• Home
  • »
  • News
  • »
  • trend
  • »
  • Stray Dog: ಭಾರತದ ನಾಯಿಯನ್ನು ದತ್ತು ಪಡೆದ ಕೆನಡಾ ದಂಪತಿ! ವಿದೇಶಕ್ಕೆ ಪ್ರಯಾಣ ಬೆಳಸಿದ ಶ್ವಾನ

Stray Dog: ಭಾರತದ ನಾಯಿಯನ್ನು ದತ್ತು ಪಡೆದ ಕೆನಡಾ ದಂಪತಿ! ವಿದೇಶಕ್ಕೆ ಪ್ರಯಾಣ ಬೆಳಸಿದ ಶ್ವಾನ

ನಾಯಿಯನ್ನು ದತ್ತು ಪಡೆದ ಕೆನಡಾ ದಂಪತಿ

ನಾಯಿಯನ್ನು ದತ್ತು ಪಡೆದ ಕೆನಡಾ ದಂಪತಿ

ಕೆನಡಾ ದಂಪತಿಗಳು ವಿಮಾನ ನಿಲ್ದಾಣದಿಂದ ಭಾರತೀಯ ತಳಿಯ ನಾಯಿಯೊಂದನ್ನು ದತ್ತು ತೆಗೆದುಕೊಂಡಿದ್ದಾರೆ.

  • Trending Desk
  • Last Updated :
  • New Delhi, India
  • Share this:

ಇತ್ತೀಚೆಗೆ ನಮ್ಮ ದೇಶದಲ್ಲಿ ಈ ಬೀದಿ ನಾಯಿಗಳ (Street dog) ಸಂಖ್ಯೆ ತುಂಬಾನೇ ಹೆಚ್ಚಾಗಿದ್ದು, ಪ್ರತಿ ನಗರದ (City) ಒಂದೊಂದು ಬೀದಿಯಲ್ಲಿಯೂ 6-8 ನಾಯಿಗಳ ದೊಡ್ಡ ಹಿಂಡು (Group) ನಮಗೆ ನೋಡಲು ಸಿಗುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ಬೀದಿ ನಾಯಿಗಳನ್ನು ವಿಚಾರಿಸುವವರು ಯಾರು ಇರುವುದಿಲ್ಲ, ಅದೇ ಸಾಕಿಕೊಂಡ ನಾಯಿಗಳ ಜೀವನ (Life) ಬೇರೆಯದ್ದೇ ರೀತಿಯಲ್ಲಿ ಇರುತ್ತದೆ ಅಂತ ಹೇಳಬಹುದು.


ಕೆಲವರು ಈ ನಾಯಿಗಳಿಗೆ ಹುಟ್ಟುವ ಮರಿಗಳನ್ನು ತೆಗೆದುಕೊಂಡು ಹೋಗಿ ತಮ್ಮ ಮನೆಯಲ್ಲಿ ಸಾಕಿಕೊಳ್ಳುತ್ತಾರೆ ಮತ್ತು ಅವುಗಳನ್ನು ತಮ್ಮ ಮನೆಯ ಒಬ್ಬ ಸದಸ್ಯನಂತೆಯೇ ಒಳ್ಳೆಯ ಊಟ ಕೊಟ್ಟು, ತಾವು ಕಾರಿನಲ್ಲಿ ಎಲ್ಲೆ ಹೊರಗೆ ಹೋದರೂ ಅವುಗಳನ್ನು ಕರೆದುಕೊಂಡು ಹೋಗುವುದನ್ನು ನಾವು ನೋಡಿರುತ್ತೇವೆ. ಈಗೇಕೆ ನಾವು ಈ ಬೀದಿ ನಾಯಿಗಳ ಬಗ್ಗೆ ಮಾತಾಡುತ್ತಿದ್ದೇವೆ ಅಂತ ನಿಮಗೆ ಪ್ರಶ್ನೆಯೊಂದು ಕಾಡಬಹುದು.


ನಾಯಿಯನ್ನು ದತ್ತು ತೆಗೆದುಕೊಂಡ ಕೆನಡಾ ದಂಪತಿಗಳು


ಇಲ್ನೋಡಿ ಕೆನಡಾ ದಂಪತಿಗಳು ವಿಮಾನ ನಿಲ್ದಾಣದಿಂದ ಭಾರತೀಯ ತಳಿಯ ನಾಯಿಯೊಂದನ್ನು ದತ್ತು ತೆಗೆದುಕೊಂಡಿದ್ದಾರೆ. ಈ ವಿಚಾರಕ್ಕೆ ಕೆನಡಾದ ದಂಪತಿಗಳು ಈಗ ಆನ್ಲೈನ್ ನಲ್ಲಿ ತುಂಬಾ ಜನರ ಹೃದಯಗಳನ್ನು ಗೆದ್ದಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ನಾಯಿಯನ್ನು ಭಾರತದಿಂದ ರಕ್ಷಿಸಲಾಯಿತು ಮತ್ತು ಕೆನಡಾದ ವಿಮಾನ ನಿಲ್ದಾಣದಲ್ಲಿ ದಂಪತಿಗಳಿಗೆ ಸುರಕ್ಷಿತವಾಗಿ ನೀಡಲಾಯಿತು. ಭಾರತದ ಒಂದು ವಿಮಾನ ನಿಲ್ದಾಣದಿಂದ ಹೊಸ ಮನೆಗೆ ಎಂದರೆ ಕೆನಡಾಗೆ ಹೋದ ನಾಯಿಯ ಆ ಪ್ರಯಾಣದ ವೀಡಿಯೋವನ್ನು ದಂಪತಿಗಳು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: ಪ್ಲಾಸ್ಟಿಕ್​​ಗೆ ಪರ್ಯಾಯವಾಗಿ ಬರುತ್ತಿದೆ ಟ್ರಾನ್ಸ್ಪರೆಂಟ್‌ ವುಡ್‌ !


ವೃತ್ತಿಯಲ್ಲಿ ಮದುವೆ ಫೋಟೋಗ್ರಾಫರ್ ಆಗಿರುವ ಹವಿಲಾ ಹೇಗರ್ ಅಕ್ಟೋಬರ್ 5 ರಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. "ಭಾರತದ 9 ತಿಂಗಳ ಟ್ರೈಪಾಡ್ ನಾಯಿಮರಿ ಕೆನಡಾದಲ್ಲಿ ತನ್ನ ಶಾಶ್ವತ ಮನೆಯನ್ನು ಕಂಡುಕೊಂಡಿದೆ" ಎಂದು ಹೇಗರ್ ಪೋಸ್ಟ್ ಹಂಚಿಕೊಳ್ಳುವಾಗ ಶೀರ್ಷಿಕೆಯೊಂದನ್ನು ಬರೆದಿದ್ದಾರೆ.




ವಿಮಾನ ನಿಲ್ದಾಣದಲ್ಲಿ ನಾಯಿಯನ್ನು ಬರಮಾಡಿಕೊಂಡ ದಂಪತಿಗಳು


ವೀಡಿಯೋದ ಆರಂಭದಲ್ಲಿ ಈ ದಂಪತಿಗಳು ಭಾರತೀಯ ತಳಿಯ ನಾಯಿಯನ್ನು ತೆಗೆದುಕೊಳ್ಳಲು ವಿಮಾನ ನಿಲ್ದಾಣಕ್ಕೆ ಹೋಗುವುದನ್ನು ಕಾಣಬಹುದು. ನಾಯಿಯು ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಬರುವುದನ್ನು ಸಹ ಕಾಣಬಹುದು. ಅವರು ನಾಯಿಯನ್ನು ಪಡೆದ ನಂತರ ಮತ್ತು ಅದನ್ನು ತಮ್ಮ ಮನೆಗೆ ಮರಳಿ ತಂದ ನಂತರ ನಾಯಿಯನ್ನು ಅದರ ಹೊಸ ಪರಿಸರದೊಂದಿಗೆ ಆರಾಮದಾಯಕವಾಗಿಸಲು ಅವರು ಪ್ರಯತ್ನಿಸುತ್ತಿರುವುದನ್ನು ಸಹ ಇದರಲ್ಲಿ ನಾವು ನೋಡಬಹುದು.


ಅವರಿಬ್ಬರೂ ತಮ್ಮ ಸಾಕುಪ್ರಾಣಿಯೊಂದಿಗೆ ಆಟ ಆಡುವುದನ್ನು ಮತ್ತು ಹೊಸ ಸ್ಥಳದಲ್ಲಿ ನಾಯಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಪ್ರಯತ್ನಿಸುವುದನ್ನು ಈ ವೀಡಿಯೋ ಕ್ಲಿಪ್ ನಲ್ಲಿ ನೋಡಬಹುದು. ನಾಯಿ ಸ್ವಲ್ಪ ಹೊತ್ತು ಶಾಂತವಾಗಿದ್ದ ನಂತರ ತನ್ನ ಪಂಜರವನ್ನು ಬಿಟ್ಟು ಹೊರ ಬಂದು ಅದರ ಹೊಸ ಪೋಷಕರೊಂದಿಗೆ ಸಮಯ ಕಳೆಯಲು ಪ್ರಾರಂಭಿಸುತ್ತದೆ. ಈ ಕೆನಡಿಯನ್ ದಂಪತಿಗಳು ಭಾರತದಿಂದ ನಾಯಿಯನ್ನು ಪೋಷಿಸಿದ ನಂತರ ಸಾಕುಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಲು ಹೊಸ ಮಾನದಂಡವನ್ನು ನಿಗದಿಪಡಿಸಿದ್ದಾರೆ.


ವೈರಲ್ ಆಗಿದೆ ಈ ಹೃದಯಸ್ಪರ್ಶಿ ವೀಡಿಯೋ


ಈ ವೀಡಿಯೋವನ್ನು ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ ನಂತರ, ಇದು 5.3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಆನ್ಲೈನ್ ನಲ್ಲಿ 75,000ಕ್ಕೂ ಹೆಚ್ಚು ಲೈಕ್ ಗಳನ್ನು ಸಹ ಪಡೆದಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ವಿಭಾಗವನ್ನು ಸಾಕಷ್ಟು ಹೃದಯಸ್ಪರ್ಶಿ ಹೇಳಿಕೆಗಳೊಂದಿಗೆ ತುಂಬಿಸಿದ್ದಾರೆ.


ಇದನ್ನೂ ಓದಿ: ಮರವನ್ನು ಬಳಸದೇ ಇಲ್ಲೊಂದು ಮನೆ ನಿರ್ಮಾಣವಾಗಿದೆ! ನೀವೂ ಟ್ರೈ ಮಾಡಬಹುದು


"ಈ ವೀಡಿಯೋ ತುಂಬಾನೇ ಚೆನ್ನಾಗಿದೆ.. ನೀವು ತುಂಬಾ ದಯಾಪರರು. ದೇವರು ನಿಮ್ಮನ್ನು ಆಶೀರ್ವದಿಸಲಿ" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು "ನೀವಿಬ್ಬರೂ ದೇವದೂತರು, ಈ ನಾಯಿಗೆ ಹೊಸ ಜೀವನವನ್ನು ನೀಡಿದ್ದಕ್ಕಾಗಿ ತುಂಬಾ ಧನ್ಯವಾದಗಳು" ಎಂದು ಬರೆದಿದ್ದಾರೆ.


"ನೀವು ತುಂಬಾ ದಯಾಳುಗಳು, ನಿಮ್ಮನ್ನು ಮತ್ತು ನಿಮ್ಮ ನಾಯಿಯನ್ನು ದೇವರು ಆಶೀರ್ವದಿಸಲಿ ಮತ್ತು ರಕ್ಷಿಸಲಿ" ಎಂದು ಮೂರನೇ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

First published: