ಪ್ರಪಂಚದಲ್ಲಿ ನಾನಾ ರೀತಿಯಾಗಿ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತದೆ. ಇವೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗೋದನ್ನ ನಾವು ನೋಡ್ತಾ ಇರ್ತೀವಿ. ಲೈಕ್ಸ್ (Likes) ಮತ್ತು ಕಮೆಂಟ್ಸ್ ಗಳ (Comments) ಲೋಕವಿದು. ಇದರ ನಡುವೆ ವಿಷಯಗಳು ಟ್ರೆಂಡ್ ಆಗೋದು ವಿಶೇಷವೇನಲ್ಲ ಬಿಡಿ. ಹುಡುಗ ಹುಡುಗಿ ಮದುವೆ ಆಗೋದು ಕಾಮನ್. ಅದೇ ಹುಡುಗಿ ಮತ್ತು ಹುಡುಗಿ ಅಥವಾ ಹುಡುಗ ಮತ್ತು ಹುಡುಗ ಮದುವೆ ಆಗೋದು ಲೈಂಗಿಕ ಅಲ್ಪ ಸಂಖ್ಯಾತರ (LGBT) ಸಮುದಾಯವನ್ನು ಸೇರುತ್ತೆ. ಭಾರತದ ಸಂವಿಧಾನದ ಪ್ರಕಾರ ಸೆಕ್ಷನ್ (Section) 377 ಅಲ್ಪ ಲೈಂಗಿಕ ಅಲ್ಪ ಸಂಖ್ಯಾತರ ಸಮಾನತೆಯನ್ನು ಮತ್ತು ಇದು ಸಕ್ರಮ ಎಂದು ಘೋಷಿಸಲಾಗಿದೆ. ಈ ರಿಲೇಷನ್ಶಿಪ್ ಹೊರತಾಗಿಯೂ ಸೋಲೋಗಮಿ (Sologamy) ಎಂಬ ವಿಷಯವಿದೆ.
ಸೋಲೋಗಮಿ ಅಂದ್ರೆ ಏನು?
ಸೋಲೋಗಮಿ ಅಂದ್ರೆ ತನ್ನನ್ನ ತಾನೇ ಮದುವೆ ಆಗೋದು. ಆಕೆ ಅಥವಾ ಆತನು ತನ್ನನ್ನ ತಾನು ತುಂಬಾ ಪ್ರೀತಿಸುತ್ತಾನೆ. ಹಾಗೆ ಮದುವೆ ಕೂಡ ಆಗುತ್ತಾರೆ. ಇನ್ನು ಕೆಲವೊಬ್ಬರು ಕೆಲವು ಚಿತ್ರ ವಿಚಿತ್ರವಾದಂತಹ ವಸ್ತುಗಳೊಂದಿಗೆ ಮದುವೆ ಆಗೋದು ಕೂಡ ಉಂಟು. ಇಂತಹ ಸಂಬಂಧವನ್ನು ಸೋಲೋಗಮಿ ಅಂತ ಹೇಳ್ತಾರೆ. ಇದು ಸಾಮಾನ್ಯ ಮನುಷ್ಯರಲ್ಲಿ ಇಂತಹ ಭಾವನೆ ಬರೋದು ಕಡಿಮೆ. ಇದಕ್ಕೆ ಸಂಬಂಧಪಟ್ಟಂತಹ ಒಂದು ವಿಷಯ ಇದೀಗ ಸಖತ್ ವೈರಲ್ ಆಗ್ತಾ ಇದೆ.
ಈ ಜಗತ್ತಿನಲ್ಲಿ ಎಂತೆಲ್ಲಾ ಚಿತ್ರ ವಿಚಿತ್ರವಾದ ಅಂತಹ ಮನುಷ್ಯರು ಇರುತ್ತಾರೆ ಅಂತ ಈ ಸುದ್ದಿಯನ್ನು ಓದಿದ ಮೇಲೆ ನೀವೇ ಹೇಳ್ತೀರಾ ನೋಡಿ. ಯಾಕಂದ್ರೆ ಇದನ್ನ ಹುಚ್ಚು ಅಂತ ಹೇಳೋದಾ ಅಥವಾ ಪ್ರೀತಿ ಅಂತ ಹೇಳ್ಬೇಕೋ ತಿಳಿಯೋದೇ ಇಲ್ಲ. ಅದೇನು ಅಂತ ನಿಮಗೆ ಕ್ಯೂರಿಯಾಸಿಟಿ ಹೆಚ್ಚಾಗ್ತಾ ಇದ್ಯಾ? ಸ್ಟೋರಿಯನ್ನು ಕಂಪ್ಲೀಟ್ ಆಗಿ ಓದಿ ಮಿಸ್ ಮಾಡಬೇಡಿ.
ಇದನ್ನೂ ಓದಿ: ಹೆಂಡತಿಯ ’ಆ ರೀತಿಯ’ ಫೋಟೋ ಟ್ಯಾಟೂ ಹಾಕಿಸಿಕೊಂಡ ಗಂಡ! ಬಿದ್ದು ಬಿದ್ದು ನಕ್ಕ ನೆಟ್ಟಿಗರು
ಕಳೆದ ತಿಂಗಳು ಫೆಬ್ರವರಿ 25ರಂದು ಸೋಫಿ ಮೌರೆ ಎಂಬಾಕೆ ತನ್ನನ್ನ ತಾನೆ ಮದುವೆ ಆಗಿದ್ದಾಳೆ. ಈ ಬಗ್ಗೆ ಅಧಿಕೃತವಾಗಿ ಸೋಶಿಯಲ್ ಮೀಡಿಯಾದಲ್ಲಿ ಈಕೆ ಹೇಳಿಕೊಂಡಿದ್ಲು. ಆಕೆಯ ಮದುವೆ ದಿನ ಬಿಳಿ ಬಣ್ಣದ ಗೌನ್ ಧರಿಸಿ ಚಿನ್ನದ ಕಿರೀಟವನ್ನು ಕೂಡ ಹಾಕೊಂಡಿದ್ಲು.
' ಇದು ನನ್ನ ಅತ್ಯಂತ ಸುಂದರವಾದ ಕ್ಷಣ, ಜೀವನದಲ್ಲಿ ಮರೆಯಲಾಗದಂತಹ ದಿನ. ನನ್ನ ಮದುವೆಯ ದಿನ ನಾನು ಹೊಸ ಬಟ್ಟೆ ಮತ್ತು ಚಿನ್ನದ ಕಿರೀಟವನ್ನು ಧರಿಸಿದ್ದೇನೆ. ಹಾಗೆಯೇ ಸಂಭ್ರಮಿಸಲು ಕೇಕನ್ನು ಕೂಡ ಸ್ವತಃ ನಾನೇ ನನ್ನ ಕೈಯಾರೆ ತಯಾರಿಸಿದ್ದೇನೆ, ಶುಭದಿನ ಇಂದಿನ ಆರಂಭ' ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಸೋಫಿ ಮೌರೆ ಬರೆದುಕೊಂಡಿದ್ದರು.
hoy en momentos esquizo de mi vida me compre un vestido de novia y me cocine una torta de casamiento para casarme conmigo misma pic.twitter.com/yQvYUUKsM4
— Sofi 𒉭 (@sofimaure07) February 19, 2023
ಅರೇ! ಹಿಂದಿನ ದಿನವಷ್ಟೇ ಅಷ್ಟೆಲ್ಲ ಜೀವನದ ಬಗ್ಗೆ ಹಾಗೆ ಸೋಲೋಗಮಿಯ ಬಗ್ಗೆ ಬರೆದುಕೊಂಡಿದ್ದ ಈಕೆ, ಮಾರನೇ ದಿನ ಸಡನ್ ಆಗಿ ಏನಾಯ್ತು ಅಂತ ತಿಳಿದು ಬಂದಿಲ್ಲ. ನಿಮಗೇನು ಹುಚ್ಚ ಈ ರೀತಿಯಾಗಿ ಜೀವನ ನಡೆಸೋಕೆ ಅಂತ ಒಬ್ಬರು ಕಮೆಂಟ್ ಮಾಡಿದರೆ, ಇನ್ನು ಈ ಕಣ್ಣಲ್ಲಿ ಏನೆಲ್ಲಾ ನೋಡಬೇಕು ಅಂತ ಅಳುವ ಸಿಂಬಲ್ ಜೊತೆ ಕಮೆಂಟ್ ಮಾಡಿದ್ದಾರೆ. ಹೀಗೆ ಕಮೆಂಟ್ ಮತ್ತು ಲೈಕ್ಸ್ ಗಳ ಮೂಲಕ ಈ ಸುದ್ದಿ ಸಖತ್ ಪಾಪ್ಯುಲರ್ ಆಗ್ತಾ ಇದೆ.
ಇದಕ್ಕೆ ಹೇಳೋದು ಪ್ರಸ್ತುತ ಮಾಯಾ ಜಗತ್ತು ಅಂತ. ಯಾರನ್ನ ಯಾರು ಬೇಕಾದರೂ ಮದುವೆ ಆದರು ಕೂಡ ಆಶ್ಚರ್ಯ ಇಲ್ಲ ಬಿಡಿ. ಈ ಫೋಟೋವನ್ನು ನೋಡಬೇಕಾದರೆ ನಿಮಗೆ ಅನಿಸಬಹುದು ಆಕೆ ಒಬ್ಬಳೇ ಮದುವೆಯಾದರೆ ಚೆನ್ನಾಗಿರುವುದಿಲ್ಲ ಅಂತ ಅಲ್ವಾ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ