• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Cancer Study: ಕ್ಯಾನ್ಸರ್​ ಚಿಕಿತ್ಸೆ ವೇಳೆ ಅಚ್ಚರಿಯ ಘಟನೆ; ಹಿಂದೆಂದೂ ಮಾತನಾಡದ ಭಾಷೆಯಲ್ಲಿ ನಿರರ್ಗಳ ಮಾತು -ಏನು ಹೇಳುತ್ತೆ ಸಂಶೋಧನೆ?

Cancer Study: ಕ್ಯಾನ್ಸರ್​ ಚಿಕಿತ್ಸೆ ವೇಳೆ ಅಚ್ಚರಿಯ ಘಟನೆ; ಹಿಂದೆಂದೂ ಮಾತನಾಡದ ಭಾಷೆಯಲ್ಲಿ ನಿರರ್ಗಳ ಮಾತು -ಏನು ಹೇಳುತ್ತೆ ಸಂಶೋಧನೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕ್ಯಾನ್ಸರ್ ಗೆ ಚಿಕಿತ್ಸೆ ನೀಡುತ್ತಿದ್ದಾಗ ರೋಗಿ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಐರಿಶ್ ಭಾಷೆಯಲ್ಲಿ ಮಾತನಾಡಲು ಪ್ರಾರಂಭಿಸಿದರು ಎಂದು ವರದಿಯಾಗಿದೆ.

  • Trending Desk
  • 2-MIN READ
  • Last Updated :
  • Share this:

ಎಷ್ಟೋ ಜನರಿಗೆ ಕ್ಯಾನ್ಸರ್ (Cancer) ಅಂತ ಭಯಂಕರವಾದ ರೋಗವಿದೆ ಅಂತ ಗೊತ್ತಾದ ತಕ್ಷಣ ‘ಮುಂದೆ ಏನಾಗುತ್ತದೆಯೋ? ಈ ರೋಗ (Disease) ಯಾವ ಸ್ವರೂಪವನ್ನು ಪಡೆಯುತ್ತದೆಯೋ?’ ಅಂತೆಲ್ಲಾ ಭಯ ಮತ್ತು ಆತಂಕ ಶುರುವಾಗುತ್ತದೆ. ಆದರೆ ಇಲ್ಲಿ ಒಬ್ಬ ವ್ಯಕ್ತಿಯ ಮಾತನಾಡುವ ಶೈಲಿ, ಉಚ್ಚಾರಣೆಯೇ ಬದಲಾಗಿದೆಯಂತೆ ನೋಡಿ. ಯುನೈಟೆಡ್ ಸ್ಟೇಟ್ಸ್ ನಲ್ಲಿ (United States) ಕ್ಯಾನ್ಸರ್ ರೋಗಿಯೊಬ್ಬರು ಚಿಕಿತ್ಸೆಯ ಸಮಯದಲ್ಲಿ ನಿರರ್ಗಳವಾಗಿ ಐರಿಶ್‌ ಭಾಷೆಯನ್ನು (Irish Language) ಮಾತಾನಾಡಿದ್ದಾರಂತೆ. ಇಲ್ಲಿ ಆಶ್ಚರ್ಯವಾದ ಸಂಗತಿ ಏನೆಂದರೆ ಇವರು ಐರ್ಲೆಂಡ್‌ಗೆ (Ireland ) ಯಾವತ್ತೂ ಹೋಗಿಲ್ಲ. ಆದರೂ ಸಹ ಸುಲಭವಾಗಿ ಆ ಭಾಷೆಯನ್ನು ಮಾತನಾಡಿದ್ದರಂತೆ.


ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ


ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಉತ್ತರ ಕೆರೊಲಿನಾದ ಡರ್ಹಾಮ್ ನಲ್ಲಿರುವ ಡ್ಯೂಕ್ ವಿಶ್ವವಿದ್ಯಾಲಯದ ವೈದ್ಯರು ಒಬ್ಬ ವ್ಯಕ್ತಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಗೆ ಚಿಕಿತ್ಸೆ ನೀಡುತ್ತಿದ್ದಾಗ, ರೋಗಿಯೂ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಐರಿಶ್ ಭಾಷೆಯಲ್ಲಿ ಮಾತನಾಡಲು ಪ್ರಾರಂಭಿಸಿದರು ಎಂದು ವರದಿಯಾಗಿದೆ.


ಇದನ್ನೂ ಓದಿ: Doctorate: 53 ವರ್ಷ ಶ್ರಮಪಟ್ಟು ಓದಿ ಡಾಕ್ಟರೇಟ್​ ಪದವಿ ಪಡೆದ 76ರ ತಾತ!


ಮೆಟಾಸ್ಟಾಟಿಕ್ ಹಾರ್ಮೋನ್-ಸೂಕ್ಷ್ಮ ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆಯಾದ ಸುಮಾರು ಎರಡು ವರ್ಷಗಳ ನಂತರ ವ್ಯಕ್ತಿಯಲ್ಲಿ ಈ ರೀತಿಯ ಬದಲಾವಣೆ ಕಂಡು ಬಂದಿದೆ. ಸಂಶೋಧಕರು ತಮ್ಮ ಅಧ್ಯಯನ ವರದಿಯಲ್ಲಿ, ವ್ಯಕ್ತಿಯು ಫಾರಿನ್ ಅಕ್ಸೆಂಟ್ ಸಿಂಡ್ರೋಮ್ (ಎಫ್ಎಎಸ್) ನಿಂದ ಬಳಲುತ್ತಿದ್ದಾರೆ ಎಂದು ಗಮನಿಸಿದ್ದಾರೆ.


ಅಪರೂಪದ ಸಿಂಡ್ರೋಮ್ ಆಗಿದ್ದು, ಅಮೆರಿಕಾ ವ್ಯಕ್ತಿ ಐರ್ಲೆಂಡ್ ಜೊತೆಗೆ ಯಾವುದೇ ರೀತಿಯ ಸಂಪರ್ಕವನ್ನು ಹೊಂದಿಲ್ಲ. ಆದರೆ  ಆತ ತನ್ನ ಸಾವಿನ ಕೊನೆಯವರೆಗೂ ಐರಿಶ್ ಭಾಷೆಯ ಶೈಲಿಯನ್ನು ನೆನಪಿನಲ್ಲಿ ಇರುವಂತೆ ಈ ಹೊಸ ಸಿಂಡ್ರೋಮ್ ಮಾಡಿತ್ತು ಎಂದು ಸಂಶೋಧನೆಯಲ್ಲಿ ವಿವರಿಸಿದ್ದಾರೆ.




ತುಂಬಾನೇ ವಿಶಿಷ್ಟವಾದ ಪ್ರಕರಣ ಎಂದ ಸಂಶೋಧಕರು


ಇದು ತುಂಬಾನೇ ವಿಶಿಷ್ಟವಾದ ಪ್ರಕರಣವಾಗಿದ್ದು, ಈ ಬಗ್ಗೆ ಉತ್ತರ ಕೆರೊಲಿನಾದ ಡ್ಯೂಕ್ ವಿಶ್ವವಿದ್ಯಾಲಯ ಮತ್ತು ದಕ್ಷಿಣ ಕೆರೊಲಿನಾದ ಕೆರೊಲಿನಾ ಯೂರೋಲಾಜಿಕಲ್ ರಿಸರ್ಚ್ ಸೆಂಟರ್ ಜಂಟಿಯಾಗಿ ಅಧ್ಯಯನ ಮಾಡಿ ವರದಿ ಮಾಡಿವೆ. ಸುಮಾರು 20 ತಿಂಗಳ ಚಿಕಿತ್ಸೆಯ ನಂತರ ರೋಗಿ, ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಆದರೆ ರೋಗಿ ಸಾಯುವವರೆಗೂ ತಮ್ಮ ಐರಿಶ್ ಶೈಲಿಯಲ್ಲೇ ಮಾತನಾಡುತ್ತಿದ್ದರು ಎಂದು ಸಂಶೋಧಕರು ತಿಳಿಸಿದ್ದಾರೆ.


ಕ್ಯಾನ್ಸರ್​ ರೋಗಿಗೆ ಐರ್ಲೆಂಡ್ ನಲ್ಲಿ ಸ್ನೇಹಿತರು ಮತ್ತು ದೂರದ ಸಂಬಂಧಿಕರು ಇದ್ದರೂ ಸಹ, ಆತ ಒಮ್ಮೆಯೂ ಅಲ್ಲಿಗೆ ಹೋಗಿರಲಿಲ್ಲ. ಅಲ್ಲದೆ ಅಮೆರಿಕಾದಲ್ಲಿದ್ದ ಸಮಯದಲ್ಲೂ ಒಮ್ಮೆಯೂ ಐರಿಶ್ ಉಚ್ಚಾರಣೆಯಲ್ಲಿ ಮಾತನಾಡಿರಲಿಲ್ಲವಂತೆ. ಆದರೆ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಸುಲಭವಾಗಿ ಐರಿಶ್​ ಮಾತನಾಡುತ್ತಿದ್ದಾರೆ ಎಂದು ಸಂಶೋಧಕರು ಹೇಳಿದ್ದಾರೆ.


cancer 8 silent signs that should not be ignored
ಸಾಂದರ್ಭಿಕ ಚಿತ್ರ


ಎಂಆರ್‌ಐ ನಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ ಎಂದ ವೈದ್ಯರು


'ರೋಗಲಕ್ಷಣದ ಪ್ರಾರಂಭದಲ್ಲಿ ಅವರಿಗೆ ಯಾವುದೇ ಅಸಹಜತೆಗಳು, ಮನೋವೈದ್ಯಕೀಯ ಸಮಸ್ಯೆ ಹಿಸ್ಟರಿ ಅಥವಾ ಮೆದುಳಿನ ಅಸಹಜತೆಗಳು ಎಂಆರ್‌ಐ ನಲ್ಲಿ ಕಂಡು ಬಂದಿರಲಿಲ್ಲ' ಎಂದು ವರದಿ ತಿಳಿಸಿದೆ. 'ಕೀಮೋಥೆರಪಿಯ ಹೊರತಾಗಿಯೂ, ಅವರ ನ್ಯೂರೋಎಂಡೋಕ್ರೈನ್ ಪ್ರಾಸ್ಟೇಟ್ ಕ್ಯಾನ್ಸರ್ ಹಾಗೆಯೇ ಬೆಳೆಯುತ್ತಾ  ಹೋಯಿತು. ಇದರ ಪರಿಣಾಮವಾಗಿ ಮಲ್ಟಿಫೋಕಲ್ ಮೆದುಳಿನ ಮೆಟಾಸ್ಟೇಸ್ ಗಳು ಮತ್ತು ಪ್ಯಾರಾನಿಯೋಪ್ಲಾಸ್ಟಿಕ್ ಅಸ್ಸೆಂಡಿಂಗ್ ಪ್ಯಾರಾಲೈಸಿಸ್ ಅವರ ಸಾವಿಗೆ ಕಾರಣವಾಯಿತು' ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.


ಇದನ್ನೂ ಓದಿ: Interesting Facts: ಮರಗಳು 'ವುಡ್ ವೈಡ್ ವೆಬ್' ಮೂಲಕ ಸಂವಹನ ನಡೆಸುತ್ತಾ? ಸಂಶೋಧನೆ ಇದರ ಬಗ್ಗೆ ಏನು ಹೇಳುತ್ತೆ?


ವ್ಯಕ್ತಿಯ ಉಚ್ಚಾರಣೆ ಬದಲಾವಣೆಯು ಪ್ಯಾರಾನಿಯೋಪ್ಲಾಸ್ಟಿಕ್ ನ್ಯೂರೋಲಾಜಿಕಲ್ ಡಿಸಾರ್ಡರ್ (ಪಿಎನ್‌ಡಿ) ಎಂಬ ಸ್ಥಿತಿಯಿಂದ ಉಂಟಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇದು ಕ್ಯಾನ್ಸರ್ ರೋಗಿಯ ಪ್ರತಿರಕ್ಷಣಾ ವ್ಯವಸ್ಥೆಯು ಅವರ ಮೆದುಳಿನ ಭಾಗಗಳು, ಜೊತೆಗೆ ಸ್ನಾಯುಗಳು, ನರಗಳು ಮತ್ತು ಬೆನ್ನುಹುರಿಯ ಮೇಲೆ ದಾಳಿ ಮಾಡಿದಾಗ ಸಂಭವಿಸುತ್ತದೆ ಎಂದು ವಿವರಿಸಿದ್ದಾರೆ.


ಈ ಹಿಂದೆಯೂ ನಡೆದಿವೆ ಇಂತಹ ಪ್ರಕರಣಗಳು


ಅಧ್ಯಯನದ ಲೇಖಕರು ತಮ್ಮ ಸಂಶೋಧನೆಯ ಸಮಯದಲ್ಲಿ, ಇತ್ತೀಚಿನ ವರ್ಷಗಳಲ್ಲಿ ಜಾಗತಿಕವಾಗಿ ಎರಡು ಪ್ರಕರಣಗಳನ್ನು ಗುರುತಿಸಿದ್ದಾರೆ. ಇತರ ಎರಡೂ ಪ್ರಕರಣಗಳು 2009 ಮತ್ತು 2011 ರ ನಡುವೆ 50 ಮತ್ತು 60 ರ ವಯಸ್ಸಿನ ಮಹಿಳಾ ಕ್ಯಾನ್ಸರ್ ರೋಗಿಗಳಲ್ಲಿ ಸಂಭವಿಸಿವೆ. ಮತ್ತು ಇದು ಮೂರನೆಯ ಪ್ರಕರಣವಾಗಿದೆ.

Published by:Sumanth SN
First published: