BuzzCut: ಟಿಕ್‌ಟಾಕ್‌ನಲ್ಲಿ ಪ್ರಖ್ಯಾತಗೊಂಡ 'ಕೌಚ್ ಗೈ' ಅಸಲಿಗೆ ಯಾರು? ಇಂಟರ್ನೆಟ್‌ನಲ್ಲಿ ಏಕೆ ಇಷ್ಟೊಂದು ಟ್ರೆಂಡ್ ಆಗುತ್ತಿದೆ?

ಇಂಟರ್ನೆಟ್‌ನಲ್ಲಿ ಟ್ರೆಂಡಿಂಗ್ ವಿಡಿಯೋ ಹೊಸದೇನಲ್ಲ ಆದರೆ ಸರ್‌ಪ್ರೈಸಿಂಗ್ ವಿಡಿಯೋದಲ್ಲಿ ಆಶ್ಚರ್ಯವಿಲ್ಲದಿದ್ದರೂ ಹುಡುಗನು ತನ್ನ ಗೆಳತಿಯ ಆಗಮನದಿಂದ ಅಷ್ಟೊಂದು ಖುಷಿಯಾಗಿರದಂತೆ ಕಂಡುಬಂದಿರುವುದು ಪ್ರತಿಯೊಬ್ಬರೂ ಈ ರೀತಿಯ ಸನ್ನಿವೇಶಕ್ಕೆ ಒಳಪಟ್ಟಿರುವಂತೆ ತೋರಿಸುತ್ತದೆ.

ವೈರಲ್ ಆಗಿರುವ ವಿಡಿಯೋ ದೃಶ್ಯ.

ವೈರಲ್ ಆಗಿರುವ ವಿಡಿಯೋ ದೃಶ್ಯ.

  • Share this:
ಬಜ್‌ಕಟ್ (BuzzCut) ನ್ಯೂಸ್ 18 ನಡೆಸುವ ಹೊಸ ಸರಣಿಯಾಗಿದ್ದು, ಇಂಟರ್ನೆಟ್‌ನಲ್ಲಿ (Internet) ಹೆಚ್ಚು ಸುದ್ದಿಯಾದ ಟ್ರೆಂಡ್‌ನಲ್ಲಿರುವ ಕೆಲವೊಂದು ಸ್ವಾರಸ್ಯಕರ ವಿಷಯಗಳನ್ನು ಹುಡುಕಿ ಆ ಸುದ್ದಿ ಏಕೆ ಇಷ್ಟೊಂದು ಜನಪ್ರಿಯತೆಯನ್ನು ಪಡೆದುಕೊಂಡಿತು ಎಂಬುದನ್ನು ವಿಶ್ಲೇಷಿಸುತ್ತೇವೆ. ಹೇಳಿ ಕೇಳಿ ಇದು 2021 ಹಾಗೂ ಇಂಟರ್ನೆಟ್ ಈ ಯುಗದಲ್ಲಿ ಹೆಚ್ಚು ವಿಸ್ತಾರಗೊಂಡಿದೆ. ಕಾಲೇಜು ವಯಸ್ಸಿನ ಹುಡುಗನೊಬ್ಬ ತನ್ನ ಗೆಳತಿಗೆ ಮೋಸ ಮಾಡಿದ್ದಾನೆ ಇದು ಸಹಜವಾಗಿ ನಡೆಯುವಂತಹ ವಿಷಯವಾಗಿದ್ದರೂ ಈ ಸುದ್ದಿಯಲ್ಲೊಂದು ಸ್ವಾರಸ್ಯವಿದೆ ಎಂಬುದನ್ನು ನೀವು ಮನವರಿಕೆ ಮಾಡಿಕೊಳ್ಳಲೇಬೇಕು.

ಟಿಕ್‌ಟಾಕ್ ಹಾಗೂ ಇನ್‌ಸ್ಟಾದಲ್ಲಿ ಇದೀಗ ಪ್ರಚಲಿತದಲ್ಲಿರುವ ಒಂದು ಸುದ್ದಿ “ಕೌಚ್ ಗೈ” ಎಂದಾಗಿದೆ. ಗೆಳತಿಯರು ತಮ್ಮ ದೂರದಲ್ಲಿರುವ ಗೆಳೆಯರನ್ನು ಸಂಧಿಸಲು ಅನಿರೀಕ್ಷಿತ ಭೇಟಿಯನ್ನು ನೀಡುತ್ತಾರೆ. ಇದಕ್ಕೂ ಕೌಚ್‌ ಗೈಗೂ ಇರುವ ಸಂಬಂಧವೇನು? ಕೌಚ್ ಗೈ ಇಂಟರ್ನೆಟ್‌ನಲ್ಲಿ ಏಕೆ ಇಷ್ಟೊಂದು ಟ್ರೆಂಡ್ ಆಗುತ್ತಿದೆ ಎಂಬುದನ್ನು ನೀವು ಅರಿತುಕೊಳ್ಳಬೇಕು ಎಂದಾದರೆ ಈ ಸುದ್ದಿಯನ್ನು ನೀವು ಓದಲೇಬೇಕು.

ಕೌಚ್ ಗೈ ಎಂದರೇನು? ಈ ಕೌಚ್ ಗೈ ಯಾರು?

ಲಾರೆನ್ ಝಾರಾಸ್ ಹೆಸರಿನ ಟಿಕ್‌ಟಾಕರ್ ಮಾಡಿದ ವೈರಲ್ ವಿಡಿಯೋದಿಂದ ‘ಕೌಚ್ ಗೈ’ ಪದ ಹುಟ್ಟಿಕೊಂಡಿದೆ. ಆಕೆ ತನ್ನ ಗೆಳೆಯ ರಾಬಿಯನ್ನು ಅನಿರೀಕ್ಷಿತವಾಗಿ ಭೇಟಿ ಮಾಡಲು ನಿರ್ಧರಿಸುತ್ತಾಳೆ. ಆಕೆ ರಾಬಿಯ ಕೋಣೆಯನ್ನು ಪ್ರವೇಶಿಸಿದಾಗ ಆತ ಸೋಫಾದ ಮೇಲೆ ಮೂವರು ಹುಡುಗಿಯರೊಂದಿಗೆ ಕುಳಿತಿರುವುದನ್ನು ಆಕೆ ನೋಡುತ್ತಾಳೆ.

ಆದರೆ ಲಾರೆನ್ ಇದನ್ನು ನಿರ್ಲಕ್ಷಿಸುತ್ತಾಳೆ ಹಾಗೂ ಆ ಹುಡುಗಿಯರು ಲಾರೆನ್‌ಳ ವರ್ತನೆಯಿಂದ ವಿಚಲಿತಗೊಳ್ಳುತ್ತಾರೆ ಹಾಗೂ ಪೇಚಿಗೆ ಸಿಲುಕುತ್ತಾರೆ. ಆದರೆ 2021 ರ ಆರಂಭದಲ್ಲಿಯೇ ವಿಡಿಯೋದಲ್ಲಿರುವ ಈ ದೃಶ್ಯಾವಳಿಗಳು ಟ್ವಿಟ್ಟರ್‌ನಲ್ಲಿ ಚರ್ಚೆಯ ವಿಷಯವಾಗುತ್ತದೆ ಹಾಗೂ ಬಳಕೆದಾರರು ರಾಬಿಗೆ “ಕೌಚ್ ಗೈ” ಎಂಬ ಹೆಸರನ್ನಿಟ್ಟು ವಿಡಿಯೋದಲ್ಲಿರುವ ದೃಶ್ಯಗಳನ್ನು ಆಧರಿಸಿ ಲಾರೆನ್‌ಗೆ ಮೋಸ ಮಾಡಿರುವುದಾಗಿ ಆರೋಪಿಸುತ್ತಾರೆ.

ವಿಡಿಯೋದಲ್ಲಿ ನಿಜವಾಗಿಯೂ ಏನು ನಡೆಯುತ್ತದೆ?

ಸಪ್ಟೆಂಬರ್ 21 ರಂದು ಝಾರಾಸ್ “ಕಾಲೇಜಿನಲ್ಲಿ ನನ್ನ ಗೆಳೆಯನನ್ನು ಚಕಿತಗೊಳಿಸುತ್ತಿದ್ದೇನೆ (ಸರ್‌ಪ್ರೈಸ್) ಎಂಬ ಶೀರ್ಷಿಕೆ ಇರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಳು. ಝಾರಾಸ್ ಗೆಳೆಯನ ಕೋಣೆಯನ್ನು ಪ್ರವೇಶಿಸುತ್ತಿರುವ ವಿಡಿಯೋವನ್ನು ಆಕೆಯ ಗೆಳತಿ ಸೆರೆಹಿಡಿದಿದ್ದಳು. ರಾಬಿ ಆ ಕೋಣೆಯಲ್ಲಿ ಮೂವರು ಮಹಿಳೆಯರೊಂದಿಗೆ ಕುಳಿತುಕೊಂಡು ಏನೋ ಆಟವನ್ನು ಆಡುತ್ತಿರುತ್ತಾನೆ ಹಾಗೂ ಅದೇ ಕೋಣೆಯಲ್ಲಿ ರಾಬಿಯ ಗೆಳೆಯನೂ ಇರುತ್ತಾನೆ.

ರಾಬಿ ಅಥವಾ “ಕೌಚ್ ಗೈ” ಝಾರಾಳನ್ನು ನೋಡುತ್ತಿದ್ದಂತೆಯೇ ನಗುಮುಖದಿಂದ ಸ್ವಿಚ್ ಕಂಟ್ರೋಲರ್ ಅನ್ನು ಕೆಳಗಿರಿಸುತ್ತಾನೆ ಹಾಗೂ ಸೆಲ್‌ಫೋನ್ ಕೈಯಲ್ಲಿ ಹಿಡಿದುಕೊಂಡು ಝಾರಾಳನ್ನು ಆಲಂಗಿಸಿಕೊಳ್ಳುತ್ತಾನೆ. ಬರೇ ಎರಡು ವಾರಗಳಲ್ಲಿ ವಿಡಿಯೋವು 51 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಕೌಚ್ ಗೈ ಝಾರಾಳಿಗೆ ಮೋಸ ಮಾಡಿರುವುದಾಗಿ ಬಳಕೆದಾರರು ಆಪಾದಿಸಿದ್ದು ಆತ ಕೊಠಡಿಯಲ್ಲಿ ಮೂವರು ಹುಡುಗಿಯರೊಂದಿಗೆ ಇದ್ದಿರುವುದು ಹಾಗೂ ಆತನ ಮುಖದಲ್ಲಿ ಝಾರಾಳನ್ನು ನೋಡಿ ಯಾವುದೇ ಉತ್ಸಾಹ ಇಲ್ಲದಿರುವುದನ್ನು ನೋಡಿದ್ದಾರೆ.

ಮೀಮ್ಸ್‌ಗಳ ಸುರಿಮಳೆ:

ಝಾರಾಳ ವಿಡಿಯೋ ಮಾತ್ರವಲ್ಲದೆ ಇಂತಹದ್ದೇ ಸರ್‌ಪ್ರೈಸ್ ವಿಡಿಯೋಗಳು ಇಂಟರ್ನೆಟ್‌ನಲ್ಲಿ ಸಾಲು ಸಾಲಾಗಿ ಹರಿದಾಡಿವೆ. ಕೆಲವೊಮ್ಮೆ ಗೆಳೆಯನನ್ನು ಭೇಟಿ ಮಾಡುವ ಸಮಯದಲ್ಲಿ ಕೊಠಡಿಯಿಂದ ಬೇರೊಬ್ಬ ಗೆಳತಿ ಬರುವುದು, ಗೆಳೆಯನು ಬೇರೊಬ್ಬ ಹುಡುಗಿಯೊಂದಿಗೆ ವಿವಾಹವಾಗುತ್ತಿರುವ ಸಮಯದಲ್ಲಿಯೇ ಗೆಳತಿಯ ಸರ್‌ಪ್ರೈಸ್ ಭೇಟಿ, ಬೇರೆ ಹುಡುಗಿಯೊಂದಿಗೆ ಬ್ಯುಸಿಯಾಗಿದ್ದ ಗೆಳೆಯನನ್ನು ಭೇಟಿಯಾಗಲು ಬಂದಂತಹ ಗೆಳತಿಯನ್ನು ಬರಮಾಡಿಕೊಳ್ಳಲು ಮರೆಯುವುದು ಹೀಗೆ ಗೆಳೆಯನು ತನ್ನ ಗೆಳತಿಗೆ ಮೋಸ ಮಾಡುತ್ತಿರುವ ಅನೇಕ ವಿಡಿಯೋಗಳನ್ನು ಸಾಲು ಸಾಲಾಗಿ ಹರಿಬಿಡಲಾಗಿದೆ. ಈ ಸಂದರ್ಭಗಳಲ್ಲಿ ಕೌಚ್ ಗೈ ಎಂಬುದಾಗಿ ಗೆಳೆಯರಿಗೆ ಹೆಸರನ್ನಿಟ್ಟು ತಮ್ಮ ಗೆಳತಿಯರಿಗೆ ಅವರು ಮೋಸಗೈಯ್ಯುತ್ತಿರುವುದಕ್ಕೆ ಛೀಮಾರಿ ಹಾಕಲಾಗುತ್ತಿರುವ ಕಾಮೆಂಟ್‌ಗಳು ವಿಡಿಯೋದಲ್ಲಿ ಗೋಚರಗೊಂಡಿವೆ.

ಕೌಚ್‌ ಗೈ ನಿಜವಾಗಿಯೂ ಮೋಸಗೈಯ್ಯುತ್ತಾನೆಯೇ? ಅವುಗಳ ಆವೃತ್ತಿಗಳು ಇಲ್ಲಿದೆ

ನೊ ಯುವರ್ ಮೀಮ್ ಹೇಳುವಂತೆ, ಕೌಚ್‌ಗೈ ತನ್ನ ಟಿಕ್‌ಟಾಕ್ ಪೇಜ್ @souljawatchambassador ನಲ್ಲಿ ಅಕ್ಟೋಬರ್ 2 ರಂದು ಪ್ರತಿಕ್ರಿಯೆ ನೀಡಿದ್ದಾನೆ. ನಾನು ಕೌಚ್ ಗೈ ಮಾತನಾಡುತ್ತಿರುವೆ. ನೀವು ನೋಡುತ್ತಿರುವ ಪ್ರತಿಯೊಂದು ನಿಜವಾದ ಅಪರಾಧವಾಗಿರುವುದಿಲ್ಲ. ಪರಾವಲಂಬಿ ಜೀವಿಗಳಂತೆ ವರ್ತಿಸಬೇಡಿ. ಹೋಗಿ ತಾಜಾ ಗಾಳಿಯನ್ನು ಆಸ್ವಾದಿಸಿ ಜಾಗರೂಕರಾಗಿರಿ ಎಂಬ ವಿಡಿಯೋ ಒಳಗೊಂಡಿರುವ ಪಠ್ಯ ಸಂದೇಶವನ್ನು ನೀಡಿದ್ದಾನೆ. ಹೆಚ್ಚಿನವರು ಕೌಚ್‌ಗೈ ಯನ್ನು ಕಾಮೆಂಟ್‌ಗಳಲ್ಲಿ ತಮ್ಮನ್ನು ನಿಂದಿಸಿರುವುದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಕುರಿತು ಪ್ರತ್ಯುತ್ತರಿಸಿರಿಸಿರುವ ಕೌಚ್ ಗೈ ತನ್ನ ಪ್ರೇಮ ಸಂಬಂಧವನ್ನು ಹೇಗೆ ನಿಭಾಯಿಸಬೇಕು ಎಂಬುದು ಇತರರಿಗಿಂತ ತನಗೆ ಚೆನ್ನಾಗಿ ತಿಳಿದಿದೆ ಎಂಬುದಾಗಿ ತಿಳಿಸಿದ್ದು ಇದು ಒಂದೇ ದಿನದಲ್ಲಿ 1.2 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಆತನ ಗೆಳತಿ ಲಾರೆನ್‌ಳನ್ನು ಯೂಟ್ಯೂಬರ್ ಅಲಿಸ್ಸಾ ಸಂದರ್ಶನ ನಡೆಸಿದ್ದು, ಇದು ಅಕ್ಟೋಬರ್ 5 ರಂದು ಪ್ರಸಾರಗೊಂಡಿದೆ. ಸರ್‌ಪ್ರೈಸ್ ವಿಡಿಯೋ ಬಹಿರಂಗಗೊಳ್ಳುತ್ತಿದ್ದಂತೆಯೇ ಲಾರೆನ್‌ಗಳಿಗೆ ಹೆಚ್ಚಿನ ದ್ವೇಷದ ಕಾಮೆಂಟ್‌ಗಳು ಬರತೊಡಗಿದವು ಅದಾಗ್ಯೂ ಆಕೆ ಈ ಕಾಮೆಂಟ್‌ಗಳನ್ನು ಧನಾತ್ಮಕವಾಗಿ ಸ್ವೀಕರಿಸತೊಡಗಿದಳು. ಗೆಳೆಯನು ಮೋಸ ಮಾಡುತ್ತಿರುವುದು ಕಾಣುತ್ತಿಲ್ಲವೇ? ನೀನು ಬದುಕಿರುವುದು ಭೂಮಿಗೆ ಭಾರ…ನಿನಗೆ ಕಣ್ಣು ಕಾಣುತ್ತಿಲ್ಲವೇ ಮೊದಲಾದ ಕುಹಕ ಹಾಗೂ ಕಠೋರ ದ್ವೇಷಮಯವಾಗಿರುವ ಕಾಮೆಂಟ್‌ಗಳನ್ನು ಲಾರೆನ್ ಸ್ವೀಕರಿಸಿದ್ದಾಳೆ ಎಂದು ಸಂದರ್ಶನದಲ್ಲಿ ತಿಳಿಸಿದ್ದಾಳೆ.

ನಾವಿಬ್ಬರೂ (ಲಾರೆನ್ ಹಾಗೂ ರಾಬಿ) ಬಹಳ ಕಾಲದಿಂದ ಒಬ್ಬರನ್ನೊಬ್ಬರು ಅರಿತುಕೊಂಡಿದ್ದೇವೆ. ಶಾಲಾ ದಿನಗಳಿಂದಲೇ ನಾವಿಬ್ಬರು ಉತ್ತಮ ಗೆಳೆಯರು ಎಂದು ಲಾರೆನ್ ಹೇಳಿದ್ದಾರೆ. ಇನ್ನು ವಿಡಿಯೋದಲ್ಲಿರುವ ಹುಡುಗಿಯರಿಗೆ ಕೂಡ ಲಾರೆನ್ ಬರುವುದು ತಿಳಿದಿದೆ. ವಿಡಿಯೋ ಮಾಡುತ್ತಿರುವವರು, ಕೋಣೆಯಲ್ಲಿರುವವರಿಗೆ ಈ ಸನ್ನಿವೇಶದ ಅರಿವಿದೆ ಎಂದು ಲಾರೆನ್ ಹೇಳಿದ್ದಾಳೆ.

ಇದನ್ನೂ ಓದಿ: Viral Video: ಲೈವ್​ನಲ್ಲಿದ್ದ ರಿಪೋರ್ಟರ್ ಮೊಬೈಲ್​​ ಕದ್ದ ಕಳ್ಳ: ಖತರ್ನಾಕ್​ ಖದೀಮನನ್ನು ಸೆರೆ ಹಿಡಿದ ವೀಕ್ಷಕರು!

ಕೌಚ್ ಗೈ ಇಂಟರ್ನೆಟ್‌ನಲ್ಲಿ ಇಷ್ಟೊಂದು ಪ್ರಖ್ಯಾತಗೊಂಡಿದ್ದು ಹೇಗೆ?

ಇಂಟರ್ನೆಟ್‌ನಲ್ಲಿ ಟ್ರೆಂಡಿಂಗ್ ವಿಡಿಯೋ ಹೊಸದೇನಲ್ಲ ಆದರೆ ಸರ್‌ಪ್ರೈಸಿಂಗ್ ವಿಡಿಯೋದಲ್ಲಿ ಆಶ್ಚರ್ಯವಿಲ್ಲದಿದ್ದರೂ ಹುಡುಗನು ತನ್ನ ಗೆಳತಿಯ ಆಗಮನದಿಂದ ಅಷ್ಟೊಂದು ಖುಷಿಯಾಗಿರದಂತೆ ಕಂಡುಬಂದಿರುವುದು ಪ್ರತಿಯೊಬ್ಬರೂ ಈ ರೀತಿಯ ಸನ್ನಿವೇಶಕ್ಕೆ ಒಳಪಟ್ಟಿರುವಂತೆ ತೋರಿಸುತ್ತದೆ. ನಾವು ಕೂಡ ನಮ್ಮ ಜೀವನದಲ್ಲಿ ಒಂದೊಮ್ಮೆ ಕೌಚ್ ಗೈಯನ್ನು ಭೇಟಿಯಾಗಿಲ್ಲವೇ ಎಂದು ಗ್ರೇಜಿಯಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Savings Tips: 10 ತಿಂಗಳಲ್ಲಿ 20 ಲಕ್ಷ ಕೂಡಿಟ್ಟ ದಂಪತಿ: ಹೇಗೆ ಎಂಬ ಗುಟ್ಟು ಅವರೇ ಹೇಳಿದ್ದಾರೆ ನೋಡಿ

ವಿಡಿಯೋದಲ್ಲಿರುವ ಸಂಶಯಾತ್ಮಕ ಅಂಶಗಳನ್ನು ನೋಡಿ ಅದನ್ನೇ ದೃಢೀಕರಿಸುವುದನ್ನೇ ಜನರು ಸಾಮಾಜಿಕ ಮಾಧ್ಯಮದಲ್ಲಿ ಮಾಡುತ್ತಿದ್ದಾರೆ. ಕೆಲವು ಜನರು ಇಂತಹ ಅಂಶಗಳನ್ನು ತೆಗೆದುಕೊಂಡು ಅದನ್ನೇ ಹೆಚ್ಚು ಚರ್ಚೆಯ ವಿಷಯವನ್ನಾಗಿ ಮಾಡುತ್ತಾರೆ ಆದರೆ ನಿಮಗೆ ಇದರ ಕುರಿತು ನಂತರವೇ ತಿಳಿಯುತ್ತದೆ ಎಂದು ಗ್ರೇಜಿಯಾ ಹೇಳುತ್ತಾರೆ. ಇತರರಿಗೆ ಕಾಣುವ ಅಂಶಗಳು ನಿಮಗೆ ಗೋಚರಿಸದೇ ಇರಬಹುದು.
Published by:MAshok Kumar
First published: