Unvaccinated: ಕೋವಿಡ್ ಲಸಿಕೆ ಪಡೆದಿಲ್ಲ ಎಂದು ತನ್ನ ಮಗುವನ್ನೇ ನೋಡುವ ಹಕ್ಕು ಕಳೆದುಕೊಂಡ ತಂದೆ..! ಏನಿದು ತೀರ್ಪು?

ಲಸಿಕೆ ಆಧಾರದ ಮೇಲೆ ಪೋಷಕರ ಪ್ರವೇಶ ಹಕ್ಕುಗಳನ್ನು ಹಿಂತೆಗೆದುಕೊಳ್ಳುವುದು ಇದೇ ಮೊದಲ ಬಾರಿಗೆ ವರದಿಯಾಗಿದೆ ಎಂದು Le Devoir ಪತ್ರಿಕೆ ವರದಿ ಮಾಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೋವಿಡ್ - 19 ವಿರುದ್ಧ ಲಸಿಕೀರಣ (Vaccination) ಕೋವಿಡ್ ಸೋಂಕನ್ನು ಸಂಪೂರ್ಣವಾಗಿ ತಪ್ಪಿಸದಿದ್ದರೂ, ವೈರಾಣುವಿಗೆ ರೋಗಿಯು ಬಲಿಯಾಗುವುದನ್ನು ಬಹುತೇಕ ತಪ್ಪಿಸುತ್ತದೆ. ಈ ಹಿನ್ನೆಲೆ ಕೊರೊನಾ ವಿರುದ್ಧದ ಲಸಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಈ ಲಸಿಕೆಗಳು ಎಷ್ಟು ಪ್ರಮುಖವಾಗಿದೆ ಎಂದರೆ, ಅದನ್ನು ಪಡೆಯದಿದ್ದರೆ ತನ್ನ ಸ್ವಂತ ಮಗುವನ್ನು ನೋಡುವ ಹಕ್ಕನ್ನು(Right to See His Own Child ) ಕಳೆದುಕೊಂಡಿದ್ದಾರೆ ತಂದೆ. ಹೌದು,ಕೋವಿಡ್ ವಿರುದ್ಧ ಲಸಿಕೆ ಹಾಕಿಸಿಕೊಳ್ಳದ ಕಾರಣಕ್ಕೆ ಕೆನಡಾದ ತಂದೆ (Canadian father) ತನ್ನ 12 ವರ್ಷದ ಮಗುವನ್ನು ನೋಡುವ ಹಕ್ಕನ್ನು ತಾತ್ಕಾಲಿಕವಾಗಿ(Temporarily) ಕಳೆದುಕೊಂಡಿದ್ದಾರೆ.

ಪೋಷಕರ ಪ್ರವೇಶ ಹಕ್ಕು
“ಅವರ ಭೇಟಿಗಳು ಮಗುವಿನ ಉತ್ತಮ ಹಿತಾಸಕ್ತಿಯಲ್ಲಿರುವುದಿಲ್ಲ" ಎಂದು ತಂದೆ ತನ್ನ ಮಗುವನ್ನು ಭೇಟಿ ಮಾಡಲು ನಿರಾಕರಿಸಿದ ನ್ಯಾಯಾಧೀಶರು ತೀರ್ಪು ನೀಡಿದರು. ರಜೆಯ ಭೇಟಿಯ ಸಮಯವನ್ನು ವಿಸ್ತರಿಸಲು ತಂದೆ ಕೋರಿಕೆ ಮಾಡಿದ್ದರು. ಆದರೆ, ಕೋರ್ಟ್‌ ಇದನ್ನು ನಿರಾಕರಿಸಿದೆ. ಲಸಿಕೆ ಆಧಾರದ ಮೇಲೆ ಪೋಷಕರ ಪ್ರವೇಶ ಹಕ್ಕುಗಳನ್ನು ಹಿಂತೆಗೆದುಕೊಳ್ಳುವುದು ಇದೇ ಮೊದಲ ಬಾರಿಗೆ ವರದಿಯಾಗಿದೆ ಎಂದು Le Devoir ಪತ್ರಿಕೆ ವರದಿ ಮಾಡಿದೆ. ಲಸಿಕೆ ಪಡೆಯಲು ನಿರ್ಧರಿಸದ ಹೊರತಾಗಿ ತಂದೆಯ ಭೇಟಿಯ ಹಕ್ಕುಗಳನ್ನು ಫೆಬ್ರವರಿವರೆಗೆ ಅಮಾನತುಗೊಳಿಸಲು ನ್ಯಾಯಾಧೀಶರು ನಿರ್ಧರಿಸಿದ್ದಾರೆ. ಕ್ವೆಬೆಕ್‌ ಪ್ರಾಂತ್ಯದಲ್ಲಿ ಕಳೆದ ತಿಂಗಳು ಈ ತೀರ್ಪು ನೀಡಲಾಗಿದೆ.

ಮಗುವಿನ ಹಿತದೃಷ್ಟಿಯಿಂದ ಸೂಕ್ತ
ಭೇಟಿಯ ಸಮಯವನ್ನು ವಿಸ್ತರಿಸಲು ತಂದೆಯ ಆರಂಭಿಕ ಕೋರಿಕೆಯನ್ನು ವಿರೋಧಿಸಿದ ತಾಯಿಯೊಬ್ಬರು, ಅವರು ಲಸಿಕೆ ಹಾಕಿಕೊಂಡಿಲ್ಲ ಮತ್ತು ಅವರು ಲಸಿಕೆ ವಿರೋಧಿ ಎಂದು ಇತ್ತೀಚೆಗೆ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದ ತಿಳಿದುಕೊಂಡರು ಎಂದು ನ್ಯಾಯಾಲಯಕ್ಕೆ ತಿಳಿಸಿದರು.ತನ್ನ ಸಂಗಾತಿ ಮತ್ತು ಲಸಿಕೆಗೆ ಅರ್ಹವಲ್ಲದ ತುಂಬಾ ಚಿಕ್ಕ ವಯಸ್ಸಿನ ಇತರ ಇಬ್ಬರು ಮಕ್ಕಳೊಂದಿಗೆ ತಾಯಿ ವಾಸಿಸುತ್ತಿದ್ದಾರೆ. ಫ್ರೆಂಚ್ ಮಾತನಾಡುವ ಕ್ವೆಬೆಕ್‌ನಲ್ಲಿ ಇತ್ತೀಚೆಗೆ ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ, ಮಗುವಿನ ತಂದೆಯೊಂದಿಗಿನ ಸಂಪರ್ಕವು ಮಗುವಿನ ಹಿತದೃಷ್ಟಿಯಿಂದ ಸೂಕ್ತ ಅಲ್ಲ ಎಂದು ನ್ಯಾಯಾಧೀಶರು ಹೇಳಿದರು.

ಇದನ್ನೂ ಓದಿ: Omicron ಆತಂಕದ ನಡುವೆ ಹೊಸ ಕೋವಿಡ್ ಸ್ಟ್ರೈನ್ ಪತ್ತೆ

ತೆರಿಗೆ ಪಾವತಿಸಬೇಕು
ಕ್ವೆಬೆಕ್‌ ನಿವಾಸಿಗಳಲ್ಲಿ ಕೇವಲ 12.8%ರಷ್ಟು ನಿವಾಸಿಗಳು ಮಾತ್ರ ಲಸಿಕೆಯನ್ನು ಹೊಂದಿಲ್ಲ, ಆದರೆ ಅವರು ಒಟ್ಟು ಆಸ್ಪತ್ರೆಯ ದಾಖಲಾತಿಗಳಲ್ಲಿ ಮೂರನೇ ಒಂದು ಭಾಗವನ್ನು ಹೊಂದಿದ್ದಾರೆ. ಜನವರಿ 1ರ ಅಂಕಿ ಅಂಶದಂತೆ, 85% ಕ್ವೆಬೆಕ್‌ ನಿವಾಸಿಗಳು ಕನಿಷ್ಠ ಒಂದು ಲಸಿಕೆ ಡೋಸ್ ಅನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಈ ವಾರದ ಆರಂಭದಲ್ಲಿ ಕ್ವೆಬೆಕ್‌ ಸರ್ಕಾರದ ಪ್ರಕಟಣೆಯು ಕೋವಿಡ್ -19 ವಿರುದ್ಧ ಲಸಿಕೆ ಹಾಕಿಸಿಕೊಳ್ಳದ ನಿವಾಸಿಗಳು ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಹೇಳಿದೆ. ಈ ಪ್ರಾಂತ್ಯವು ಕೆನಡಾದಲ್ಲಿ ಅತಿ ಹೆಚ್ಚು ಕೋವಿಡ್-ಸಂಬಂಧಿತ ಸಾವುಗಳನ್ನು ಕಂಡಿದೆ. ಶುಲ್ಕದ ಮೊತ್ತವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಆದರೆ ಖಂಡಿತವಾಗಿಯೂ ಇದು ಗಣನೀಯವಾಗಿರುತ್ತದೆ ಎಂದು ಹೇಳಿದೆ.

ಪ್ರಸ್ತುತ, ಫ್ರಾಂಕೋಯಿಸ್ ಲೆಗಾಲ್ಟ್ ಅವರು “ ಈ ವಿಧಾನವು ಹಲವು ತ್ಯಾಗಗಳನ್ನು ಮಾಡಿದ 90% ಜನಸಂಖ್ಯೆಗೆ ನ್ಯಾಯಸಮ್ಮತವಾಗಿದೆ ಮತ್ತು ಈ ರೀತಿಯ ಕ್ರಮವು ಅವರಿಗೆ ಸಲ್ಲುತ್ತದೆ” ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸರ್ಕಾರಿ ಗಾಂಜಾ ಮತ್ತು ಮದ್ಯದ ಅಂಗಡಿಗಳಿಗೆ ಪ್ರವೇಶ ಮಾಡಲು ವ್ಯಾಕ್ಸಿನೇಷನ್ ಪುರಾವೆ ಅಗತ್ಯವಿದೆ ಎಂದು ಪ್ರಾಂತ್ಯವು ಇತ್ತೀಚೆಗೆ ಘೋಷಿಸಿತು.

ಕ್ವೆಬೆಕ್‌ ಪ್ರದೇಶದಲ್ಲೂ ಕರ್ಫ್ಯೂ
ನಮ್ಮ ರಾಜ್ಯದಲ್ಲಿ ನೈಟ್‌ ಕರ್ಫ್ಯೂ ಇರುವ ಹಾಗೆ, ಕ್ವೆಬೆಕ್‌ ಪ್ರದೇಶದಲ್ಲೂ ಪ್ರತಿದಿನ 22:00 ರಿಂದ 05:00 ರವರೆಗೆ ಕರ್ಫ್ಯೂ ಜಾರಿಯಲ್ಲಿದೆ. ಕೋವಿಡ್‌ನಿಂದ ಕ್ವೆಬೆಕ್‌ನಲ್ಲಿ ಸಾವಿನ ಸಂಖ್ಯೆ ಮಂಗಳವಾರ 12,028ಕ್ಕೆ ತಲುಪಿದೆ. ಹಿಂದಿನ 24 ಗಂಟೆಗಳ ಅವಧಿಯಲ್ಲಿ ಒಟ್ಟು 62 ಸಾವುಗಳು ದಾಖಲಾಗಿವೆ. ಜನವರಿ 2021ರಲ್ಲಿ, ಪ್ರಾಂತ್ಯದಲ್ಲಿ ಇನ್ನೂ ವ್ಯಾಪಕವಾದ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭವಾಗದಿದ್ದ ದಿನಗಳಲ್ಲಿನ ದೈನಂದಿನ ಸಾವಿನ ದರವು ಇದಕ್ಕೆ ಸಮಾನವಾಗಿತ್ತು. ತೀವ್ರ ನಿಗಾ ಘಟಕದಲ್ಲಿರುವ 45% ಕೋವಿಡ್ ರೋಗಿಗಳಿಗೆ ಲಸಿಕೆ ನೀಡಲಾಗಿಲ್ಲ ಎಂದು ಪ್ರಾಂತ್ಯದ ಡೇಟಾ ತೋರಿಸುತ್ತದೆ.

ಇದನ್ನೂ ಓದಿ: Omicron ನಂತರವೂ ಕೋವಿಡ್ ಇರಲಿದೆ, ಎಚ್ಚರಿಕೆ : ಡಾ. ರಾಜೀವ್ ಜಯದೇವನ್

ಇತ್ತೀಚಿನ ಓಮಿಕ್ರಾನ್-ಚಾಲಿತ ಉಲ್ಬಣವನ್ನು ನಿರ್ವಹಿಸಿದ ರೀತಿಯ ಮೇಲಿನ ಟೀಕೆಗಳ ಮೇಲೆ ಹಿಂದಿನ ನಿರ್ದೇಶಕರು ರಾಜೀನಾಮೆ ನೀಡಿದ ಬೆನ್ನಲ್ಲೇ ಆ ಪದವಿಗೆ ನೇಮಕಗೊಂಡ ಮಧ್ಯಂತರ ಸಾರ್ವಜನಿಕ ಆರೋಗ್ಯ ನಿರ್ದೇಶಕರು ಪ್ರೀಮಿಯರ್‌ನ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.ಪ್ರಾಂತ್ಯದ ಅತಿದೊಡ್ಡ ನಗರವಾದ ಮಾಂಟ್ರಿಯಲ್‌ನಲ್ಲಿರುವ ಆಸ್ಪತ್ರೆಗಳು 100% ಸಾಮರ್ಥ್ಯ ಅಥವಾ ಅದಕ್ಕೆ ಹತ್ತಿರವಾಗಿ ಕಾರ್ಯ ನಿರ್ವಹಿಸುತ್ತಿವೆ ಮತ್ತು ಕೋವಿಡ್-ಸಂಬಂಧಿತವಲ್ಲದ ಚಿಕಿತ್ಸೆಯನ್ನು ಸದ್ಯಕ್ಕೆ ಸೀಮಿತಗೊಳಿಸುತ್ತಿವೆ ಎಂದೂ ಹೇಳಲಾಗಿದೆ.
Published by:vanithasanjevani vanithasanjevani
First published: