Viral News: ನವರಾತ್ರಿಯಂದು 2 ತಲೆ , 3 ಕಣ್ಣುಗಳಿರುವ ವಿಚಿತ್ರ ಹಸು ಜನನ- ದುರ್ಗೆಯ ರೂಪ ಎಂದು ಜನರಿಂದ ಪೂಜೆ

ಹಸು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಎರಡು ತಲೆ ಮತ್ತು ಮೂರು ಕಣ್ಣಿನ ಕರುವನ್ನು ನೋಡಿ ಧನಿರಾಮ ಸೇರಿದಂತೆ ಎಲ್ಲರೂ ಆಶ್ಚರ್ಯ ಚಕಿತರಾಗಿದ್ದಾರೆ. ಭ್ರೂಣದ ಬೆಳವಣಿಗೆಯ ಸಮಯದಲ್ಲಿ ಕೋಶಗಳ ಅಸಹಜ ಬೆಳವಣಿಗೆಯಿಂದಾಗಿ ಇಂತಹ ಸಂಗತಿಗಳು ಸಂಭವಿಸುತ್ತದೆ ಎಂದು ಪಶು ವೈದ್ಯರು ತಿಳಿಸಿದ್ದಾರೆ.  

2 ತಲೆ 3 ಕಣ್ಣಿನ ಕರು

2 ತಲೆ 3 ಕಣ್ಣಿನ ಕರು

  • Share this:
ಜಗತ್ತಿನಲ್ಲಿ ಹಲವಾರು ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ.  ಕೆಲ ಘಟನೆಗಳನ್ನು ನಾವು ಊಹಿಸುವುದು ಬಹಳ ಕಷ್ಟ.  ಇಂಥಹದೆ ಒಂದು ವಿಚಿತ್ರ ಘಟನೆ ಒರಿಸ್ಸಾದಲ್ಲಿ ನಡೆದಿದೆ. ಹೌದು, ನವರಾತ್ರಿಯ(Navaratri) ಸಮಯದಲ್ಲಿ 2 ತಲೆ ಮತ್ತು ಮೂರು ಕಣ್ಣುಗಳಿರುವ ಕರು ಜನಿಸಿದ್ದು, ಜನರು ಅದನ್ನು ದೇವರ ರೂಪ ಎಂದು ಪೂಜಿಸುತ್ತಿದ್ದಾರೆ. ಒರಿಸ್ಸಾದ(Orissa) ನಬ್ರಂಗ್  ಪುರ್ ಜಿಲ್ಲೆಯಲ್ಲಿ ಈ ವಿಚಿತ್ರ ಕರು ಜನಿಸಿದೆ. ಜಿಲ್ಲೆಯ ಬಿಜಾಪುರ ಗ್ರಾಮದಲ್ಲಿರುವ ಧನಿರಾಂ ಎಂಬ ರೈತನ ಮನೆಯಲ್ಲಿ ಕರು ಜನಿಸಿದ್ದು, ದುರ್ಗೆಯ ರೂಪ ಎಂದು ಕರುವನ್ನು ಜನರು ಆರಾಧಿಸುತ್ತಿದ್ದಾರೆ.  ಧನಿರಾಂ  ಅವರು ಎರಡು ವರ್ಷಗಳ ಹಿಂದೆ ಈ ಹಸುವನ್ನು ತಂದಿದ್ದರು, ಆದರೆ ಹಸು ಗರ್ಭ ಧರಿಸಿದ್ದಾಗ ಅನಾರೋಗ್ಯಕ್ಕೆ ತುತ್ತಾಗಿತ್ತು.

ಇದೀಗ ಹಸು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಎರಡು ತಲೆ ಮತ್ತು ಮೂರು ಕಣ್ಣಿನ ಕರುವನ್ನು ನೋಡಿ ಧನಿರಾಮ ಸೇರಿದಂತೆ ಎಲ್ಲರೂ ಆಶ್ಚರ್ಯ ಚಕಿತರಾಗಿದ್ದಾರೆ. ಭ್ರೂಣದ ಬೆಳವಣಿಗೆಯ ಸಮಯದಲ್ಲಿ ಕೋಶಗಳ ಅಸಹಜ ಬೆಳವಣಿಗೆಯಿಂದಾಗಿ ಇಂತಹ ಸಂಗತಿಗಳು ಸಂಭವಿಸುತ್ತದೆ ಎಂದು ಪಶು ವೈದ್ಯರು ತಿಳಿಸಿದ್ದಾರೆ.

ಸಧ್ಯ ಕರು ಎರಡು ತಲೆಗಳಿರುವುದರಿಂದ  ತನ್ನ ತಾಯಿಯಿಂದ ಹಾಲು ಕುಡಿಯಲು ಕಷ್ಟಪಡುತ್ತಿದ್ದು, ಸಧ್ಯ ಹೊರಗಿನಿಂದ ಹಾಲನ್ನು ತಂದು ನೀಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದ್ದಾರೆ. ಇನ್ನು ಕರುವಿನ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಕರೆಂಟ್​ ಬಿಲ್ ಕಡಿಮೆ ಮಾಡಿಸುತ್ತೇವೆ ಎಂದು ಗ್ರಾಹಕರಿಗೆ 19 ಲಕ್ಷ ಟೋಪಿ ಹಾಕಿದ ಖದೀಮರು

ಅಪರೂಪದ ಕರುವನ್ನು ನೋಡಲು ನೆರೆಯ ಹಳ್ಳಿಗಳಿಂದ ಜನರು ಆಗಮಿಸುತ್ತಿದ್ದಾರೆ. ಇಂತಹ ಸ್ಥಿತಿಗೆ ಕಾರಣವೇನು ಎಂಬುದನ್ನು ತಿಳಿಯಲು ಜನರು ಕುತೂಹಲರಾಗಿದ್ದಾರೆ. ಈ ಮಧ್ಯೆ, ಈ ವಿಚಿತ್ರ ಕರುವಿಗೆ ಹಾಲುಣಿಸುತ್ತಾ, ನೀರು ಕೊಡುತ್ತಾ ಮನೆಯವರೆಲ್ಲ ಆರೈಕೆ ಮಾಡುತ್ತಿದ್ದಾರೆ. ಕರು ಆರೋಗ್ಯವಾಗಿದೆ  ಎಂದು ತಿಳಿದು ಬಂದಿದೆ.

ಇನ್ನು ಕೆಲ ತಿಂಗಳುಗಳ ಹಿಂದೆ ಸಹ ಎಮ್ಮೆಯೊಂದು ಒಂದೇ ದೇಹಕ್ಕೆ ಎರಡು ತಲೆ, ನಾಲ್ಕು ಕಣ್ಣು ಇರುವ ಕರುವಿಗೆ ಜನ್ಮ ನೀಡಿದ ಅಪರೂಪದ ಘಟನೆ ರಾಜಸ್ಥಾನದಲ್ಲಿ ನಡೆದಿತ್ತು. ಹಾಗೆಯೇ ಇತ್ತೀಚೆಗೆ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಒಂದೇ ದೇಹಕ್ಕೆ ಎರಡು ತಲೆ, ಬಾಯಿ ಹಾಗೂ ನಾಲ್ಕು ಕಣ್ಣುಗಳಿರುವ ಕರುವಿನ ಜನನವಾಗಿತ್ತು.
Published by:Sandhya M
First published: