ಮೊದಲೆಲ್ಲಾ ನಮಗೆ ಥಟ್ಟನೆ ಏನಾದರೂ ತಿನ್ನಬೇಕು ಎಂದೆನಿಸಿದರೆ ಹೊಟೇಲ್ (Hotel) ಮತ್ತು ಬೇಕರಿಗೆ (Bakery) ಹೋಗಿ ಅಲ್ಲಿ ಸ್ವಲ್ಪ ಸಮಯ ಕಾದು ಕುಳಿತು ಅವರು ನೀಡಿದ ಮೇಲೆ ನಾವು ತಿನ್ನಬೇಕಾಗುತ್ತಿತ್ತು. ಇಲ್ಲದೆ ಹೋದರೆ ಹೊಟೇಲ್ ಮತ್ತು ಬೇಕರಿಗೆ ಹೋಗಿ ಆ ಪಾರ್ಸಲ್ (Parcel) ಅನ್ನು ತೆಗೆದುಕೊಂಡು ಬಂದು ಮನೆಯಲ್ಲಿ ಕುಳಿತು ತಿನ್ನಬೇಕಾಗುತ್ತಿತ್ತು. ಆದರೆ ಈಗ ಹೀಗೆ ಸಮಯ ವ್ಯರ್ಥ ಮಾಡುವ ಅಗತ್ಯವೇ ಇಲ್ಲ ಬಿಡಿ, ಏಕೆಂದರೆ ಈಗ ನಮಗೆ ಏನೋ ಒಂದು ಆಹಾರವನ್ನು ಅಥವಾ ಕೇಕ್ ಅನ್ನು (Cake) ತಿನ್ನಬೇಕು ಎಂದೆನಿಸಿದರೆ, ನಮ್ಮ ಫೋನ್ ನಲ್ಲಿರುವ ಫುಡ್ ಅಗ್ರಿಗೆಟರ್ ಅವರ ಅಪ್ಲಿಕೇಶನ್ (Application) ಅನ್ನು ತೆರೆದು ನಮಗೆ ಬೇಕಾದದ್ದನ್ನು ಬೇಕಾದ ಕಡೆಯಿಂದ ಸ್ವಲ್ಪ ಸಮಯದಲ್ಲಿಯೇ ನಮ್ಮ ಮನೆಗೆ ತರಿಸಿಕೊಳ್ಳಲು ಆರ್ಡರ್ (Order) ಮಾಡಬಹುದು.
ಒಟ್ಟಿನಲ್ಲಿ ಈ ತಂತ್ರಜ್ಞಾನ ಎಷ್ಟೊಂದು ನಮಗೆ ಅನುಕೂಲ ಮಾಡಿಕೊಟ್ಟಿದೆ ಎಂದರೆ ನಾವು ಮನೆಯಿಂದ ಹೊರಗೆ ಹೋಗದೆ ಬೇರೆ ಕೆಲಸಗಳನ್ನು ಮಾಡಿಕೊಂಡು ಇನ್ನೊಂದು ಕೆಲಸಗಳನ್ನು ಪರ್ಯಾಯವಾಗಿ ಸಹ ನಾವು ಆನ್ಲೈನ್ ನಲ್ಲಿ ಮಾಡಿಕೊಳ್ಳಬಹುದು. ಆದರೆ ಎಲ್ಲದಕ್ಕೂ ಅದರದೇ ಆದಂತಹ ಅನುಕೂಲತೆಗಳು ಮತ್ತು ಅನಾನುಕೂಲತೆಗಳು ಇರುತ್ತವೆ ಎಂದು ನಾವು ಅನೇಕ ಬಾರಿ ಕೇಳಿರುತ್ತೇವೆ.
ಅಷ್ಟಕ್ಕೂ ಇಲ್ಲಿ ಆಗಿದ್ದೇನು?
ಇಲ್ಲಿ ಅನುಕೂಲತೆಯ ಬಗ್ಗೆ ನಾವು ಈಗಾಗಲೇ ತಿಳಿದುಕೊಂಡೆವು, ಇನ್ನೂ ಅನಾನುಕೂಲತೆಯ ಬಗ್ಗೆ ಹೇಳುವುದಾದರೆ ಕೆಲವು ಬಾರಿ ನಾವು ಆ ತಿಂಡಿಯ ಫೋಟೋ ನೋಡಿ ರುಚಿಯನ್ನು ಊಹೆ ಮಾಡಿಕೊಂಡಿರುತ್ತೇವೆ, ಆದರೆ ಅದು ಆ ಫೋಟೋದಲ್ಲಿ ಇರುವ ಹಾಗೆ ಇರುವುದೇ ಇಲ್ಲ. ಇಲ್ಲದೆ ಹೋದರೆ ಕೆಲವೊಮ್ಮೆ ಈ ತಿಂಡಿಗಳ ಆಕಾರವು ಫೋಟೋದಲ್ಲಿ ತುಂಬಾನೇ ದೊಡ್ಡದಾಗಿ ಕಾಣಿಸುತ್ತದೆ ಮತ್ತು ಇದು ಇಷ್ಟು ಜನರು ಆರಾಮಾಗಿ ಸೇವಿಸಬಹುದು ಎಂದು ನಾವು ಅಂದಾಜಿಸಿರುತ್ತೇವೆ, ಆದರೆ ಆರ್ಡರ್ ಮನೆಗೆ ಬಂದಾಗ ಆಕಾರದಲ್ಲಿ ಚಿಕ್ಕದು ಇರುವ ಸಾಧ್ಯತೆಗಳು ಇರುತ್ತವೆ.
ಇದನ್ನೂ ಓದಿ: Viral Photo: ಇದು ಗಂಗೂಬಾಯಿ ಅಲ್ಲ ಗಂಗೂ ಕ್ಯಾಟ್; ಬೆಕ್ಕಿನ ವೇಷಕ್ಕೆ ನೆಟ್ಟಿಗರು ಫ್ಲ್ಯಾಟ್!
ಇಲ್ಲಿ ಇನ್ನೊಂದು ಅನಾನುಕೂಲತೆಯ ಬಗ್ಗೆ ಹೇಳುತ್ತೇವೆ ನೋಡಿ. ಮಹಾರಾಷ್ಟ್ರದ ನಾಗ್ಪುರದ ಕಪಿಲ್ ವಾಸ್ನಿಕ್ ಅವರು ನಗರದ ಪ್ರಸಿದ್ಧ ಬೇಕರಿಯೊಂದರಿಂದ ತಮಗೆ ಇಷ್ಟವಾದ ಕೇಕ್ ವೊಂದನ್ನು ಸ್ವಿಗ್ಗಿಯ ಮೂಲಕ ಆರ್ಡರ್ ಮಾಡಿದ್ದಾರೆ.
ಈ ಕೇಕ್ ನಲ್ಲಿ ಮೊಟ್ಟೆ ಇದೆಯೇ
ಚಾಕಲೇಟ್ ಕೇಕ್ ನಂತೆ ಕಾಣುವ ಒಂದು ಫೋಟೋ ನೋಡಿ ಅವರು ತಮ್ಮ ಮೊಬೈಲ್ ಅಪ್ಲಿಕೇಶನ್ ನಲ್ಲಿ ಆರ್ಡರ್ ಮಾಡಿದ್ದಾರೆ. ಇದನ್ನು ಆರ್ಡರ್ ಮಾಡುವಾಗ ಇವರು ಆ ಬೇಕರಿಯವರಿಗೆ ಒಂದು ವಿಷಯದ ಬಗ್ಗೆ ಸ್ಪಷ್ಟತೆಯನ್ನು ಕೋರಿದ್ದಾರೆ. ‘ಈ ಕೇಕ್ ನಲ್ಲಿ ಮೊಟ್ಟೆ ಇದೆಯೇ’ ಎಂದು ಕಪಿಲ್ ವಾಸ್ನಿಕ್ ಅವರು ಕೇಳಿದ್ದಾರೆ.
"ಆರ್ಡರ್ ವಿವರಗಳಲ್ಲಿ ನಾನು 'ಕೇಕ್ ನಲ್ಲಿ ಮೊಟ್ಟೆ ಇದ್ದರೆ, ದಯವಿಟ್ಟು ಅದನ್ನು ನಮಗೆ ತಿಳಿಸಿ' ಎಂದು ನಾನು ಉಲ್ಲೇಖಿಸಿದ್ದೇನೆ" ಎಂದು ಅವರು ಟ್ವೀಟ್ ಮಾಡಿದ್ದಾರೆ. ಮುಂದೆ ಏನಾಯಿತು ಎಂಬುದನ್ನು ಅವರು ನೋಡಿ ‘ಇನ್ನೇನು ಹೇಳೋದು ಇವರಿಗೆ ಅಂತ ಸುಮ್ಮನಾಗಿದ್ದಾರೆ. ನೀವು ಇದನ್ನು ನೋಡಿದರೆ ಬಿದ್ದು ಬಿದ್ದು ನಗುವುದಂತೂ ಗ್ಯಾರಂಟಿ.
ಚೆರ್ರಿಗಳು ಮತ್ತು ವಿಪ್ಡ್ ಕ್ರೀಮ್ ನೊಂದಿಗೆ ಸುಂದರವಾದ ಚಾಕೊಲೇಟ್ ಆಗಿರುವ ಕೇಕ್ ಏನೋ ಕಳುಹಿಸಿದ್ದಾರೆ ಬೇಕರಿಯವರು, ಆದರೆ ಅದರ ಮೇಲೆ "ಇದು ಮೊಟ್ಟೆಯನ್ನು ಹೊಂದಿದೆ" ಎಂಬ ಸಂದೇಶವನ್ನು ಕೇಕ್ ನ ಮೇಲೆ ಬಿಳಿ ಕ್ರೀಮ್ ನಿಂದ ಸ್ಪಷ್ಟವಾಗಿ ಬರೆದು ಕಳುಹಿಸಿದ್ದಾರೆ. ಬಹುಶಃ ಇವರು ಕೇಳಿದ ಪ್ರಶ್ನೆ ಬೇಕರಿಯವರಿಗೆ ಸ್ಪಷ್ಟವಾಗಿಲ್ಲ ಎಂದೆನಿಸುತ್ತದೆ.
ಇದನ್ನೂ ಓದಿ: Burger Man: 32,340 ಬರ್ಗರ್ ತಿಂದವನು ಈತ! ಹುಟ್ಟಿದಾಗಿನಿಂದ ತಿಂದಿದ್ದು ಬರೀ ಬರ್ಗರ್
ಈ ಪೋಸ್ಟ್ ಅನ್ನು ನೋಡಿದ ಅರುಣ್ ನಾಯರ್ ಎಂಬ ಟ್ವಿಟರ್ ಬಳಕೆದಾರರೊಬ್ಬರು ಕೂಡಲೇ ಪ್ರತಿಕ್ರಿಯಿಸಿ ಕಳೆದ ವರ್ಷ ಡಿಸೆಂಬರ್ ನಲ್ಲಿ ತಾವು ಪಡೆದ ಇಂತಹದೇ ಒಂದು ವಿಚಿತ್ರವಾದ ಆರ್ಡರ್ ಬಗ್ಗೆ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ