತಾಗುತ್ತದೆ. ಇವರಿಗೆ ಹೆಚ್ಚುವರಿಯಾಗಿ ಪಡೆಯಲು ಅನುಮತಿ ಇದೆಯೇ? ನನ್ನಿಂದ ಪಡೆದಿರುವ ಹೆಚ್ಚುವರಿ ಹಣ ವಾಪಸು ಕೊಡಿಸಿ. ಕಳೆದ ಮೂರು ತಿಂಗಳಿನಿಂದ ಹೆಚ್ಚುವರಿಯಾಗಿ ಸಂಗ್ರಹಿಸಿರುವ ಹಣವನ್ನು ಕರ್ನಾಟಕ ಸರ್ಕಾರದ ಖಜಾನೆಗೆ ಹದಿನೈದು ದಿನದಲ್ಲಿ ಡೆಪಾಸಿಟ್ ಮಾಡಬೇಕು ಎಂಬ ವಾದವನ್ನು ಮುಂದಿಟ್ಟಿದ್ದಾರೆ.

    ಆಕ್ಷೇಪಣೆ ಸಲ್ಲಿಸಿದ ಎಂಪೈರ್ ಹೋಟೆಲ್..

    ಇನ್ನು ನರಸಿಂಹಮೂರ್ತಿ ಅವರು ಗ್ರಾಹಕ ಸೇವಾ ನ್ಯಾಯಾಲಯದಲ್ಲಿ ದಾವೆ ಕಹೂಡಿಕೆ ಮಾಡಿರುವುದಕ್ಕೆ ಆಕ್ಷೇಪಣೆ ಮಾಡಿರುವ ಎಂಪೈರ್ ಹೋಟೆಲ್ , ಆರ್‌ಬಿಐ ಮಾರ್ಗಸೂಚಿ ಅನ್ವಯ 40 ಪೈಸೆ ಪಡೆದಿದ್ದೇವೆ. ಇದರಲ್ಲಿ ಹೆಚ್ಚುವರಿ ಪ್ರಶ್ನೆ ಇಲ್ಲ ಎಂದು ವಾದ ಮಂಡಿಸಿದೆ.ಇದಕ್ಕೆ ಪ್ರತಿ ವಾದ ಮಂಡಿಸಿರುವ ವಕೀಲ ನರಸಿಂಹಮೂರ್ತಿ, ನಾನು ಹೋಟೆಲ್ ಗೆ ಹೋಗಿದ್ದೇನೆ. ಅಲ್ಲಿ ಹೋಟೆಲ್ ನಡೆಸುವ ಎಲ್ಲಾ ಪರವಾನಗಿ ಅಂಟಿಸಿದ್ದಾರೆ. ಅದರೆ, ಆರ್‌ಬಿಐ ಮಾರ್ಗಸೂಚಿ ಪ್ರಕಟಿಸಿಲ್ಲ. ಹೀಗಾಗಿ ಅವರು ಹೆಚ್ಚವರಿಯಾಗಿ ಗ್ರಾಹಕರಿಂದ ಪಡೆಯಲು ಅರ್ಹರಲ್ಲ, ನನಗೆ ನ್ಯಾಯ ಕೊಡಿ ಎಂದು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಸದ್ಯ ವಾದ-ಪ್ರತಿವಾದ ಆಲಿಸಿರುವ ನ್ಯಾಯಾಲಯ ತೀರ್ಪು ನೀಡುವ ದಿನಾಂಕವನ್ನು ಮುಂದೂಡಿಕೆ ಮಾಡಿದೆ..

    ಇದನ್ನೂ ಓದಿ: ಕಡಲೆಕಾಯಿಯ ಪುಡಿಗಾಸಿನ ಸಾಲ ತೀರಿಸಲು ಅಮೆರಿಕದಿಂದ ಬಂದ ಅಣ್ಣ-ತಂಗಿ

    ಅಡಿಗಾಸ್ ಹೋಟೆಲ್ ಮೇಲೂ ಕೇಸು ದಾಖಲಿಸಿದ್ದ ನರಸಿಂಹಮೂರ್ತಿ

    ಹಿಂದೆ ಅಡಿಗಾಸ್ ಹೋಟೆಲ್ ಚಹಾಗೆ ಒಂದು ರೂಪಾಯಿ ಹೆಚ್ಚುವರಿಯಾಗಿ ಹಣ ಪಡೆದಿದೆ ಎಂದು ರಾಷ್ಟ್ರೀಯ ಗ್ರಾಹಕ ವೇದಿಕೆ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಪ್ರಕರಣದಲ್ಲಿ ಗ್ರಾಹಕ ವೇದಿಕೆಯ ನ್ಯಾಯಾಲಯ ಹೆಚ್ಚುವರಿಯಾಗಿ ಪಡೆದ ಒಂದು ರೂಪಾಯಿ ಜೊತೆಗೆ ₹5000 ದಂಡದ ಮೊತ್ತವನ್ನು ವಕೀಲ ನರಸಿಂಹಮೂರ್ತಿ ಅವರಿಗೆ ನೀಡಲು ಅಡಿಗಾಸ್ ಗೆ ಸೂಚನೆ ನೀಡಿತ್ತು. ತೆರೆ ಈಗ ನರಸಿಂಹಮೂರ್ತಿಯವರು ಕೇವಲ 40 ಪೈಸೆಗಾಗಿ ಎಂಪೈರ್ ಹೋಟೆಲ್ ವಿರುದ್ಧ ನಡೆಸುತ್ತಿರುವ ಸಮರ ಎಲ್ಲಿಗೆ ಬಂದು ನಿಲ್ಲುತ್ತದೆ ಎಂದು ಕಾದುನೋಡಬೇಕಾಗಿದೆ
    Published by:ranjumbkgowda1 ranjumbkgowda1
    First published: