ಕನಸಲ್ಲೊಂದು ನಿಶ್ಚಿತಾರ್ಥ: ಕಳ್ಳರಿಂದ ಉಂಗುರ ಉಳಿಸಲು ಹೋಗಿ ಆಸ್ಪತ್ರೆ ಸೇರಿದ ಮಹಿಳೆ..!

ಕ್ಯಾಲಿಫೋರ್ನಿಯಾದ ನಿವಾಸಿ ಜೆನ್ನಾ ಇವಾನ್ಸ್​ ಸುಂದರ ಸ್ವಪ್ನ ಕಂಡಿದ್ದರು. ಈ ಕನಸಿನಲ್ಲಿ ಭಾವಿ ಪತಿಯೊಂದಿಗೆ ಜೆನ್ನಾ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು.

zahir | news18-kannada
Updated:September 17, 2019, 1:25 PM IST
ಕನಸಲ್ಲೊಂದು ನಿಶ್ಚಿತಾರ್ಥ: ಕಳ್ಳರಿಂದ ಉಂಗುರ ಉಳಿಸಲು ಹೋಗಿ ಆಸ್ಪತ್ರೆ ಸೇರಿದ ಮಹಿಳೆ..!
ಎಕ್ಸ್​ರೇ
  • Share this:
ಮದುವೆ ಬಗ್ಗೆ ಸುಂದರ ಕನಸುಗಳನ್ನು ಕಟ್ಟಿಕೊಳ್ಳುತ್ತೇವೆ. ಆದರೆ ಮದುವೆಯೇ, ನಿಶ್ಚಾರ್ಥಗಳು ಕೂಡ ಕನಸಾದರೆ? ತುಸು ವಿಚಿತ್ರ ಎನಿಸಿದರೂ ಇಂತಹದೊಂದು ಘಟನೆ ದೂರದ ಅಮೆರಿಕದಲ್ಲಿ ನಡೆದಿದೆ.

ಕ್ಯಾಲಿಫೋರ್ನಿಯಾದ ನಿವಾಸಿ ಜೆನ್ನಾ ಇವಾನ್ಸ್​ ಸುಂದರ ಸ್ವಪ್ನ ಕಂಡಿದ್ದರು. ಈ ಕನಸಿನಲ್ಲಿ ಭಾವಿ ಪತಿಯೊಂದಿಗೆ ಜೆನ್ನಾ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ಆದರೆ ಥೇಟ್ ಸಿನಿಮಾ ಸ್ಟೈಲ್​ನಲ್ಲಿ ಇದ್ದಕ್ಕಿದ್ದಂತೆ ವಿಲನ್​ಗಳು ಎಂಟ್ರಿಯಾಗಿದ್ದರು.

ರೈಲಿನಲ್ಲಿ ಕಳ್ಳರ ಗುಂಪೊಂದು ಈ ಜೋಡಿಗೆ ಎದುರಾಗಿದೆ. ಈ ವೇಳೆ ನಿಶ್ಚಾರ್ಥದಲ್ಲಿ ಹಾಕಿದ ವಜ್ರದ ಉಂಗುರವನ್ನು ರಕ್ಷಿಸಲು ಜೆನ್ನಾ ಅದನ್ನು ನುಂಗಿದ್ದಾಳೆ. ಆದರೆ ಬೆಳಿಗ್ಗೆ ಎದ್ದು ನೋಡಿದಾಗ ಬೆರಳಿನಲ್ಲಿ ಎಂಗೇಜ್ಮೆಂಟ್ ರಿಂಗ್ ಕಾಣಿಸಲಿಲ್ಲ.

ತಕ್ಷಣ ಎಚ್ಚೆತ್ತ ಜೆನ್ನಾ ರಾತ್ರಿಯ ಕನಸನ್ನು ರಿವೈಂಡ್ ಮಾಡಿಕೊಂಡಿದ್ದಾರೆ. ಆಗಲೇ ಕನಸಿನಲ್ಲಿ ಬೆರಳಲಿದ್ದ ಉಂಗುರ ನುಂಗಿರುವುದು ಗೊತ್ತಾಗಿದೆ. ಕೂಡಲೇ ಆಸ್ಪತ್ರೆ ಸೇರಿದ ಆಕೆ ಎಕ್ಸ್​ರೇ ಮೂಲಕ ಪರೀಕ್ಷಿಸಿದರು. ಎಕ್ಸ್​ರೇ ಸ್ಕ್ಯಾನ್​ನಲ್ಲಿ ಇವಾನ್ಸ್ ಅವರ ಹೊಟ್ಟೆಯಲ್ಲಿ 2.4 ಕ್ಯಾರೆಟ್​ನ ಉಂಗುರ ಇರುವುದು ಬೆಳಕಿಗೆ ಬಂದಿದೆ.

ಎಕ್ಸ್​ರೇ ನಲ್ಲಿ ಕಾಣಿಸುತ್ತಿರುವ ರಿಂಗ್


ಇದೀಗ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಉಂಗುರವನ್ನು ಹೊರತೆಗೆದಿದ್ದಾರೆ. ಈ ಬಗ್ಗೆ ಮಹಿಳೆ ಫೇಸ್​ ಬುಕ್​ನಲ್ಲಿ ತಮ್ಮ ಕನಸಿನ ಕಥೆಯನ್ನು ಹಂಚಿಕೊಂಡಿದ್ದು, ಈ ಪೋಸ್ಟ್ ಭಾರೀ ವೈರಲ್ ಆಗಿದೆ.

ಜೆನ್ನಾ
ಇದನ್ನೂ ಓದಿ: ಸೌತ್ ಸಿನಿರಂಗದ ಸ್ಟಾರ್ ನಟನ ಮುದ್ದಿನ ಮಡದಿ ಯುವರತ್ನನ ಯುವರಾಣಿ..!
First published:September 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading