ಒಂದೂ ಗುಂಡು ಹಾರಿಸದೇ 10 ಜನರ ಕೊಲೆ ಆರೋಪಿಯನ್ನು ಸೆರೆ ಹಿಡಿದ ಪೊಲೀಸ್​ [Video]

news18
Updated:April 25, 2018, 11:55 AM IST
ಒಂದೂ ಗುಂಡು ಹಾರಿಸದೇ 10 ಜನರ ಕೊಲೆ ಆರೋಪಿಯನ್ನು ಸೆರೆ ಹಿಡಿದ ಪೊಲೀಸ್​ [Video]
news18
Updated: April 25, 2018, 11:55 AM IST
ಟೊರಂಟೊ: ಪಾದಾಚಾರಿಗಳ ಮೇಲೆ ಉದ್ದೇಶಪೂರ್ವಕವಾಗಿ ವ್ಯಾನ್​ ಹತ್ತಿಸಿ ಕೊಲೆಗೆ ಕಾರಣವಾಗಿದ್ದಆರೋಪಿಯನ್ನು ಸಮಾಧಾನದಿಂದಲೇ ಮಾತನಾಡಿಸಿ ಶರಣಾಗುವಂತೆ ಮಾಡಿದ ಪೊಲೀಸ್​ನ ವೀಡಿಯೋ ವೈರಲ್​ ಆಗಿದೆ.

ಕೆನಡಾದ ಟೊರಂಟೊದಲ್ಲಿ ಅಲೆಕ್​ ಮೊನಾಸಿಯನ್ ಸೋಮವಾರದಂದು ತನ್ನ ವ್ಯಾನ್​ನ್ನು 10ಜನ ಪಾದಾಚಾರಿಗಳ ಮೇಲೆ ಹರಿಸಿ ಕೊಲೆ ಮಾಡಿದ್ದ, ಅಲ್ಲದೇ ಘಟನೆಯಲ್ಲಿ 15 ಜನರಿಗೆ ಗಾಯಗಳಾಗಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಟೊರಂಟೊ ಪೊಲೀಸ್​ ಅಧಿಕಾರಿ ಬಂದೂಕುದಾರಿಗೆ ಗನ್​ ಕೆಳಕ್ಕಿಳಿಸುವಂತೆ ಕೇಳಿಕೊಂಡಿದ್ದಾರೆ.

ಪೊಲೀಸ್​ ಮಾತಿಗೂ ಕೆಲ ಹೊತ್ತು ಬೆಲೆ ಕೊಡದ ಅಲೆಕ್​ ತನ್ನನ್ನು ಸುಡುವಂತೆ ಪೊಲೀಸ್​ಗೆ ಹೇಳಿದ್ದಾನೆ, ಆದರೆ ಕೆನಡಾ ಪೊಲೀಸ್​ ಮಾತ್ರಾ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಶರಣಾಗುವಂತೆ ಮತ್ತೆ ಮತ್ತೆ ಕೇಳಿಕೊಂಡಿದ್ದಾರೆ. ಪೊಲೀಸರ ಮಾತಿಗೆ ಬೆಲೆ ಕೊಟ್ಟ ಆರೋಪಿ ಕೂಡಲೇ ಶರಣಾಗಿದ್ದಾನೆ. ಈ ಎಲ್ಲಾ ಸನ್ನಿವೇಶದ ವೀಡಿಯೋ ಅಂತರ್ಜಾಲದಲ್ಲಿ ವೈರಲ್​ ಆಗಿದ್ದು, ಎಲ್ಲರೂ ಪೊಲೀಸ್​ನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

First published:April 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ