Azam Ansari: ರೈಲು ಹಳಿ ಮೇಲೆ ಶರ್ಟ್ ಬಿಚ್ಚಿ ರೀಲ್ಸ್ ಮಾಡಿದ್ದ Jr Salman ಖ್ಯಾತಿಯ ಯುವಕನ ವಿರುದ್ಧ ಎಫ್​ಐಆರ್

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಹಾಗೆಯೇ ಇರುವ ನಕಲಿ ಸಲ್ಮಾನ್ ಅಂತಾನೆ ಖ್ಯಾತಿ ಪಡೆದಿರುವ ಲಕ್ನೋ ನಗರದ ಆಜಂ ಅನ್ಸಾರಿ ಅವರು ಸ್ಥಳೀಯವಾಗಿ ಸಾಕಷ್ಟು ಜನಪ್ರೀಯರಾಗಿದ್ದಾರೆ. ಹಿಂದೊಮ್ಮೆ ಅಜಂ ಅನ್ಸಾರಿ ಅವರು ಲಕ್ನೋ ನಗರದ ಟ್ರಾಫಿಕ್ ಇರುವಂತಹ ರಸ್ತೆಯಲ್ಲಿ ತಮ್ಮ ಅಂಗಿಯನ್ನು ಬಿಚ್ಚಿಕೊಂಡು ರಸ್ತೆಯ ಮಧ್ಯೆದಲ್ಲಿ ಓಡಾಡಿಕೊಂಡು ಡ್ಯಾನ್ಸ್ ಮಾಡಿದ್ದಕ್ಕೆ ಪೊಲೀಸರ ಕಂಗೆಣ್ಣಿಗೆ ಗುರಿಯಾಗಿದ್ದರು. ಈಗ ಮತ್ತೊಮ್ಮೆ ಅಂತಹದೇ ಎಡವಟ್ಟನ್ನು ಮಾಡಿಕೊಂಡಿದ್ದಾರೆ ನೋಡಿ.

ಆಜಂ ಅನ್ಸಾರಿ

ಆಜಂ ಅನ್ಸಾರಿ

  • Share this:
ಈ ಚಲನಚಿತ್ರೋದ್ಯಮದ ನಟ (Actor) ಮತ್ತು ನಟಿಯರಂತೆ (Actress) ಕಾಣುವ ಈ ನಕಲಿ ಸ್ಟಾರ್ ಗಳು ಒಮ್ಮೊಮ್ಮೆ ಅವರ ನೆಚ್ಚಿನ ನಟ, ನಟಿಯರಂತೆ ಅನುಕರಣೆ ಮಾಡುತ್ತಾ ಎಡವಟ್ಟುಗಳನ್ನು ಮಾಡಿಕೊಳ್ಳುವುದನ್ನು ನಾವು ನೋಡಿರುತ್ತೇವೆ. ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರ ಹಾಗೆಯೇ ಇರುವ ನಕಲಿ ಸಲ್ಮಾನ್ ಅಂತಾನೆ ಖ್ಯಾತಿ ಪಡೆದಿರುವ ಲಕ್ನೋ ನಗರದ ಆಜಂ ಅನ್ಸಾರಿ (Azam Ansari) ಅವರು ಸ್ಥಳೀಯವಾಗಿ ಸಾಕಷ್ಟು ಜನಪ್ರೀಯರಾಗಿದ್ದಾರೆ. ಹಿಂದೊಮ್ಮೆ ಅಜಂ ಅನ್ಸಾರಿ ಅವರು ಲಕ್ನೋ (Lucknow) ನಗರದ ಟ್ರಾಫಿಕ್ ಇರುವಂತಹ ರಸ್ತೆಯಲ್ಲಿ ತಮ್ಮ ಅಂಗಿಯನ್ನು ಬಿಚ್ಚಿಕೊಂಡು ರಸ್ತೆಯ ಮಧ್ಯೆದಲ್ಲಿ ಓಡಾಡಿಕೊಂಡು ಡ್ಯಾನ್ಸ್ ಮಾಡಿದ್ದಕ್ಕೆ ಪೊಲೀಸರ (Police) ಕಂಗೆಣ್ಣಿಗೆ ಗುರಿಯಾಗಿದ್ದರು. ಈಗ ಮತ್ತೊಮ್ಮೆ ಅಂತಹದೇ ಎಡವಟ್ಟನ್ನು ಮಾಡಿಕೊಂಡಿದ್ದಾರೆ ನೋಡಿ.

ರೈಲ್ವೆ ಹಳಿಗಳ ಮೇಲೆ ಮಲಗಿ ಇನ್‌ಸ್ಟಾಗ್ರಾಮ್ ರೀಲ್

ಈ ಬಾರಿ ಇವರು ರೈಲ್ವೆ ಹಳಿಗಳ ಮೇಲೆ ಮಲಗಿ ಇನ್‌ಸ್ಟಾಗ್ರಾಮ್ ರೀಲ್ ತಯಾರಿಸಿದ್ದಾರೆ ಮತ್ತು ಈ ಕಾರಣಕ್ಕಾಗಿ ಈ ನಕಲಿ ಸಲ್ಮಾನ್ ವಿರುದ್ಧ ರೈಲ್ವೆ ರಕ್ಷಣಾ ಪಡೆ ಎಂದರೆ ಆರ್‌ಪಿಎಫ್ ನವರು ಲಕ್ನೋದಲ್ಲಿ ಪ್ರಕರಣವೊಂದನ್ನು ದಾಖಲಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಕಂಟೆಂಟ್ ಕ್ರಿಯೇಟರ್ ಮತ್ತು ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಕಟ್ಟಾ ಅಭಿಮಾನಿಯಾಗಿರುವ ಅಜಂ ಅನ್ಸಾರಿ ಅವರು ಲಕ್ನೋದ ರೈಲ್ವೆ ಹಳಿಗಳ ಮೇಲೆ ಮಲಗಿ ತಮ್ಮ ಇನ್‌ಸ್ಟಾಗ್ರಾಮ್ ರೀಲ್ ಗೆ ವಿಡಿಯೋವೊಂದನ್ನು ಚಿತ್ರೀಕರಿಸಿದ್ದಾರೆ ನೋಡಿ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಅಜಂ ದಲಿಗಂಜ್ ನ ರೈಲ್ವೆ ಹಳಿಗಳ ಮೇಲೆ ಅರೆಬೆತ್ತಲೆಯಾಗಿ ನಡೆಯುವುದನ್ನು ಕಾಣಬಹುದು. ಅವನು ಸಿಗರೇಟು ಸೇದುತ್ತಾ ಅಲ್ಲಿ ಮಲಗಿರುವುದನ್ನು ಸಹ ನೋಡಬಹುದಾಗಿದೆ. ಅವರು ದಿಟ್ಟೋ ತಮ್ಮ ನೆಚ್ಚಿನ ನಟರಾದ ಸಲ್ಮಾನ್ ಅವರ ಚಲನಚಿತ್ರ ‘ತೇರೆ ನಾಮ್’ ನ ಶೀರ್ಷಿಕೆ ಗೀತೆಯಾದ 'ತೇರೆ ನಾಮ್ ಹಮ್ನೆ ಕಿಯಾ ಹೈ' ಗೆ ತಮ್ಮ ರೀಲ್ ಮಾಡಿದ್ದರು.

ಇದನ್ನೂ ಓದಿ: Plastic Skin: ಬರೀ ಅರ್ಧ ಗಂಟೆ ಬಿಸಿಲಿನಲ್ಲಿ ಮಲಗಿದ ಮಹಿಳೆ! ಈಕೆಯ ಮುಖ ಹೇಗಾಗಿದೆ ನೋಡಿ

ಅಜಂ ಅನ್ಸಾರಿ ಅವರ ವಿರುದ್ಧ ಎಫ್ಐಆರ್ ದಾಖಲು 

ಅವರ ಈ ವಿಲಕ್ಷಣ ಕೃತ್ಯಕ್ಕಾಗಿ, ರೈಲ್ವೆ ಹಳಿಗಳ ಮೇಲೆ ಮಲಗಿ ಮತ್ತು ಓಡಾಡಿಕೊಂಡು ಇನ್‌ಸ್ಟಾಗ್ರಾಮ್ ರೀಲ್ ಮಾಡಿದ್ದಕ್ಕಾಗಿ ಲಕ್ನೋದ ಆರ್‌ಪಿಎಫ್ ಅವರು ಎಫ್ಐಆರ್ ಅನ್ನು ದಾಖಲಿಸಿಕೊಂಡಿದ್ದಾರೆ. ಅಷ್ಟಕ್ಕೇ ಸುಮ್ಮನಿರದೆ ಘಟನೆಯ ಬಗ್ಗೆ ಆರ್‌ಪಿಎಫ್ ಕೂಡ ಟ್ವೀಟ್ ಮಾಡಿದೆ. ರೈಲ್ವೆ ಕಾಯ್ದೆಯ ಸೆಕ್ಷನ್ 147, 145 ಮತ್ತು 167 ರ ಅಡಿಯಲ್ಲಿ ಅಜಂ ಅನ್ಸಾರಿ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದ್ದು, ಶೀಘ್ರದಲ್ಲಿಯೇ ಇವರನ್ನು ಬಂಧಿಸಲಾಗುವುದು ಎಂದು ಆರ್‌ಪಿಎಫ್ ಲಕ್ನೋದ ಇನ್ಸ್ಪೆಕ್ಟರ್ ಆದ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.

"ರೈಲ್ವೆ ಕಾಯ್ದೆ 147 ರ ಅಡಿಯಲ್ಲಿ ಪ್ರಕರಣ (ಯಾವುದೇ ವ್ಯಕ್ತಿಯು ಕಾನೂನು ಬದ್ಧ ಅಧಿಕಾರವಿಲ್ಲದೆ ರೈಲ್ವೆಯ ಯಾವುದೇ ಭಾಗಕ್ಕೆ ಪ್ರವೇಶಿಸಿದರೆ), 145 (ಯಾವುದೇ ರೈಲ್ವೆ ಬೋಗಿಯಲ್ಲಿ ಅಥವಾ ರೈಲ್ವೆ ನಿಲ್ದಾಣದ ಯಾವುದೇ ಭಾಗದಲ್ಲಿ ಯಾವುದೇ ವ್ಯಕ್ತಿಯು ಕುಡಿದು ದಾಂದಲೆ ಮಾಡುವುದು ಮತ್ತು ಉಪದ್ರವ ಮಾಡುವುದು) ಮತ್ತು 167 (ರೈಲಿನಲ್ಲಿ ಧೂಮಪಾನ ನಿಷೇಧ) ಅನ್ನು ಅಜಂ ಅನ್ಸಾರಿ ವಿರುದ್ಧ ಈ ಪ್ರಕರಣದಲ್ಲಿ ದಾಖಲಿಸಲಾಗಿದೆ" ಎಂದು ಅವರು ಹೇಳಿದರು.

ಈ ಮೊದಲು ಇವರ ವಿರುದ್ಧ ಪ್ರಕರಣ ದಾಖಲು 

ಅಜಂ ವಿರುದ್ಧ ಪ್ರಕರಣ ದಾಖಲಾಗುತ್ತಿರುವುದು ಇದೇನು ಮೊದಲ ಬಾರಿ ಅಲ್ಲ. ಘಂಟಾಘರ್ ನಲ್ಲಿ ಜನಸಂದಣಿಯನ್ನು ಒಟ್ಟುಗೂಡಿಸುವ ಮೂಲಕ ರೀಲ್ ತಯಾರಿಸಿ ಶಾಂತಿ ಕದಡಿದ್ದಕ್ಕಾಗಿ ಠಾಕೂರ್‌ಗಂಜ್ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ:  Swiggy: ಆರ್ಡರ್​ ಲೇಟಾಯ್ತು ಅಂತ ಗುರ್​ ಅಂತಿದ್ದ ವ್ಯಕ್ತಿ; ಡೆಲಿವರಿ ಬಾಯ್ ಬಂದಾಗ ಮಾತ್ರ ಆಗಿದ್ದೇ ಬೇರೆ!

ಅಜಂ ಅವರು ಲಕ್ನೋ ನಗರದ ವಿವಿಧ ಸ್ಥಳಗಳಲ್ಲಿ ಮತ್ತು ಬೀದಿಗಳಲ್ಲಿ ನಿಂತು ರೀಲ್ ಗಳನ್ನು ಮಾಡಿ ನಂತರ ಪೋಸ್ಟ್ ಮಾಡುತ್ತಿದ್ದಾರೆ, ಇದು ಸಾಮಾಜಿಕ ಮಾಧ್ಯಮದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡುತ್ತಿದೆ ಮತ್ತು ಅವರ ಈ ವಿಡಿಯೋಗಳು ವೈರಲ್ ಆಗಲು ಕಾರಣವಾಗುತ್ತಿವೆ.
Published by:Ashwini Prabhu
First published: