ಸೌಂದರ್ಯ ಸ್ಪರ್ಧೆಯಲ್ಲಿ ಬೊಟಾಕ್ಸ್ ಪಡೆದ ಒಂಟೆಗಳಿಗೆ ಗೆಟ್​ಔಟ್, ಅವುಗಳಿಗೂ ಸೌಂದರ್ಯ ಪ್ರಜ್ಞೆ!?

ಬ್ರೀಡರ್‍ಗಳು, ಒಂಟೆಗಳ ದೇಹದ ಭಾಗಗಳನ್ನು ಉಬ್ಬಿಸಲು , ರಬ್ಬರ್ ಬ್ಯಾಂಡ್‍ಗಳನ್ನು ಮತ್ತು ಅವುಗಳ ಮುಖವನ್ನು ರಿಲ್ಯಾಕ್ಸ್ ಮಾಡಿಸಲು ಫಿಲ್ಲರ್‌ಗಳನ್ನು ಕೂಡ ಬಳಸಿದ್ದಾರೆ.

ಒಂಟೆ ಉತ್ಸವ

ಒಂಟೆ ಉತ್ಸವ

  • Share this:
ಸೌಂದರ್ಯ ಸ್ಪರ್ಧೆ(Beauty contest) ಎಂದರೆ ಗ್ಲಾಮರ್ (Beauties) ಪ್ರೀಯರ ಕಿವಿ ನೆಟ್ಟಗಾಗುತ್ತದೆ. ರ್ಯಾಂಪ್ ಮೇಲೆ ಕ್ಯಾಟ್‍ವಾಕ್ (catwalk) ಮಾಡಿಕೊಂಡು ಬರುವ ಸುಂದರಿಯರನ್ನು ನೋಡುವುದರ ಖುಷಿಯೇ ಅಂತದ್ದು. ಸೌಂದರ್ಯ ಸ್ಪರ್ಧೆ ನೋಡುಗರ ಕಣ್ಣಿಗೆ ಹಬ್ಬ ಉಂಟು ಮಾಡುತ್ತದೆ ಎಂಬುವುದೇನೋ ನಿಜ, ಆದರೆ ಅದರಲ್ಲಿ ಭಾಗವಹಿಸುವ ರೂಪದರ್ಶಿಗಳು(models) ಅನೇಕ ಕಟ್ಟುನಿಟ್ಟಿನ ಪರೀಕ್ಷೆ ಮತ್ತು ಮಾನದಂಡಗಳ ಮೂಲಕ ಹಾದು, ಭಾಗವಹಿಸುವ ಅರ್ಹತೆಯನ್ನು ಪಡೆದಿರುತ್ತಾರೆ. ಮನುಷ್ಯರು ಮಾತ್ರವಲ್ಲ, ನಾಯಿ, ಬೆಕ್ಕು ಮತ್ತಿತರ ಸೌಂದರ್ಯ ಪ್ರಾಣಿಗಳ ಸೌಂದರ್ಯ(Beautiful animals) ಸ್ಪರ್ಧೆಗೂ ಇದು ಅನ್ವಯಿಸುತ್ತದೆ.

ಒಂಟೆಗಳಿಗೆ ಅಂತದ್ದೇ ಪರಿಸ್ಥಿತಿ
ಸ್ಪರ್ಧೆಯ ನಿಯಮಗಳನ್ನು ಮೀರಿದರೆ ನೇರವಾಗಿ ಸ್ಪರ್ಧೆಯಿಂದ ಹೊರ ನಡೆಯಬೇಕಾಗುತ್ತದೆ. ಇದೀಗ ಸೌದಿ ಅರೇಬಿಯಾದ 40 ಕ್ಕೂ ಹೆಚ್ಚು ಒಂಟೆಗಳಿಗೆ ಅಂತದ್ದೇ ಪರಿಸ್ಥಿತಿ ಬಂದೊದಗಿದೆ. ಹೇಗಂತೀರಾ? ಸೌದಿ ಅರೇಬಿಯಾದ ಅಧಿಕಾರಿಗಳು ತಮ್ಮ ವಾರ್ಷಿಕ ಒಂಟೆ ಸ್ಪರ್ಧೆಯಿಂದ , ಬೊಟೊಕ್ಸ್ ಚುಚ್ಚುಮದ್ದು ಮತ್ತು ಇತರ ಕೃತಕ ಬದಲಾವಣೆಗಳನ್ನು ಮಾಡಿಸಿಕೊಂಡಿರುವ 40ಕ್ಕೂ ಹೆಚ್ಚು ಒಂಟೆಗಳನ್ನು ಅನರ್ಹಗೊಳಿಸಿದ್ದಾರೆ.

ಇದನ್ನೂ ಓದಿ: Saudi Arabia: ಭಾರತೀಯರು ಇನ್ನು ಆರಾಮಾಗಿ ಸೌದಿ ಅರೇಬಿಯಾಗೆ ಹೋಗಿಬರಬಹುದು, ಶೀಘ್ರದಲ್ಲೇ ನಿರ್ಬಂಧ ತೆರವಾಗಲಿದೆ

ಒಂಟೆ ಉತ್ಸವ
ಸೌದಿ ಅರೇಬಿಯಾದ ಜನಪ್ರಿಯಾ ಕಿಂಗ್ ಅಬ್ದುಲ್ ಅಜೀಜ್ ಒಂಟೆ ಉತ್ಸವದಲ್ಲಿ ಅತ್ಯಂತ ಸುಂದರವಾದ ಒಂಟೆಗಳ ಬ್ರೀಡರ್‍ಗಳನ್ನು ತಮ್ಮ ಒಂಟೆಗಳೊಂದಿಗೆ ಸ್ಪರ್ಧೆಗೆ ಆಹ್ವಾನಿಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 66 ಮಿಲಿಯನ್ ಡಾಲರ್ ಬಹುಮಾನ ನೀಡಲಾಗುತ್ತದೆ. ಒಂಟೆಗಳನ್ನು ಇನ್ನಷ್ಟು ಆಕರ್ಷಕವಾಗಿ ಕಾಣಿಸುವಂತೆ ಮಾಡಲು, ಬೊಟೊಕ್ಸ್ ಚುಚ್ಚುಮದ್ದು ಕೊಡಿಸುವುದು, ಫೇಸ್‍ಲಿಫ್ಟ್‌ಗಳು ಮತ್ತು ಇತರ ಸೌಂದರ್ಯವರ್ಧಕ ಬದಲಾವಣೆಗಳನ್ನು ಮಾಡಿಸುವುದಕ್ಕೆ, ಈ ವಾರ್ಷಿಕ ಸ್ಪರ್ಧೆಯಲ್ಲಿ ಕಟ್ಟುನಿಟ್ಟಾಗಿ ನಿಷೇಧ ಹೇರಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಒಂಟೆಗಳ ತಲೆ, ಕುತ್ತಿಗೆ, ಡುಬ್ಬ, ಉಡುಗೆ ಮತ್ತು ಭಂಗಿಗಳ ಆಕಾರದ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.

ವಿಶೇಷ ಮತ್ತು ಸುಧಾರಿತ ತಂತ್ರಜ್ಞಾನ
ಒಂದು ತಿಂಗಳ ಕಾಲ ನಡೆಯುವ ಈ ಉತ್ಸವವು , ಸೌದಿಯ ರಾಜಧಾನಿ ರಿಯಾದ್‍ನ ಈಶಾನ್ಯ ಮರುಭೂಮಿಯಲ್ಲಿ ಈ ತಿಂಗಳ ಮೊದಲ ಭಾಗದಲ್ಲಿ ಆರಂಭವಾಯಿತು. ಬೊಟೊಕ್ಸ್ ಚುಚ್ಚುಮದ್ದು ಕೊಟ್ಟಿರುವುದು, ಫೇಸ್‍ಲಿಫ್ಟ್ ಮಾಡಿಸಿರುವುದು ಮತ್ತಿತರ ಸೌಂದರ್ಯವರ್ಧಕ ಬದಲಾವಣೆಗಳನ್ನು ಮಾಡಿಸಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಸೌಂದರ್ಯ ಸ್ಪರ್ಧೆಯ ತೀರ್ಪುಗಾರರು “ವಿಶೇಷ ಮತ್ತು ಸುಧಾರಿತ” ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ.

ಬೊಟೊಕ್ಸ್ ಚುಚ್ಚು ಮದ್ದು
ಈ ವರ್ಷ ಹಲವಾರು ಒಂಟೆ ಬ್ರೀಡರ್‍ಗಳು, ತಮ್ಮ ಒಂಟೆಗಳ ತುಟಿ ಮತ್ತು ಮೂಗುಗಳನ್ನು ಚಾಚುವಂತೆ ಮಾಡಿಸಿರುವುದು, ಅವುಗಳ ಸ್ನಾಯುಗಳನ್ನು ಹೆಚ್ಚಿಸಲು ಹಾರ್ಮೋನ್‍ಗಳನ್ನು ಬಳಸಿರುವುದು, ಅವುಗಳ ತಲೆ ಮತ್ತು ತುಟಿಗಳನ್ನು ದೊಡ್ಡದಾಗಿ ಮಾಡಲು ಬೊಟೊಕ್ಸ್ ಚುಚ್ಚು ಮದ್ದುಗಳನ್ನು ನೀಡಿರುವುದು ಅಧಿಕಾರಗಳ ಗಮನಕ್ಕೆ ಬಂದಿದೆ. ಬ್ರೀಡರ್‍ಗಳು, ಒಂಟೆಗಳ ದೇಹದ ಭಾಗಗಳನ್ನು ಉಬ್ಬಿಸಲು , ರಬ್ಬರ್ ಬ್ಯಾಂಡ್‍ಗಳನ್ನು ಮತ್ತು ಅವುಗಳ ಮುಖವನ್ನು ರಿಲ್ಯಾಕ್ಸ್ ಮಾಡಿಸಲು ಫಿಲ್ಲರ್‌ಗಳನ್ನು ಕೂಡ ಬಳಸಿದ್ದಾರೆ.

ಇದನ್ನೂ ಓದಿ: ಸೌದಿ ಅರೇಬಿಯಾದ ಗುಹೆಯಲ್ಲಿ ಮೂಳೆಗಳ ರಾಶಿ: ಪುರಾತತ್ವ ಶಾಸ್ತ್ರಜ್ಞರು ಹೇಳೋದು ಹೀಗೆ..!

ವಂಚಕರಿಗೆ ಕಠಿಣ ದಂಡ
“ಒಂಟೆಗಳ ಸೌಂದರ್ಯವರ್ಧಿಸಲು ಬದಲಾವಣೆ ಮತ್ತು ಮೋಸಗಳನ್ನು ಮಾಡುವ ಎಲ್ಲಾ ಕೆಲಸಗಳನ್ನು ನಿಲ್ಲಿಸಲು ಕ್ಲಬ್ ಉತ್ಸುಕವಾಗಿದೆ” ಎಂದು ಸರ್ಕಾರಿ ಸ್ವಾಮ್ಯದ ಸೌದಿ ಪ್ರೆಸ್ ಏಜೆನ್ಸಿ ಹೇಳಿದ್ದು, ಸಂಘಟಕರು “ ವಂಚಕರಿಗೆ ಕಠಿಣ ದಂಡವನ್ನು ವಿಧಿಸುತ್ತಾರೆ” ಎಂದು ತಿಳಿಸಿದೆ.ಒಂಟೆ ಉತ್ಸವವು, ಒಂಟೆಗಳ ಓಟ, ಮಾರಾಟ ಮತ್ತು ಇತರ ಹಬ್ಬಗಳನ್ನು ಸಹ ಒಳಗೊಂಡಿರುತ್ತದೆ. ಈ ಉತ್ಸವವು ಸಾಮ್ರಾಜ್ಯದ ಬೆಡೋಯಿನ್ ಸಂಪ್ರದಾಯ ಮತ್ತು ಪರಂಪರೆಯಲ್ಲಿ ಒಂಟೆಗಳ ಪಾತ್ರವನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ.ಒಂಟೆ ಬ್ರೀಡಿಂಗ್ ಬಹು ಮಿಲಿಯನ್ ಡಾಲರ್ ಉದ್ಯಮವಾಗಿದೆ ಮತ್ತು ಇದೇ ರೀತಿಯ ಸಮಾರಂಭಗಳು ಆ ಪ್ರದೇಶದಾದ್ಯಂತ ನಡೆಯುತ್ತವೆ.
Published by:vanithasanjevani vanithasanjevani
First published: