Viral Video: ಹೊತ್ತಿ ಉರಿಯುತ್ತಿದ್ದ ಕಾರಿನಿಂದ ವೃದ್ಧ ದಂಪತಿ ಹೊರಕ್ಕೆ.. ವಿಡಿಯೋ ಮಾಡದೆ ರಕ್ಷಿಸಿದವರ ಪ್ರಶಂಸೆ

ಕ್ಯಾಲಿಫೋರ್ನಿಯಾದ ಲೆಕ್‍ಸೈಡ್ ಫೈರ್ ಡಿಸ್ಟ್ರಿಕ್ಟ್ , ಉರಿಯುತ್ತಿರುವ ಕಾರಿನಲ್ಲಿ ಸಿಕ್ಕಿಹಾಕಿಕೊಂಡ ವೃದ್ಧ ದಂಪತಿಯನ್ನು ಇಬ್ಬರು ದಾರಿಹೋಕರು ಹೇಗೆ ರಕ್ಷಿಸಿದರು ಎಂಬ ಬಗ್ಗೆ ಪೋಸ್ಟ್ ಒಂದನ್ನು ಹಾಕಿದ್ದು, ಆ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವೃದ್ಧರ ರಕ್ಷಣೆ

ವೃದ್ಧರ ರಕ್ಷಣೆ

  • Share this:

    ಈ ದಿನಗಳಲ್ಲಿ ಯಾವುದೇ ಅಪಘಾತಗಳು ನಡೆದರೆ ದಾರಿಹೋಕರು ಮಾಡುವ ಮೊದಲು ಕೆಲಸ ಅದನ್ನು ವಿಡಿಯೋ ಮಾಡಿ , ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವುದು, ಆ ಮಧ್ಯೆ ಅಪಘಾತಕ್ಕೀಡಾಗಿರುವ ವ್ಯಕ್ತಿಗಳನ್ನು ಕಾಪಾಡಬೇಕೆಂದು ಮನಸ್ಸು ಮಾಡುವವರು ಬಹಳ ವಿರಳ. ಆದರೆ, ಕ್ಯಾಲಿಪೋರ್ನಿಯಾದ ಲೇಕ್‍ಸೈಡ್ ನಡೆದ ಭೀಕರ ಅಪಘಾತವೊಂದರಲ್ಲಿ ಸಿಲುಕಿದ್ದವರನ್ನು ದಾರಿ ಹೋಕರು ಪ್ರಾಣದ ಹಂಗು ತೊರೆದು ಕಾಪಾಡಲು ಧಾವಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ಯಾಲಿಫೋರ್ನಿಯಾದ ಲೇಕ್‍ಸೈಡ್‍ನಲ್ಲಿ ಧಗಧಗ ಉರಿಯುತ್ತಿದ್ದ ಕಾರಿನಲ್ಲಿ ವೃದ್ಧ ದಂಪತಿ ಸಿಕ್ಕಿಹಾಕಿಕೊಂಡಿದ್ದ ಬೆಚ್ಚಿ ಬೀಳಿಸುವ ಘಟನೆ ನಡೆಯಿತು.


    ಅದೃಷ್ಟವಶಾತ್ ಅದೇ ದಾರಿಯಲ್ಲಿ ಸಾಗುತ್ತಿದ್ದ ಇಬ್ಬರು, ಕೂಡಲೇ ಅವರ ಸಹಾಯಕ್ಕೆ ಧಾವಿಸಿ, ಆ ದಂಪತಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಈ ಘಟನೆಯ ಕುರಿತು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದ್ದು, ಅದನ್ನು ನೋಡಿದರೆ ಎಂತವರಿಗೂ ಒಮ್ಮೆ ಭಯದಿಂದ ಮೈ ನಡುಗುವುದು ಖಂಡಿತಾ. ಈ ಪೋಸ್ಟನ್ನು ಲೇಕ್‍ಸೈಡ್ ಫೈರ್ ಡಿಸ್ಟ್ರಿಕ್ಟ್ ಹಂಚಿಕೊಂಡಿದ್ದು, ಅದರಲ್ಲಿ ಈ ಘಟನೆಗೆ ಸಂಬಂಧಿಸಿದ ಒಂದು ವಿಡಿಯೋ ಮತ್ತು ಕೆಲವು ಫೋಟೋಗಳಿವೆ.


    ಆ ವಿಡಿಯೋದ ದೃಶ್ಯದಲ್ಲಿ ಅತ್ಯಂತ ತೀವ್ರವಾಗಿ ಉರಿಯುತ್ತಿರುವ ಕಾರಿನಲ್ಲಿ ಸಿಕ್ಕಿ ಹಾಕಿಕೊಂಡಿರುವ ವೃದ್ಧ ದಂಪತಿಯನ್ನು ದಾರಿಹೋಕರು ಎಳೆದು ಹೊರಗೆ ಹಾಕುತ್ತಿರುವ ದೃಶ್ಯವಿದೆ. ಪೋಸ್ಟ್‍ನಲ್ಲಿರುವ ಫೋಟೋಗಳು ಅಪಘಾತದ ವಿವಿಧ ಕೋನಗಳನ್ನು ತೋರಿಸುತ್ತದೆ. “ಇಂದು ಸಂಜೆ , ಜೆನ್ನಿಂಗ್ ಸರೋವರದ ಪೂರ್ವಕ್ಕೆ ಐ8ನ ಪಶ್ಚಿಮ ದಿಕ್ಕಿನಲ್ಲಿ ವಾಹನಕ್ಕೆ ಬೆಂಕಿ ಹತ್ತಿಕೊಂಡಿದ್ದ ಕುರಿತು ನಮ್ಮ ಲೇಕ್‍ಸೈಡ್ ವಿಭಾಗಗಕ್ಕೆ ವರದಿ ಬಂತು.






    ಉರಿಯುತ್ತಿದ್ದ ಕಾರಿನಲ್ಲಿ ಸಿಲುಕಿದ್ದ ವೃದ್ಧ ದಂಪತಿಯನ್ನು ಇಬ್ಬರು ದಾರಿಹೋಕರು ಕಾಪಾಡುತ್ತಿರುವ ದೃಶ್ಯವನ್ನು ಸೆರೆ ಹಿಡಿಯಲು ಅದೇ ದಾರಿಯಲ್ಲಿ ಸಾಗುತ್ತಿದ್ದ ಇನ್ನೊಬ್ಬರಿಗೆ ಸಾಧ್ಯವಾಗಿದೆ. ಆ ದಂಪತಿ ಮತ್ತು ಇಬ್ಬರು ದಾರಿಹೋಕರನ್ನು ಸುಟ್ಟ ಗಾಯಗಳೊಂದಿಗೆ ಸಾಗಿಸಲಾಯಿತು. ಬೆಂಕಿ ಅಲ್ಲಿದ್ದ ಗಿಡಮರಕ್ಕೂ ಹಬ್ಬಿತ್ತು, ಆದರೆ ಕೂಡಲೇ ನಿಯಂತ್ರಣಕ್ಕೆ ಬಂತು. ವಿಡಿಯೋ ತೆಗೆದವರು ಮೇರಿ ಮ್ಯಾಕ್ರೋರಿ” ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.


    ಸೆಪ್ಟೆಂಬರ್ 7 ರಂದು ಹಂಚಿಕೊಳ್ಳಲಾದ ಈ ವಿಡಿಯೋಗೆ ಸುಮಾರು 2,000 ಮೆಚ್ಚುಗೆಗಳು ದೊರಕಿದ್ದು, ಹೇರಳ ಪ್ರತಿಕ್ರಿಯೆಗಳು ಸಿಕ್ಕಿವೆ. ಕೆಲವರು ದಂಪತಿಯನ್ನು ಉರಿಯುವ ಬೆಂಕಿಯಿಂದ ಕಾಪಾಡಿದ ಆ ದಾರಿಹೋಕರ ಪರೋಪಕಾರ ಬುದ್ಧಿಯನ್ನು ಕೊಂಡಾಡಿದರೆ, ಇನ್ನು ಕೆಲವರು ಘಟನೆಯ ಭೀಕರತೆಯ ಬಗ್ಗೆ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.“ದಂಪತಿಯನ್ನು ಬೆಂಕಿಯಿಂದ ಕಾಪಾಡಲು ಧಾವಿಸಿದ ಆ ಹೀರೋಗಳಿಗೆ ದೇವರು ಆಶೀರ್ವದಿಸಲಿ! ಗಾಯಗೊಂಡ ಎಲ್ಲರೂ ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಒಬ್ಬ ಇನ್‍ಸ್ಟಾಗ್ರಾಂ ಬಳಕೆದಾರರು ಬರೆದುಕೊಂಡಿದ್ದರೆ, ಇನ್ನೊಬ್ಬರು “ವಾವ್ ! ಅದ್ಭುತವಾಗಿದೆ “ ಬರೆದುಕೊಂಡಿದ್ದಾರೆ.

    Published by:Kavya V
    First published: