Cancer Patient: ಚಿಕಿತ್ಸೆ ಪಡೆಯುತ್ತಿದ್ದ ಬೆಡ್​ನಿಂದಲೇ ಕೆಲಸದ ಇಂಟರ್​ವ್ಯೂ ನೀಡಿದ ಕ್ಯಾನ್ಸರ್ ರೋಗಿ, ಕೆಲಸ ಸಿಕ್ಕಿತಾ?

ಕ್ಯಾನ್ಸರ್ ರೋಗಿಯೊಬ್ಬರು ಆಸ್ಪತ್ರೆಯ (Hospital) ಬೆಡ್ ಮೇಲೆ, ಲ್ಯಾಪ್‍ಟಾಪ್ ಮುಂದೆ ಕುಳಿತು, ಕೆಲಸಕ್ಕೆ ಸಂದರ್ಶನ (Interview) ನೀಡುತ್ತಿರುವ ಆ ಪೋಟೋ, ಬಹಳಷ್ಟು ಲಿಂಕ್ಡ್‌ಇನ್‍ ಬಳಕೆದಾರರ ಸಹಾನುಭೂತಿಯನ್ನು ಗಳಿಸಿಕೊಂಡಿದೆ.

ಕ್ಯಾನ್ಸರ್ ರೋಗಿ ಸಂದರ್ಶನ ನೀಡುತ್ತಿರುವುದು

ಕ್ಯಾನ್ಸರ್ ರೋಗಿ ಸಂದರ್ಶನ ನೀಡುತ್ತಿರುವುದು

  • Share this:
ಪ್ರತಿಯೊಬ್ಬರ ಬದುಕಿನಲ್ಲೂ ಅವರದ್ದೇ ಆದ ಸಂಘರ್ಷಗಳಿರುತ್ತವೆ, ಹೇಳಲು ಒಂದೊಂದು ಕಥೆಗಳಿರುತ್ತವೆ. ಲಿಂಕ್ಡ್‌ಇನ್‍ನಲ್ಲಿ ಇತ್ತೀಚೆಗೆ ಹಂಚಿಕೊಳ್ಳಲಾಗಿರುವ ಪೋಟೋವೊಂದು ಕೂಡ ಅಂತದ್ದೇ ಒಂದು ಕಥೆ ಹೇಳುತ್ತಿದೆ. ಕ್ಯಾನ್ಸರ್ ರೋಗಿಯೊಬ್ಬರು (Cancer Patient) ಉದ್ಯೋಗ ಪಡೆಯಲು ಪರದಾಡುತ್ತಿದ್ದ ಕಥೆಯದು. ಹೌದು, ಕ್ಯಾನ್ಸರ್ ರೋಗಿಯೊಬ್ಬರು ಆಸ್ಪತ್ರೆಯ (Hospital) ಬೆಡ್ ಮೇಲೆ, ಲ್ಯಾಪ್‍ಟಾಪ್ ಮುಂದೆ ಕುಳಿತು, ಕೆಲಸಕ್ಕೆ ಸಂದರ್ಶನ (Interview) ನೀಡುತ್ತಿರುವ ಆ ಪೋಟೋ, ಬಹಳಷ್ಟು ಲಿಂಕ್ಡ್‌ಇನ್‍ ಬಳಕೆದಾರರ ಸಹಾನುಭೂತಿಯನ್ನು ಗಳಿಸಿಕೊಂಡಿದೆ. ಜಾರ್ಖಂಡ್ ಮೂಲದ ಆ ಕ್ಯಾನ್ಸರ್ ರೋಗಿಯ ಹೆಸರು ಅರ್ಶ್ ನಂದನ್ ಪ್ರಸಾದ್.

ತನ್ನ ಕೀಮೋಥೆರಪಿ ಸೆಷನ್ ಒಂದರ ಸಂದರ್ಭದಲ್ಲಿ, ಸಂದರ್ಶನವೊಂದಕ್ಕೆ ಹಾಜರಾಗಿದ್ದ ಪೋಟೋ ಅದು ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ತನ್ನ ಅನಾರೋಗ್ಯದ ಕಾರಣದಿಂದಾಗಿ ಸಂದರ್ಶನಗಳಲ್ಲಿ ತನ್ನನ್ನು ತಿರಸ್ಕರಿಸಲಾಗುತ್ತಿದ್ದರ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

ಉದಾರ ಕಂಪನಿಗಳೂ ಇವೆ

“ನೀವು ಸಂದರ್ಶನದಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತೀರಿ. ಆದರೆ, ಕೇವಲ ಜೀವನದ ಈ ಸಮಯ ನಿಮ್ಮ ಪಾಲಿಗೆ ಕಷ್ಟಕರವಾಗಿದೆ ಎಂಬ ಕಾರಣಕ್ಕಾಗಿ ನೀವು ಆಯ್ಕೆಯಾಗುವುದಿಲ್ಲ ಎಂದಾದಲ್ಲಿ, ಅದು ಖಂಡಿತವಾಗಿಯೂ ಈ ಕಂಪೆನಿಗಳು ಎಷ್ಟು ಉದಾರವಾಗಿವೆ ಎಂಬುವುದನ್ನು ತೋರಿಸುತ್ತದೆ” ಎಂದು ಅವರು ಹೇಳಿದ್ದಾರೆ.

ಕ್ಯಾನ್ಸರ್ ಪೇಷೆಂಟ್ ಎಂದು ಗೊತ್ತಾದ ಕೂಡಲೇ ಬದಲಾದ ಭಾವನೆ

“ನೇಮಕಾತಿ ಮಾಡುವವರಿಗೆ, ನಾನು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದೇನೆ ಎಂದು ಗೊತ್ತಾಗುತ್ತಿದ್ದಂತೆ, ನಾನು ಅವರ ವರ್ತನೆಯಲ್ಲಿ ಬದಲಾವಣೆಯನ್ನು ಕಾಣುತ್ತೇನೆ. ನನಗೆ ನಿಮ್ಮ ಕರುಣೆ ಬೇಕಿಲ್ಲ..! ನಾನು ಇಲ್ಲಿ ನನ್ನನ್ನು ಸಾಬೀತುಪಡಿಸಿಕೊಳ್ಳಲು ಬಂದಿದ್ದೇನೆ” ಎಂದು ಅರ್ಶ್ ನಂದನ್ ಪ್ರಸಾದ್ ತಿಳಿಸಿದ್ದಾರೆ.

ಪ್ರಸಾದ್‍ಗೆ ತಕ್ಷಣ ಉದ್ಯೋಗ

ಮಹರಾಷ್ಟ್ರ ಮೂಲದ ಟೆಕ್ ಕಂಪೆನಿ ಅಪ್ಲೈಡ್ ಕ್ಲೌಡ್ ಕಂಪ್ಯೂಟಿಂಗ್‍ನ ಸಂಸ್ಥಾಪಕ ಮತ್ತು ಸಿಇಓ ನೀಲೆಶ್ ಸತ್‍ಪುತೆ ಅವರು , ಪ್ರಸಾದ್‍ಗೆ ತಕ್ಷಣ ಉದ್ಯೋಗವನ್ನು ನೀಡಿದ್ದಾರೆ.

ಇಂಟರ್​ವ್ಯೂ ಇಲ್ಲದೆ ಆಯ್ಕೆ

“ನೀವು ಒಬ್ಬ ಯೋಧ” ಎಂದು , ಪ್ರಸಾದ್ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಸತ್‍ಪುತೆ, “ ನಿಮ್ಮ ಚಿಕಿತ್ಸೆಯ ಸಂದರ್ಭದಲ್ಲಿ ಸಂದರ್ಶನಗಳನ್ನು ನೀಡುವುದನ್ನು ನಿಲ್ಲಿಸಿ. ನಾನು ನಿಮ್ಮ ಪರಿಚಯ ಪತ್ರಗಳನ್ನು ನೋಡಿದ್ದೇನೆ. ಅವು ತುಂಬಾ ಸಮರ್ಥವಾಗಿವೆ. ನಿಮಗೆ ಬೇಕಾದಾಗ ನಮ್ಮನ್ನು ಸೇರಿಕೊಳ್ಳಬಹುದು. ನಿಮಗೆ ಯಾವ ಸಂದರ್ಶನವೂ ಇರುವುದಿಲ್ಲ” ಎಂದು ಬರೆದಿದ್ದಾರೆ.

ಇದನ್ನೂ ಓದಿ: Viral News: ಪ್ರತಿ ದಿನ ಮೂತ್ರ ಕುಡಿಯುವ ವ್ಯಕ್ತಿ: ಯಾಕೆ ಗೊತ್ತಾ?

ಬಹಳಷ್ಟು ಮಂದಿ, ಪ್ರಸಾದ್ ಅವರ ಪೋಸ್ಟ್‌ಗೆ, ಪ್ರೋತ್ಸಾಹ ನೀಡುವಂತ ಸಂದೇಶಗಳನ್ನು ಬರೆದು ಅವರ ಉತ್ಸಾಹವನ್ನು ಹೆಚ್ಚಿಸಲು ಪ್ರಯತ್ನಿಸಿದ್ದಾರೆ.

ಯುಎಸ್ ಮೂಲದ ಎಕ್ಸಿಕ್ಯೂಟಿವ್ ಒಬ್ಬರು, “ ಸರಿಯಾದ ಉದ್ಯೋಗದಾತರು, ಹೋರಾಟದ ನಡುವೆ ಅವಕಾಶವನ್ನು ಹುಡುಕುವಂತಹ ನಿಮ್ಮನ್ನು ಒಬ್ಬ ಚಾಂಪಿಯನ್ ಆಗಿ ನೋಡುತ್ತಾರೆ” ಎಂದು ಬರೆದಿದ್ದು, “ನಿಮಗೆ ಶುಭ ಹಾರೈಕೆಗಳು, ನೀವು ಶೀಘ್ರವಾಗಿ ಚೇತರಿಸಿಕೊಳ್ಳಬೇಕು ಮತ್ತು ನಿಮ್ಮ ಪ್ರತಿಭೆ ಹಾಗೂ ಶಕ್ತಿಗೆ ಸೂಕ್ತವಾದದನ್ನು ಹುಡುಕಿಕೊಳ್ಳುವಂತಾಗಬೇಕು ಎಂದು ನಾನು ಹಾರೈಸುತ್ತೇನೆ” ಎಂದು ಪ್ರಸಾದ್‍ಗೆ ಶುಭ ಕೋರಿದ್ದಾರೆ.

ನೆಟ್ಟಿಗರ ಮೆಚ್ಚುಗೆ

ಮತ್ತೊಬ್ಬ ಬಳಕೆದಾರ ಇದೇ ರೀತಿಯ ತಮ್ಮ ಸ್ವಂತ ಹೋರಾಟದ ವಿಷಯವನ್ನು ಹಂಚಿಕೊಂಡಿದ್ದಾರೆ. “ ನನ್ನ ಕ್ಯಾನ್ಸರ್ ಚಿಕಿತ್ಸೆಯ ಸಂದರ್ಭದಲ್ಲಿ ನಾನು ಕೂಡ ಇಂತದ್ದೇ ಪರಿಸ್ಥಿತಿಯನ್ನು ಎದುರಿಸಿದ್ದೆ” ಎಂದು ಬರೆದುಕೊಂಡಿರುವ ಆಕೆ, “ ಪ್ರತಿಯೊಬ್ಬರೂ ತುಂಬಾ ದಣಿದು ಹೋಗುತ್ತಾರೆ ಮತ್ತು ಅನುಮಾನಗಳಿಗೆ ಒಳಗಾಗುತ್ತಾರೆ. ನನ್ನ ಬಗ್ಗೆಯೇ ನಾನು ಅನುಮಾನ ಪಡಲು ಆರಂಭಿಸಿದ್ದೆ. ಆದರೆ ಅದು ಕೇವಲ ಒಂದು ಸಮಯದ ಸಂಗತಿ. ಇದನ್ನು ಮಾಡಲು ನೀವು ವಿಶ್ವಾಸನೀಯರು. ಮತ್ತು ತುಂಬಾ, ತುಂಬಾ ಸಮರ್ಥ. ನಿಮ್ಮನ್ನು, ನಿಮ್ಮ ಪ್ರತಿಭೆಯನ್ನು ಮತ್ತು ನಿಮ್ಮ ಸಾಮರ್ಥ್ಯಗಳನ್ನು ನೋಡುವ ಜನರು ಇರುತ್ತಾರೆ” ಎಂದು ಆಕೆ ಬರೆದಿದ್ದಾರೆ.

ಇದನ್ನೂ ಓದಿ: Viral News: ಪ್ರತಿ ದಿನ Viral Video: ಮದುವೆಯ ದಿನ ವಧುವಿಗೆ ಸಹಾಯ ಮಾಡಿದ ವರನನ್ನು ನೋಡಿ ಫಿದಾ ಆದ ನೆಟ್ಟಿಗರುಮೂತ್ರ ಕುಡಿಯುವ ವ್ಯಕ್ತಿ: ಯಾಕೆ ಗೊತ್ತಾ?

ಇದರಿಂದಾಗಿ ಖಂಡಿತಾ ಎದೆಗುಂದಬಾರದು ಎಂದು ಹಲವಾರು ಮಂದಿ ಪ್ರಸಾದ್‍ಗೆ ಸಾಂತ್ವಾನ ಹೇಳಿದ್ದಾರೆ. “ನೀವು ಒಂದು ಪ್ರೇರಣೆ” ಎಂದಿರುವ ಒಬ್ಬ ಲಿಂಕ್ಡ್‌ಇನ್ ಬಳಕೆದಾರರು, “ ಆ ಕೀಮೋಥರಪಿ ಸೆಷನ್‍ಗಳು ಎಷ್ಟು ಖಾಲಿ ಎನಿಸುವಂತಿರಬಹುದು ಎಂಬುವುದು ನನಗೆ ಗೊತ್ತು. ನಾನು ನನ್ನ ಸಂಗಾತಿಯೊಂದಿಗೆ ಅದನ್ನು ನಿಯಮಿತವಾಗಿ ನೋಡುತ್ತಿರುತ್ತೇನೆ. ಎದೆಗುಂದಬೇಡಿ, ನಿಮ್ಮ ಬೆನ್ನ ಹಿಂದೆ ಇಲ್ಲಿ ಲಿಂಕ್ಡ್‌ಇನ್‍ನಲ್ಲಿ ಜನರ ಸೈನ್ಯವಿದೆ..! ನೀವು ಇದನ್ನು ಪಡೆದಿದ್ದೀರಿ” ಎಂದು ಬರೆದಿದ್ದಾರೆ.
Published by:Divya D
First published: