• Home
  • »
  • News
  • »
  • trend
  • »
  • Optical Illusion: 10 ಸೆಕೆಂಡ್​​ನಲ್ಲಿ ಜೀಬ್ರಾಗಳ ಗುಂಪಿನಲ್ಲಿರುವ ಹುಲಿಯನ್ನು ಗುರುತಿಸಿದ್ರೆ ನಿಮ್ಮ ಮೆದುಳು ಸಖತ್ ಶಾರ್ಪ್ ಎಂದರ್ಥ!

Optical Illusion: 10 ಸೆಕೆಂಡ್​​ನಲ್ಲಿ ಜೀಬ್ರಾಗಳ ಗುಂಪಿನಲ್ಲಿರುವ ಹುಲಿಯನ್ನು ಗುರುತಿಸಿದ್ರೆ ನಿಮ್ಮ ಮೆದುಳು ಸಖತ್ ಶಾರ್ಪ್ ಎಂದರ್ಥ!

ಜೀಬ್ರಾಗಳ ಗುಂಪಿನಲ್ಲಿರುವ ಹುಲಿಯನ್ನು ಗುರುತಿಸಿ

ಜೀಬ್ರಾಗಳ ಗುಂಪಿನಲ್ಲಿರುವ ಹುಲಿಯನ್ನು ಗುರುತಿಸಿ

ಅದ್ಭುತ ಮತ್ತು ನೈಸರ್ಗಿಕ ಕ್ರಿಯೆಯಾದ ಆಹಾರ ಸರಪಳಿಯನ್ನು ಬಿಂಬಿಸುವ ಫೋಟೋದ ಕುರಿತು ಈ ಲೇಖನದಲ್ಲಿ ನಾವಿಂದು ಹೇಳಲು ಹೊರಟಿದ್ದೇವೆ, ನಿಮಗೆ ಈ ವಿಚಾರ ಕುತೂಹಲ ಎನಿಸಿದರೆ ಈ ಲೇಖನವನ್ನು ಮುಂದೆ ಓದಿ

  • Share this:

ಒಂದು ದಟ್ಟವಾದ ಕಾಡು . ಅಲ್ಲಿ ಹಲವು ಪ್ರಾಣಿಗಳ (Animal) ಸಂಗಮ. ಕೆಲವು ಪ್ರಾಣಿಗಳು ಸಸ್ಯಾಹಾರಿಗಳು (Vegetarians) ಆದರೆ ಮತ್ತೆ ಕೆಲವು ಮಾಂಸಹಾರಿಗಳು. ಇನ್ನು ಕೆಲವು ಮಿಶ್ರಹಾರಿಗಳು ಆಗಿರುತ್ತವೆ. ಇದೆಲ್ಲ ಏಕೆ ಹೇಳ್ತಿದೀವಿ ಅಂದ್ರೆ ಇತ್ತಿಚೀಗೆ ನೀವು ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಈ ಕಾಡು ಪ್ರಾಣಿಗಳ ಫೋಟೊಗಳನ್ನು (Photos) ಹಂಚಿಕೊಳ್ಳುವುದು ಅಥವಾ ಅವುಗಳ ಫೋಟೋ ಹಿಡಿದು ಮೆದುಳಿಗೆ ಕಸರತ್ತು ಕೊಡುವ ಉತ್ತಮ ಆಟಗಳು ಇಂದು ಆನ್‌ಲೈನ್‌ (Online) ಹೆಚ್ಚು ಹರಿದಾಡುವುದನ್ನು ಕಾಣಬಹುದು. ಇಲ್ಲೊಂದು ಅಂತಹುದ್ದೆ ಅದ್ಭುತ ಮತ್ತು ನೈಸರ್ಗಿಕ ಕ್ರಿಯೆಯಾದ ಆಹಾರ ಸರಪಳಿಯನ್ನು ಬಿಂಬಿಸುವ ಫೋಟೋದ ಕುರಿತು ಈ ಲೇಖನದಲ್ಲಿ ನಾವಿಂದು ಹೇಳಲು ಹೊರಟಿದ್ದೇವೆ, ನಿಮಗೆ ಈ ವಿಚಾರ ಕುತೂಹಲ ಎನಿಸಿದರೆ ಈ ಲೇಖನವನ್ನು ಮುಂದೆ ಓದಿ.


ಒಂದು ಜೀಬ್ರಾಗಳ ಬೃಹತ್‌ ಗುಂಪು ಕಾಡಿನಲ್ಲಿ ಮೇಯಲು ಹೋಗಿದೆ. ಅಲ್ಲಿ ಆ ಜೀಬ್ರಾಗಳನ್ನು ತಿನ್ನಬೇಕೆಂದು ಒಂದು ಹುಲಿ ಹೊಂಚು ಹಾಕಿಕೊಂಡು ಒಂದು ಕಡೆ ಸುಮ್ಮನೆ ಏಕಾಗ್ರತೆಯಿಂದ ತನ್ನ ಬೇಟೆಯನ್ನೆ ತದೇಕ ಚಿತ್ತದಿಂದ ನೋಡುತ್ತಿದೆ. ಇದರಲ್ಲಿ ಒಂದು ವಿಶೇಷ ಸಂಗತಿ ಎಂದರೆ ಆಪ್ಟಿಕಲ್‌ ಕಲ್ಪನೆಯಲ್ಲಿ ಹುಲಿ ಅಲ್ಲಿ ಇದೆ ಆದರೆ ಅದು ಅಷ್ಟೊಂದು ಸ್ಪಷ್ಟವಾಗಿ ಫೋಟೊದಲ್ಲಿ ಕಾಣುವುದೇ ಇಲ್ಲ. ಇದನ್ನೆ ಆಪ್ಟಿಕಲ್‌ ಇಲ್ಯೂಶನ್‌ ಅಥವಾ ಕಲ್ಪನೆ ಚಿತ್ರ ಎಂದು ಕರೆಯುತ್ತೇವೆ. ಈ ಫೋಟೋವನ್ನು ಯಾರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಆದರೆ ಈ ತರಹದ ಪ್ರಾಣಿ ಪೋಟೋಗಳು ಇಂಟರ್‌ನೆಟ್‌ ಬಳಕೆದಾರರ ಫೇವರೇಟ್‌ ಪೋಟೋಗಳಾಗುತ್ತಿವೆ. ಈ ಫೋಟೋಗಳನ್ನು ಕೇವಲ ಮೆದುಳಿಗೆ ಕಸರತ್ತು ನೀಡಲು ಬಳಸದೇ ನಮ್ಮ ಬುದ್ದಿಯ ಕಲ್ಪನಾ ಶಕ್ತಿ ಹೆಚ್ಚಿಸಲು ಇಂತಹ ಫೋಟೋಗಳು ಸಹಾಯ ಮಾಡುತ್ತಿವೆ.


ಹಾಗಿದ್ರೆ ಈ ಫೋಟೋದ ವಿಶೇಷತೆ ಏನು?
ಈ ಫೋಟೊದಲ್ಲಿ ಒಂದು ವಿಶಾಲವಾದ ಭೂ ಪ್ರದೇಶದಲ್ಲಿ ಜೀಬ್ರಾಗಳ ಗುಂಪು ಜೋರಾಗಿ ಓಡುತ್ತಿವೆ. ಅಲ್ಲಿಯೇ ಹತ್ತಿರದ ಪೊದೆಯಲ್ಲಿ ಹುಲಿ ಬೇಟೆಗಾಗಿ ಕಾದು ಕುಳಿತಿದೆ. ಈ ಫೋಟೋವು ಕಾಡಿನಲ್ಲಿ ದಿನನಿತ್ಯ ದೃಶ್ಯಗೊಳ್ಳುವ ಮಾಂಸಹಾರಿ ಪ್ರಾಣಿಗಳಿಗೆ ಸಸ್ಯಹಾರಿ ಪ್ರಾಣಿಗಳು ಬೇಟೆಯಾಗುತ್ತಲೆ ಇರುವುದನ್ನು ತೋರಿಸುತ್ತದೆ.


ಇದನ್ನೂ ಓದಿ:  Viral Optical illusion: ಈ ಫೋಟೋದಲ್ಲಿ ಮೊದಲು ಯಾವ ಪ್ರಾಣಿ ಕಾಣುತ್ತೋ ನಿಮ್ಮ ಭವಿಷ್ಯ ಅದೇ ರೀತಿ ಇರುತ್ತೆ, ಟ್ರೈ ಮಾಡಿ


ಸಸ್ಯಹಾರಿ ಪ್ರಾಣಿಗಳಾದ ಜೀಬ್ರಾ, ಜಿಂಕೆಗಳು ಪ್ರಕೃತಿಯ ಆಹಾರ ಸರಪಳಿಯಲ್ಲಿ ಮಾಂಸಹಾರಿ ಪ್ರಾಣಿಗಳಾದ ಸಿಂಹ, ಹುಲಿ ಇತರ ಪ್ರಾಣಿಗಳಿಗೆ ಆಹಾರ ಮತ್ತು ಶಕ್ತಿಯ ಮೂಲವಾಗಿವೆ. ಇದು ನಿಸರ್ಗ ಕ್ರಿಯೆ ಎಂದು ಹೇಳಬಹುದು. ಈ ಆಹಾರ ಸರಪಳಿಯ ಕ್ರಮದ ಪ್ರಕಾರ ಒಂದು ಪ್ರಾಣಿ ಮತ್ತೊಂದು ಪ್ರಾಣಿಯ ಆಹಾರ ಆಗಿರುತ್ತದೆ. ಈ ಕ್ರಿಯೆ ಒಂದು ಪ್ರಾಣಿ ಮತ್ತೊಂದು ಪ್ರಾಣಿಯ ಮೇಲೆ ಅವಲಂಬಿತವಾಗಿರುವುದನ್ನು ತೋರಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಆಹಾರ ಸರಪಳಿಯ ಎರಡು ಹಂತಗಳ ನಡುವೆ ಶಕ್ತಿಯ ಹರಿವು ಹಾಗೆಯೇ ಉಳಿದು ಬಿಡುತ್ತದೆ.


ಹುಲಿ ಎಲ್ಲಿ ಕುಳಿತಿದೆ ಎಂಬುದಕ್ಕೆ ಇಲ್ಲಿ ಕೆಲವು ಸುಳಿವುಗಳಿವೆ. ನೀವೆ ಆ ಸುಳಿವುಗಳನ್ನು ಪರಿಹರಿಸಿ.
ಸುಳಿವು:1
ಹುಲಿಯು ಜೀಬ್ರಾಗಳಂತೆ ಒಂದೇ ಬಣ್ಣ ಮತ್ತು ದೇಹ ಆಕಾರವನ್ನು ಹೊಂದಿರುತ್ತದೆ. ಈ ವಿವರಣೆಯು ಆಪ್ಟಿಕಲ್‌ ಕಲ್ಪನೆಯ ಅತ್ಯಂತ ಕಷ್ಟದ ಹಂತವಾಗಿದೆ.


ಸುಳಿವು:2
ಯಾರೇ ಆಗಲಿ ಒಂದು ಫೋಟೋವನ್ನು ನೋಡಬೇಕೆಂದರೆ ಮೊದಲು ಅದರ ಮಧ್ಯಭಾಗವನ್ನು ಮಾತ್ರ ನೋಡುತ್ತಾರೆ. ಉತ್ತಮವಾಗಿ ನೋಡುವವರು ಮಾತ್ರ ಫೋಟೊದ ಪ್ರತಿ ಮೂಲೆಯನ್ನು ಪರೀಕ್ಷೆ ಮಾಡಿ ನೋಡುತ್ತಾರೆ. ಏನಾದರೂ ಹೊಸದಾಗಿ ಕಾಣುತ್ತದೇಯೇ ಎಂದು ಗಮನಿಸಿ ಮತ್ತೆ ಮತ್ತೆ ನೋಡುತ್ತಾರೆ. ಇದು ಅವರವರ ಕೌಶಲ್ಯವನ್ನು ಬಿಂಬಿಸುತ್ತದೆ.


ಹಾಗಿದ್ರೆ ಹುಲಿ ಎಲ್ಲಿದೆ?
ಅದಕ್ಕೆ ಉತ್ತರ ಇಲ್ಲಿದೆ. ಬೇಟೆಯಾಡುವ ಹುಲಿ ಜೀಬ್ರಾಗಳ ಜೊತೆ ಹೋಗಿ ಕುಳಿತುಕೊಳ್ಳುವುದು ಯಾವತ್ತಿಗೂ ಸಾಧ್ಯವಿಲ್ಲದ ಮಾತು. ಅದು ಕಾಡು ಪ್ರಾಣಿ ಮೇಲಾಗಿ ಮಾಂಸಹಾರಿ. ತನ್ನ ಬೇಟೆಗಾಗಿ ಹೊಂಚು ಹಾಕುತ್ತಾ ಜೀಬ್ರಾಗಳಿಗೆ ಕಾಣಿಸದ ಹಾಗೆ ಅಲ್ಲೆ ಕಾದು ಕುಳಿತಿರುತ್ತದೆ. ಈ ಫೋಟೊದ ಬಲಭಾಗದಲ್ಲಿ ಬಿಳಿ ಹುಲಿ ಕಾದು ಕುಳಿತಿರುವುದು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ನಿಮಗೆ ಕಾಣಿಸುತ್ತದೆ.


ಇದನ್ನೂ ಓದಿ: Optical Illusion: ಈ ಬ್ಲಾಕ್ & ವೈಟ್​ ಸರ್ಕಲ್​ನಲ್ಲಿ ನಿಮಗೆಷ್ಟು ನಂಬರ್ಸ್ ಕಾಣಿಸುತ್ತೆ ?


ಇಲ್ಲಿ ತಿಳಿದು ಬರುವುದೆನೆಂದರೆ ಉತ್ತಮ ವೀಕ್ಷಣ ಕೌಶಲ್ಯವನ್ನು ಹೊಂದಿರುವವರು ಮಾತ್ರ ಈ ಫೋಟೊದಲ್ಲಿರುವ ಆ ಬೇಟೆ ಹುಲಿಯನ್ನು ಕೇವಲ 10 ಸೆಕೆಂಡ್‌ಗಳಲ್ಲಿ ಗುರುತಿಸಲು ಸಾಧ್ಯವಾಗುತ್ತದೆ.

Published by:Ashwini Prabhu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು