ಕೊರೋನಾ ಮಹಾಮಾರಿಯ ರುದ್ರನರ್ತನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ ಒಂದು ವರ್ಷದಿಂದ ಲಕ್ಷಾಂತರ ಮಂದಿಯ ಜೀವ ತೆಗೆದಿರುವ ಕೊರೋನಾ ಎರಡನೇ ಅಲೆಯು ಜನರನ್ನು ಮತ್ತಷ್ಟು ಹೈರಾಣ ಮಾಡುತ್ತಿದೆ. ಆದರೆ ಇದೆಲ್ಲದರ ನಡುವೆ ಕೊರೋನಾ ವ್ಯಾಕ್ಸಿನ್ ಬಂದಿರುವುದು ಕೊಂಚ ಸಮಾಧಾನ ತಂದರೂ ಕೊರೋನಾ ಅಟ್ಟಹಾಸ ನಿಲ್ಲದಿರುವುದಕ್ಕೆ ಜನರು ಭಯಭೀತರಾಗಿದ್ದಾರೆ. 45 ರಿಂದ ಮೇಲ್ಪಟ್ಟ ಸಾರ್ವಜನಿಕರು, ಕೊರೋನಾ ವಾರಿಯರ್ಸ್ ಕೊರೋನಾ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳುವಂತೆ ಸರ್ಕಾರ ಘೋಷಿಸಿದೆ. ಭಾರತ ಸೇರಿದಂತೆ ಪ್ರಪಂಚದ ಹಲವೆಡೆ ಜನರು ತಪ್ಪದೇ ವ್ಯಾಕ್ಸಿನೇಷನ್ ಮೊರೆ ಹೋಗುತ್ತಿದ್ದಾರೆ. ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂತಹ ವೇಳೆ ಕೆನಡಾದ ಸಿಖ್ ವೊಬ್ಬರು ತಾವು 2ನೇ ಕೋವಿಡ್ ಲಸಿಕೆಯ ಡೋಸ್ ಪಡೆದುಕೊಂಡ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಸಾಮಾನ್ಯವಾಗಿ ಪಂಜಾಬಿ ಸಮುದಾಯದವರು ಪ್ರತಿಯೊಂದನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಕೆನಡಿಯನ್ ಬಾಗ್ರಾ ಕಲಾವಿದ ಗುರುದೀಪ್ ಪಂದೇರ್ ಎಂಬಾತ ಕೊರೋನಾ ವ್ಯಾಕ್ಸಿನ್ ತೆಗೆದುಕೊಂಡ ಖುಷಿಯನ್ನು ಕೆನಡಾದ ಫ್ರಜೆನ್ ಲೇಕ್ ದಡದಲ್ಲಿ ಬಾಂಗ್ರಾ ನೃತ್ಯ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.
ಕೆನಡಾದ ಹೆಪ್ಪುಗಟ್ಟಿದ ಸರೋವರದ ಮಂಜಿನ ಮೇಲೆ ನಡೆಯುವುದೇ ಕಷ್ಟ. ಅಂತಹದರಲ್ಲಿ ಫ್ರೋಜನ್ ಲೇಕ್‍ನ ಮಂಜಿನ ಮೇಲೆ ಗುರುದೀಪ್ ಪಂದೇರ್ ಮಾಡಿರುವ ಡ್ಯಾನ್ಸ್ ಅನ್ನು ನೆಟ್ಟಿಗರು ಸಖತ್ ಇಷ್ಟಪಟ್ಟಿದ್ದಾರೆ. ಏಪ್ರಿಲ್ 7ರಂದು ಆತ ಶೇರ್ ಮಾಡಿರುವ ವಿಡಿಯೋ ಕೇವಲ ಮೂರೇ ದಿನದಲ್ಲಿ ಏಳು ಲಕ್ಷ ಜನರು ವೀಕ್ಷಿಸಿದ್ದಾರೆ. 28 ಸಾವಿರ ಜನರು ಇಷ್ಟಪಟ್ಟಿದ್ದಾರೆ. ಸಾವಿರಕ್ಕೂ ಹೆಚ್ಚು ಮಂದಿ ರೀಟ್ವೀಟ್ ಮಾಡಿದ್ದಾರೆ.
ವಿಡಿಯೋ ಶೇರ್ ಮಾಡಿರುವ ಅವರು, ನಾನು ಎರಡನೇ ಹಂತದ ಕೋವಿಡ್ ಲಸಿಕೆ ಪಡೆದುಕೊಂಡೆ. ಕೋವಿಡ್ ಲಸಿಕೆ ಪಡೆದುಕೊಂಡ ಖುಷಿಯನ್ನು ಫ್ರೋಜನ್ ಲೇಕ್‍ನ ದಡದ ಮೇಲೆ ಪಂಜಾಬಿನ ಜಾನಪದ ನೃತ್ಯ ಬಾಂಗ್ರಾ ನೃತ್ಯದ ಮೂಲಕ ವ್ಯಕ್ತಪಡಿಸಿದ್ದು, ವ್ಯಾಕ್ಸಿನೇಷನ್‍ನ ಸಕಾರಾತ್ಮಕತೆ, ಆತ್ಮವಿಶ್ವಾಸ ಹೆಚ್ಚಿದೆ. ಕೆನಡಾ ದೇಶದ ಜನರ ಉತ್ತಮ ಆರೋಗ್ಯ ಹಾಗೂ ವ್ಯಾಕ್ಸಿನೇಷನ್ ಅನ್ನು ಬೆಂಬಲಿಸಿ ನೃತ್ಯದ ಮೂಲಕ ಆರೋಗ್ಯ ಉತ್ತಮವಾಗಿ ಇರಿಸಿಕೊಳ್ಳುವ ಸಂದೇಶ ಸಾರುತ್ತಿದ್ದೇನೆ ಎಂದು ಡ್ಯಾನ್ಸ್ ವಿಡಿಯೋ ಟ್ವೀಟ್ ಮಾಡಿದ್ದಾರೆ.
Today, I received my second dose of the Covid-19 vaccine. Then I went to a frozen lake in the lap of pure nature to dance Punjabi Bhangra on it for joy, hope and positivity, which I'm dispatching to Canada and beyond for everyone's good health.
YouTube: https://t.co/xGalq3TbEH pic.twitter.com/GvivlIk5KY
— Gurdeep Pandher of Yukon (@GurdeepPandher) April 7, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ