HOME » NEWS » Trend » CALIFORNIA WOMAN ACCIDENTALLY DESTROYS HER WINING LOTTERY TICKET IN LAUNDRY STG SESR

ಕೈಗೆ ಬಂದ ತುತ್ತು ಬಾಯಿಗಿಲ್ಲ; ಲಾಟರಿಯಲ್ಲಿ ಕೋಟಿ ರೂ ಜಾಕ್​ಪಾಟ್​; ಟಿಕೆಟ್​ ಕಳೆದುಕೊಂಡು ಕಂಗಾಲಾದ ಮಹಿಳೆ

ಟಿಕೆಟ್ ಅನ್ನು ತನ್ನ ಪ್ಯಾಂಟ್ ಜೇಬಿ‌ನಲ್ಲಿಟ್ಟಿದ್ದು, ಅದನ್ನು ಮರೆತು  ಲಾಂಡ್ರಿಗೆ ಹಾಕಿದ್ದಾರೆ. ಟಿಕೆಟ್​ ಸಂಪೂರ್ಣ ಹಾಳಾಗಿದ್ದು,  ಟಿಕಟ್​ ಇಲ್ಲದೇ ಪರಿತಪಿಸುತ್ತಿದ್ದಾರೆ

news18-kannada
Updated:May 15, 2021, 10:12 PM IST
ಕೈಗೆ ಬಂದ ತುತ್ತು ಬಾಯಿಗಿಲ್ಲ; ಲಾಟರಿಯಲ್ಲಿ ಕೋಟಿ ರೂ ಜಾಕ್​ಪಾಟ್​; ಟಿಕೆಟ್​ ಕಳೆದುಕೊಂಡು ಕಂಗಾಲಾದ ಮಹಿಳೆ
ಸಾಂದರ್ಭಿಕ ಚಿತ್ರ
  • Share this:
26 ಮಿಲಿಯನ್ ಡಾಲರ್ ಹಣವನ್ನು ಲಾಟರಿಯಲ್ಲಿ ಗೆದ್ದ ಕ್ಯಾಲಿಫೋರ್ನಿಯಾ ಮಹಿಳೆ ತಾವೇ ಸ್ವತಃ ತಮ್ಮ ಕೈಯಾರೆ ಆ ಅದೃಷ್ಟವನ್ನು ಲಾಂಡ್ರಿಯಲ್ಲಿ ಒಗೆದು ಒಣಗಿ ಹಾಕಿದ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಆ ಮೂಲಕ ಕೈಗೆ ಬಂದ ತುತ್ತು ಬಾಯಿಗೆ ಬರದೇ ಕೈ ಕೈ ಹಿಸುಕಿಕೊಳ್ಳುವ ಪರಿಸ್ಥಿತಿ ಮಹಿಳೆಯದ್ದಾಗಿದೆ. ನವೆಂಬರ್ 14 ರ ವಿನ್ನಿಂಗ್ ಸೂಪರ್ ಲೊಟ್ಟೊ ಪ್ಲಸ್ ಟಿಕೆಟನ್ನು ಲಾಸ್ ಏಂಜಲೀಸ್ ಉಪನಗರ ನಾರ್ವಾಕ್‌ನಲ್ಲಿರುವ ಆರ್ಕೊ ಎಎಮ್/ಪಿಎಂ ಅಂಗಡಿಯಲ್ಲಿ ಮಾರಾಟ ಮಾಡಲಾಯಿತು. ಗುರುವಾರ ಅದನ್ನು ರಿದೀಮ್ ಮಾಡಿಕೊಳ್ಳಲು ಕಡೆಯ ದಿನವಾಗಿತ್ತು. ಆದರೆ ಯಾರು ಕೂಡ ಅದನ್ನು ರಿಡೀಮ್ ಮಾಡಿಕೊಳ್ಳಲಿಲ್ಲ.

ಸ್ಟೋರ್‌ನ ಉದ್ಯೋಗಿ ಎಸ್ಪೆರಾನ್ಜಾ ಹರ್ನಾಂಡೆಜ್ Whittier Daily News ಜೊತೆಗೆ ಮಾತನಾಡಿ, 'ನಮ್ಮ ಸ್ಟೋರ್‌ಗೆ ಬುಧವಾರ ಮಹಿಳೆಯೊಬ್ಬರು ಬಂದು ಸಿಬ್ಬಂದಿಯೊಟ್ಟಿಗೆ ಮಾತನಾಡಿದ್ದಾರೆ. ಟಿಕೆಟ್ ಅನ್ನು ತನ್ನ ಪ್ಯಾಂಟ್ ಜೇಬಿ‌ನಲ್ಲಿಟ್ಟಿದ್ದು, ಅದನ್ನು ಮರೆತು  ಲಾಂಡ್ರಿಗೆ ಹಾಕಿದ್ದಾರೆ. ಟಿಕೆಟ್​ ಸಂಪೂರ್ಣ ಹಾಳಾಗಿದ್ದು,  ಟಿಕಟ್​ ಇಲ್ಲದೇ ಪರಿತಪಿಸುತ್ತಿದ್ದಾರೆ ಎಂದಿದ್ದಾರೆ

ಸ್ಟೋರ್ ಮ್ಯಾನೇಜರ್ KTLA-TV ಜೊತೆಗೆ ಮಾತನಾಡಿ, 'ಸಿಸಿಟಿವಿ ವಿಡಿಯೋದಲ್ಲಿ ಈ ಮಹಿಳೆ ಲಾಟರಿ ಟಿಕೆಟ್ ತೆಗೆದುಕೊಂಡಿದ್ದಾರೆ. ಅಲ್ಲದೇ ಸ್ಟೋರ್ ಸಿಬ್ಬಂದಿಯೂ ಕೂಡ ಆಕೆಯನ್ನು ಗುರುತಿಸಿದ್ದಾರೆ. ಸದ್ಯ ಈ ಸಿಸಿಟಿವಿ ವಿಡಿಯೋವನ್ನು ಕ್ಯಾಲಿಫೋರ್ನಿಯಾ ಲಾಟರಿ ಅಧಿಕಾರಿಗಳಿಗೆ ನೀಡಲಾಗಿದೆ' ಎಂದು ಹೇಳಿದರು.

'ಇದರೊಟ್ಟಿಗೆ ಈ ಲಾಟರಿ ಹಕ್ಕನ್ನು ಪ್ರತಿಪಾದಿಸುವುದರ ಬಗ್ಗೆ ತನಿಖೆ ನಡೆಸಲಾಗುವುದು' ಎಂದು ಲಾಟರಿ ವಕ್ತಾರೆ ಕ್ಯಾಥಿ ಜಾನ್ಸ್ಟನ್ ತಿಳಿಸಿದರು.

ಇದನ್ನು ಓದಿ: ಬಸವಜಯಂತಿಯಂದು ಹೊಸ ಅತಿಥಿಗಳನ್ನು ಸ್ವಾಗತಿಸಿದ ನಿಖಿಲ್​ ದಂಪತಿ

ಲಾಟರಿ ಅಧಿಕಾರಿಗಳು ಮಾತನಾಡಿ, 'ಅವನು ಅಥವಾ ಅವಳು ಯಾರಾದರೂ ಆಗಿರಲಿ, ವಿಜೇತರು ಒಂದು ಕ್ಲೈಂ ಅರ್ಜಿಯನ್ನು ತುಂಬಬೇಕು. ಒಂದು ವೇಳೆ ಟಿಕೆಟ್ ಕಳೆದುಕೊಂಡರೆ, ಅವರು ಅದನ್ನು ಹೊಂದಿದ್ದರು ಎನ್ನುವುದನ್ನು ಸಾಕ್ಷೀಕರಿಸುವ ಪುರಾವೆಯನ್ನು ನೀಡಬೇಕು. ಅದು ಲಾಟರಿ ಟಿಕೆಟ್‌ನ ಮುಂಭಾಗ ಮತ್ತು ಹಿಂಭಾಗದ ಫೋಟೋ ಆಗಿರಬಹುದು' ಎಂದು ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟರು.

ಇನ್ನು ಬಹುಮಾನ ಪಡೆದುಕೊಂಡ ಲಾಟರಿ ಸಂಖ್ಯೆ ಈ ರೀತಿ ಇದೆ 23, 36, 12, 31, 13 ಮತ್ತು ಮೆಗಾ ನಂಬರ್ 10 ಆಗಿದೆ. 26 ಮಿಲಿಯನ್ ಡಾಲರ್ ಬಹುಮಾನವನ್ನು ವಾರ್ಷಿಕ ಕಂತುಗಳಲ್ಲಿ ತೆಗೆದುಕೊಳ್ಳಬಹುದು. ಇಲ್ಲವೇ 19.7 ಮಿಲಿಯನ್ ಡಾಲರ್ ನಗದು ಹಣವಾಗಿ ತೆಗೆದುಕೊಳ್ಳಬಹುದಾಗಿದೆ.ಒಂದು ವೇಳೆ ಬಹುಮಾನದ ಹಣ ಕ್ಲೈಮ್ ಆಗದಿದ್ದರೆ, 19.7 ಡಾಲರ್ ಹಣವೂ ಕ್ಯಾಲಿಫೋರ್ನಿಯಾ ಪಬ್ಲಿಕ್ ಶಾಲೆಗೆ ತಲುಪುತ್ತದೆ. ಯಾವ ಸ್ಟೋರ್ ಈ ಟಿಕೆಟ್ ಅನ್ನು ಮಾರಾಟ ಮಾಡಿತ್ತೋ ಅದು 130,000 ಡಾಲರ್ ಬೋನಸ್ ಪಡೆದುಕೊಳ್ಳುತ್ತದೆ.

'ಈ ರೀತಿಯಾದ ದೊಡ್ಡ ಜಾಕ್ಪಾಟ್ ಹಣ ಕ್ಲೈಂ ಆಗದೇ ಉಳಿಯುವುದು ಹೊಸ ವಿಷಯವೇನಲ್ಲ.1997 ರಿಂದ ಇಲ್ಲಿಯವರೆಗೆ 20 ಮಿಲಿಯನ್ ಡಾಲರ್‌ನ 4 ಬಹುಮಾನಗಳು ಅಥವಾ ಅದಕ್ಕಿಂತಲೂ ಹೆಚ್ಚಿನ ಬಹುಮಾನಗಳು, 2015 ರಿಂದ 63 ಮಿಲಿಯನ್ ಡಾಲರ್ ಬಹುಮಾನ ಕ್ಲೈಂ ಆಗದೇ ಹಾಗೇ ಉಳಿದಿದೆ' ಎಂದು ಲಾಟರಿ ವಕ್ತಾರ ಜಾರ್ಜ್ ಡಿ ಲಾ ಕ್ರೂಜ್ ಲಾಸ್ ಏಂಜಲೀಸ್ ಟೈಮ್ಸ್‌ಗೆ ತಿಳಿಸಿದರು.
Published by: Seema R
First published: May 15, 2021, 10:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories