Viral News; ಕೆಲವೇ ನಿಮಿಷಗಳಲ್ಲಿ 5 ಕೋಟಿ ಗಳಿಸಿದ ವ್ಯಕ್ತಿ: ಹೇಗೆ ಗೊತ್ತಾ?

ಕೆಲವೇ ನಿಮಿಷಗಳಲ್ಲಿ ಕೋಟಿ ಗಳಿಸುವುದು ಸಾಧ್ಯನಾ ಅಂತ ನೀವು ಕೇಳಬಹುದು. ಅದಕ್ಕೆ ಉತ್ತರ ಹೌದು. ಇಲ್ಲೋರ್ವ ಕಲಾವಿದ (Artist) ಸುಮಾರು 30 ನಿಮಿಷದಲ್ಲಿ ಕೋಟಿ ಕೋಟಿ ಸಂಪಾದಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಡೀ ಜಗತ್ತು (World) ಹಣದ (Money) ಹಿಂದೆ ಸಂಚರಿಸುತ್ತಿದೆ. ಇಂದು ಹಣ ಕೊಟ್ಟರೆ ಎಲ್ಲ ಸಿಗುವ ಕಾಲ. ನೆಮ್ಮದಿಯ ಜೀವನ (Life) ನಡೆಸಲು ಹಣ ಪ್ರಮುಖ ಪಾತ್ರವಹಿಸುತ್ತದೆ. ಇದರಿಂದ ಜನರು ಹೆಚ್ಚು ಹೆಚ್ಚು ಹಣ ಸಂಪಾದಿಸುವ (Money Earning) ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಇನ್ನೂ ಎಷ್ಟೋ ಜನರು ಆರ್ಥಿಕವಾಗಿ (Financially) ಸಬಲರಾಗಲು ಒಳ್ಳೆಯ ಉದ್ಯೋಗ(Jobs)ಗಳನ್ನು ತೊರೆದು ವ್ಯವಹಾರ(Business)ದತ್ತ ಮುಖ ಮಾಡುತ್ತಿದ್ದಾರೆ. ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸೋದು ಹೇಗೆ ಅಂತ ಜನರು ಗೂಗಲ್ (Google) ಮೊರೆ ಹೋಗುತ್ತಾರೆ. ಕೆಲವೇ ನಿಮಿಷಗಳಲ್ಲಿ ಕೋಟಿ ಗಳಿಸುವುದು ಸಾಧ್ಯನಾ ಅಂತ ನೀವು ಕೇಳಬಹುದು. ಅದಕ್ಕೆ ಉತ್ತರ ಹೌದು. ಇಲ್ಲೋರ್ವ ಕಲಾವಿದ (Artist) ಸುಮಾರು 30 ನಿಮಿಷದಲ್ಲಿ ಕೋಟಿ ಕೋಟಿ ಸಂಪಾದಿಸಿದ್ದಾರೆ. ಆದ್ರೆ ಈ ಕಲಾವಿದನಿಗೆ ಯಾವುದೇ ಲಾಟರಿ(lottery)ಯಲ್ಲಿ ಹಣ ಸಿಕ್ಕಿಲ್ಲ. ಬದಲಾಗಿ ಇವರ ಪೇಂಟಿಂಗ್ ಗಳು ಉತ್ತಮ ಬೆಲೆಗೆ (Good Price) ಮಾರಾಟವಾಗಿದೆ.

ಈ ಕಲಾವಿದನ ಹೆಸರು ಕ್ಯಾಮ್ ರಾಕಮ್. ಸದ್ಯ ಕ್ಯಾಮ್ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದಾರೆ. 42 ವರ್ಷದ ಕಲಾವಿದ ಕ್ಯಾಮ್, ಕೋವಿಡ್-19 ಸಂದರ್ಭದಲ್ಲಿ ಸಾಕಷ್ಟು ಸಂಕಷ್ಟದಲ್ಲಿ ಸಿಲುಕಿದ್ದರು. ಹಾಗಾಗಿ ತಮ್ಮ ಪೇಟಿಂಗ್ ಗಳನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿದ್ದರು. ಆದ್ರೆ ಈ ನಿರ್ಧಾರ ಕ್ಯಾಮ್ ರಾಕಮ್ ಅವರ ಅದೃಷ್ಟವನ್ನು ಬದಲಿಸಿದೆ.

30 ನಿಮಿಷದಲ್ಲಿ ಕೋಟ್ಯಧಿಪತಿ

ಪ್ರಮುಖ ವ್ಯಾಪಾರ ಸುದ್ದಿವಾಹಿನಿಯ ಪ್ರಕಾರ, ಅವರು ತಮ್ಮ ಪೇಂಟಿಂಗ್‌ಗಳ ಡಿಜಿಟಲ್ ಹರಾಜಿನ ಮೂಲಕ ಕೇವಲ 30 ನಿಮಿಷಗಳಲ್ಲಿ 5 ಕೋಟಿಗೂ ಹೆಚ್ಚು ಗಳಿಸಿದ್ದಾರೆ. ಇದಕ್ಕೂ ಮುನ್ನ 2015ರಲ್ಲಿ ತಮ್ಮ ಚಿತ್ರಗಳನ್ನು ಮಾರಾಟ ಮಾಡಿ ಕೇವಲ 8 ಲಕ್ಷ ಗಳಿಸಿದ್ದರು.ಆದರೆ ಈ ಬಾರಿ ತಮ್ಮ ಚಿತ್ರಗಳನ್ನು ಡಿಜಿಟಲ್ ಹರಾಜು ಹಾಕಿ ಕೆಲವೇ ನಿಮಿಷಗಳಲ್ಲಿ ಕೋಟ್ಯಧಿಪತಿ ಆಗಿದ್ದಾರೆ.

ಇದನ್ನೂ ಓದಿ:  Viral News: ಮದ್ವೆ ಆದ್ಮೇಲೆ ಗೊತ್ತಾಯ್ತು, ಅವಳು ಸಲಿಂಗಿ, ಅವನು ದ್ವಿಲಿಂಗಿ: ಈಗ ಮತ್ತೊಬ್ಬಾಕೆಯನ್ನು ಬರಮಾಡಿಕೊಂಡ ಜೋಡಿ

ಇಷ್ಟು ಹಣ ಬಂದಿದ್ದಕ್ಕೆ ಕ್ಯಾಮ್ ರಾಕಮ್ ಹೇಳಿದ್ದೇನು?

ಈ ಗಳಿಕೆ ನನಗೂ ಅಚ್ಚರಿ ತಂದಿದೆ. ಇಷ್ಟು ದುಡ್ಡು ಸಂಪಾದಿಸಿದ್ದನ್ನು ನನಗೆ ನಂಬಲೂ ಆಗುತ್ತಿಲ್ಲ ಎಂದು ಕ್ಯಾಮ್ ರಾಕಮ್ ಹೇಳಿಕೊಂಡಿದ್ದಾರೆ. Instagram ನಲ್ಲಿ @wallstmemes ಅನ್ನು ನೋಡಿದಾಗ  ಕ್ಯಾಮ್ ರಾಕಮ್ ಡಿಜಿಟಲ್ ಮೂಲಕ ತಮ್ಮ ಕಲೆಯನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದರು.








View this post on Instagram






A post shared by Cam Rackam (@cam_rackam)






ಬೌದ್ಧ  ಭಿಕ್ಷುಗೆ 4 ಕೋಟಿಯ ಲಾಟರಿ: ಈ ಹಣವನ್ನೆಲ್ಲ ಏನ್ ಮಾಡಿದ್ರು ಗೊತ್ತಾ?

ಒಂದು ವೇಳೆ ಲಾಟರಿಯಲ್ಲಿ ಕೋಟಿ ಕೋಟಿ ಹಣ (Money) ಸಿಕ್ಕರೆ ಸಾಮಾನ್ಯ ಜನರು ಮೊದಲು ತಮ್ಮ ಸಾಲ(Loan)ದಿಂದ ಹೊರ ಬರುತ್ತಾರೆ. ನಂತರ ಸುಂದರವಾದ ಮನೆ (House) ಮಾಡಿಕೊಂಡು, ಒಂದಿಷ್ಟು ಹಣ ಠೇವಣಿ (Deposit) ರೂಪದಲ್ಲಿ ಇರಿಸಬಹುದು. ಅಥವಾ ಹೊಸ ವ್ಯವಹಾರಗಳಲ್ಲಿ ಹಣ ಹೂಡಿಕೆ (Investment) ಮಾಡಿ, ಬಂದಂತಹ ಮೊತ್ತವನ್ನ ದ್ವಿಗುಣಗೊಳಿಸಲು ಪ್ರಯತ್ನಿಸುತ್ತಾರೆ.

ಆದ್ರೆ ಥೈಲ್ಯಾಂಡ್ ಮೂಲಕ ಬೌದ್ಧ ಬಿಕ್ಷು (Monk) ಒಬ್ಬರಿಗೆ ಲಾಟರಿಯಲ್ಲಿ 4 ಕೋಟಿ ರೂ. ಹಣ (Monk Wins 4 Crore Rupees Lottery) ಬಂದಿದೆ. ಆದ್ರೆ ಸನ್ಯಾಸತ್ವ ಸ್ವೀಕರಿಸಿರುವ ಭಿಕ್ಷು ಎಲ್ಲ ಹಣವನ್ನ ದಾನ (Donate) ಮಾಡಿದ್ದಾರೆ.

ಇದನ್ನೂ ಓದಿ:  Viral Video: ಹಾರ ಬದಲಿಸಿಕೊಳ್ಳುವ ಮೊದಲು ವಧುವಿನ ಈ ಕೆಲಸ ನೋಡಿ ನಾಚಿ ನೀರಾದ ವರ

ಲಾಟರಿಯಲ್ಲಿ ಬಂದ ಹಣ ಸಮಾನವಾಗಿ ಹಂಚಿಕೆ

ಹಣವನ್ನು ವೈಯಕ್ತಿಕವಾಗಿ ಬಳಕೆ ಮಾಡಿಕೊಳ್ಳದೇ ತಮ್ಮ ಸಮಾಜಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಪ್ರತಿಯೊಬ್ಬ ಬೌದ್ಧ ಭಿಕ್ಷುವಿಗೆ ಅಲ್ಪ ಪ್ರಮಾಣದಲ್ಲಿ ಸಮಾನವಾಗಿ ಹಣ ಹಂಚಲಾಗಿದೆ. ಇನ್ನು ಮಂದಿರದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೂ ಒಂದು ಮೊತ್ತವನ್ನು  ನೀಡಿದ್ದಾರೆ.
Published by:Mahmadrafik K
First published: