ಆಸ್ಟ್ರೇಲಿಯ ಮೃಗಾಲಯದಲ್ಲಿರುವಂತಹ ಒಂದು ಶಿಬಿರದಿಂದ ಚಿಕ್ಕ ಪುಟ್ಟ ವಸ್ತುಗಳು ತುಂಬಾ ದಿನಗಳಿಂದ ಕಾಣೆಯಾಗುತ್ತಿದ್ದು, ಅಲ್ಲಿನವರಿಗೆ ಹೇಗೆ ಈ ಚಿಕ್ಕ ಪುಟ್ಟ ವಸ್ತುಗಳು ಕಾಣೆಯಾಗುತ್ತಿವೆ, ಇದನ್ನೆಲ್ಲಾ ಯಾರು ಕದಿಯುತ್ತಿದ್ದಾರೆ ಎನ್ನುವುದೇ ಒಂದು ತಲೆನೋವಾಗಿತ್ತು. ಆದರೆ ಸತ್ಯ ಕಂಡುಕೊಂಡಾಗ ಅವರು ಬೆಚ್ಚಿಬಿದ್ದರು, ಏಕೆಂದರೆ ಇವುಗಳನ್ನು ಕದ್ದಿರುವುದು ಮನುಷ್ಯರಲ್ಲ, ಬದಲಾಗಿ ಒಂದು ಪುಟ್ಟ ಪಕ್ಷಿ. ಒಂದು ಪುಟ್ಟ ಪಕ್ಷಿ ಚಿಕ್ಕ ಪುಟ್ಟ ಬಣ್ಣ ಬಣ್ಣದ ವಸ್ತುಗಳನ್ನು ಕದ್ದುಕೊಂಡು ಬೇರೆಡೆಗೆ ಏಕೆ ಒಯ್ಯುತ್ತದೆ ಎಂದು ನಿಮ್ಮ ತಲೆಯಲ್ಲಿ ಪ್ರಶ್ನೆ ಮೂಡಬಹುದು.
ಸ್ಟೀವ್ ಇರ್ವಿನ್ (Bindi Irwin) ವನ್ಯಜೀವಿ ಪ್ರದೇಶದ ಶಿಬಿರದಿಂದ ಕಾಣೆಯಾದ ವಸ್ತುಗಳ ಹಿಂದಿನ ರಹಸ್ಯವನ್ನು ಬಿಂದಿ ಇರ್ವಿನ್ ಅವರ ಪತಿ ಚಾಂಡ್ಲರ್ ಪೊವೆಲ್ (Chandler Powell) ಹಂತ ಹಂತವಾಗಿ ಬಿಚ್ಚಿಟ್ಟಿದ್ದಾರೆ. ಆಸ್ಟ್ರೇಲಿಯ ಮೃಗಾಲಯದ ಸಿಬ್ಬಂದಿ ಈ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿರುವ ಖಾತೆಯಲ್ಲಿನ ಪುಟದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೊ ಜನರನ್ನು ತುಂಬಾ ನಗಿಸಿದೆ ಎಂದರೆ ಸುಳ್ಳಲ್ಲ.
ನೀವು ವಿಡಿಯೋ ನೋಡಿದ ಮೇಲೆ ನಿಮಗೂ ‘ಏನ್ ಪಕ್ಷಿ ಇದು.. ನೋಡಲು ತುಂಬಾ ಚಿಕ್ಕದಾದರೂ ಎಂತಹ ಕೆಲಸ ಮಾಡಿದೆ’ ಎಂದನಿಸದೇ ಇರದು.
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಂತಹ 1 ನಿಮಿಷ 19 ಸೆಕೆಂಡುಗಳ ಈ ವಿಡಿಯೋದಲ್ಲಿ "ಚಾಂಡ್ಲರ್'' (Chandler) ಎಂಬ ಪುಟ್ಟ ಪಕ್ಷಿಯನ್ನು ಪರಿಚಯಿಸುತ್ತಾರೆ, ಇರ್ವಿನ್ ಫ್ಯಾಮಿಲಿ ಅಡ್ವೆಂಚರ್ಸ್. ಸ್ಟೀವ್ ಇರ್ವಿನ್ ವನ್ಯಜೀವಿ ಮೀಸಲು ಪ್ರದೇಶದಲ್ಲಿ, ಚಾಂಡ್ಲರ್ ಅಂತಿಮವಾಗಿ ಶಿಬಿರದಿಂದ ಕಣ್ಮರೆಯಾಗುತ್ತಿರುವ ವಸ್ತುಗಳ ರಹಸ್ಯ ಬಗೆಹರಿಸುತ್ತಾರೆ - ನೀವು ಈ ಪುಟ್ಟ ಅಪರಾಧಿ ಭೇಟಿಯಾಗುವವರೆಗೆ ಕಾಯಿರಿ!" ಎಂದು ಶೀರ್ಷಿಕೆಯನ್ನೂ ವಿಡಿಯೋದೊಂದಿಗೆ ಬರೆದಿದ್ದನ್ನು ಕಾಣಬಹುದಾಗಿದೆ.
View this post on Instagram
ಪೊವೆಲ್ ಹಾಗೆ ಹುಡುಕಿಕೊಂಡು ಹೋಗುವುದರೊಂದಿಗೆ ವಿಡಿಯೋ ಆರಂಭವಾಗುತ್ತದೆ ಮತ್ತು ಕೂಲಿಬಾದ ಶಿಬಿರದಲ್ಲಿರುವಂತಹ ವಸ್ತುಗಳು ಕಾಣೆಯಾಗಿದ್ದರ ಘಟನೆಯ ಹಿಂದೆ ಇರುವಂತಹ ‘ಮಾಸ್ಟರ್ ಮೈಂಡ್’ ಎಂದು ಒಂದು ಪುಟ್ಟ ಪಕ್ಷಿಯನ್ನು ತೋರಿಸುತ್ತಾರೆ.
ಆ ಪುಟ್ಟ ಪಕ್ಷಿಯೂ ತನ್ನ ಹೆಣ್ಣು ಪಕ್ಷಿಯನ್ನು ಆಕರ್ಷಿಸುವುದಕ್ಕೆ ಒಂದು ಮುದ್ದಾದ ಗೂಡನ್ನು ಕಟ್ಟಿ ಆ ಕದ್ದಿರುವಂತಹ ಚಿಕ್ಕ ಪುಟ್ಟ ವಸ್ತುಗಳನ್ನು ಅಲ್ಲಿಯೇ ಗೂಡಿನ ಸುತ್ತಲೂ ಹಾಕಿ ತನ್ನ ಹೆಣ್ಣು ಪಕ್ಷಿಯನ್ನು ತನ್ನೆಡೆಗೆ ಆಕರ್ಷಿಸಿಕೊಳ್ಳಲು ಅದನ್ನು ಬೇರೆ ರೀತಿಯಲ್ಲಿ ಅಲಂಕರಿಸಿದ್ದನ್ನು ಅಲ್ಲಿ ಕಾಣಬಹುದಾಗಿತ್ತು. ಈಗಲಾದರೂ ಗೊತ್ತಾಯಿತೆ ಈ ಪುಟ್ಟ ಪಕ್ಷಿ ಏಕೆ ಶಿಬಿರದಲ್ಲಿರುವಂತಹ ವಸ್ತುಗಳನ್ನು ಕದ್ದು ತಂದಿದೆ ಎಂದು.
ಈ ವಿಡಿಯೋವನ್ನು ಇದುವರೆಗೂ ಸುಮಾರು 95,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ಇದನ್ನು ನೋಡಿದಂತಹ ನೆಟ್ಟಿಗರು ವಿಭಿನ್ನವಾದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಈ ವಿಡಿಯೋ (Video) ನೋಡಿದ ನೆಟ್ಟಿಗರು “ಪಕ್ಷಿಯ ಮನೆ ತುಂಬಾನೇ ಸುಂದರವಾಗಿದೆ" ಎಂದು ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಬರೆದಿದ್ದಾರೆ. "ಇದು ನಿಜವಾಗಿಯೂ ತುಂಬಾ ಒಳ್ಳೆಯ ವಿಷಯವಾಗಿದೆ," ಎಂದು ಇನ್ನೊಬ್ಬರು ಬರೆದಿದ್ದಾರೆ. "ಇದು ನಿಜಕ್ಕೂ ಅದ್ಭುತ," ಎಂದೂ ಕೆಲವು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ