• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Story: ವಿದ್ಯಾರ್ಥಿನಿ ಜೊತೆಯೇ ಪ್ರೀತಿಯಲ್ಲಿ ಬಿದ್ದ ಬೈಜುಸ್‌ ಸಿಇಒ ರವೀಂದ್ರನ್‌; ಲವ್‌ ಸ್ಟೋರಿ ಶುರುವಾಗಿದ್ದು ಹೇಗೆ ಗೊತ್ತಾ?

Viral Story: ವಿದ್ಯಾರ್ಥಿನಿ ಜೊತೆಯೇ ಪ್ರೀತಿಯಲ್ಲಿ ಬಿದ್ದ ಬೈಜುಸ್‌ ಸಿಇಒ ರವೀಂದ್ರನ್‌; ಲವ್‌ ಸ್ಟೋರಿ ಶುರುವಾಗಿದ್ದು ಹೇಗೆ ಗೊತ್ತಾ?

ದಿವ್ಯಾ ಹಾಗೂ ರವೀಂದ್ರನ್‌

ದಿವ್ಯಾ ಹಾಗೂ ರವೀಂದ್ರನ್‌

ಸಾಮಾನ್ಯವಾಗಿ ಎಲ್ಲರ ಲವ್‌ ಸ್ಟೋರಿಗಳೂ ವಿಭಿನ್ನವಾಗಿರುತ್ತದೆ. ಕೆಲವರದ್ದು ಸಿಂಪಲ್‌ ಲವ್‌ ಸ್ಟೋರಿಗಳಿದ್ದರೆ ಇನ್ನೂ ಕೆಲವರದ್ದು ತುಂಬಾನೇ ಇಂಟೆರೆಸ್ಟಿಂಗ್‌ ಪ್ರೇಮ್‌ ಕಹಾನಿಯಾಗಿರುತ್ತದೆ. ಅದರಲ್ಲೂ ಯಶಸ್ವಿ ವ್ಯಕ್ತಿಗಳ ಪ್ರೇಮ ಕಥೆಗಳನ್ನು ಕೇಳಲು ಜನರು ಹೆಚ್ಚು ಆಸಕ್ತಿ ತೋರುತ್ತಾರೆ. ಇಲ್ಲೊಬ್ಬರು ವಿದ್ಯಾರ್ಥಿಯನ್ನೇ ಲವ್​ ಮಾಡಿ ಮದುವೆಯಾಗಿದ್ದಾರೆ. ಹಾಗಿದ್ರೆ ಇವರ ಪ್ರೇಮ ಕಥೆ ಹೇಗಿತ್ತಿ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ಮುಂದೆ ಓದಿ ...
  • Share this:

ಸಾಮಾನ್ಯವಾಗಿ ಎಲ್ಲರ ಲವ್‌ ಸ್ಟೋರಿಗಳೂ (Love Story) ವಿಭಿನ್ನವಾಗಿರುತ್ತದೆ. ಕೆಲವರದ್ದು ಸಿಂಪಲ್‌ ಲವ್‌ ಸ್ಟೋರಿಗಳಿದ್ದರೆ ಇನ್ನೂ ಕೆಲವರದ್ದು ತುಂಬಾನೇ ಇಂಟೆರೆಸ್ಟಿಂಗ್‌ ಪ್ರೇಮ್‌ ಕಹಾನಿಯಾಗಿರುತ್ತದೆ. ಅದರಲ್ಲೂ ಯಶಸ್ವಿ ವ್ಯಕ್ತಿಗಳ ಪ್ರೇಮ ಕಥೆಗಳನ್ನು ಕೇಳಲು ಜನರು ಹೆಚ್ಚು ಆಸಕ್ತಿ ತೋರುತ್ತಾರೆ. ಈಗ ನಾವು ಹೇಳೋಕೆ ಹೊರಟಿರೋದು ಬೈಜು ನ ಸಹ-ಸಂಸ್ಥಾಪಕರಾದ ಬೈಜು ರವೀಂದ್ರನ್ (Byju Ravindran) ಮತ್ತು ದಿವ್ಯಾ ಗೋಕುಲನಾಥ್ ನಡುವಿನ ಪ್ರೇಮ ಕಥೆ.


ತಮ್ಮ ಹಾಗೂ ದಿವ್ಯಾ ಗೋಕುಲನಾಥ್‌ ನಡುವೆ ಪ್ರೀತಿ ಹೇಗೆ ಶುರುವಾಯ್ತು ಅನ್ನೋದ್ರ ಬಗ್ಗೆ ರವೀಂದ್ರನ್‌ ಮಾತನಾಡಿದ್ದಾರೆ. ಇಂಡಿಯಾ ಟುಡೇ ಕಾನ್ಕ್ಲೇವ್ 2023 ರಲ್ಲಿ ಮಾತನಾಡಿದ ಎಡ್ಟೆಕ್ ಸ್ಟಾರ್ಟ್ಅಪ್ ಬೈಜೂಸ್ ಸಂಸ್ಥಾಪಕ, ದಿವ್ಯಾ ಗೋಕುಲನಾಥ್ ಅವರು ಸಾಕಷ್ಟು ಪ್ರಶ್ನೆಗಳನ್ನು ಕೇಳುವ ಅಭ್ಯಾಸ ಹೊಂದಿದ್ದರು. ಇದರಿಂದಾಗಿ ನಾನು ಆಕೆಯನ್ನು ಗಮನಿಸುವಂತಾಯ್ತು ಎಂದು ಹೇಳಿದ್ದಾರೆ. ಅಂದಹಾಗೆ ಅವರಿಬ್ಬರ ಸಂಬಂಧ ಆರಂಭವಾಗುವ ಹೊತ್ತಿಗೆ ದಿವ್ಯಾ ಗೋಕುಲನಾಥ್‌ ತಮ್ಮ ವಿದ್ಯಾರ್ಥಿನಿಯಾಗಿದ್ದರು ಎಂಬುದಾಗಿ ಬೈಜುಸ್‌ ಸಿಇಒ ಹೇಳಿದರು.


ಪ್ರೀತಿ ಆರಂಭವಾಗಿದ್ದು ಹೇಗೆ ?


ಈ ವೇಳೆ ತಮ್ಮ ಹಾಗೂ ದಿವ್ಯಾ ಗೋಕುಲನಾಥ್‌ ನಡುವೆ ಪ್ರೀತಿ ಆರಂಭವಾಗಿದ್ದು ಹೇಗೆ ಅನ್ನೋದನ್ನು ವಿವರಿಸಿದ ರವೀಂದ್ರನ್‌, “ನಾನು ಯಾವಾಗಲೂ ಈ ರೀತಿಯ ಆಡಿಟೋರಿಯಂಗಳಲ್ಲಿ ಅಥವಾ ಇದಕ್ಕಿಂತ ದೊಡ್ಡದಾದ ಕ್ರೀಡಾಂಗಣಗಳಲ್ಲಿ ಕಲಿಸುತ್ತಿದ್ದೆ. ಅಂಥ ಸ್ಥಳದಲ್ಲಿ ಬಹಳಷ್ಟು ವಿದ್ಯಾರ್ಥಿಗಳಿರುವುದರಿಂದ ಯಾವುದೇ ನಿರ್ದಿಷ್ಟ ವಿದ್ಯಾರ್ಥಿಯನ್ನು ಗಮನಿಸುವುದು ತುಂಬಾ ಕಷ್ಟ" ಎಂಬುದಾಗಿ ಹೇಳಿದರು. "ಆದರೆ ದಿವ್ಯಾ ಹಿಂದೆ ಇರುತ್ತಿದ್ದರು. ಹಾಗೆಯೇ ಬಹಳಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದರು. ಹೀಗಾಗಿಯೇ ಆಕೆ ನನ್ನ ಗಮನ ಸೆಳೆದರು. ಆದರೆ ಅದು ಯಾವಾಗ ಪ್ರೀತಿಯಾಗಿ ಬದಲಾಯಿತು... ನಾವಿಬ್ಬರೂ ಯಾವಾಗ ಸಂಗಾತಿಗಳಾದೆವು ಅನ್ನೋದು ನನಗೆ ತಿಳಿದಿಲ್ಲ” ಎಂಬುದಾಗಿ ರವೀಂದ್ರನ್ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: ಪ್ರೇಯಸಿ ಡೆಡ್‌ ಬಾಡಿ ಜೊತೆ 7 ವರ್ಷ ವಾಸ! ಬೆಚ್ಚಿ ಬೀಳಿಸುತ್ತದೆ ವೈದ್ಯನ ವಿಚಿತ್ರ ಲವ್‌ ಸ್ಟೋರಿ


“ವಿರುದ್ಧ ವ್ಯಕ್ತಿತ್ವ ಆಕರ್ಷಿತರಾಗುವುದು ರೀಲ್‌ ಲೈಫ್‌ನಲ್ಲಿ ಮಾತ್ರ!"


ದಿವ್ಯಾ ಹಾಗೂ ರವೀಂದ್ರನ್‌ ಅವರ ಲವ್‌ ಸ್ಟೋರಿಯು ಸಿನಿಮಾಗಳಲ್ಲಿರುವಂತೆಯೇ ಆರಂಭವಾಯ್ತು ಎಂದುಕೊಂಡರೂ ರೀಲ್‌ಲೈಫ್‌ ಗೂ ರಿಯಲ್‌ ಲೈಫ್‌ಗೂ ಬಹಳಷ್ಟು ವ್ಯತ್ಯಾಸಗಳಿವೆ ಎಂದು ದಿವ್ಯಾ ಹೇಳುತ್ತಾರೆ.


ದಿವ್ಯಾ ಹಾಗೂ ರವೀಂದ್ರನ್‌


ಇದೇ ವೇಳೆ ಮಾತನಾಡಿದ ದಿವ್ಯಾ ಗೋಕುಲನಾಥ್, "ಮೊದಲು ಏನಾಯಿತು ಎಂದು ನಮಗೆ ತಿಳಿದಿಲ್ಲ. ವಿರುದ್ಧ ವ್ಯಕ್ತಿತ್ವದವರು ಆಕರ್ಷಿತರಾಗುತ್ತಾರೆ ಅನ್ನೋದು ಸಾಮಾನ್ಯ ಕಲ್ಪನೆಯಾಗಿದೆ. ಆದರೆ ಇದು ರೀಲ್‌ ಲೈಫ್‌ನಲ್ಲಿ ಮಾತ್ರ ಸಾಧ್ಯ. ಅದರ ಹೊರತಾಗಿ ನಿಜ ಜೀವನದಲ್ಲಿ ಅಂಥ ಸನ್ನಿವೇಶಗಳು ಕಡಿಮೆ" ಎಂದು ಹೇಳಿದರು.


ಅಲ್ಲದೇ "ನಿಜ ಜೀವನದಲ್ಲಿ ನಿಮ್ಮ ಪಕ್ಕದಲ್ಲಿ ಸಮಾನ ಮನಸ್ಕರನ್ನು ಹೊಂದಲು ಬಯಸುತ್ತೀರಿ. ಅಲ್ಲದೇ ಹೋದರೆ ನಮಗೆ ತಿಳಿದಿರುವವರು ಹೇಳುತ್ತಾರೆ ನಾವು ಸೀಮೆಸುಣ್ಣ ಮತ್ತು ಚೀಸ್ ಅಂತ! ಆದರೆ ಒಳಗೆ, ನಮ್ಮ ಮೌಲ್ಯಗಳು ಒಂದೇ ಆಗಿರುತ್ತವೆ. ಆದ್ದರಿಂದ, ಎಲ್ಲಾ ಕೆಲಸದ ಹೊರಗಿನ ನಮ್ಮ ಅಡಿಕ್ಷನ್‌ಗಳೆಂದರೆ ನಮ್ಮ ಮಕ್ಕಳು, ಕುಟುಂಬ ಮತ್ತು ಪ್ರಯಾಣ" ಎಂದು ದಿವ್ಯಾ ಗೋಕುಲನಾಥ್‌ ಹೇಳಿದರು.


ಅಂದಹಾಗೆ ಬೈಜು ರವೀಂದ್ರನ್‌ ಹಾಗೂ ದಿವ್ಯಾ 2009 ರಲ್ಲಿ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಬೈಜುಸ್‌ ಸಂಸ್ಥಾಪಕ ಪಾಲುದಾರರೂ ರವೀಂದ್ರನ್‌ ವಿದ್ಯಾರ್ಥಿಗಳೇ!


ಇನ್ನು, 2011 ರಲ್ಲಿ ಪ್ರಾರಂಭವಾದ edtech ಪ್ಲಾಟ್‌ಫಾರ್ಮ್‌ಗೆ ಅವರ ಸಂಸ್ಥಾಪಕ ಪಾಲುದಾರರು ಸಹ ಅವರ ವಿದ್ಯಾರ್ಥಿಗಳು ಎಂಬುದಾಗಿ ರವೀಂದ್ರನ್ ಹೇಳಿದರು. "ಅವರೆಲ್ಲರೂ ಇನ್ನೂ ಇಲ್ಲಿದ್ದಾರೆ. ನಾವು ನಮ್ಮ ಧ್ಯೇಯವನ್ನು ಬದಲಾಯಿಸಿಲ್ಲ. ಅದು ಮೌಲ್ಯೀಕರಣವಾಗಿದೆ. ನಾವು ವ್ಯವಹಾರ ಮಾದರಿಗಳನ್ನು ಬದಲಾಯಿಸಿದ್ದೇವೆ. ಆದರೆ ನಾವು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವ ನಮ್ಮ ಧ್ಯೇಯವನ್ನು ನಿಜವಾಗಿಸಿದ್ದೇವೆ ಎಂದು ರವೀಂದ್ರನ್‌ ಹೇಳಿದ್ದಾರೆ.


ಈ ಮಧ್ಯೆ ಕಳೆದ ವರ್ಷ, ಬೈಜೂಸ್ ಲೆಕ್ಕಪತ್ರ ಅಕ್ರಮಗಳು, ಕೋರ್ಸ್‌ಗಳ ತಪ್ಪು ಮಾರಾಟ ಮತ್ತು ಸಾಮೂಹಿಕ ಲೇ-ಆಫ್‌ಗಳಿಗಾಗಿ ಸಾಕಷ್ಟು ಟೀಕೆಗೆ ಒಳಗಾಗಿತ್ತು.

First published: