ಒಂದು ಫೋಟೋ (Photo) ಸಾವಿರದ ಪದಗಳಿಗೆ ಸಮ ಎನ್ನಲಾಗುತ್ತೆ. ಕೆಲವೊಂದು ಫೋಟೋಗಳಲ್ಲಿ ಆಳವಾದ ಅರ್ಥಗಳು (Meaning) ಸಿಕ್ಕಿಬಿಡುತ್ತೆ. ಕೆಲವೊಮ್ಮೆ ಕಣ್ಣಿಗೆ ಕಸರತ್ತು ನೀಡುವಂತ ಫೋಟೋಗಳೂ ಇರುತ್ತವೆ. ಅಂತಹದ್ದೇ ಅಪರೂಪದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದೆ. ಕಣ್ಣೋಟದ ಭ್ರಮೆಗಳು, ಒಗಟುಗಳು ಸಾಮಾನ್ಯವಾಗಿ ನಮ್ಮ ತಲೆಗೆ ಕೆಲಸ ಕೊಡುತ್ತವೆ. ನೀವು ನೋಡಿದ ಚಿತ್ರದಲ್ಲಿ ನಿಮ್ಮ ಸ್ನೇಹಿತರು ಸಂಪೂರ್ಣವಾಗಿ ವಿಭಿನ್ನವಾದದ್ದನ್ನು ನೋಡುತ್ತಾರೆ. ಮೋಡಗಳಲ್ಲಿ ಆಕಾರ ಹುಡುಕುವಾಗ ಹೀಗೆ ಆಗುತ್ತೆ. ಎಷ್ಟೋ ಸಲ ಕಣ್ಣ ಮುಂದೆಯೇ ಇರುವ ಆಕಾರ ನಮ್ಮ ಕಣ್ಣನ್ನೇ ಮೋಸ ಮಾಡಿ ಬಿಡುತ್ತವೆ. ಇಲ್ಲೂ ಅದೇ ಆಗಿದೆ.
ಎಲ್ಲಿದೆ ಚಿರತೆ..?
ಚಿರತೆಯೊಂದು ಕಣ್ಣಿಗೆ ಕಾಣದಂತೆ ಅಡಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಚಿರತೆಯೊಂದು ಹುಲ್ಲಿನ ಪೊದೆಯಲ್ಲಿ ಅಡಗಿ ಕುಳಿತಿದೆ. ಈ ಫೋಟೋವನ್ನು ಅಮಿತ್ ಮೆಹ್ರಾ ಎಂಬ ಬಳಕೆದಾರರು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದು, ಈ ಚಿತ್ರದಲ್ಲಿ ಚಿರತೆ ಇದೆ. ಅದನ್ನು ಗುರುತಿಸಲು ಪ್ರಯತ್ನಿಸಿ ನೋಡೋಣ ಎಂಬ ಶೀರ್ಷಿಕೆಯೊಂದಿಗೆ ಶೇರ್ ಮಾಡಿದ್ದಾರೆ. ನೆಟ್ಟಿಗರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಫೋಟೋದಲ್ಲಿರುವ ಚಿರತೆಯನ್ನು ಹುಡುಕುತ್ತಿದ್ದಾರೆ. ಒಣ ಮರ ಮತ್ತು ಹುಲ್ಲಿನಿಂದ ಚಿರತೆ ಮರೆಮಾಚಲ್ಪಟ್ಟಿದೆ.
There is a leopard in this picture. Try to spot it. No pun intended 🥴 pic.twitter.com/xeT87wV1cy
— Amit Mehra (@amitmehra) December 27, 2021
ಕೆಲವರು ಫೋಟೋದಲ್ಲಿರುವ ಮತ್ತೊಂದು ಚಿರತೆಯ ಹುಡುಕಾಟ ನಡೆಸಿದ್ದು, ಕೆಲವರು ಮರೆಮಾಚಿ ಕುಳಿತಿರುವ ಚಿರತೆಯನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಕೆಲವರು ವನ್ಯಜೀವಿ ಛಾಯಾಗ್ರಾಹಕ ಮೋಹನ್ ಥಾಮಸ್ ಅವರು ಸೆರೆಹಿಡಿದ ಈ ಫೋಟೋಗೆ ಆಶ್ಚರ್ಯ ಚಕಿತರಾಗಿದ್ದು, ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಇದನ್ನೂ ಓದಿ: Spot the Animal: ಈ ಚಿತ್ರದಲ್ಲಿ ಹಿಮ ಚಿರತೆ ಇದೆ.. ಎಲ್ಲಿದೆ ಹುಡುಕಿ ನೋಡೋಣ ! ಕಣ್ಣಿಗೊಂದು ಕಸರತ್ತು
ಗಮನ ಸೆಳೆದ ಮತ್ತೊಂದು ಫೋಟೋ
ಇನ್ನು ಶಶಿಧರ್ ಬಸಪ್ಪ ಎಂಬುವರು ಫೇಸ್ಬುಕ್ನಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ನಾಗರಹೊಳೆ ಸಮೀಪ ಆನೆಮಾಳ ಬುಡಕಟ್ಟು ಜನಾಂಗದ ಹಾಡಿಯಲ್ಲಿ ಫೋಟೋ ತೆಗೆದಾಗ ಸಾಮಾನ್ಯವಾಗೇ ಇತ್ತು. ಆದರೆ ಅದೇ ಫೋಟೋವನ್ನು ನಂತರ ಸೂಕ್ಷ್ಮವಾಗಿ ಗಮನಿಸಿದಾಗ ಅಪರೂಪವೊಂದು ಕಂಡಿದೆ. ಹಾಡಿ ಮಕ್ಕಳೊಂದಿಗೆ ತೆಗೆದಿರುವ ಸಾಮಾನ್ಯ ಫೋಟೋದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹೋಲುವ ಆಕಾರ ಬೆಳಕಿನಲ್ಲಿ ಮೂಡಿ ಬಂದಿದೆ. ವಿಧಾನಸೌಧದ ಮುಂದಿರುವ ಅಂಬೇಡ್ಕರ್ ಪ್ರತಿಮೆಯನ್ನೇ ಹೋಲುವ ಆಕಾರ ಮೂಡಿದೆ. ಒಂದು ಕೈನಲ್ಲಿ ಪುಸ್ತಕ ಹಿಡಿದು ಮತ್ತೊಂದು ಕೈಯನ್ನು ಎತ್ತಿ ತೋರುತ್ತಿರುವಂತೆ ಬೆಳಕಿನ ಆಕಾರ ಫೋಟೋದಲ್ಲಿ ಸೆರೆಯಾಗಿದೆ.
ಈ ಬಗ್ಗೆ ಶಶಿಧರ್ ಬಸಪ್ಪ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ‘ಮೊದಲ ಫೋಟೊದಲ್ಲಿರುವ ಅದ್ಭುತದ ವಿಚಾರಕ್ಕೆ ಬಂದರೆ ಇವರ ಹಿಂದಿರೋದು ಹಾಡಿಯ ಹುಡುಗರು. ಇದರಲ್ಲಿ ತಾನಾಗೇ ಅದ್ಭುತವೊಂದು ಘಟಿಸಿದೆ. ಗಮನಿಸಿ ನೋಡಿ ಆ ಮಕ್ಕಳ ನಡುವೆ ಬೆಳಕಿನ ರೂಪದಲ್ಲಿ ಅಂಬೇಡ್ಕರ್ ಮೂಡಿದ್ದಾರೆ. ಇದು ನೂರಕ್ಕೆ ನೂರು ನೈಜ ಚಿತ್ರ ಯಾವುದೇ ರೀತಿಯ ಎಡಿಟಿಂಗ್ ಮಾಡಿಲ್ಲ ಎಂದು ಬರೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ