ಬೋಳು ತಲೆಯವ್ರಿಗೆ ಗುಡ್ ನ್ಯೂಸ್ ! ಪ್ರತಿದಿನ ತಪ್ಪದೇ ಇದನ್ನ ತಿಂದ್ರೆ 100% ಕೂದಲು ಹುಟ್ಟುತ್ತಂತೆ !

ಮೊಟ್ಟೆಯ ಹಳದಿ ಭಾಗವನ್ನು ಕೂದಲಿಗೆ ಹಚ್ಚಬಹುದು ಅಥವಾ ಹಾಗೆಯೇ ಸೇವಿಸಬಹುದು. ಮೊಟ್ಟೆಯ ಹಳದಿ ಭಾಗದಲ್ಲಿರುವ ವ್ಯಾಸ್ಕ್ಯುಲರ್ ಎಂಡೋಥೆಲಿಯಲ್ ಬೆಳವಣಿಗೆಯ ಅಂಶವನ್ನು ಉತ್ತೇಜಿಸಲು ನೆರವಾಗುತ್ತದೆ.

ಬೋಳು ತಲೆ

ಬೋಳು ತಲೆ

  • Share this:

ಅಂದಾಜಿನ ಪ್ರಕಾರ ಸರಿಸುಮಾರು ಮೂರನೇ ಎರಡರಷ್ಟು ಪುರುಷರು ತಮ್ಮ 30ನೇ ವಯಸ್ಸಿನ ಮಧ್ಯಭಾಗದಲ್ಲಿ ತಲೆ ಕೂದಲನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತಾರೆ. ಕೆಲವು ಪುರುಷರು ಬದಲಾವಣೆಯನ್ನು ಸ್ವೀಕರಿಸಿ ತಲೆ ಬೋಳಿಸಿಕೊಳ್ಳಬಹುದು. ಇನ್ನೂ ಕೆಲವರು ಕೂದಲು ಉದುರುವಿಕೆಯನ್ನು ನಿಧಾನಗೊಳಿಸಲು ಚಿಕಿತ್ಸೆ ಪಡೆಯಬಹುದು. ಹಾಗಾದರೆ ಈ ಕೂದಲುದುರುವಿಕೆ ತಡೆಯಲು ಮನೆ ಮದ್ದು ಏನಾದರೂ ಇದೆಯೇ? ನಾವು ಸೇವಿಸುವ ಆಹಾರದಲ್ಲಿ ಇದಕ್ಕೆ ಪರಿಹಾರವಿದೆಯೇ ಎಂದು ಯೋಚಿಸಿದರೆ ಜಪಾನಿನ ಹೊಸ ಸಂಶೋಧನೆಯೊಂದು ಅದ್ಭುತವಾದ ಮಾಹಿತಿಯನ್ನು ಹೊರಹಾಕಿದೆ. ದಿನಕ್ಕೊಂದು ಮೊಟ್ಟೆಯಿಂದ ನಿಮ್ಮ ಕೂದಲುದುರುವಿಕೆಯನ್ನು ನಿಯಂತ್ರಿಸಬಹುದು ಎನ್ನಲಾಗುತ್ತಿದೆ.


ಜರ್ನಲ್ ಆಫ್ ಮೆಡಿಸಿನಲ್ ಫುಡ್​ನಲ್ಲಿ ಪ್ರಕಟವಾದ ಹೊಸ ಸಂಶೋಧನೆಗಳ ಪ್ರಕಾರ ಮೊಟ್ಟೆಯೊಳಗಿರುವ ಹಳದಿ ಭಂಡಾರ ಕೂದಲುದುರುವಿಕೆಗೆ ಮ್ಯಾಜಿಕ್​ನಂತೆ ಕೆಲಸ ಮಾಡುತ್ತದೆ. ಹಳದಿ ಲೋಳೆ ಹೊಸ ಕೂದಲಿನ ಬೆಳವಣಿಗೆಗೆ ಅಗತ್ಯವಾದ ಕೋಶಗಳ ಬೆಳವಣಿಗೆಗೆ ನೆರವಾಗುತ್ತದೆ.


ಮೊಟ್ಟೆಯಿಂದ ಕೂದಲಿನ ಬೆಳವಣಿಗೆ ಹೇಗೆ ಸಾಧ್ಯವೆಂದು ತಿಳಿಯಲು ಜಪಾನಿನ ಚರ್ಮರೊಗ ತಜ್ಞರು ಇಲಿಗಳ ಮೇಲೆ ಪರೀಕ್ಷೆ ನಡೆಸಿದರು. ಜಪಾನಿನ ಚರ್ಮರೋಗ ತಜ್ಞರು ಮನುಷ್ಯರ ಕೂದಲಿನ ಕಿರುಚೀಲಗಳನ್ನು ಇಲಿಗಳಲ್ಲಿ ಅಳವಡಿಸಿದರು. ಈ ಸಂಶೋಧನೆಯಲ್ಲಿ ಮೊಟ್ಟೆಯ ಹಳದಿ ಭಂಡಾರವು ಮಾನವನ ಕೂದಲಿನ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎನ್ನುವ ಚಮತ್ಕಾರಿ ಅಂಶವನ್ನು ಕಂಡುಕೊಂಡಿದ್ದಾರೆ.


ಇದನ್ನೂ ಓದಿ:Rohini Sindhuri: ಟ್ರೋಲ್ ಮಾಡೋಕಂತಲೇ ರೋಹಿಣಿ ಸಿಂಧೂರಿ ಜನ ಇಟ್ಟಿದ್ದಾರೆ; ಡಿ. ರೂಪಾ ಗಂಭೀರ ಆರೋಪ

ಇದು ಹೇಗೆ ಸಾಧ್ಯ?


ಮೊಟ್ಟೆಯ ಹಳದಿ ಭಾಗವನ್ನು ಕೂದಲಿಗೆ ಹಚ್ಚಬಹುದು ಅಥವಾ ಹಾಗೆಯೇ ಸೇವಿಸಬಹುದು. ಮೊಟ್ಟೆಯ ಹಳದಿ ಭಾಗದಲ್ಲಿರುವ ವ್ಯಾಸ್ಕ್ಯುಲರ್ ಎಂಡೋಥೆಲಿಯಲ್ ಬೆಳವಣಿಗೆಯ ಅಂಶವನ್ನು ಉತ್ತೇಜಿಸಲು ನೆರವಾಗುತ್ತದೆ. ಇದು ಮಾನವರಲ್ಲಿ ಕೂದಲಿನ ಬೆಳವಣಿಗೆಗೆ ಬೇಕಾದ ಪ್ರೋಟೀನ್ ಅಂಶವಾಗಿದೆ.


ಈ ಅಧ್ಯಯನದ ಲೇಖಕರು 'ಕೂದಲು ಬೆಳವಣಿಗೆಯನ್ನು ವೃದ್ಧಿಸುವ ಏಜೆಂಟ್' ಎಂದು ಕರೆದಿದ್ದಾರೆ. ಸದ್ಯ ಈ ಸಂಶೋಧನೆ ಆರಂಭಿಕ ಹಂತದಲ್ಲಿದ್ದು, ಕೂದಲುದುರುವಿಕೆ ತಡೆಯುವಲ್ಲಿ ಸಾಕಷ್ಟು ಪರಿಹಾರವನ್ನು ಸೂಚಿಸಿದೆ.


ನೀವು ಪ್ರತಿ ದಿನ ಒತ್ತಡ ಮತ್ತು ಆತಂಕದಲ್ಲಿದ್ದರೆ ಕಾರ್ಟಿಸೋಲ್ - ಒತ್ತಡದ ಹಾರ್ಮೋನ್ ಬೆಳವಣಿಗೆಗೆ ಕಾರಣರಾಗುತ್ತೀರಿ. ಇದು ನಿಮ್ಮ ಕೂದಲಿನ ಕಿರುಚೀಲಗಳನ್ನು ವಿಶ್ರಾಂತಿಗೆ ತಳ್ಳುವ ಮೂಲಕ ಕೂದಲ ಬೆಳವಣಿಗೆ ನಿಲ್ಲಿಸುತ್ತದೆ. ಅದೇ ರೀತಿ ಒತ್ತಡ ಪ್ರತಿಯೊಬ್ಬರಲ್ಲೂ ತಲೆ ಬೋಳಾಗುವುದನ್ನು ಹೆಚ್ಚಿಸುತ್ತದೆ. ಅದರಲ್ಲೂ ಅನುವಂಶೀಯವಾಗಿ ನಿಮ್ಮ ಕುಟುಂಬದಲ್ಲಿ ಅವಧಿಗೂ ಮುನ್ನ ತಲೆ ಕೂದಲು ಬೋಳಾಗುವ ಇತಿಹಾಸವಿದ್ದರೆ ಈ ಸಾಧ್ಯತೆ ಇನ್ನೂ ದಟ್ಟವಾಗುತ್ತದೆ.


ಇದನ್ನೂ ಓದಿ:Anekal: ಲಾಕ್​ಡೌನ್​ ತೆರವಾದರೂ ಚೇತರಿಕೆ ಕಾಣದ ಪುಷ್ಪೋದ್ಯಮ; ಹೂ ಬೆಳೆಗಾರರ ಸಂಕಷ್ಟ ಕೇಳೋರಿಲ್ಲ..!

ಒತ್ತಡದಿಂದ ಸಮಸ್ಯೆ ಉಲ್ಬಣ


ಒತ್ತಡದಿಂದ ಕೂದಲುದುರುವಿಕೆಯಾಗಬಹುದು. ಆನಂತರ ಕೂದಲು ಉದುರುತ್ತಿದೆ ಎಂದು ಇನ್ನಷ್ಟು ಮಾನಸಿಕ ಒತ್ತಡ ಕಿರಿಕಿರಿಯಿಂದ ಈ ಸಮಸ್ಯೆ ಉಲ್ಬಣವಾಗಬಹುದು. ಆದ್ದರಿಂದ ನಿಮ್ಮ ಒತ್ತಡವನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಪ್ರಯತ್ನಿಸಿ. ಅನುವಂಶೀಯವಾಗಿ ಇಲ್ಲವೇ ವಾತಾವರಣದಲ್ಲಿನ ಬದಲಾವಣೆ, ನೀರಿನ ಬದಲಾವಣೆ, ಪೋಷಕಾಂಶಭರಿತ ಆಹಾರದ ಕೊರತೆಗಳೆಲ್ಲವೂ ಕೂದಲುದುರುವಿಕೆಗೆ ಕಾರಣವಾಗಬಹುದು. ಆದರೆ ಸರಿಯಾದ ಆರೈಕೆ ಮೂಲಕ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅದರಲ್ಲೂ ಮೊಟ್ಟೆಯ ಹಳದಿ ಭಾಗ ವರದಾನವಾಗಬಹುದು ಎಂದು ಜಪಾನಿನ ಸಂಶೋಧನೆ ಭರವಸೆ ಹುಟ್ಟು ಹಾಕಿದೆ.


ಪಿಎಲ್​​ಓಎಸ್ ಒನ್​​ನ 2015 ರ ಅಧ್ಯಯನವು ಉನ್ನತ ಮಟ್ಟದ ಹೃದಯರಕ್ತನಾಳದ ಫಿಟ್‌ನೆಸ್ ಹೊಂದಿರುವ ಪುರುಷರನ್ನು ದುರ್ಬಲರೊಂದಿಗೆ ಹೋಲಿಕೆ ಮಾಡಿದಾಗ ಪ್ರತಿದಿನ ಕಡಿಮೆ ಕಾರ್ಟಿಸೋಲ್ (ಶೇಕಡಾ 41 ರಷ್ಟು) ಹೊಂದಿದ್ದಾರೆ. ತೂಕ ಎತ್ತುವುದು +ಕಾರ್ಡಿಯೋ=ಲಿಫ್ಟಿಂಗ್ ಸ್ಪಿರಿಟ್ಸ್ = ಕಡಿಮೆ ಒತ್ತಡ ಎಂದು ಕಂಡುಕೊಂಡಿದೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

Published by:Latha CG
First published: