ಮೈದಾನದಲ್ಲಿ ದಿಗ್ಗಜರ ದಾಖಲೆಗಳನ್ನು ಮುರಿಯುವ ವಿರಾಟ್ ಕೊಹ್ಲಿ, ಈ ವಿಚಾರದಲ್ಲೂ ಸಚಿನ್​, ಸೆಹ್ವಾಗ್​ರನ್ನು ಹಿಂದಿಕ್ಕಿದ್ದಾರೆ


Updated:December 31, 2017, 10:48 PM IST
ಮೈದಾನದಲ್ಲಿ ದಿಗ್ಗಜರ ದಾಖಲೆಗಳನ್ನು ಮುರಿಯುವ ವಿರಾಟ್ ಕೊಹ್ಲಿ, ಈ ವಿಚಾರದಲ್ಲೂ ಸಚಿನ್​, ಸೆಹ್ವಾಗ್​ರನ್ನು ಹಿಂದಿಕ್ಕಿದ್ದಾರೆ

Updated: December 31, 2017, 10:48 PM IST
ಇಂದು ಸಾಮಾಜಿಕ ಜಾಲಾತಾಣಗಳು ಕೇವಲ ನಮ್ಮ ಮನದ ಮಾತು, ನಿಲುವುಗಳನ್ನು ವ್ಯಕ್ತಪಡಿಸಲಷ್ಟೇ ಸೀಮಿತವಾಗಿಲ್ಲ. ಬದಲಾಗಿ ಸ್ನೇಹಿತರು ಹಾಗೂ ಹತ್ತಿರದ ಸಂಬಂಧಿಕರೊಡನೆ ಬೆರೆತುಕೊಳ್ಳಲು ಒಂದು ಉತ್ತಮ ವೇದಿಕೆಯಾಗಿದೆ. ಟೀಂ ಇಂಡಿಯಾದ ಕ್ರಿಕೆಟಿಗರ ವಿಚಾರವನ್ನು ತೆಗೆದುಕೊಂಡರೆ, ಬಹುತೇಕ ಮಂದಿ ಕ್ರಿಕೆಟಿಗರು 2017ರಲ್ಲಿ ಟ್ವಿಟರ್ ಮೂಲಕ ಆಡಿದ ಮಾತುಗಳು ಪ್ರಶಂಸಕರ ಮನದಲ್ಲಿ ಮನೆ ಮಾಡಿವೆ.

ದಾಖಲೆಗಳನ್ನು ಮುರಿಯುವುದರಲ್ಲಿ ನಿಸ್ಸೀಮರಾಗಿರುವ ವಿರಾಟ್ ಕೊಹ್ಲಿ, ಟ್ವಿಟರ್ ವಿಚಾರದಲ್ಲೂ ಮುಂಚೂಣಿಯಲ್ಲಿದ್ದಾರೆ. ಈ ವರ್ಷ ಅತ್ಯಧಿಕ ಹಿಟ್ ಪಡೆದ ಟ್ವೀಟ್ ವಿರಾಟ್ ಹೆಸರಿನಲ್ಲಿದೆ. ಹಲವು ದಿನಗಳವರೆಗೆ ವಿರಾಟ್ ಹಾಗೂ ಅನುಷ್ಕಾ ಶರ್ಮಾರ ಮದುವೆ ವಿಚಾರವಾಗಿ ಹಲವಾರು ನಿಲುವುಗಳು ವ್ಯಕ್ತವಾಗಿದ್ದವು, ಇವೆಲ್ಲದರ ನಡುವೆಯೇ ವಿರಾಟ್ ತನ್ನ ಟ್ವಿಟರ್​ ಹ್ಯಾಂಡಲ್ ಮೂಲಕ ಡಿಸೆಂಬರ್ 11ರಂದು ಅನುಷ್ಕಾರೊಂದಿಗೆ ಮದುವೆಯಾಗಿರುವ ವಿಚಾರವನ್ನು ಘೋಷಿಸಿದ್ದರು. ಅವರ ಈ ಟ್ವೀಟ್ ಈವರೆಗೆ 91 ಸಾವಿರ ಬಾರಿ ರೀಟ್ವೀಟ್ ಆಗಿದ್ದು, ಸುಮಾರು 5 ಲಕ್ಷದ 45 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

ಸಚಿನ್ ತೆಂಡುಲ್ಕರ್:

ಇನ್ನು 2017ರಲ್ಲಿ ಭಾರತ ರತ್ನ ಸಚಿನ್ ತೆಂಡುಲ್ಕರ್ ಕ್ರೀಡೆ ಹಾಗೂ ಸಾಮಾಜಿಕ ಸಮಸ್ಯೆಗಳ ಕುರಿತಾಗಿ ಹಲವಾರು ಟ್ವೀಟ್ ಮಾಡಿದ್ದರೂ, ಅವರು ಮಾಡಿರುವ ಟ್ವೀಟ್​ಗಳಲ್ಲಿ ಅತಿ ಹೆಚ್ಚು ಸದ್ದು ಮಾಡಿದ್ದು ವಿರಾಟ್ ಹಾಗೂ ಅನುಷ್ಕಾ ಶರ್ಮಾರಿಗೆ ಶುಭಾಷಯ ಕೋರಿ ಮಾಡಿದ್ದ ಟ್ವೀಟ್. ಸಚಿನ್ ಮಾಡಿದ್ದ ಈ ಟ್ವೀಟ್ 15ಕ್ಕೂ ಅಧಿಕ ಬಾರಿ ರೀ ಟ್ವೀಟ್ ಆಗಿದ್ದು, 1 ಲಕ್ಷದ 52 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.
Loading...

 

ಮಹೇಂದ್ರ ಸಿಂಗ್ ಧೋನಿ:

ಇತ್ತ ಮೂರು ICC ವರ್ಲ್ಡ್​ ಕಪ್​ ತಂದುಕೊಟ್ಟ ಮಹೆಂದ್ರ ಸಿಂಗ್ ಸಾಮಾಜಿಕ ಜಾಲಾತಾಣಗಳಲ್ಲಿ ಬಹಳಷ್ಟು ಸಕ್ರಿಯರಾಗಿಲ್ಲದಿದ್ದರೂ, ಈ ವರ್ಷ ಜನವರಿ 25ರಂದು ಎನ್​ಎಸ್​ಜಿ ಕಮಾಂಡೋಗಳಿಗೆ ಸಂಬಂಧಿಸಿದಂತೆ ಅವರು ಮಾಡಿದ್ದ ಟ್ವೀಟ್ ಮಾತ್ರ ಬಹಳ ಸದ್ದು ಮಾಡಿತ್ತು. ಈ ಟ್ವೀಟ್​ನ್ನು ಸುಮಾರು 5900ಕ್ಕೂ ಅಧಿಕ ಮಂದಿ ರೀ ಟ್ವೀಟ್ ಮಾಡುವುದರೊಂದಿಗೆ 37 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಮಾಹಿ ಈ ವರ್ಷ ಕೇವಲ 7 ಬಾರಿಯಷ್ಟೇ ಟ್ವಿಟರ್​ನಲ್ಲಿ ತಮ್ಮ ಅನುಭವ/ನಿಲುವು/ಮಾತುಗಳನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಅವರ ಪ್ರತಿಯೊಂದು ಟ್ವೀಟ್​ನ್ನು ಜನರು ಬಹಳಷ್ಟು ಇಷ್ಟ ಪಟ್ಟಿದ್ದಾರೆ.

ವಿರೇಂದ್ರ ಸೆಹ್ವಾಗ್:

ವೀರೂ ಕ್ರಿಕೆಟ್​ ಕ್ಷೇತ್ರದಿಂದ ನಿವೃತ್ತಿ ಪಡೆದಿದ್ದರೂ, ಸೋಷಲ್ ಮಿಡಿಯಗಳಲ್ಲಿ ಅವರ ಭರ್ಜರಿ ಬ್ಯಾಟಿಂಗ್​ ಯಾವುದೇ ಅಡೆ ತಡೆಯಿಲ್ಲದೆ ಮುಂದುವರೆದಿದೆ. ಕಾಲ ಎಷ್ಟು ಬದಲಾಗಿದೆ ಎಂದರೆ ಜನರು ಸೆಹ್ವಾಗ್​ರನ್ನು ಟ್ವಿಟರ್​ ಕಿಂಗ್ ಎಂದು ಕರೆಯಲಾರಂಭಿಸಿದ್ದಾರೆ. ವರ್ಷವಿಡೀ ಅವರ ಅಸಂಖ್ಯಾತ ಟ್ವೀಟ್​ಗಳು ಬಹಳಷ್ಟು ಸದ್ದು ಮಾಡಿದವು. ಆದರೆ ಡಿಸೆಂಬರ್ 13ರಂದು ಮೂರನೇ ದ್ವಿಶತಕ ಭಾರಿಸಿದ್ದ ರೋಹಿತ್ ಶರ್ಮಾಗೆ ಶುಭಾಷಯ ಕೋರಿದ ಟ್ವೀಟ್ ಬಹಳಷ್ಟು ವಿಶೇಷವಾಗಿತ್ತು. ಅವರ ಈ ಟ್ವೀಟ್ ಈವರೆಗೂ 15 ಸಾವಿರ ಬಾರಿ ರೀಟ್ವೀಟ್​ ಆಗಿದ್ದು, 1 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

ರೋಹಿತ್ ಶರ್ಮಾ:

ಇನ್ನು ಸೋಷಲ್ ಮೀಡಿಯಾದಲ್ಲಿ ಸದ್ದು ಮಾಡುವ ವಿಚಾರದಲ್ಲಿ 'ಹಿಟ್ ಮ್ಯಾನ್' ಆಗಿರುವ ರೋಹಿತ್ ಶರ್ಮಾ ಕೂಡಾ ಹಿಂದೆ ಬಿದ್ದಿಲ್ಲ. ಅದ್ಭುತ ಬ್ಯಾಟಿಂಗ್ ಮೂಲಕ ವರ್ಷವಿಡೀ ಪ್ರೇಕ್ಷಕರನ್ನು ರಂಜಿಸುವ ಈ ಆಟಗಾರ, ವರ್ಷದ ಕೊನೆಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಕೇರ್​ಟೇಕರ್ ಕ್ಯಾಪ್ಟನ್​ ಆಗಿ ತಂಡಕ್ಕೆ ಏಕದಿನ ಹಾಗೂ ಟಿ20ಯ ಸೀರೀಸ್ ತಂದುಕೊಟ್ಟು ಎಲ್ಲರ ಮನ ಗೆದ್ದಿದ್ದಾರೆ. ಹೀಗಿರುವಾಗ ಡಿಸೆಂಬರ್ 12ರಂದು ಅವರು ವಿರಾಟ್ ಹಾಗೂ ಅನುಷ್ಕಾ ಶರ್ಮಾರಿಗೆ ಟ್ವೀಟ್ ಮೂಲಕ ಮದುವೆಯ ಶುಭಾಷಯ ತಿಳಿಸಿದ್ದಾರೆ. ಜೊತೆಗೆ ಅನುಷ್ಕಾರಿಗೆ ಸಲಹೆ ನೀಡುತ್ತಾ ಮದುವೆಯ ಬಳಿಕವೂ 'ಶರ್ಮಾ' ಹೆಸರನ್ನು ಬದಲಾಯಿಸದಿರಲು ತಿಳಿಸಿದ್ದಾರೆ. ರೋಹಿತ್ ಮಾಡಿರುವ ಈ ಟ್ವಿಟ್ 7700ಕ್ಕೂ ಅಧಿಕ ಮಂದಿ ರೀಟ್ವೀಟ್ ಮಾಡುವುದರೊಂದಿಗೆ, 84 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

ಈ ವಿಚಾರಗಳನ್ನು ಗಮನಿಸಿದರೆ ವಿರಾಟ್ ಅಬ್ಬರ ಕೇವಲ ಮೈದಾನದಲ್ಲಿ ದಾಖಲೆ ಮುರಿಯುವುದರೊಂದಿಗೆ, ಮೈದಾನದ ಹೊರಗೂ ಸೋಷಲ್ ಮೀಡಿಯಾದಲ್ಲೂ ಮುಂದುವರೆದಿದೆ ಎಂಬುವುದು ಸ್ಪಷ್ಟವಾಗುತ್ತದೆ.
First published:December 31, 2017
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...