ನಾವು ಈ ಹಿಂದೆ ಒಂದಕ್ಕಿಂತ ಹೆಚ್ಚು ಆಹಾರ ಪದಾರ್ಥಗಳನ್ನು ಒಟ್ಟಿಗೆ ಸೇರಿಸಿ ಒಂದು ಬೇರೆಯದ್ದೆ ರೀತಿಯ ಭಕ್ಷ್ಯವನ್ನು ತಯಾರಿಸುವ ಸಾಕಷ್ಟು ವೀಡಿಯೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ (Social Video) ನೋಡಿದ್ದೆವು. ಮ್ಯಾಗಿ ನೂಡಲ್ಸ್ (Noodles) ಮತ್ತು ಐಸ್‌ಕ್ರೀಂ ಎರಡನ್ನೂ ಸೇರಿಸಿ ಮತ್ತು ದೋಸೆಯನ್ನು ಇನ್ನ್ಯಾವುದೋ ತಿಂಡಿಯ ಜೊತೆ ಸೇರಿಸಿ ಮಿಕ್ಸ್ ಮಾಡಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ (Viral) ಆಗಿದ್ದವು. ಇವುಗಳನ್ನು ನೋಡಿದ ಜನರು ‘ಸಾಕಪ್ಪಾ ಸಾಕು ಈ ಹೊಸ ಹೊಸ ಆವಿಷ್ಕಾರಗಳು’ ಅಂತ ಹೇಳಿದ್ದುಂಟು. ಮತ್ತೆ ಕೆಲವು ಕಡೆಗಳಲ್ಲಿ ಈ ಹೊಟೇಲ್ (Hotel) ಮತ್ತು ಫಾಸ್ಟ್ ಫುಡ್ ಸೆಂಟರ್ ಗಳಲ್ಲಿ ಅಡುಗೆ ಮಾಡುವವರು ಆಹಾರವನ್ನು ತುಂಬಾನೇ ಕ್ರಿಯೆಟಿವ್ ಆಗಿ ತಯಾರಿಸಿ ಆ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.
ಉದಾಹರಣೆಗೆ ಹೇಳುವುದಾದರೆ ವ್ಯಕ್ತಿಯೊಬ್ಬ ತುಪ್ಪದಲ್ಲಿ ಪರೋಟವನ್ನು ಬೇಯಿಸುವುದನ್ನು ತೋರಿಸುವ ರೀಲ್ ಇತ್ತೀಚೆಗೆ ತುಂಬಾನೇ ವೈರಲ್ ಆಗಿತ್ತು.
ಬಟರ್ ಟೋಸ್ಟ್ ಅನ್ನ ‘ನಿಂಜಾ’ ಟೆಕ್ನಿಕ್ ಬಳಸಿ ಮಾಡಿರುವ ಚೆಫ್
ಇದನ್ನೆಲ್ಲಾ ಈಗೇಕೆ ಮತ್ತೆ ನೆನಪಿಸುತ್ತಿದ್ದೇವೆ ಅಂತ ನೀವು ಕೇಳಿದರೆ, ಅದಕ್ಕೆ ಉತ್ತರ ಇಲ್ಲಿದೆ ನೋಡಿ. ಇಲ್ಲೊಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಆಹಾರವನ್ನು ಹೊಸದೊಂದು ಟೆಕ್ನಿಕ್ ನಿಂದ ಮಾಡಿದ್ದಕ್ಕೆ. ಹೌದು ಆಗ್ರಾದಲ್ಲಿ ರುಚಿಕರವಾದ ಟೋಸ್ಟ್ ಅನ್ನು ‘ನಿಂಜಾ’ ಟೆಕ್ನಿಕ್' ನಿಂದ ತಯಾರಿಸುವುದನ್ನು ಈ ವೀಡಿಯೋದಲ್ಲಿ ನಾವು ನೋಡಬಹುದು. ಇಲ್ಲಿ ವಿಭಿನ್ನತೆ ಎಂದರೆ ಈ ಖಾದ್ಯವನ್ನು ಮಾಡಲು ಮೊದಲು ಬೆಣ್ಣೆಯನ್ನು ಹೇಗೆ ಹರಡಲಾಗುತ್ತದೆ ಎಂಬುದು.
ಈ ಇನ್‌ಸ್ಟಾಗ್ರಾಮ್ ರೀಲ್ ಅನ್ನು ಶಿವ್ ಯಶ್ ಬುಕ್ಕಡ್ ಆಫ್ ಆಗ್ರಾ (@shiv_yash_bhukkadofagra) ಎಂಬ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ, ಒಬ್ಬ ವ್ಯಕ್ತಿಯು ಮೊದಲು ಬೆಣ್ಣೆಯ ತುಂಡನ್ನು ತಮ್ಮ ಅಂಗೈಯಲ್ಲಿರುವ ಪ್ಲಾಸ್ಟಿಕ್ ಹಾಳೆಯ ಮೇಲೆ ಇಡುವುದನ್ನು ನಾವು ನೋಡುತ್ತೇವೆ.
ನಂತರ ಅವರು ಚಮಚದ ಹ್ಯಾಂಡಲ್ ಅನ್ನು ಬಳಸಿ ಅದನ್ನು ಬ್ಲಾಕ್ ಗಳಾಗಿ ಕತ್ತರಿಸಿಕೊಳ್ಳುತ್ತಾರೆ. ಅದರಲ್ಲಿ ಒಂದು ಭಾಗವನ್ನು ಪಕ್ಕಕ್ಕೆ ಇಡುತ್ತಾರೆ. ಅವರು ಪ್ಲಾಸ್ಟಿಕ್ ನಲ್ಲಿ ಆ ಉಳಿದ ಅರ್ಧದ ಬೆಣ್ಣೆ ತುಂಡನ್ನು ಇಟ್ಟು ಮೇಲೆ ಮಡಚಿ ಸಮತಟ್ಟಾದ ಮೇಲ್ಮೈಯಲ್ಲಿ ಇರಿಸುತ್ತಾರೆ. ನಂತರ ಅವರು ಬೆಣ್ಣೆಯನ್ನು ಮುಚ್ಚಿದ ಪ್ಲಾಸ್ಟಿಕ್ ನಿಂದ ತೆಗೆದು ಆ ಚಪ್ಪಟೆಯಾದ ಬೆಣ್ಣೆಯನ್ನು ಟೋಸ್ಟ್ ತುಂಡಿಗೆ ಹಚ್ಚುತ್ತಾರೆ.
ಅವರು ಅದರ ಮೇಲೆ ಸ್ವಲ್ಪ ಸಕ್ಕರೆಯನ್ನು ಹಚ್ಚುತ್ತಾರೆ ಮತ್ತು ಬಟರ್ ಮಾಡಿದ ಟೋಸ್ಟ್ ಅನ್ನು ಗ್ರಾಹಕರಿಗೆ ನೀಡುತ್ತಾರೆ. ‘ಬಟರ್ ಟೋಸ್ಟ್ ನಿಂಜಾ ಟೆಕ್ನಿಕ್’ ಅಂತ ರೀಲ್ ಮೇಲಿನ ಪಠ್ಯ ಹೇಳುತ್ತದೆ. ಶೀರ್ಷಿಕೆಯ ಪ್ರಕಾರ, ಇದು ಆಗ್ರಾದ ಬೆಲನ್‌ಗಂಜ್ ನಲ್ಲಿರುವ ಬಾಬಾ ಟೀ ಸ್ಟಾಲ್ ನಲ್ಲಿ ಲಭ್ಯವಿದೆ.
View this post on Instagram
ಈ ರೀಲ್ ಇದುವರೆಗೂ 3.4 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ..
ಈ ರೀಲ್ ಇದುವರೆಗೆ 3.4 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ ಮತ್ತು 83,000 ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ. ಅಷ್ಟೇ ಅಲ್ಲದೆ ಈ ರೀಲ್ ಹೆಚ್ಚೆಚ್ಚು ಕಾಮೆಂಟ್ ಗಳನ್ನು ಪಡೆಯುತ್ತಲೇ ಇದೆ. ಈ ಕಾಮೆಂಟ್ ಗಳಲ್ಲಿ, ಹೆಚ್ಚಿನ ಜನರು ಈ ಟೋಸ್ಟ್ ಮಾಡಿದ ವಿಧಾನವನ್ನು ತುಂಬಾನೇ ಇಷ್ಟ ಪಟ್ಟಿದ್ದಾರೆ. ಕೆಲವರಿಗೆ ಈ ಹೊಸ ವಿಧಾನ ಅಷ್ಟೊಂದು ಚೆನ್ನಾಗಿದೆ ಅಂತ ಅನ್ನಿಸಲಿಲ್ಲ.
ಈ ಹೊಸ ಟೆಕ್ನಿಕ್ ಬಳಸಿ ಮಾಡಿದ ಟೋಸ್ಟ್ ಗೆ ಪ್ರತಿಕ್ರಿಯಿಸಿದ ನೆಟ್ಟಿಗರು..
ಈ ರೀಲ್ ನೋಡಿದ ನೆಟ್ಟಿಗರಲ್ಲಿ ಒಬ್ಬರು ಈ ಹೊಸ ಟೆಕ್ನಿಕ್ ಅನ್ನು "ವಾಹ್ ಎಂತಹ ಒಳ್ಳೆಯ ಐಡಿಯಾ" ಇದು ಅಂತ ಕಾಮೆಂಟ್ ಹಾಕಿದರೆ, ಇನ್ನೊಬ್ಬರು “ಟೋಸ್ಟ್ ಗೆ ಬಟರ್ ಹಚ್ಚುವ ಹೊಸ ವಿಧಾನವನ್ನು ಕಲಿತಿದ್ದಾರೆ” ಅಂತ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ