HOME » NEWS » Trend » CANT MESS WITH NATURE VIDEO OF EAGLE FLYING AWAY WITH A DRONE GOES VIRAL HILARIOUS REACTIONS ONLINE STG VB

ಕಡಲತೀರ ಚಿತ್ರೀಕರಿಸುತ್ತಿದ್ದ ಡ್ರೋನ್ ಅನ್ನೇ ಎತ್ತಿಕೊಂಡು ಹಾರಿದ ಹದ್ದು: ಇಲ್ಲಿದೆ ನೋಡಿ ವೈರಲ್ ವಿಡಿಯೋ

ಹದ್ದೊಂದು ಡ್ರೋನ್ನೊಂದಿಗೆ ಹಾರಾಟ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಆನ್ಲೈನ್​ನಲ್ಲಿ ಉಲ್ಲಾಸಮಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

news18-kannada
Updated:February 5, 2021, 1:32 PM IST
ಕಡಲತೀರ ಚಿತ್ರೀಕರಿಸುತ್ತಿದ್ದ ಡ್ರೋನ್ ಅನ್ನೇ ಎತ್ತಿಕೊಂಡು ಹಾರಿದ ಹದ್ದು: ಇಲ್ಲಿದೆ ನೋಡಿ ವೈರಲ್ ವಿಡಿಯೋ
ಕಡಲತೀರ ಚಿತ್ರೀಕರಿಸುತ್ತಿದ್ದ ಡ್ರೋನ್ ಅನ್ನೇ ಎತ್ತಿಕೊಂಡು ಹಾರಿದ ಹದ್ದು
  • Share this:
ಮನುಷ್ಯ ತಂತ್ರಜ್ಞಾನದ ವಿಚಾರದಲ್ಲಾಗಲೀ, ಯಾವುದೇ ವಿಷಯದಲ್ಲಾಗಲೀ ಎಷ್ಟೇ ಮುಂದುವರಿದರೂ ಪ್ರಕೃತಿಯ ಮುಂದೆ ನಾವುಗಳು ನಗಣ್ಯ. ಪ್ರಕೃತಿಯನ್ನು ಮನುಷ್ಯ ಎಷ್ಟು ನಾಶ ಮಾಡಿದರೂ, ನಿಸರ್ಗದೊಂದಿಗೆ ಯುದ್ಧಕ್ಕಿಳಿದರೆ ಮನುಷ್ಯನಿಗೇ ಸೋಲುಂಟಾಗುವುದು ಹಾಗೂ ಹಾನಿಗೊಳಗಾಗುವುದು ಖಚಿತ. ಇದೇ ರೀತಿ ಆಕಾಶದಲ್ಲಿ ಹಾರಾಡಲು ಡ್ರೋನ್, ವಿಮಾನ - ಹೀಗೆ ನಾನಾ ವಸ್ತುಗಳನ್ನು ಕಂಡುಹಿಡಿದರೂ ಪ್ರಕೃತಿಯೇ ಗ್ರೇಟ್ ಅನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ.

ಹದ್ದೊಂದು ಡ್ರೋನ್ನೊಂದಿಗೆ ಹಾರಾಟ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಆನ್ಲೈನ್​ನಲ್ಲಿ ಉಲ್ಲಾಸಮಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ನೆಟಿಜನ್​ರನ್ನು ರಂಜಿಸಿರುವ ಈ ವಿಡಿಯೋವನ್ನು ಯಾವಾಗ ಚಿತ್ರೀಕರಿಸಲಾಗಿದೆ ಎಂದು ತಿಳಿದುಬಂದಿಲ್ಲ. ಆದರೆ, ಕಡಲತೀರವನ್ನು ಚಿತ್ರೀಕರಿಸುತ್ತಿದ್ದ ಡ್ರೋನ್ ಅನ್ನು ಹದ್ದು ಕಸಿದುಕೊಂಡಿದ್ದು, ಅದರೊಂದಿಗೇ ಹಾರಿಹೋಗುತ್ತದೆ.

ಒಂದೇ ಒಂದು ಟ್ವೀಟ್‌ನಿಂದ ವೇಗ ಹೆಚ್ಚಿಸಿದ ವಾರಾಣಸಿ ರೈಲು; ಏನಿತ್ತು ಆ ಟ್ವೀಟ್​​ನಲ್ಲಿ?

ಮೂಲತಃ ಫೇಸ್​ಬುಕ್​ನಲ್ಲಿ ಹಂಚಿಕೊಳ್ಳಲಾದ ಈ ಕ್ಲಿಪ್ ನಂತರ ಹಲವಾರು ಸಾಮಾಜಿಕ ಮಾಧ್ಯಮ ಪ್ಲಾಟ್​ಫಾರ್ಮ್​ಗಳಲ್ಲಿ ವೈರಲ್ ಆಗಿದೆ. ''ಆಕಾಶದಲ್ಲಿ ಹಾರಾಡುತ್ತಿದ್ದ ಡ್ರೋನ್ ಅನ್ನು ಕಸಿದುಕೊಂಡ ಈಗಲ್ ಅದರೊಂದಿಗೆ ಹಾರಿಹೋಗುತ್ತದೆ" ಎಂದು buitengebieden ಎಂಬ ಟ್ವಿಟ್ಟರ್ ಬಳಕೆದಾರ ಹಂಚಿಕೊಂಡಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೊಳಗಾದ ಈ ವಿಡಿಯೋ ಕ್ಲಿಪ್​ಗೆ ಹಲವು ಪ್ರತಿಕ್ರಿಯೆಗಳು ಬಂದಿವೆ.

ವಿಡಿಯೋವನ್ನು ಇಲ್ಲಿ ನೋಡಿ:

ಈ ವೈರಲ್ ಕ್ಲಿಪ್​ಗೆ '' ''ಹದ್ದುಗಳು ಬರುತ್ತಿವೆ, ಹದ್ದುಗಳು ಬರುತ್ತಿವೆ'' ಎಂಬ ಚಲನಚಿತ್ರದಲ್ಲಿನ ದೃಶ್ಯವನ್ನು ನನಗೆ ನೆನಪಿಸುತ್ತದೆ'' ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

Viral Video: ರಾತ್ರಿ ಮನೆಯೆದುರು ನಿಲ್ಲಿಸಿದ ಬೈಕ್ ತನ್ನಷ್ಟಕ್ಕೆ ತಾನೇ ಚಲಿಸಿದ್ದು ಹೇಗೆ?; ಇಲ್ಲಿದೆ ಶಾಕಿಂಗ್ ವಿಡಿಯೋ

ಅಲ್ಲದೆ,  ''ತಾಯಿ ಮನೆಗೆ ತಂದ ಆಹಾರದಿಂದ ಹದ್ದಿನ ಮರಿಗಳು ತುಂಬಾ ಗೊಂದಲಕ್ಕೊಳಗಾಗಲಿವೆ.'' ಎಂದೂ ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಹಾಗೆ, ''ಪ್ರಕೃತಿ ಅದ್ಭುತವಾಗಿದೆ'' ಎಂಬ GIF ವಿಡಿಯೋ ಅನ್ನು ನೆಟ್ಟಿಗನೊಬ್ಬ ಪ್ರತಿಕ್ರಿಯೆ ನೀಡಿದ್ದಾರೆ.

''ಇದು ಅದ್ಭುತವಾಗಿದೆ'' ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್ ಮಾಡಿದ್ದಾರೆ.

ಜತೆಗೆ, ಇದು Birds Eye View ಅಂದರೆ'' ಎಂದೂ ಮತ್ತೊಬ್ಬರು ರಿಪ್ಲೈ ಮಾಡಿದ್ದಾರೆ.

ಮತ್ತೊಬ್ಬ ನೆಟಿಜನ್, ''Nature - 1, Technology - 0: ಪ್ರಕೃತಿಯೊಂದಿಗೆ ನೀವು ಹೋರಾಡಲು ಸಾಧ್ಯವಿಲ್ಲ. ಪ್ರಕೃತಿಯೇ ಎಲ್ಲ ಬಾರಿಯೂ ಗೆಲ್ಲುತ್ತದೆ'' ಎಂದು ಬರೆದುಕೊಂಡಿದ್ದಾರೆ.
Published by: Vinay Bhat
First published: February 5, 2021, 1:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories