ಷೇರುಮಾರುಕಟ್ಟೆಯಲ್ಲಿ ಕುಸಿತ ಕಂಡ ಕಾರ್‌ಟ್ರೇಡ್ ಷೇರುಗಳು; ಹೂಡಿಕೆದಾರರು ಏನು ಮಾಡಬೇಕು?

ಆಟೋ ಪ್ಲಾಟ್‌ಫಾರ್ಮ್ ಕಾರ್‌ಟ್ರೇಡ್ ಟೆಕ್ ಷೇರುಗಳು ಮಾರುಕಟ್ಟೆಯಲ್ಲಿ ಅಸಮರ್ಥವಾಗಿ ಪ್ರತಿ ಷೇರಿಗೆ ರೂ 1618 ರಂತೆ 1.11% ರಿಯಾಯಿತಿಯೊಂದಿಗೆ ಆರಂಭವನ್ನು ಮಾಡಿದ್ದು BSE ನಲ್ಲಿ ರೂ 1,600 ಕ್ಕೆ ರಾಷ್ಟ್ರೀಯ ಷೇರು ವಿನಿಮಯದಲ್ಲಿ ರೂ 1,599.80 ಕ್ಕೆ ಸ್ಟಾಕ್ ಆರಂಭಗೊಂಡಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:

  ಕಾರ್‌ಟ್ರೇಡ್ ಟೆಕ್ ಷೇರುಗಳು ನಿರಾಶದಾಯಕ ಆರಂಭವನ್ನು ಹೊಂದಿದ್ದು ಮಾರುಕಟ್ಟೆಯಲ್ಲಿ 8.8% ಕುಸಿತವನ್ನು ಕಂಡುಕೊಂಡಿದೆ. ಅದಾಗ್ಯೂ ಅಂಕಿಅಂಶಗಳ ವಿಶ್ಲೇಷಣೆಗಳ ಪ್ರಕಾರ ಕಾರ್‌ಟ್ರೇಡ್ 36.82 ಇಕ್ವಿಟಿ ಷೇರುಗಳೊಂದಿಗೆ ವಹಿವಾಟು ನಡೆಸಿದೆ. ಆಗಸ್ಟ್ 9-11 ರ ಅವಧಿಯಲ್ಲಿ 20.29 ಪಟ್ಟು ಹೆಚ್ಚಿನ ಸಬ್‌ಸ್ಕ್ರಿಪ್ಶನ್‌ನೊಂದಿಗೆ ಪಬ್ಲಿಕ್ ಆಫರ್ (ಸಾರ್ವಜನಿಕ ಕೊಡುಗೆ) ಹೂಡಿಕೆದಾರರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಸಾಂಸ್ಥಿಕ ಖರೀದಿಗೆ ಮೀಸಲಾಗಿರುವ ಭಾಗವನ್ನು ಹೂಡಿಕೆದಾರರು 35.45 ಪಟ್ಟು ಸಬ್‌ಸ್ಕ್ರೈಬ್ ಮಾಡಲಾಗಿದ್ದು ಸಾಂಸ್ಥಿಕೇತರ ಹೂಡಿಕೆದಾರರ ಪಾಲು 41 ಪಟ್ಟು ಸಬ್‌ಸ್ಕ್ರಿಪ್ಶನ್ ಕಂಡಿದೆ. ಚಿಲ್ಲರೆ ವ್ಯಾಪಾರ ಭಾಗವನ್ನು 2.75 ಪಟ್ಟು ಕಾಯ್ದಿರಿಸಿದೆ.


  ಆಟೋ ಪ್ಲಾಟ್‌ಫಾರ್ಮ್ ಕಾರ್‌ಟ್ರೇಡ್ ಟೆಕ್ ಷೇರುಗಳು ಮಾರುಕಟ್ಟೆಯಲ್ಲಿ ಅಸಮರ್ಥವಾಗಿ ಪ್ರತಿ ಷೇರಿಗೆ ರೂ 1618 ರಂತೆ 1.11% ರಿಯಾಯಿತಿಯೊಂದಿಗೆ ಆರಂಭವನ್ನು ಮಾಡಿದ್ದು BSE ನಲ್ಲಿ ರೂ 1,600 ಕ್ಕೆ ರಾಷ್ಟ್ರೀಯ ಷೇರು ವಿನಿಮಯದಲ್ಲಿ ರೂ 1,599.80 ಕ್ಕೆ ಸ್ಟಾಕ್ ಆರಂಭಗೊಂಡಿದೆ. ಈ ಷೇರುಗಳು NSE ಯಲ್ಲಿ ರೂ 1,575.05 ಕ್ಕೆ ವಹಿವಾಟು ನಡೆಸುತ್ತಿದ್ದು 2.7% ಇಳಿಕೆಯನ್ನು ನಾವು ಗಮನಿಸಬಹುದಾಗಿದೆ ಹಾಗೂ BSE ನಲ್ಲಿ ರೂ 1,582.45 ಕ್ಕೆ 2.2% ಇಳಿಕೆಯನ್ನು ಕಂಡಿದೆ.


  ಲಿಸ್ಟಿಂಗ್ ದಿನದಂದು ಲಾಭವನ್ನು ಕಾಯ್ದಿರಿಸಲು ನಿಯೋಜಿಸಿದ ಹೂಡಿಕೆದಾರರಿಗೆ ಈಗಾಗಲೇ ಶಿಫಾರಸು ಮಾಡಲಾಗಿದ್ದು ಇನ್ನು ನಿಯೋಜಿಸದೇ ಇರುವ ಹೂಡಿಕೆದಾರರು ಉತ್ತಮ ಬೆಲೆ ಶ್ರೇಣಿ ಸಂಗ್ರಹವಾಗುವವರೆಗೆ ನಿರೀಕ್ಷಿಸುವುದು ಉತ್ತಮ ಎಂಬುದಾಗಿ ಮೆಹ್ತಾ ಇಕ್ವಿಟಿಗಳ ವಿಪಿ ಸಂಶೋಧನೆಯ ಪ್ರಶಾಂತ್ ತಾಪ್ಸೆ ತಿಳಿಸಿದ್ದಾರೆ. ಕಾರ್‌ಟ್ರೇಡ್ ಆರಂಭಿಕ ಸಾರ್ವಜನಿಕ ಕೊಡುಗೆಯ ಮೂಲಕ ರೂ 2,998.51 ಕೋಟಿ ಹಣವನ್ನು ಸಂಗ್ರಹಿಸಿದ್ದು ಷೇರುದಾರರಿಂದ ಮಾರಾಟದ ಪ್ರಸ್ತಾಪವನ್ನು ಹೊಂದಿದೆ.


  ಹೂಡಿಕೆದಾರರು ಅರ್ಧದಷ್ಟು ಲಾಭವನ್ನು ಕಾಯ್ದಿರಿಸಿಕೊಂಡು ಉಳಿದಿರುವ ಲಾಭವನ್ನು ದೀರ್ಘಾವಧಿಗೆ ಉಳಿಸಿಕೊಳ್ಳಬೇಕು ಎಂದು ಹಿರಿಯ ಸಂಶೋಧನಾ ವಿಶ್ಲೇಷಕ ಆಸ್ತಾ ಜೈನ್ ಮಾಹಿತಿ ನೀಡಿದ್ದಾರೆ. ಕಾರ್‌ಟ್ರೇಡ್ ಬಹು-ಚಾನೆಲ್ ಆಟೋ ಪ್ಲಾಟ್‌ಫಾರ್ಮ್ ಆಗಿದ್ದು, ವಾಹನದ ವಿಧಗಳು ಮತ್ತು ಮೌಲ್ಯವರ್ಧಿತ ಸೇವೆಗಳ ವ್ಯಾಪ್ತಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ಹಲವಾರು ಬ್ರ್ಯಾಂಡ್‌ಗಳಾದ ಕಾರ್‌ವೇಲ್, ಕಾರ್‌ಟ್ರೇಡ್, ಶ್ರೀರಾಮ್ ಆಟೋಮಾಲ್, ಬೈಕ್‌ವೇಲ್, ಕಾರ್ಟ್ರೇಡ್ ಎಕ್ಸ್‌ಚೇಂಜ್, ಅಡ್ರಾಯಿಟ್ ಆಟೋ ಮತ್ತು ಆಟೋಬಿಜ್‌ಗಳ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತದೆ. ಸಂಸ್ಥೆಯ ಹಲವಾರು ಪ್ಲಾಟ್‌ಫಾರ್ಮ್‌ಗಳು ಹೊಸ ಮತ್ತು ಬಳಸಿದ ಆಟೋಮೊಬೈಲ್ ಗ್ರಾಹಕರಿಗೆ, ವಾಹನ ಡೀಲರ್‌ಶಿಪ್‌ಗಳು, ವಾಹನ OEM ಗಳು ಮತ್ತು ಇತರ ವ್ಯವಹಾರಗಳಿಗೆ ತಮ್ಮ ವಾಹನಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ.


  ಇದನ್ನೂ ಓದಿ: ಇಂಟರ್ನೆಟ್‌ನಲ್ಲಿ ವೈರಲ್ ಆದ ಆನಂದ್ ಮಹೀಂದ್ರಾ ಹಂಚಿಕೊಂಡ ಡಬ್ಬಾವಾಲಿ ಫೋಟೋ!

  ವ್ಯಾಪಾರ ಮಾದರಿ ಮತ್ತು ಭವಿಷ್ಯದ ಬೆಳವಣಿಗೆಯ ನಿರೀಕ್ಷೆಗಳನ್ನು ನೋಡಿದರೆ, ಈ IPO ಉತ್ತಮ ಹೂಡಿಕೆಯ ಅವಕಾಶವಾಗಿ ಪರಿಣಮಿಸಬಹುದು ಎಂದು ಕ್ಯಾಪಿಟಲ್‌ವಿಯಾ ಗ್ಲೋಬಲ್ ರಿಸರ್ಚ್‌ನ ಸಂಶೋಧನಾ ಮುಖ್ಯಸ್ಥ ಗೌರವ್ ಗರ್ಗ್ ತಿಳಿಸಿದ್ದಾರೆ. ಕಂಪೆನಿಯು ಆಟೋಮೋಟಿವ್ ವಹಿವಾಟುಗಳಲ್ಲಿ ಖರೀದಿ, ಮಾರಾಟ, ಮಾರ್ಕೆಟಿಂಗ್ ಹಾಗೂ ಇತರ ಚಟುವಟಿಕೆಗಳೊಂದಿಗೆ ಪರಿಹಾರ ನೀಡುವುದರಿಂದ ಇಲ್ಲಿ ಹೂಡಿಕೆ ನಡೆಸುವ ಹೂಡಿಕೆದಾರನು ಎರಡು ಮೂರು ವರ್ಷಗಳ ಕಾಲ ಹೂಡಿಕೆಯನ್ನು ಹಿಡಿದಿಟ್ಟುಕೊಳ್ಳಬಹುದು ಎಂಬುದಾಗಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  First published: