• Home
  • »
  • News
  • »
  • trend
  • »
  • Optical Illusion: ಈ ಚಿತ್ರದಲ್ಲಿ 8 ಎಷ್ಟು ಬಾರಿ ಇದೆ? ಬುದ್ಧಿವಂತರಾಗಿದ್ರೆ ಹತ್ತೇ ಸೆಕೆಂಡ್‌ನಲ್ಲಿ ಕಂಡು ಹಿಡಿಯಿರಿ!

Optical Illusion: ಈ ಚಿತ್ರದಲ್ಲಿ 8 ಎಷ್ಟು ಬಾರಿ ಇದೆ? ಬುದ್ಧಿವಂತರಾಗಿದ್ರೆ ಹತ್ತೇ ಸೆಕೆಂಡ್‌ನಲ್ಲಿ ಕಂಡು ಹಿಡಿಯಿರಿ!

3ನೇ 8 ಎಲ್ಲಿದೆ ಅಂತ ಹೇಳಿ

3ನೇ 8 ಎಲ್ಲಿದೆ ಅಂತ ಹೇಳಿ

ಆಪ್ಟಿಕಲ್ ಭ್ರಮೆಗಳ ವಿಷಯಕ್ಕೆ ಬಂದಾಗ ಸರಿ ಅಥವಾ ತಪ್ಪು ಉತ್ತರಗಳಿಲ್ಲ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಇದು ನೀವು ಜಗತ್ತನ್ನು ಮತ್ತು ನಿಮ್ಮ ಸುತ್ತಲಿನ ವಿಷಯಗಳನ್ನು ಹೇಗೆ ಗ್ರಹಿಸುತ್ತೀರಿ ಎಂಬುದರ ಬಗ್ಗೆ ಮಾತ್ರ ಇರುತ್ತದೆ.

  • Share this:

ಒಮ್ಮೊಮ್ಮೆ ರಾತ್ರಿ (Night) ಯ ಹೊತ್ತಿನಲ್ಲಿ ನೇತಾಡುವ ಯಾವುದಾದರೂ ಹಗ್ಗ ಕಂಡಾಗ ನಾವದನ್ನು ಹಾವು ಎಂದುಕೊಂಡು ಭಯಭೀತರಾಗಿರುತ್ತೇವೆ. ನಾವು ಕತ್ತಲಲ್ಲಿ ಹಾವು ಅಂದುಕೊಂಡಿದ್ದು ಹಗ್ಗ ಅಂತ ನಮಗೆ ಆನಂತರ ಗೊತ್ತಾಗುತ್ತದೆ. ಇದನ್ನು ನಾವೆಲ್ಲಾ ಸಾಮಾನ್ಯವಾಗಿ ‘ಭ್ರಮೆ’ (Illusion) ಅಂತ ಹೇಳುತ್ತೇವೆ. ಇಲ್ಲೊಂದು ಇನ್ನೊಂದು ಬಗೆಯ ಭ್ರಮೆ ಸಹ ಇದೆ, ಅದನ್ನ ಆಪ್ಟಿಕಲ್ ಭ್ರಮೆ ಅಂತ ಹೇಳುತ್ತಾರೆ. ಇದರಲ್ಲಿ ಒಂದು ಚಿತ್ರವಿದ್ದು, ಅದರಲ್ಲಿ ಒಬ್ಬ ವ್ಯಕ್ತಿಯ ಮುಖ, ಸಿಂಹದ ಮುಖ ಅಥವಾ ಬೇರೆ ಪ್ರಾಣಿಗಳು, ಬೇರೆ ಆಕಾರಗಳನ್ನು ಬೇಗನೆ ಕಣ್ಣಿಗೆ ಕಾಣಿಸುವ ಹಾಗೆ ಇರಿಸಿರುವುದಿಲ್ಲ.


ತಲೆ ಇದ್ದವರಿಗೆ ಮಾತ್ರ!


ಅದನ್ನು ತುಂಬಾನೇ ಸೂಕ್ಷ್ಮವಾಗಿ ನೋಡಿದರೆ ಅರ್ಥವಾಗುತ್ತದೆ. ತುಂಬಾನೇ ಗಮನವಿಟ್ಟು ನಾವು ಏನು ಹುಡುಕುತ್ತಿದ್ದೇವೆ ಅಂತ ತಿಳಿದುಕೊಂಡು ಆ ಚಿತ್ರದಲ್ಲಿ ಹುಡುಕಿದರೆ ಮಾತ್ರ ಆ ಚಿತ್ರ ನಮಗೆ ಕಾಣಿಸುತ್ತದೆ.


ಇದು ಬರೀ ಒಂದು ಪ್ರಾಣಿಯ ಚಿತ್ರಕ್ಕೆ ಅಥವಾ ಆಕಾರಕ್ಕೆ ಸೀಮಿತವಾಗಿರುವುದಿಲ್ಲ. ಇದು ನಾವು ಆಡುವ ಈ ಇಸ್ಪೀಟ್ ಎಲೆಗಳಲ್ಲಿ ಮತ್ತು ಕೆಲವು ಚಿಕ್ಕ ಮಕ್ಕಳ ಪಜಲ್ ಗಳಲ್ಲಿ ಸಹ ಈ ರೀತಿಯ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳನ್ನು ನೋಡಬಹುದು.


ಈ ರೀತಿ ಮಾಡಿದ್ರೆ ಏಕಾಗ್ರತೆ ಹೆಚ್ಚುತ್ತಂತೆ!


ಈ ರೀತಿಯ ಚಿತ್ರಗಳು ಜನರಲ್ಲಿರುವ ಏಕಾಗ್ರತೆ ಮತ್ತು ದೃಶ್ಯ ಗ್ರಹಿಕೆಯನ್ನು ಪರೀಕ್ಷಿಸಲು ಬಳಸುತ್ತಾರೆ ಅಂತ ಹೇಳಬಹುದು. ಅನೇಕ ಪ್ರಭಾವಶಾಲಿ ವ್ಯಕ್ತಿಗಳು ಈ ಮನಸ್ಸನ್ನು ಬೆರಗುಗೊಳಿಸುವ ಆಸಕ್ತಿದಾಯಕ ಆಪ್ಟಿಕಲ್ ಭ್ರಮೆಗಳಿರುವ ಚಿತ್ರಗಳನ್ನು ಆಗಾಗ್ಗೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳುವುದನ್ನು ನಾವು ನೋಡಿರುತ್ತೇವೆ.


3ನೇ 8 ಎಲ್ಲಿದೆ ಅಂತ ಹೇಳಿ


ಆಪ್ಟಿಕಲ್ ಭ್ರಮೆಗಳ ವಿಷಯಕ್ಕೆ ಬಂದಾಗ ಸರಿ ಅಥವಾ ತಪ್ಪು ಉತ್ತರಗಳಿಲ್ಲ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಇದು ನೀವು ಜಗತ್ತನ್ನು ಮತ್ತು ನಿಮ್ಮ ಸುತ್ತಲಿನ ವಿಷಯಗಳನ್ನು ಹೇಗೆ ಗ್ರಹಿಸುತ್ತೀರಿ ಎಂಬುದರ ಬಗ್ಗೆ ಮಾತ್ರ ಇರುತ್ತದೆ. ಅಯ್ಯೋ ಉತ್ತರ ಕಂಡು ಹಿಡಿಯಲು ನಮಗೆ ಆಗಲಿಲ್ಲ ಅಂತ ನಿರಾಶರಾಗುವ ಅಗತ್ಯವಿಲ್ಲ.


ಇದನ್ನೂ ಓದಿ: ನೀರಿನೊಳಗೆ ಕ್ರಿಸ್​ಮಸ್​ ತಾತ! ಎಲ್ಲರಿಗೂ ವಿಶೇಷವಾಗಿ ವಿಷ್​ ಮಾಡಿ, ಗಿಫ್ಟ್​ ಕೊಟ್ಟೇ ಬಿಟ್ರು!


ಡೈಮಂಡ್ ಕಾರ್ಡ್ ನಲ್ಲಿ ಎಷ್ಟು 8 ಗಳಿವೆ ನೋಡಿ!


ಈಗ ಇದೆಲ್ಲದರ ಬಗ್ಗೆ ನಾವೇಕೆ ಇಷ್ಟೊಂದು ಮಾತಾಡುತ್ತಿದ್ದೇವೆ ಅಂತ ನಿಮಗೆ ಅನ್ನಿಸಬಹುದು. ಈಗ ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಅಂತಹ ಒಂದು ಆಪ್ಟಿಕಲ್ ಭ್ರಮೆಯ ಚಿತ್ರವು ಒಂದು ಇಸ್ಪೀಟ್ ಕಾರ್ಡ್ ನಲ್ಲಿ ಅದರಲ್ಲೂ ಡೈಮಂಡ್ಸ್ ಕಾರ್ಡ್ ನಲ್ಲಿ ಸಾಮಾನ್ಯವಾಗಿ ಎರಡು 8 ಗಳು ಇರುತ್ತವೆ.


ಒಂದು ಕಾರ್ಡ್ ನ ಮೇಲ್ಭಾಗದ ಎಡ ಮೂಲೆಯಲ್ಲಿ ಮತ್ತು ಇನ್ನೊಂದು ಕೆಳಗಿನ ಬಲ ಮೂಲೆಯಲ್ಲಿ ಇರುತ್ತದೆ. ಆದರೆ ಈ ಕಾರ್ಡ್ ನಲ್ಲಿ ಮೂರು 8 ಇವೆ ಅಂತ ಹೇಳಲಾಗುತ್ತಿದೆ ನೋಡಿ.ಕಾರ್ಡ್ ನ ಮೇಲೆ ಮತ್ತು ಕೆಳಗೆ ಸೇರಿ ಬರೀ ಎರಡು 8 ಗಳಿವೆ, ಮೂರನೆಯ 8 ಎಲ್ಲಿದೆ ಅಂತ ನೀವು ತಲೆ ಕೆಡೆಸಿಕೊಂಡಿರಬಹುದು ಅಲ್ಲವೇ? ಈ ಲೇಖನವನ್ನು ಪೂರ್ತಿಯಾಗಿ ಓದಿ.. ನಿಮಗೆ ಮೂರನೆಯ 8 ಎಲ್ಲಿದೆ ಅಂತ ತಿಳಿಯುತ್ತದೆ.


ಮೂರನೆಯ 8 ಅನ್ನು ಗುರುತಿಸುವುದು ಹೇಗೆ ಗೊತ್ತೇ?


ಇಸ್ಪೀಟ್ ನ ಡೈಮಂಡ್ಸ್ ಕಾರ್ಡ್ ನಲ್ಲಿ 8 ಸಂಖ್ಯೆಯನ್ನು ತೆಗೆದುಕೊಳ್ಳಿ. ಕಾರ್ಡ್ ನಲ್ಲಿ 8 ಎಂಬ ಸಂಖ್ಯೆಯು ಎರಡು ಸ್ಥಳಗಳಲ್ಲಿ ಸುಲಭವಾಗಿ ಕಾಣ ಸಿಗುತ್ತದೆ. ಆದರೆ ಇದೇ ಕಾರ್ಡ್ ನಲ್ಲಿ ಮೂರನೆಯ 8 ಸಹ ಇದೆ ನೋಡಿ. ನೀವು ಎಲ್ಲಾ ಕೆಂಪು ಡೈಮಂಡ್ ಆಕಾರಗಳನ್ನು ಹತ್ತಿರದಿಂದ ನೋಡಿದರೆ, ಮಧ್ಯದಲ್ಲಿ ಎಂಟು ಜ್ಯಾಮಿತೀಯ ಮಾದರಿ ಇರುವುದನ್ನು ನೀವು ಗಮನಿಸಬಹುದು.


ಮೂರನೇ ಎಂಟು ಈ ಚಿತ್ರದಲ್ಲಿದೆ ನೋಡಿ


ಇದನ್ನೂ ಓದಿ: ಸಾವಿರ ಕೊಟ್ಟು ಯಾವ ಹುಡುಗಿಯರನ್ನಾದ್ರೂ ಸೆಲೆಕ್ಟ್​​ ಮಾಡಿ, ಹೋಟೆಲ್​ ಬೋರ್ಡ್​ನಲ್ಲಿ ವಿವಾದಾತ್ಮಕ ಆಫರ್​​!


ಇದು ಮೇಲಿನ ಭಾಗದಲ್ಲಿನ ಎರಡು ಡೈಮಂಡ್ ಆಕಾರಗಳನ್ನು ತೆಗೆದುಕೊಂಡು ಕೆಳ ಭಾಗದಲ್ಲಿನ ಎರಡು ಡೈಮಂಡ್ ಆಕಾರಗಳೊಂದಿಗೆ ಕೊನೆಗೊಳ್ಳುತ್ತದೆ. ಇದು ಬ್ರಿಟನ್ ಗಾಟ್ ಟ್ಯಾಲೆಂಟ್ ಸ್ಪರ್ಧಿ ಜೇಮಿ ರಾವೆನ್ ಸೇರಿದಂತೆ ಅನೇಕರು ಈ ತಂತ್ರವನ್ನು ಪೋಸ್ಟ್ ಮಾಡಿದ್ದಾರೆ. 2018 ರಲ್ಲಿ ಅವರು ಇದನ್ನು ಟ್ವೀಟ್ ಮಾಡಿ "ಡೈಮಂಡ್ ಕಾರ್ಡ್ ನಲ್ಲಿ ಎರಡು 8 ರ ಮಧ್ಯದಲ್ಲಿ ಇನ್ನೊಂದು 8 ಇದೆ ಎಂದು ತಿಳಿಸಿದ್ದರು.

Published by:ವಾಸುದೇವ್ ಎಂ
First published: