ಸಾಮಾಜಿಕ ಜಾಲತಾಣಗಳಲ್ಲಿ (Social Media) ನೀವು ಸಾಕಷ್ಟು ಚಾಲೆಂಜ್ಗಳನ್ನು ಸ್ವೀಕರಿಸುತ್ತಿರುತ್ತೀರಿ. ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ (Optical Illusion) ಅಥವಾ ದೃಷ್ಟಿಯ ಭ್ರಮೆಗಳು ಅಂತರ್ಜಾಲದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಇದರ ಮೂಲಕ ಸಾಕಷ್ಟು ಜನರು ತಮ್ಮ ದೃಷ್ಟಿಯ ಕೌಶಲ್ಯಗಳನ್ನು ಪರೀಕ್ಷಿಸಲು ಇಚ್ಛಿಸುತ್ತಾರೆ. ನಮ್ಮ ಮೆದುಳಿಗೆ ಸ್ವಲ್ಪ ಕೆಲಸ ಕೊಟ್ಟು ಇಂಥಹ ದೃಷ್ಟಿಯ ಪರೀಕ್ಷೆ ಮಾಡುವಂಥ ಚಟುವಟಿಕೆಗಳನ್ನು ಹೆಚ್ಚಿನ ಜನರು ಆನಂದಿಸುತ್ತಾರೆ. ಇದು ಸ್ಮಾರ್ಟ್ಫೋನ್ (Smartphone) ಬಳಕೆದಾರರನ್ನು ಇನ್ನಷ್ಟು ಆಕರ್ಷಿಸುತ್ತದೆ ಅಂತಾನೇ ಹೇಳ್ಬಹುದು. ಕೆಲವೊಂದು ಪ್ರಶ್ನೆಗಳು, ಫೋಟೋಗಳು ಇವುಗಳೆಲ್ಲಾ ಒಮ್ಮೊಮ್ಮೆ ತಲೆಗೆ ಭಾರೀ ಕೆಲಸವನ್ನು ಕೊಡುತ್ತದೆ.
ಅಂದಹಾಗೆ ಇಂತಹ ಚಟುವಟಿಕೆಗಳು ತುಂಬಾ ಸುಲಭವಾಗಿಯೇನೂ ಇರುವುದಿಲ್ಲ. ಕೆಲವೊಮ್ಮೆ ಈ ಭ್ರಮೆಗಳನ್ನು ಪರಿಹರಿಸುವುದು ಸುಲಭವಲ್ಲ ಕೂಡ. ಆದ್ರೆ ಸ್ವಲ್ಪ ಕಷ್ಟಪಟ್ಟಾದರೂ ಉತ್ತರವನ್ನು ಕಂಡುಹಿಡಿದಾಗ ನಿಮಗೆ ಖಂಡಿತಾ ಹೆಚ್ಚು ಖುಷಿಯಾಗುತ್ತದೆ.
ಕಪ್ಪು ಬಿಳುಪಿನ ಅಲೆಗಳಂಥ ರೇಖೆಯ ಮಧ್ಯೆ ಮಹಿಳೆ ಮುಖ !
ಈಗಾಗಲೇ ಇಂಥ ಸಾಕಷ್ಟು ಚಟುವಟಿಕೆಗಳು ಇಂಟರ್ನೆಟ್ನಲ್ಲಿ ಹರಿದಾಡುತ್ತಿವೆ. ಇದೀಗ ಮತ್ತೊಂದು ಆಪ್ಟಿಕಲ್ ಭ್ರಮೆ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಈ ದೃಶ್ಯದಲ್ಲಿ ಬಿಳಿ ಮತ್ತು ಕಪ್ಪು ಬಣ್ಣದ ಅಲೆಅಲೆಯಾದ ರೇಖೆಗಳ ಹಿಂದೆ ಒಬ್ಬ ಅಡಗಿಕೊಂಡಿರುವ ಮಹಿಳೆಯ ಮುಖವನ್ನು ಕಂಡುಹಿಡಿಯುವಂಥ ಸವಾಲನ್ನು ನಿಮಗೆ ನೀಡುತ್ತದೆ. ಅಂದಹಾಗೆ ಅಂತರ್ಜಾಲದಲ್ಲಿನ ಕೆಲವು ಆಪ್ಟಿಕಲ್ ಭ್ರಮೆಗಳು ವ್ಯಕ್ತಿತ್ವದ ಲಕ್ಷಣಗಳನ್ನು ಬಹಿರಂಗಪಡಿಸುತ್ತವೆ ಎನ್ನಲಾಗುತ್ತದೆ.
ಸಾಮಾಜಿಕ ತಾಣದಲ್ಲಿ ವೈರಲ್ ಆಗಿರುವ ಚಟುವಟಿಕೆ
ಈಗ ವೈರಲ್ ಆಗಿರುವ ಚಿತ್ರವು ಕಪ್ಪು ಮತ್ತು ಬಿಳಿ ಬಾಗಿದ ರೇಖೆಗಳ ಸಂಯೋಜನೆಯಾಗಿದೆ. ಆದರೆ ಇದರಲ್ಲಿನ ಮುಖವನ್ನು ಕಂಡುಹಿಡಿಯುವುದು ಅಷ್ಟು ಸುಲಭವಲ್ಲ. ಹೆಚ್ಚು ಶಾರ್ಪ್ ಕಣ್ಣುಗಳು ಹಾಗೂ ಹೆಚ್ಚು ಬುದ್ಧಿವಂತರು ಈ ಕಪ್ಪು-ಬಿಳುಪು ಬಾಗಿದ ರೇಖೆಗಳ ನಡುವೆ ಇರುವ ಮುಖವನ್ನು ಗುರುತಿಸಬಹುದು.
ಇನ್ಸ್ಟಾಗ್ರಾಮ್ ಪೋಸ್ಟ್
ಅಂದಹಾಗೆ ಈ ಚಿತ್ರವನ್ನು ಲೀ ವ್ಯಾಗ್ಸ್ಟಾಫ್ ಎಂಬ ಕಲಾವಿದ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ನ ಶೀರ್ಷಿಕೆಯಲ್ಲಿ "ಡೇ ಫಾರ್ ನೈಟ್' (2022) 60 x 80 ಸೆಂ, ಆಯಿಲ್ ಆಂಡ್ ಗೆಸ್ಸೋ ಆನ್ ಕ್ಯಾನ್ವಾಸ್ ಕ್ಯಾನ್ವಾಸ್” ಎಂದು ಬರೆದಿದ್ದಾರೆ.
View this post on Instagram
ಇಷ್ಟಕ್ಕೂ ನೀವು ಇದಕ್ಕೆ ಉತ್ತರವನ್ನು ಹುಡುಕುತ್ತಿದ್ದರೆ, ನೀವು ಚಿತ್ರವನ್ನು ದೂರದಿಂದ ನೋಡಿ. ಆಗ ಅಡಗಿಕೊಂಡಿರುವ ಮಹಿಳೆಯ ಮುಖವನ್ನು ಗುರುತಿಸಬಹುದು. ಆದ್ರೆ ನಿಮಗೆ ಮೊದಲಿಗೆ ಸ್ವಲ್ಪ ತಲೆತಿರುಗುವಂತೆ ಆಗಬಹುದು. ಆದರೆ ನೀವು ಚೆನ್ನಾಗಿ ಗಮನ ಕೇಂದ್ರೀಕರಿಸಿದರೆ ಖಂಡಿತಾ ಮಹಿಳೆಯ ಮುಖವನ್ನು ಗುರುತಿಸಬಹುದು.
ನೀವು ಇನ್ನೂ ಕಷ್ಟಪಡುತ್ತಿದ್ದರೆ, ನೀವು ಬಲ ಅಥವಾ ಎಡಕ್ಕೆ ಓರೆಯಾಗಿ ಚಿತ್ರವನ್ನು ನೋಡಿ. ಆಪ್ಟಿಕಲ್ ಭ್ರಮೆಯಲ್ಲಿ ಮರೆಯಾಗಿರುವ ಮಹಿಳೆಯ ಕಣ್ಣು, ಮೂಗು ಮತ್ತು ಬಾಯಿಯನ್ನು ನೀವು ನೋಡಬಹುದು.
ಇನ್ನು ಕಾಮೆಂಟ್ಗಳ ವಿಭಾಗದಲ್ಲಿ ಅನೇಕ ಬಳಕೆದಾರರು ಅವರು ಮಹಿಳೆಯನ್ನು ಸುಲಭವಾಗಿ ಕಂಡುಹಿಡಿದಿರುವುದಾಗಿ ಹೇಳಿಕೊಂಡಿದ್ದಾರೆ.
ಅವರಲ್ಲಿ ಒಬ್ಬರು “ನಾನು ಮಹಿಳೆಯ ಮುಖವನ್ನು ನೇರವಾಗಿ ನೋಡಿದೆ, ಕಣ್ಣು ಮೂಗು ಮತ್ತು ಬಾಯಿ. ಹೆಚ್ಚಿನ ಜನರು ಮಾಡಿದ್ದಾರೆ ಎಂದು ನನಗೆ ಖಾತ್ರಿಯಿದೆ. ಆದರೆ ಇದು ಐಕ್ಯೂಗೆ ಹೇಗೆ ಸಂಬಂಧಿಸಬಹುದೆಂದು ತಿಳಿದಿಲ್ಲ" ಎಂದಿದ್ದಾರೆ.
ಇನ್ನೊಬ್ಬ ವ್ಯಕ್ತಿ, "ಇದು ತುಂಬಾ ಇಂಟೆರೆಸ್ಟಿಂಗ್ ಆಗಿದೆ ಎಂದಿದ್ದಾರೆ. ಮತ್ತೊಬ್ಬರು ತಾವು ಕೇವಲ ಒಂದು ಸೆಕೆಂಡ್ನಲ್ಲಿ ಮಹಿಳೆ ಮುಖ ಕಂಡುಹಿಡಿದಿದ್ದೇನೆ" ಎಂದು ಕಾಮೆಂಟ್ ಮಾಡಿದ್ದಾರೆ.
ಒಟ್ಟಾರೆ, ಈ ಚಟುವಟಿಕೆಯನ್ನು ಇನ್ನೂ ಹೆಚ್ಚು ಇಂಟೆರೆಸ್ಟಿಂಗ್ ಆಗಿಸಲು ನೀವು 10 ಸೆಕೆಂಡುಗಳ ಟೈಮರ್ ಸೆಟ್ ಮಾಡಿ. ಆಗ ನೀವು ಇನ್ನಷ್ಟು ಏಕಾಗ್ರತೆಯಿಂದ ಈ ಚಟುವಟಿಕೆ ಮಾಡುತ್ತೀರಾ.
ಇದನ್ನೂ ಓದಿ: ಜಿಯೋ 5G ಸೇವೆಯನ್ನು ಬೆಂಬಲಿಸುತ್ತಿಲ್ಲ ಶಿಯೋಮಿಯ ಈ ಎರಡು ಫೋನ್ಗಳು! ಖರೀದಿಸೋ ಮುನ್ನ ಹುಷಾರ್
ಇದು ಸುಲಭವೆನಿಸುತ್ತದೆ ಆದರೆ ಉತ್ತರ ಹುಡುಕಲು ನಿಮ್ಮ ಕಣ್ಣು ಹಾಗೂ ಬುದ್ಧಿ ಕೆಲಸ ಮಾಡಬೇಕಾಗುತ್ತದೆ. ಅಲ್ದೇ ನೀವು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಈ ಭ್ರಮೆಯ ಚಟುವಟಿಕೆಯನ್ನು ಆನಂದಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ