Job Offer: ಚಾಕೊಲೇಟ್​ ತಿಂದು ಹೇಗಿದೆ ಅಂದ್ರೆ ಸಾಕು, ತಿಂಗಳಿಗೆ 6 ಲಕ್ಷ ರೂಪಾಯಿ ಸಂಬಳ ಕೊಡುತ್ತೆ ಈ ಕಂಪನಿ!

ಕ್ಯಾಂಡಿ ಫನ್‌ಹೌಸ್ ಎಂಬ ಕಂಪನಿಯು ಈ ಖಾಲಿ ಹುದ್ದೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದೆ. ಕ್ಯಾಂಡಿ ಫನ್ ಹೌಸ್ ಎಂಬ ಕಂಪನಿಯು ಕ್ಯಾಂಡಿ ತಿನ್ನಲು ಇಷ್ಟಪಡುವ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಬಯಸುತ್ತದೆ,

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಅನೇಕ ಜನರು ತಮ್ಮ ನೆಚ್ಚಿನ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುತ್ತಾರೆ. ಅವರವರ ಅಭಿರುಚಿಗೆ ತಕ್ಕಂತೆ ಕೆಲಸ (work) ಮಾಡುತ್ತಾರೆ. ಆದ್ದರಿಂದ ಅವರು ಕೆಲಸದಲ್ಲಿ ಹೆಚ್ಚು ಕಷ್ಟವನ್ನು ಎದುರಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಂದು ಚಾಕೊಲೇಟ್ (Chocolate) ಪ್ರಿಯರಿಗೆ ಕೆಲಸವೊಂದು ಖಾಲಿ ಇದೆ. ಅದೇನೆಂದರೆ ಕ್ಯಾಂಡಿ ಕಂಪನಿಯೊಂದು (Candy Company) ಉದ್ಯೋಗಿಗಳಿಗಾಗಿ ಅವಕಾಶ ತೆರೆದಿಟ್ಟಿದೆ. ಅರ್ಹ ಅಭ್ಯರ್ಥಿಯನ್ನು ಈ ಉದ್ಯೋಗಕ್ಕೆ ತೆಗೆದುಕೊಳ್ಳುತ್ತದೆ. ಅಷ್ಟು ಮಾತ್ರವಲ್ಲ ಲಕ್ಷಾಂತರ ರೂಪಾಯಿಯ ಸಂಬಳವನ್ನು (Salary) ನೀಡುತ್ತದೆ. ಅಂದಹಾಗೆಯೇ ಉದ್ಯೋಗಿಗೆ ಇಲ್ಲಿ ಕೆಲಸವೇನೆಂದು ತಿಳಿದರೆ ಅಚ್ಚರಿಯಾಗುತ್ತದೆ. ಆಯ್ಕೆ ಆದ ಅಭ್ಯರ್ಥಿ ಚಾಕೊಲೇಟ್​ ಸವಿಯುವ ಕೆಲಸವನ್ನು ಈ ಕಂಪನಿ ನೀಡುತ್ತದೆ.

    ಹೌದು. ಜಗತ್ತಿನಲ್ಲಿ ವಿಚಿತ್ರವಾದ ಕೆಲಸವನ್ನು ನೋಡಿರಬಹುದು ಮತ್ತು ಅದರ ಬಗ್ಗೆ ಕೇಳಿರಬಹುದು. ಆದರೆ ಈ ಕ್ಯಾಂಡು ಕಂಪನಿಯು ಚಾಕೊಲೇಟ್​ನ ರುಚಿ ನೋಡುವ ಅವಕಾಶವನ್ನು ಉದ್ಯೋಗಿಗೆ ನೀಡುತ್ತದೆ. ಮೊದಲೇ ಹೇಳಿದಂತೆ ಆಯ್ಕೆಯಾದ ಉದ್ಯೋಗಿಗೆ ಲಕ್ಷಾಂತರ ಸಂಬಳವನ್ನು ನೀಡುತ್ತದೆ.

    ರುಚಿ ಪರೀಕ್ಷಕ

    ಕ್ಯಾಂಡಿ ಫನ್‌ಹೌಸ್ ಎಂಬ ಕಂಪನಿಯು ಈ ಖಾಲಿ ಹುದ್ದೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದೆ. ಕ್ಯಾಂಡಿ ಫನ್ ಹೌಸ್ ಎಂಬ ಕಂಪನಿಯು ಕ್ಯಾಂಡಿ ತಿನ್ನಲು ಇಷ್ಟಪಡುವ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಬಯಸುತ್ತದೆ. ಉದ್ಯೋಗಿಗಳು ಸಹ ರುಚಿಗೆ ವಿಮರ್ಶೆಗಳನ್ನು ನೀಡಬೇಕು. ಅಂದರೆ, ಉದ್ಯೋಗಿಯ ಕೆಲಸವು ರುಚಿ ಪರೀಕ್ಷಕನಾಗಿರುತ್ತದೆ. ಈ ಕೆಲಸಕ್ಕಾಗಿ ಉದ್ಯೋಗಿಗೆ 78 ಲಕ್ಷ (ವಾರ್ಷಿಕ) ಸಂಬಳ ಸಿಗುತ್ತದೆ. ಅಂದರೆ ತಿಂಗಳಿಗೆ 6.5 ಲಕ್ಷ ರೂ. ನೀಡಲಾಗುತ್ತದೆ.

    ನೀವು ಮನೆಯಲ್ಲಿ ಕುಳಿತು ಕೆಲಸವನ್ನು ಮಾಡಬಹುದು

    ಈ ಆನ್‌ಲೈನ್ ಚಿಲ್ಲರೆ ವ್ಯಾಪಾರ ಕಂಪನಿಯು ಕೆನಡಾದಲ್ಲಿದೆ. ಕಂಪನಿಯು ವರ್ಷವಿಡೀ ಕ್ಯಾಂಡಿ ತಿನ್ನಲು ಉದ್ಯೋಗಿಗಳಿಗೆ 78 ಲಕ್ಷಗಳನ್ನು ಪಾವತಿಸುತ್ತದೆ. ಕಂಪನಿಯು ನೀಡುವ ಈ ಹುದ್ದೆಯ ಹೆಸರು 'ಚೀಫ್ ಕ್ಯಾಂಡಿ ಆಫೀಸರ್'. ಉದ್ಯೋಗಿ ಕೆಲಸಕ್ಕಾಗಿ ಕಚೇರಿಗೆ ಹೋಗಬೇಕಾಗಿಲ್ಲ, ಅವರು ಮನೆಯಿಂದಲೇ ಈ ಕೆಲಸವನ್ನು ಮಾಡಬಹುದು. ಕಂಪನಿಯ ಲಿಂಕ್ಡ್‌ಇನ್ ಪೋಸ್ಟ್ ಪ್ರಕಾರ, ಆಯ್ದ ಅಭ್ಯರ್ಥಿಗಳು ತಿಂಗಳಿಗೆ ಸುಮಾರು 3500 ಉತ್ಪನ್ನಗಳನ್ನು ಪರೀಕ್ಷಿಸುತ್ತಾರೆ.

    ಇದನ್ನೂ ಓದಿ: TikTok: ಬ್ಯಾನ್​ ಆಗಿರುವ ಟಿಕ್​ಟಾಕ್​ ಭಾರತಕ್ಕೆ ಮತ್ತೆ ಬರುತ್ತಾ? ಹೊಸ ಅಪ್ಡೇಟ್ ಏನಿದೆ?

    ಕೆಲಸಕ್ಕೆ ಅರ್ಹತೆಗಳೇನು?

    ಮಾಹಿತಿಯ ಪ್ರಕಾರ, ಈ ಕೆಲಸಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ. 5 ವರ್ಷದ ಮಗು ಕೂಡ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಆದಾಗ್ಯೂ, ಈ ಕೆಲಸಕ್ಕೆ ಪೋಷಕರ ಅನುಮತಿ ಅಗತ್ಯವಿದೆ. ಹೆಚ್ಚುವರಿಯಾಗಿ, ಅರ್ಜಿದಾರರು ಉತ್ತರ ಅಮೆರಿಕಾದ ನಿವಾಸಿ ಮತ್ತು ಕ್ಯಾಂಡಿ-ಚಾಕೊಲೇಟ್ ಪ್ರೇಮಿಯಾಗಿರಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 31.

    ಇದನ್ನೂ ಓದಿ: Mosquito ಓಡಿಸಲು ಸೊಳ್ಳೆ ಬತ್ತಿ ಬೇಡ, ನಿಮ್ಮ ಸ್ಮಾರ್ಟ್​ಫೋನ್​​ನಲ್ಲಿ ಈ ಆ್ಯಪ್​ ಇದ್ರೆ ಸಾಕು!

    ಕ್ಯಾಂಡಿ ಫನ್‌ಹೌಸ್‌ನ ಸಿಇಒ ಪ್ರಕಾರ, ಅವರು ಜಾಹೀರಾತಿಗೆ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದಾರೆ ಮತ್ತು ಅನೇಕ ಜನರು ಅವರಿಗೆ ಉದ್ಯೋಗ ಅರ್ಜಿಗಳನ್ನು ಕಳುಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಉದ್ಯೋಗಾವಕಾಶದ ಕುರಿತು ಚರ್ಚೆಯಾಗುತ್ತಿದೆ.

    ಅಮೇರಿಕಾದ ಕೃಷಿ ಮತ್ತು ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ ಹೊರಡಿಸಿದ ಆಹಾರ ಮಾರ್ಗಸೂಚಿಗಳ ಪ್ರಕಾರ, ಈ ಉದ್ಯೋಗದಲ್ಲಿರುವ ಉದ್ಯೋಗಿ ಶಿಫಾರಸು ಮಾಡಿದ ದೈನಂದಿನ ಸಕ್ಕರೆಗಿಂತ ಐದು ಪಟ್ಟು ಹೆಚ್ಚು ಸೇವಿಸಬೇಕಾಗಬಹುದು ಎಂಬುದನ್ನು ಇಲ್ಲಿ ಉಲ್ಲೇಖಿಸಿದ್ದಾರೆ.

    ಜಗತ್ತಿನಲ್ಲಿ ಕಷ್ಟದ ಕೆಲಸವನ್ನು ವಿಚಿತ್ರವಾದ ಕೆಲಸದ ಬಗ್ಗೆ ಕೇಳಿರಬಹುದು. ಅದರಂತೆ ಈ ಕ್ಯಾಂಡಿ ಕಂಪನಿಯು ಚಾಕೊಲೇಟ್​ ಸವಿಯುವ ಮತ್ತು ಅದರ ರುಚಿಯನ್ನು ವರ್ಣಿಸಲು ತಿಳಿದಿರುವವರಿಗಾಗಿ ಈ ಅವಕಾಶ ತೆರೆದಿಟ್ಟಿದೆ. ಆಯ್ಕೆಯಾದ ಅಭ್ಯರ್ಥಿಗೆ ದೊಡ್ಡ ಮೊತ್ತದ ಸಂಬಳವನ್ನು ನೀಡುತ್ತಿದೆ. ಆದರೆ ಈ ಕೆಲಸಕ್ಕೆ ಸೇರುವ ಮುನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ
    Published by:Harshith AS
    First published: