Wildfires: ಕ್ಯಾಲಿಫೋರ್ನಿಯಾ ಕಾಡ್ಗಿಚ್ಚಿನಿಂದ ಪ್ರಸಿದ್ಧ ದೈತ್ಯ ಸೆಕ್ವಿಯಾಸ್ ಮರಗಳಿಗೆ ಅಪಾಯದ ಭೀತಿ!

ಸಿಕ್ವೊಯಾ ನ್ಯಾಶನಲ್ ಪಾರ್ಕ್‌ನಲ್ಲಿ ಸಂಭವಿಸಿದ ಎರಡು ಕಾಡ್ಗಿಚ್ಚುಗಳಲ್ಲಿ ಒಂದಾದ ಕೊಲೊನಿ ಬೆಂಕಿ ಅವಘಡವು ದೈತ್ಯ ಅರಣವನ್ನು ತಲುಪಲಿದೆ ಎಂಬುದಾಗಿ ಊಹಿಸಲಾಗಿದ್ದು ಈ ಅರಣ್ಯವು 2,000 ಸೆಕ್ವಿಯಾಸ್ ತೋಪುಗಳನ್ನು ಹೊಂದಿದೆ.

California

California

  • Share this:
ಕ್ಯಾಲಿಫೋರ್ನಿಯಾದ ಸಿಯೆರಾ ನೆವಾಡಾದಲ್ಲಿ ಕಾಡ್ಗಿಚ್ಚಿನಿಂದ ಅಕ್ಷರಶಃ ಹೊತ್ತಿ ಉರಿಯುತ್ತಿದ್ದ ವಿಶ್ವದ ಅತಿದೊಡ್ಡ ಮರ ಸೆಕ್ವಿಯಾಸ್ ಅನ್ನು ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾರೆ ಎಂದು ಅಗ್ನಿಶಾಮಕ ದಳದ ವಕ್ತಾರ ರೆಬೆಕಾ ಪ್ಯಾಟರ್ಸ್ ತಿಳಿಸಿದ್ದು ಸಿಕ್ವೊಯಾ ನ್ಯಾಷನಲ್ ಪಾರ್ಕ್‌ನ ದೈತ್ಯ ಅರಣ್ಯದಲ್ಲಿರುವ ಬೃಹತ್ ಶೆರ್ಮನ್ ಮರ, ಇತರ ಕೆಲವು ಸೆಕ್ವಿಯಾಗಳು, ಅದೇ ರೀತಿ ದೈತ್ಯ ಕಾಡಿನ ಮ್ಯೂಸಿಯಂ ಹಾಗೂ ಇತರ ಕಟ್ಟಡಗಳನ್ನು ಬೆಂಕಿಯ ಜ್ವಾಲೆಯಿಂದ ಸಂರಕ್ಷಿಸುತ್ತಿರುವುದಾಗಿ ತಿಳಿಸಿದ್ದಾರೆ.

ಅಲ್ಯುಮಿನಿಯಂ ಕವಚದ ಸಂರಕ್ಷಣೆಯು ಅಲ್ಪಕಾಲದವರೆಗೆ ಬೆಂಕಿಯ ಶಾಖವನ್ನು ತಡೆದುಕೊಳ್ಳಬಹುದಾಗಿದ್ದು ಜ್ಞಾಲೆಯ ಕಿಡಿಗಳಿಂದ ಸಂರಕ್ಷಣೆ ಹೊಂದಲು ಹಲವಾರು ವರ್ಷಗಳಿಂದ ಈ ವಸ್ತುವನ್ನು ಬಳಸುತ್ತಿರುವುದಾಗಿ ಫೆಡರಲ್ ಅಧಿಕಾರಿಗಳು ತಿಳಿಸಿದ್ದಾರೆ. ತಾಹೋ ಸರೋವರದ ಬಳಿ ಕೆಲವೊಂದು ಮನೆಗಳನ್ನು ಸುರಕ್ಷಿತ ಮೆಟೀರಿಯಲ್‌ನಿಂದ ಸುತ್ತವರಿಯಲಾಗಿದ್ದು ಇತ್ತೀಚಿನ ಕಾಡ್ಗಿಚ್ಚಿನಿಂದ ಈ ಮನೆಗಳನ್ನು ರಕ್ಷಿಸಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.

ಸಿಕ್ವೊಯಾ ನ್ಯಾಶನಲ್ ಪಾರ್ಕ್‌ನಲ್ಲಿ ಸಂಭವಿಸಿದ ಎರಡು ಕಾಡ್ಗಿಚ್ಚುಗಳಲ್ಲಿ ಒಂದಾದ ಕೊಲೊನಿ ಬೆಂಕಿ ಅವಘಡವು ದೈತ್ಯ ಅರಣವನ್ನು ತಲುಪಲಿದೆ ಎಂಬುದಾಗಿ ಊಹಿಸಲಾಗಿದ್ದು ಈ ಅರಣ್ಯವು 2,000 ಸೆಕ್ವಿಯಾಸ್ ತೋಪುಗಳನ್ನು ಹೊಂದಿದೆ. ಗುರುವಾರ ರಾತ್ರಿಯೇ ಇದು ಸಂಭವಿಸಿದೆಯೇ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೊಗೆಯು ಬೆಂಕಿಯ ಹರಡುವಿಕೆಯನ್ನು ಇಳಿಕೆ ಮಾಡಿದ್ದರಿಂದ ಬೆಂಕಿಯು ಅರಣ್ಯವನ್ನು ಸುತ್ತುವರಿಯಲಿಲ್ಲವೆಂದು ಅಗ್ನಿಶಾಮಕ ದಳದ ವಕ್ತಾರರಾದ ಕೇಟಿ ಹೂಪರ್ ತಿಳಿಸಿದ್ದಾರೆ.ಎತ್ತರದ ಹಾಗೂ ಸಾವಿರಾರು ವರ್ಷ ಹಳೆದಾದ ಸೆಕ್ವಿಯಾಸ್ ಮರಗಳನ್ನು ಕಳೆದ ವರ್ಷದ ಕಾಡ್ಗಿಚ್ಚು ಸಂಪೂರ್ಣವಾಗಿ ಭಸ್ಮಮಾಡಿದ್ದನ್ನು ಅಧಿಕಾರಿಗಳು ನೆನಪಿಸಿಕೊಂಡರು. ನ್ಯಾಶನಲ್ ಪಾರ್ಕ್ ಸರ್ವೀಸ್ ಪ್ರಕಾರ ಜನರಲ್ ಶೆರ್ಮನ್ ಮರವು ವಿಶ್ವದಲ್ಲಿಯೇ ಅತಿದೊಡ್ಡದಾಗಿದ್ದು 52,508 ಕ್ಯೂಬಿಕ್ ಫೀಟ್ ಎತ್ತರವನ್ನು ಹೊಂದಿದೆ. ಇದು 275 ಅಡಿ ಎತ್ತರವಾಗಿದೆ ಹಾಗೂ ನೆಲ ಮಟ್ಟದಲ್ಲಿ 103 ಅಡಿ (31 ಮೀಟರ್) ಸುತ್ತಳತೆಯನ್ನು ಹೊಂದಿದೆ.

ಸಿಕ್ವೊಯಾ ಮತ್ತು ಕಿಂಗ್ಸ್ ಕ್ಯಾನ್ಯನ್ ರಾಷ್ಟ್ರೀಯ ಉದ್ಯಾನವನಗಳ ಮೇಲ್ವಿಚಾರಕ ಕ್ಲೇ ಜೋರ್ಡಾನ್ ಹೇಳುವಂತೆ ವಿಶ್ವದ ಬೃಹತ್ ಮರಗಳನ್ನು ಸಂರಕ್ಷಿಸುವ ಅಗ್ನಶಾಮಕ ದಳದ ಮಹತ್ವವನ್ನು ಸಾರಿದ್ದಾರೆ. ಬೃಹತ್ ಮರಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಇತರ ಪ್ರಕಾರಗಳ ಮರಗಳನ್ನು ತೆಗೆದುಹಾಕಲಾಗಿದೆ ಇಲ್ಲದಿದ್ದರೆ ಬೆಂಕಿಯ ಕೆನ್ನಾಲಿಗೆ ಇನ್ನಷ್ಟು ಪ್ರಖರವಾಗಿ ಹರಡಿಕೊಳ್ಳುವ ಸಂಭವವಿರುತ್ತದೆ. ಇದರಿಂದ ಬೃಹತ್ ಮರಗಳನ್ನು ಬೆಂಕಿಯ ಜ್ಞಾಲೆಗಳು ಸಮೀಪಿಸದಂತೆ ತಡೆಗಟ್ಟಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ ⇒Social media: 14 ವರ್ಷಗಳ ಬಳಿಕ ಸಾಮಾಜಿಕ ಮಾಧ್ಯಮದ ಮೂಲಕ ಒಂದಾದ ತಾಯಿ-ಮಗಳು!ದೈತ್ಯ ಸೆಕ್ವಿಯಾಸ್‌ಗಳು ಶಂಕುಗಳಿಂದ ಬೀಜಗಳನ್ನು ಬಿಡುಗಡೆ ಮಾಡುವ ಮೂಲಕ ಯುವ ಸೆಕ್ವಿಯಾಸ್‌ಗಳ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ. ಬೆಂಕಿಯ ಅಸಾಧಾರಣೆ ತೀವ್ರತೆಯು ಹವಾಮಾನ ಬದಲಾವಣೆಯಿಂದ ಉಂಟಾಗಿದೆ ಇದು ಮರಗಳನ್ನು ನಾಶಮಾಡಬಹುದು ಎಂದು ತಿಳಿಸಿದ್ದಾರೆ. ಕಳೆದ ವರ್ಷದ ಬೆಂಕಿಯು 7,500 ರಿಂದ 10,600 ವರೆಗಿನ ಬೃಹತ್ ಸೆಕ್ವಿಯಾಸ್‌ಗಳನ್ನು ಆಹುತಿ ತೆಗೆದುಕೊಂಡಿದೆ ಎಂದು ನ್ಯಾಶನಲ್ ಪಾರ್ಕ್ ಸರ್ವೀಸ್ ಅಂದಾಜಿಸಿದೆ.
First published: