• Home
  • »
  • News
  • »
  • trend
  • »
  • IQ Test: ನಿಮ್ಮ ಬುದ್ಧಿವಂತಿಕೆಗೆ ಇಲ್ಲಿದೆ ಸವಾಲು, 9 ಸೆಕೆಂಡ್​​ ಒಳಗೆ ರೂಂನಲ್ಲಿರುವ ಪಿಶಾಚಿ ಹುಡುಕಿ ನೋಡೋಣ

IQ Test: ನಿಮ್ಮ ಬುದ್ಧಿವಂತಿಕೆಗೆ ಇಲ್ಲಿದೆ ಸವಾಲು, 9 ಸೆಕೆಂಡ್​​ ಒಳಗೆ ರೂಂನಲ್ಲಿರುವ ಪಿಶಾಚಿ ಹುಡುಕಿ ನೋಡೋಣ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Can you identify Vampire in Room: ನೀವು 9 ಸೆಕೆಂಡ್‌ಗಳೊಳಗೆ ಈ ಒಗಟನ್ನು ಬಿಡಿಸಿದ್ದರೆ ನೀವು ಸರಾಸರಿ ಐಕ್ಯೂ ಮಟ್ಟವನ್ನು ಹೊಂದಿರುವಿರಿ ಎಂದು ಅರ್ಥ. ಈ ರೀತಿಯ ಮೆದುಳಿನ ಕಸರತ್ತುಗಳು ನಿಮ್ಮ ಐಕ್ಯೂ ಪರೀಕ್ಷಿಸಲು ಮತ್ತೊಂದು ಮೋಜಿನ ಮಾರ್ಗವಾಗಿದೆ.

  • Share this:

ನಿಮ್ಮ ಮೆದುಳಿನ (Brain) ಚುರುಕುತನ ಎಷ್ಟಿದೆ ಎಂಬುದನ್ನು ಪತ್ತೆಹಚ್ಚಲು ಒಗಟುಗಳು ಸಹಕಾರಿಯಾಗಿವೆ. ಮೆದುಳಿಗೆ ಕೆಲಸ ಕೊಡುವುದು ಅಂತೆಯೇ ಮೆದುಳು ಕ್ರಿಯಾತ್ಮಕವಾಗಿ ಸ್ಪಂದಿಸುವಂತೆ ಮಾಡುವುದನ್ನು ಈ ಚಟುವಟಿಕೆಗಳು (Activities)  ಒಳಗೊಂಡಿರುತ್ತವೆ. ಮೆದುಳಿಗೆ ನೀಡುವ ಕಸರತ್ತುಗಳು ಇದು ಬುದ್ಧಿಮತ್ತೆಯ (IQ) ಮಟ್ಟವನ್ನು ನಿರ್ಣಯಿಸಲು ಸಹಕಾರಿಯಾಗಿದೆ. ಇಂತಹ ಪರೀಕ್ಷೆಗಳು ಮೋಜಿನ ಐಕ್ಯೂ ಪರೀಕ್ಷೆ ಎಂದೆನಿಸಿದೆ. ಮೆದುಳಿಗೆ ಕೆಲಸ ನೀಡುವ ಈ ಒಗಟುಗಳು ಥಟ್ಟನೆ ಉತ್ತರ ಹೇಳುವ ಪ್ರಶ್ನೆಗಳನ್ನು (Question) ಒಳಗೊಂಡಿರುತ್ತವೆ.


ಮೆದುಳಿಗೆ ನೀಡುವ ಕಸರತ್ತು


ಒಗಟುಗಳನ್ನು ಬಿಡಿಸುವುದು ಒಮ್ಮೊಮ್ಮೆ ಸರಳವಾದರೂ ಸಮಯವನ್ನು ನೀಡಿ ಥಟ್ಟನೆ ಒಗಟು ಬಿಡಿಸುವಂತೆ ಹೇಳುವುದು ಕೊಂಚ ಪ್ರಯಾಸದ ಕೆಲಸವಾಗಿರುತ್ತದೆ. ನಿಮ್ಮ ಬುದ್ಧಿಮತ್ತೆ ಚುರುಕಾಗಿ ಈ ಸಮಯದಲ್ಲಿ ಕೆಲಸ ಮಾಡಬೇಕು. ಹಾಗೂ ಅಷ್ಟು ಹೊತ್ತಿನ ಒಳಗೆ ಉತ್ತರವನ್ನು ನೀಡಬೇಕಾಗುತ್ತದೆ.


ಈ ಒಗಟುಗಳಲ್ಲಿರುವ ನಿರ್ಣಾಯಕ ಅಂಶವೆಂದರೆ ನಿಗದಿತ ಸಮಯದಲ್ಲಿ ಉತ್ತರವನ್ನು ನೀಡಲು ತಗುಲಿದ ಸಮಯವನ್ನು ವಿಶ್ಲೇಷಿಸುವುದಾಗಿದೆ. ಮೊದಲೇ ಹೇಳಿದಂತೆ ಇದು ಐಕ್ಯೂ ಪರೀಕ್ಷೆಯಾಗಿರುವುದರಿಂದ ಇದಕ್ಕೆ ನೀವು ಸೃಜನಾತ್ಮಕವಾಗಿ ಯೋಚಿಸಬೇಕಾಗುತ್ತದೆ. ಸುಳಿವನ್ನು ನೀಡುವುದರಿಂದ ನೀವು ಕೊಂಚ ತಲೆಓಡಿಸಿ ಉತ್ತರವನ್ನು ಹುಡುಕಬೇಕಾಗುತ್ತದೆ. ಸಮಸ್ಯೆಗಳನ್ನು ಪರಿಹರಿಸಲು ನಿಮ್ಮ ವಿಶ್ಲೇಷಣಾತ್ಮಕ ಮತ್ತು ತಾರ್ಕಿಕ ತಾರ್ಕಿಕ ಕೌಶಲ್ಯಗಳನ್ನು ನೀವು ಬಳಸಬೇಕಾಗುತ್ತದೆ.


ಕೋಣೆಯಲ್ಲಿರುವ ರಕ್ತಪಿಶಾಚಿಯನ್ನು 9 ಸೆಕೆಂಡ್‌ಗಳಲ್ಲಿ ಗುರುತಿಸಬಲ್ಲರೇ?


ಐಕ್ಯೂ ಪರೀಕ್ಷಿಸಲು ಒಂದು ಚಿತ್ರವನ್ನು ನೀಡಲಾಗುತ್ತದೆ ಉದಾಹರಣೆಗೆ ರಕ್ತಪಿಶಾಚಿಯನ್ನು ಒಂಭತ್ತು ಸೆಕೆಂಡ್‌ನಲ್ಲಿ ಪತ್ತೆಹಚ್ಚುವ ಟಾಸ್ಕ್ ಅನ್ನು ನೀವು ತೆಗೆದುಕೊಳ್ಳಿ. ಸಾಮಾನ್ಯ ವ್ಯಕ್ತಿಯಂತೆಯೇ ಕಾಣುವ ಯಾರಾದರೂ ರಕ್ತಪಿಶಾಚಿಯ ರೂಪದಲ್ಲಿರುತ್ತಾರೆ. ಹಾಗೂ ಇವರನ್ನು ಕಂಡುಹಿಡಿಯಲು ಏನಾದರೂ ಒಂದು ಸುಳಿವು ಕೂಡ ಚಿತ್ರದಲ್ಲಿ ಇಟ್ಟಿರುತ್ತಾರೆ. ಚಿತ್ರದಲ್ಲಿ ಹಲವಾರು ಜನರನ್ನು ನಾವು ಕಾಣಬಹುದು. ಈ ಜನರು ವಿಭಿನ್ನವಾಗಿ ವರ್ತಿಸುತ್ತಿರುತ್ತಾರೆ ಕೆಲವರು ಮಾತನಾಡುತ್ತಿರುತ್ತಾರೆ ಇನ್ನು ಕೆಲವರು ಆತಂಕದಲ್ಲಿರುತ್ತಾರೆ ಇನ್ನು ಕೆಲವರು ಸೋಫಾದಲ್ಲಿ ಕುಳಿತಿರುತ್ತಾರೆ. ಹಾಗಿದ್ದರೆ ಪಿಶಾಚಿ ಎಲ್ಲಿದೆ? ಹುಡುಕುವುದು ಹೇಗೆ?


ಒಗಟಿಗೆ ಉತ್ತರ ನೀವೇ ಹುಡುಕಲು ಪ್ರಯತ್ನಿಸಿ


ಪಿಶಾಚಿಯನ್ನು ಪತ್ತೆಹಚ್ಚಲು ನೀವು ನೀವು ಚಿತ್ರವನ್ನು ಜಾಗರೂಕವಾಗಿ ನೋಡಬೇಕು ಉತ್ತರ ಸುಲಭವಾಗಿರುತ್ತದೆ ಆದರೆ ನೀವು ಕೊಂಚ ಯೋಚಿಸಬೇಕು. ಆದಷ್ಟು ಉತ್ತರವನ್ನು ನೀವೇ ಕಂಡುಕೊಳ್ಳಲು ಪ್ರಯತ್ನಿಸಿ. ಇದರಿಂದ ನಿಮ್ಮ ಮೆದುಳು ಎಷ್ಟು ಚುರುಕಾಗಿದೆ ಎಂಬುದನ್ನು ಕಂಡುಕೊಳ್ಳಬಹುದಾಗಿದೆ.


ಇದನ್ನೂ ಓದಿ: ಈ ನಾಯಿ ಮನುಷ್ಯರೊಂದಿಗೆ ಹೇಗೆ ವಾಲಿಬಾಲ್ ಆಡ್ತಿದೆ ನೋಡಿ


Can you identify Vampire in Room within 9 seconds
ಸಾಂದರ್ಭಿಕ ಚಿತ್ರ


ನೀವು ಚಿತ್ರದಲ್ಲಿರುವ ಪುರುಷ ಹಾಗೂ ಮಹಿಳೆಯರ ಪ್ರತಿಕ್ರಿಯೆಗಳನ್ನು ವೀಕ್ಷಿಸಿದಾಗ ಯಾರು ಜೀವಂತವಾಗಿಲ್ಲ ಹಾಗೂ ಪಿಶಾಚಿ ಯಾರಾಗಿದ್ದಾರೆ ಎಂಬುದನ್ನು ಗುರುತಿಸಬಹುದಾಗಿದೆ. ಇದಕ್ಕೆ ಉತ್ತರ ಬಲಭಾಗದಲ್ಲಿರುವ ಎರಡನೇ ವ್ಯಕ್ತಿಯೇ ಇಲ್ಲಿ ರಕ್ತಪಿಶಾಚಿ ಎಂಬುದನ್ನು ಕೆಳಗೆ ಸ್ಕ್ರಾಲ್ ಮಾಡಿದಾಗ ನಿಮಗೆ ತಿಳಿಯುತ್ತದೆ. ನೀವು ಆತನನ್ನು ಸರಿಯಾಗಿ ಗಮನಿಸಿದಾಗ ಆತನ ಹಿಂಭಾಗದಲ್ಲಿರುವ ಕನ್ನಡಿಯಲ್ಲಿ ಪ್ರತಿಬಿಂಬ ಕಾಣಿಸುವುದಿಲ್ಲ ಹಾಗೂ ಆತನಿಗೆ ಕೋರೆಹಲ್ಲುಗಳಿರುವುದನ್ನು ನೀವು ಗಮನಿಸಬಹುದು.




ಪಿಶಾಚಿಯನ್ನು ಹೇಗೆ ಪತ್ತೆಹಚ್ಚಲಾಯಿತು?


ಕೊಠಡಿಯಲ್ಲಿರುವ ರಕ್ತಪಿಶಾಚಿ ಯಾರು ಎಂಬುದಕ್ಕೆ ಉತ್ತರ ಕನ್ನಡಿಯಲ್ಲಿ ಪ್ರತಿಬಿಂಬ ಕಾಣಿಸದೇ ಇರುವ ಹಾಗೂ ಕೋರೆಹಲ್ಲುಗಳಿರುವ ವ್ಯಕ್ತಿ ಎಂಬುದು ತಿಳಿಯಿತು. ಹೀಗೆ ಮೆದುಳಿಗೆ ಕೆಲಸ ನೀಡುವ ಮೆದುಳಿನ ಒಗಟು ನಿಮ್ಮ ವೀಕ್ಷಣೆ ಹಾಗೂ ಬುದ್ಧಿವಂತಿಕೆಯ ಮಟ್ಟವನ್ನು ಪರಿಶೀಲಿಸುವ ಸರಳ ಪರೀಕ್ಷೆಯಾಗಿದೆ. ನಿಗದಿತ ಸಮಯದೊಳಗೆ ಇದಕ್ಕೆ ಉತ್ತರವನ್ನು ಪಡೆಯಲು ನೀವು ಕೊಂಚ ಕುಶಾಗ್ರಮತಿಯಾಗಿ ಯೋಚಿಸಬೇಕಾಗುತ್ತದೆ.


ಇದನ್ನೂ ಓದಿ: ಲೇಟಾಗಿ ಬಂದ ಡೆಲಿವರಿ ಬಾಯ್​ಗೆ ಆರತಿ ಎತ್ತಿದ ಗ್ರಾಹಕ, ವಿಡಿಯೋ ನೋಡಿ ಬಿದ್ದು ಬಿದ್ದು ನಕ್ಕ ನೆಟ್ಟಿಗರು!


9 ಸೆಕೆಂಡ್‌ನೊಳಗೆ ಉತ್ತರಿಸುವುದು


ನೀವು 9 ಸೆಕೆಂಡ್‌ಗಳೊಳಗೆ ಈ ಒಗಟನ್ನು ಬಿಡಿಸಿದ್ದರೆ ನೀವು ಸರಾಸರಿ ಐಕ್ಯೂ ಮಟ್ಟವನ್ನು ಹೊಂದಿರುವಿರಿ ಎಂದು ಅರ್ಥ. ಈ ರೀತಿಯ ಮೆದುಳಿನ ಕಸರತ್ತುಗಳು ನಿಮ್ಮ ಐಕ್ಯೂ ಪರೀಕ್ಷಿಸಲು ಮತ್ತೊಂದು ಮೋಜಿನ ಮಾರ್ಗವಾಗಿದೆ. ಹಾಗಾಗಿ ನಿಜವಾದ ಐಕ್ಯೂ ಪರೀಕ್ಷೆಗೆ ಒಳಗೊಳ್ಳುವುದು ನಿಮ್ಮ ಬುದ್ಧಿವಂತಿಕೆಯ ಮಟ್ಟವನ್ನು ತಿಳಿಯಲು ಉತ್ತಮ ಮಾರ್ಗವಾಗಿದೆ.

Published by:Sandhya M
First published: