ಇಲ್ಲಿ ಕತ್ತೆಯೇ ಝೀಬ್ರಾ, ಅಪಹಾಸ್ಯಕ್ಕೀಡಾದ ಮೃಗಾಲಯ !

news18
Updated:July 28, 2018, 6:27 PM IST
ಇಲ್ಲಿ ಕತ್ತೆಯೇ ಝೀಬ್ರಾ, ಅಪಹಾಸ್ಯಕ್ಕೀಡಾದ ಮೃಗಾಲಯ !
facebook/Mahmoud A. Sarhan
news18
Updated: July 28, 2018, 6:27 PM IST
-ನ್ಯೂಸ್ 18 ಕನ್ನಡ

ಮೃಗಾಲಯ ಎಂಬುದು ಪ್ರವಾಸಿಗರ ನೆಚ್ಚಿನ ತಾಣ ಎಂಬುದರಲ್ಲಿ ಎರಡು ಮಾತಿಲ್ಲ. ವನ್ಯಜೀವಿಗಳನ್ನು ಮತ್ತು ಅಪರೂಪದ ಪ್ರಾಣಿಗಳನ್ನು ವೀಕ್ಷಿಸಲು ಹೆಚ್ಚಿನವರು ಮೃಗಾಲಯ ಅಥವಾ ವನ್ಯಧಾಮಕ್ಕೆ ಭೇಟಿ ನೀಡುವುದು ವಾಡಿಕೆ. ಹಾಗೆಯೇ ಈಜಿಪ್ಟ್​ ರಾಜಧಾನಿ ಕೈರೋದಲ್ಲಿರುವ ಝೂಗೆ ಇತ್ತೀಚೆಗೆ ಮೊಹಮ್ಮದ್ ಸರ್ಹಾನ್ ಭೇಟಿ ಕೊಟ್ಟಿದ್ದಾನೆ. ಪ್ರಾಣಿಗಳನ್ನು ವೀಕ್ಷಿಸುತ್ತಾ ಮುಂದೆ ಸಾಗುತ್ತಿದ್ದ ಸರ್ಹಾನ್ ಕಣ್ಣಿಗೆ ಝೀಬ್ರಾಗಳು ಕಾಣಿಸಿಕೊಂಡಿದೆ. ಇನ್ನೇನು ಸೆಲ್ಫಿ ಕ್ಲಿಕ್ಕಿಸಬೇಕೆಂದು ಅನಿಸುವಷ್ಟರಲ್ಲಿ ಝೀಬ್ರಾಗಳ ರೂಪದಲ್ಲಿ ಏನೋ ವ್ಯತ್ಯಾಸ ಕಂಡು ಬಂದಿದೆ.

ಮತ್ತಷ್ಟು ಸೂಕ್ಷ್ಮವಾಗಿ ಗಮನಿಸಿದಾಗ ಝೀಬ್ರಾಗಳ ಮೇಲೆ ಅನುಮಾನ ಮೂಡಿದೆ. ಝೀಬ್ರಾವನ್ನು ಹತ್ತಿರಕ್ಕೆ ಕರೆದು ಗಮನಿಸಿದಾಗ ಅದರ ಮೈಗೆ ಕಪ್ಪು ಮತ್ತು ಬಿಳಿಯ ಬಣ್ಣ ಬಳಿದಿರುವುದು ಗೊತ್ತಾಗಿದೆ. ಹಾಗೆಯೇ ಸಾಮಾನ್ಯವಾಗಿ ಝೀಬ್ರಾ ಕಿವಿ ಸಣ್ಣದಿರುತ್ತದೆ. ಆದರೆ ಕೈರೋ ನ್ಯಾಷನಲ್ ಪಾರ್ಕ್​ನಲ್ಲಿದ್ದ ಝೀಬ್ರಾ ಕಿವಿಗಳು ದೊಡ್ಡದಾಗಿ ವಿಚಿತ್ರವಾಗಿತ್ತು. ಅದಾಗಲೇ ಇದು ಝೀಬ್ರಾ ಅಲ್ಲ ಬದಲಾಗಿ ಕತ್ತೆಗೆ ಪೈಂಟ್ ಮಾಡಿ ಮೃಗಾಲಯದಲ್ಲಿ ನಿಲ್ಲಿಸಲಾಗಿದೆ ಎಂಬುದು ಸರ್ಹಾನ್​ಗೆ ತಿಳಿದಾಗಿತ್ತು.

ಕೂಡಲೇ ತನ್ನ ಕ್ಯಾಮೆರಾ ಮೂಲಕ ಫೋಟೋ ಮತ್ತು ವಿಡಿಯೋ ತೆಗೆದು ಸರ್ಹಾನ್ ಸಾಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದಾನೆ. ಅನುಮಾನಾಸ್ಪದ ಝೀಬ್ರಾ ವಿಡಿಯೋ ಫೇಸ್​​ಬುಕ್​​ನಲ್ಲಿ ವೈರಲ್​ ಆಗುತ್ತಿದ್ದಂತೆ ಸ್ಥಳೀಯ ಮಾಧ್ಯಮಗಳು ಸುದ್ದಿ ಬಿತ್ತರಿಸಿತು.ಆದರೆ ಮೃಗಾಲಯದ ನಿರ್ದೇಶಕ ಮೊಹಮ್ಮದ್ ಸುಲ್ತಾನ್ ಮೃಗಾಲಯದಲ್ಲಿರುವುದು ಝೀಬ್ರಾ ಎಂದೇ ವಾದಿಸಿದ್ದರು. ಆದರೆ ಹಲವಾರು ಚಾನೆಲ್​ಗಳು ಝೀಬ್ರಾದ ಮೂತಿಯ ಬಗ್ಗೆ ಮತ್ತು ಸ್ಥಿರವಾಗಿರದ ಕಪ್ಪು-ಬಿಳಿ ಪಟ್ಟಿಗಳ ಬಗ್ಗೆ ಪ್ರಶ್ನಿಸಿದ್ದು, ಝೀಬ್ರಾ,ಕತ್ತೆ ಮತ್ತು ಕುದುರೆಗಳು ಹೋಲಿಕೆ ಇದ್ದರೂ ವಿಭಿನ್ನ ಪ್ರಭೇದಗಳು ಎಂದು ಕಾರ್ಯಕ್ರಮದ ಮೂಲಕ ನಿರೂಪಿಸಿದ್ದರು. ಈ ಮೂಲಕ ಕೈರೋದ ಝೀಬ್ರಾ(ಕತ್ತೆ) ವಿಶ್ವದ ಗಮನ ಸೆಳೆದಿತ್ತು.

ಈ ಹಿಂದೆ ಗಾಜಾದ ಮೃಗಾಲಯದಲ್ಲೂ ಸಹ ಝೀಬ್ರಾ ಬದಲಾಗಿ ಕತ್ತೆಗೆ ಬಣ್ಣ ಹಚ್ಚಿ ಪ್ರದರ್ಶನಕ್ಕೆ ನಿಲ್ಲಿಸಲಾಗಿತ್ತು. ಈ ಬಗ್ಗೆ ವೀಕ್ಷಕರಿಗೆ ತಿಳಿಯುತ್ತಿದ್ದಂತೆ ಆಡಳಿತ ಮಂಡಳಿ ಝೀಬ್ರಾಗೆ 30 ಸಾವಿರ ಡಾಲರ್ ಇರುವುದರಿಂದ, 700 ಡಾಲರ್​ಗೆ ಸಿಗುವ ಕತ್ತೆಗೆ ಪೈಂಟ್ ಮಾಡಿ ನಿಲ್ಲಿಸಲಾಗಿತ್ತು ಎಂದು ತಪ್ಪನ್ನು ಒಪ್ಪಿಕೊಂಡಿದ್ದರು. ಒಟ್ಟಾರೆ ಕೈರೋಗೆ ಝೂನ ಆಡಳಿತ ಮಂಡಳಿಗೆ 'ಕಾರ್ಯವಾಸಿ ಕತ್ತೆ ಕಾಲು ಹಿಡಿ' ಎಂಬ ಕನ್ನಡದ ನಾಣ್ಣುಡಿ ಸರಿಯಾಗಿ ಅನ್ವಯಿಸುತ್ತದೆ.
First published:July 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ