ತಿನ್ನುತ್ತಲೇ ಹಣ ಸಂಪಾದಿಸುವ ಅವಕಾಶ! ಖಾಲಿ ಇದೆ ಹೀಗೊಂದು ಉದ್ಯೋಗ!
ಕೆನಾಡ ಮೂಲದ ‘ಕ್ಯಾಂಡಿ ಫನ್ ಹೌಸ್’ ಕಂಪನಿಯೂ ಆಹಾರ ಸವಿದು ಅದರ ರುಚಿಯ ಬಗ್ಗೆ ತಿಳಿಸುವ ಉದ್ಯೋಗದ ಕುರಿತು ಮಾಹಿತಿ ಹೊರಡಿಸಿದೆ. ಅಷ್ಟು ಮಾತ್ರವಲ್ಲದೆ, ಆಸಕ್ತರು ಈ ಉದ್ಯೋಗಕ್ಕೆ ಸೇರಬಹುದಾದ ಅವಕಾಶವನ್ನು ನೀಡುತ್ತಿದೆ.
ಎಲ್ಲರೂ ಹೊಟ್ಟೆ ತುಂಬಿಸಲು ಕೆಲಸ ಮಾಡುತ್ತಾರೆ. ಆದರೆ ಹೊಟ್ಟೆ ತುಂಬಿಸುವುದೇ ಒಂದು ಕೆಲಸವಾದರೆ?. ಹೌದು. ಇಂತಹದೊಂದು ಕೆಲಸವಿದೆ!. ತಿನ್ನುತ್ತಲೇ ಹಣ ಸಂಪಾದಿಸಬಹುದಾಗಿದೆ.
ಜಗತ್ತಿನಾದ್ಯಂತ ವಿಚಿತ್ರ ಉದ್ಯೋಗಗಳು ಬೆಳಕಿಗೆ ಬರುತ್ತಿರುತ್ತವೆ. ನಿದ್ರಿಸುವ ಉದ್ಯೋಗ, ಕಂಪನಿಯ ಚಪ್ಪಲಿ ಧರಿಸುವ ಮೂಲಕ ಅಭಿಪ್ರಾಯ ತಿಳಿಸುವ ಉದ್ಯೋಗ, ಅಷ್ಟೇ ಏಕೆ ಸೊಳ್ಳೆಯಿಂದ ಕಡಿಸಿಕೊಳ್ಳುವ ಉದ್ಯೋಗ ಕೂಡ ಇದೆ. ಅದರಂತೆ ಇದು ಆಹಾರ ಸವಿದು ಅದರ ರುಚಿಯ ಬಗ್ಗೆ ಅಭಿಪ್ರಾಯ ತಿಳಿಸುವ ಉದ್ಯೋಗವಾಗಿದೆ.
ಎಲ್ಲಿಗೂ ಹೋಗದೆ ಇದ್ದಲ್ಲೇ ಕುಳಿತು ಆಹಾರ ಸವಿದು ಅದರ ರುಚಿಯ ಬಗ್ಗೆ ತಿಳಿಸುವ ಕೆಲಸ ಇದಾಗಿದೆ. ಅಂದಹಾಗೆಯೇ ಈ ಕೆಲಸಕ್ಕೆ ಸಂಬಳ ಕೂಡ ನೀಡುತ್ತಾರೆ. ಅಷ್ಟಕ್ಕೂ ಯಾವ ಕಂಪನಿ ಇಂತಹದೊಂದು ಕೆಲಸದ ಬಗ್ಗೆ ಆಫರ್ ಹೊರಡಿಸಿರೋದು ಗೊತ್ತಾ?.
ಕೆನಾಡ ಮೂಲದ ‘ಕ್ಯಾಂಡಿ ಫನ್ ಹೌಸ್’ ಕಂಪನಿಯೂ ಆಹಾರ ಸವಿದು ಅದರ ರುಚಿಯ ಬಗ್ಗೆ ತಿಳಿಸುವ ಉದ್ಯೋಗದ ಕುರಿತು ಮಾಹಿತಿ ಹೊರಡಿಸಿದೆ. ಅಷ್ಟು ಮಾತ್ರವಲ್ಲದೆ, ಆಸಕ್ತರು ಈ ಉದ್ಯೋಗಕ್ಕೆ ಸೇರಬಹುದಾದ ಅವಕಾಶವನ್ನು ನೀಡುತ್ತಿದೆ.
ಕ್ಯಾಂಡಿ ಫನ್ ಹೌಸ್ ಕಂಪನಿ ಚಾಕೋಲೇಟ್ ಮತ್ತು ಕ್ಯಾಂಡಿ ತಯಾರಿಸುತ್ತಿದೆ. ಹಾಗಾಗಿ ಉದ್ಯೋಗಿಗಳು ಈ ಕಂಪನಿ ತಯಾರಿಸಿರುವ ಪದಾರ್ಥಗಳ ರುಚಿಯನ್ನು ಸವಿದು ಅಭಿಪ್ರಾಯ ತಿಳಿಸುವ ಕೆಲಸ ಇದಾಗಿದೆ. ಅಂದಹಾಗೆಯೇ ಈ ಕೆಲಸಕ್ಕೆ ಉದ್ಯೋಗಿಗಳಿಗೆ ಗಂಟೆಗೆ 30 ಕೆನಡಿಯನ್ ಡಾಲರ್ (1,700 ರೂ)ನೀಡಲಾಗುತ್ತದೆ.
ಈ ಕೆಲಸಕ್ಕೆ ಸೇರ ಬಯಸುವವರು ಅರ್ಜಿ ಸಲ್ಲಿಸಬಹುದಾಗಿ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ. ಫೆ.15ರವರೆಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡುತ್ತಿದೆ.
Published by:Harshith AS
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ