High Court: ಅಕ್ರಮ ಸಂಬಂಧ ಬಯಲುಮಾಡಲು ವೈದ್ಯಕೀಯ ದಾಖಲೆಗಳನ್ನು ಬಳಸುವಂತಿಲ್ಲ

Dharwad bench of Karnataka HC: ಒಂದು ವೇಳೆ ವೈದ್ಯರು ವ್ಯಕ್ತಿಯ ಖಾಸಗೀತನದ ವೈದ್ಯಕೀಯ ದಾಖಲೆಗಳನ್ನು ಬಹಿರಂಗಪಡಿಸಿದರೆ ಅದನ್ನು ಗೌಪ್ಯವಾಗಿಡಿಸಲು ವಿಫಲವಾದರೆ ಖಾಸಗೀತನದ ಮೂಲಭೂತ ಹಕ್ಕನ್ನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ನ್ಯಾಯಮೂರ್ತಿ ಸಂಜಯ್ ಗೌಡ ಅಭಿಪ್ರಾಯಪಟ್ಟರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸಂಗಾತಿಯ ಅಕ್ರಮ ಸಂಬಂಧವನ್ನು(Illegal relationship) ಆತನ ಅಥವಾ ಅವಳ ಖಾಸಗಿ ವೈದ್ಯಕೀಯ ದಾಖಲೆಗಳ(Medical Report) ಮೂಲಕ ಸಾಬೀತು ಪಡಿಸಲಾಗುವುದಿಲ್ಲ ಎಂದು ಕರ್ನಾಟಕದ ಧಾರವಾಡ ಪೀಠ ಕರ್ನಾಟಕ  ಉಚ್ಚ ನ್ಯಾಯಾಲಯ(Dharwad bench of Karnataka HC) ಆದೇಶ ನೀಡಿದೆ. ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಗೌಡ(Sanjay Gowda) ಅವರು ಸಂಗಾತಿಯ ಅಕ್ರಮ ಸಂಬಂಧವನ್ನು ಖಾಸಗಿ ವೈದ್ಯಕೀಯ ದಾಖಲೆಗಳ ಮೂಲಕ ಸಾಬೀತು ಪಡಿಸಲಾಗುವುದಿಲ್ಲಒಂದು ವೇಳೆ ವೈದ್ಯಕೀಯ ದಾಖಲೆಗಳನ್ನು ನೀಡಿದರೆ ವೈದ್ಯ ಹಾಗೂ ರೋಗಿಯಾಗಿ ಗೌಪ್ಯತೆಯ ಸಂಪೂರ್ಣ ಪರಿಕಲ್ಪನೆಯನ್ನು ನಾಶ ಮಾಡಿದಂತೆ ಆಗುತ್ತದೆ. ಅಲ್ಲದೆ ವೈವಾಹಿಕ ವಿವಾದಕ್ಕೆ ವೈದ್ಯರನ್ನು ಎಳೆದು ತಂದಂತೆ ಆಗುತ್ತದೆ ಎಂದು ನ್ಯಾಯಮೂರ್ತಿ ಸಂಜಯ್ ಗೌಡ ಅವರು ಧಾರವಾಡದ ಕೌಟುಂಬಿಕ ನ್ಯಾಯಾಲಯದಲ್ಲಿ ಆದೇಶ ನೀಡಿದ್ದಾರೆ.

    ಏನಿದು ಪ್ರಕರಣ...?

    ಪತ್ನಿಯ ಗರ್ಭಪಾತಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಾಜರು ಪಡಿಸುವಂತೆ ಮತ್ತು ವೈದ್ಯರನ್ನ ಕೊಡಿಸುವಂತೆ ಕೋರಿ ಪತಿಯೊಬ್ಬ ಕೋರ್ಟ್ ಮೆಟ್ಟಿಲೇರಿದ್ದ. ಇದಕ್ಕೆ ಪ್ರತಿಯಾಗಿ ಪತ್ನಿ ಒಬ್ಬ ವ್ಯಕ್ತಿಗೆ ಸೇರಿದ ವೈದ್ಯಕೀಯ ದಾಖಲೆಗಳು ಸಂಪೂರ್ಣ ಖಾಸಗಿಯಾಗಿ ಇರುತ್ತವೆ ಸೇರಿದಂತೆ ಇತರ ಯಾವುದೇ ವ್ಯಕ್ತಿಯಿಂದ ಅದನ್ನು ಪಡೆಯಲು ಸಾಧ್ಯವಿಲ್ಲ ಎಂದು ಮರು ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಗಂಡ ತನ್ನ ಹೆಂಡತಿ ವ್ಯಭಿಚಾರದ ಜೀವನ ನಡೆಸಿ ಗರ್ಭಪಾತ ಮಾಡಿಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದ.. ಪತಿ ಹಾಗೂ ಪತಿಯ ಕಡೆಯವರ ವಾದವನ್ನು ಆಲಿಸಿದ ನ್ಯಾಯಮೂರ್ತಿ ಸಂಜಯ್ ಗೌಡ ಅವರು, ಒಬ್ಬ ವ್ಯಕ್ತಿಗೆ ಸೇರಿದ ವೈದ್ಯಕೀಯ ದಾಖಲೆಗಳು ಸಂಪೂರ್ಣ ಖಾಸಗಿಯಾಗಿ ಇರುತ್ತವೆ ಸೇರಿದಂತೆ ಇತರ ಯಾವುದೇ ವ್ಯಕ್ತಿಯಿಂದ ಅದನ್ನು ಪಡೆಯಲು ಸಾಧ್ಯವಿಲ್ಲ ಅರ್ಜಿಯನ್ನು ಅಂಗೀಕಾರ ಮಾಡಿದ್ದಾರೆ.

    ಇದನ್ನೂ ಓದಿ: ವಿಚ್ಛೇದನ ನೀಡಿ 9999 ವರ್ಷ ದೇಶ ತೊರೆಯದಂತೆ ಆದೇಶ ನೀಡಿದ ಕೋರ್ಟ್

    ಕಾರ್ಯನಿರ್ವಹಣೆಯ ಮಾಡುವ ವೈದ್ಯರಿಗೆ ದಾಖಲೆಗಳನ್ನು ನೀಡುವಂತೆ ನಿರ್ದೇಶಿಸುವ ಅಧಿಕಾರವನ್ನು ಕೇವಲ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಸೂಚನೆ ನೀಡಬೇಕು. ಬಲವಾದ ಕಾರಣಗಳು ಮತ್ತು ಸಾರ್ವಜನಿಕ ಹಿತಾಸಕ್ತಿ ಇದ್ದಾಗ ಮಾತ್ರ ವೈದ್ಯಕೀಯ ದಾಖಲೆಗಳನ್ನು ಬಹಿರಂಗಪಡಿಸುವ ಅಧಿಕಾರವಿರುತ್ತದೆ. ಹೊರತುಪಡಿಸಿ ಬೇರೆ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯ ವೈದ್ಯಕೀಯ ದಾಖಲೆಗಳ ಖಾಸಗಿಯಾಗಿವೆಯೇ ಇರುತ್ತವೆ.ಅದು ಸಾರ್ವಜನಿಕ ಬಳಕೆಗೆ ಬರುವುದಿಲ್ಲ ಎಂದು ನ್ಯಾಯಾಧೀಶರು ಆದೇಶ ನೀಡಿದ್ದಾರೆ.

    ಇದನ್ನೂ ಓದಿ: 35 ವರ್ಷದಲ್ಲಿ ಬರೋಬ್ಬರಿ 400 ಬಾರಿ ಕೋರ್ಟ್‌ ಮುಂದೆ ಹಾಜರಾದ ವೃದ್ಧನಿಗೆ ಕೊನೆಗೂ ಸಿಕ್ತು ಜಯ

    ಒಂದು ವೇಳೆ ವೈದ್ಯರು ವ್ಯಕ್ತಿಯ ಖಾಸಗೀತನದ ವೈದ್ಯಕೀಯ ದಾಖಲೆಗಳನ್ನು ಬಹಿರಂಗಪಡಿಸಿದರೆ ಅದನ್ನು ಗೌಪ್ಯವಾಗಿಡಿಸಲು ವಿಫಲವಾದರೆ ಖಾಸಗೀತನದ ಮೂಲಭೂತ ಹಕ್ಕನ್ನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ನ್ಯಾಯಮೂರ್ತಿ ಸಂಜಯ್ ಗೌಡ ಅಭಿಪ್ರಾಯಪಟ್ಟರು. ಅಲ್ಲದೇ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಬರುವ ಜೀವನದ ಹಕ್ಕುನ್ನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ನ್ಯಾಯಮೂರ್ತಿ ಸಂಜಯ್ ಗೌಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಹೆಂಡತಿ ನನ್ನ ಜೊತೆ ಸಂಸಾರ ಮಾಡಿಯೇ ಇಲ್ಲ ಎಂದು ಆರೋಪಿಸಿದ್ದ ಗಂಡ

    ಇನ್ನು ಇದೇ ಪ್ರಕರಣದಲ್ಲಿ ಕಳೆದ ಎರಡು ವರ್ಷಗಳಿಂದ ಹೆಂಡತಿ ನನ್ನ ಜೊತೆ ಸಂಸಾರ ನಡೆಸಿಲ್ಲ. ಆದರೂ ಆಕೆ ಗರ್ಭಿಣಿಯಾಗಿ ಗರ್ಭಪಾತ ಮಾಡಿಸಿಕೊಂಡಿದ್ದಾಳೆ. ಅಣ್ಣ ಹಾಗೂ ನನ್ನ ಕುಟುಂಬದ ಜೊತೆ ಕ್ರೌರ್ಯದಿಂದ ನಡೆದುಕೊಂಡು ಈಗ ವಿಚ್ಛೇದನದ ಪ್ರಕರಣ ದಾಖಲಿಸುವ ಮೂಲಕ ಜೀವನಾಂಶ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದ. ದಾಗಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಗೌಡ ಅವರು ಪತ್ನಿ ವ್ಯಬಿಚಾರ ನಡೆಸಿ ಕ್ರೌರ್ಯ ಮೆರೆದಿರುವುದು ಕೆರೆ ಆಗಿದ್ದರೆ ಈ ಆರೋಪವನ್ನು ಕಾನೂನಿಗೆ ಗೊತ್ತಿರುವ ರೀತಿಯಲ್ಲಿ ಸಾಕ್ಷಾಧಾರಗಳು ಜೊತೆಗೆ ಸಾಬೀತುಪಡಿಸಬೇಕು. ಈ ಆರೋಪವನ್ನು ಸಮನ್ಸ್ ಮೂಲಕ ಸಾಬೀತುಪಡಿಸಲು ಸಾಧ್ಯವಿಲ್ಲ. ಖಾಸಗಿ ವೈದ್ಯಕೀಯ ದಾಖಲೆಗಳನ್ನ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದ್ದಾರೆ.
    Published by:ranjumbkgowda1 ranjumbkgowda1
    First published: