• Home
  • »
  • News
  • »
  • trend
  • »
  • Popcorn Guy: ಈ ವ್ಯಕ್ತಿ ಪಾಪ್​ಕಾರ್ನ್​ ಮಾಡೋ ರೀತಿ ಯಾರೂ ಮಾಡಲ್ಲ, ಡೌಟ್ ಇದ್ರೆ ವಿಡಿಯೋ ನೋಡಿ!

Popcorn Guy: ಈ ವ್ಯಕ್ತಿ ಪಾಪ್​ಕಾರ್ನ್​ ಮಾಡೋ ರೀತಿ ಯಾರೂ ಮಾಡಲ್ಲ, ಡೌಟ್ ಇದ್ರೆ ವಿಡಿಯೋ ನೋಡಿ!

ಪಾಪ್​ಕಾರ್ನ್​ ಬಾಯ್​

ಪಾಪ್​ಕಾರ್ನ್​ ಬಾಯ್​

ಕೆಲವು ವಿಚಾರಗಳ ಕಡೆಗೆ ನಮ್ಮ ಗಮನ ಹೋಗುವಂತೆ ಮಾಡುವವರು ಈ ಶಾಪ್ ಗಳಲ್ಲಿ ಕೆಲಸ ಮಾಡುವವರ ವಿಭಿನ್ನವಾದ ಶೈಲಿ ಅಂತ ಹೇಳಿದರೆ ತಪ್ಪಾಗುವುದಿಲ್ಲ.

  • Trending Desk
  • 5-MIN READ
  • Last Updated :
  • Share this:

ನಾವು ಈ ಮಹಾನಗರಗಳಲ್ಲಿ ಇರುವಂತಹ ದೊಡ್ಡ ದೊಡ್ಡ ಶಾಪಿಂಗ್ ಮಾಲ್ (Shopping mall) ಗಳಿಗೆ ಹೋದಾಗ ಮತ್ತು ದೊಡ್ಡ ದೊಡ್ಡ ಮಲ್ಟಿಪ್ಲೆಕ್ಸ್ ಗಳಿಗೆ ಹೋದಾಗ ಅಲ್ಲಿ ಅನೇಕ ವಿಚಾರಗಳು ನಮ್ಮ ಕಣ್ಣುಗಳನ್ನು ಸೆಳೆಯುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಮಾಲ್ ನಲ್ಲಿರುವ ಬ್ರ್ಯಾಂಡೆಡ್ ಬಟ್ಟೆಗಳ ಅಂಗಡಿಗಳಾಗಿರಬಹುದು, ತಿಂಡಿ ತಿನಿಸುಗಳು ಸಿಗುವ ಫುಡ್ ಕೋರ್ಟ್ ಆಗಿರಬಹುದು, ಮಕ್ಕಳಿಗೆ ಆಡುವುದಕ್ಕೆ ಅಂತ ಇರುವ ಫನ್ ಝೋನ್ (Fun Zone) ಆಗಿರಬಹುದು. ಹೀಗೆ ಒಂದೇ, ಎರಡೇ ಅನೇಕ ರೀತಿಯ ಅಂಗಡಿಗಳು ನಮ್ಮ ಕಣ್ಣುಗಳನ್ನು ಸೆಳೆಯುತ್ತವೆ ಅಂತ ಹೇಳಬಹುದು. ಇವೆಲ್ಲವುಗಳ ಕಡೆಗೆ ನಮ್ಮ ಗಮನ ಹೋಗುವುದು ಸಹಜವೇ ಬಿಡಿ, ಆದರೆ ಇನ್ನೂ ಕೆಲವು ವಿಚಾರಗಳ ಕಡೆಗೆ ನಮ್ಮ ಗಮನ ಹೋಗುವಂತೆ ಮಾಡುವವರು ಈ ಶಾಪ್ ಗಳಲ್ಲಿ ಕೆಲಸ ಮಾಡುವವರ ವಿಭಿನ್ನವಾದ ಶೈಲಿ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಹೌದು, ಈ ಚಿಕ್ಕಪುಟ್ಟ ಐಸ್‌ಕ್ರೀಂ ಶಾಪ್ ಗಳಲ್ಲಿ, ಫ್ರ್ಯಾಂಕಿ ಶಾಪ್ ಗಳಲ್ಲಿ, ಪಾಪ್‌ಕಾರ್ನ್ ಶಾಪ್ ಗಳಲ್ಲಿ ಕೆಲಸ ಮಾಡುವ ಹುಡುಗರು ತಮ್ಮೆಡೆಗೆ ಗ್ರಾಹಕರನ್ನು ಸೆಳೆಯಲು ತಮ್ಮದೇ ಆದ ಒಂದು ವಿಭಿನ್ನವಾದ ಸ್ಟೈಲ್ ಅನ್ನು ಮೈಗೂಡಿಸಿಕೊಂಡಿರುತ್ತಾರೆ ಅಂತ ಹೇಳಬಹುದು.


ವಿಭಿನ್ನ ಶೈಲಿಯಲ್ಲಿ ಸರ್ವ್ ಮಾಡುವ ವೀಡಿಯೋಗಳು ಬಂದಿದ್ದವು


ನಾವು ಈ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಒಬ್ಬ ಐಸ್‌ಕ್ರೀಂ ಮಾರುವ ವ್ಯಕ್ತಿ ಮಕ್ಕಳ ಎದುರಿಗೆ ಒಳ್ಳೆ ಮ್ಯಾಜಿಕ್ ಮಾಡಿದವರಂತೆ ಆ ಬಿಸ್ಕತ್ ಐಸ್‌ಕ್ರೀಂ ಅನ್ನು ಮೇಲಿಂದ ಕೆಳಕ್ಕೆ ಎಸೆದ ಹಾಗೆ ಮಾಡುತ್ತಾ, ಐಸ್‌ಕ್ರೀಂ ಯಾವಾಗಪ್ಪಾ ನಮಗೆ ಈ ಅಂಕಲ್ ಕೊಡ್ತಾರೆ ಅಂತ ಅಲ್ಲಿಯೇ ಕಾದು ನಿಂತ ಮಕ್ಕಳಿಗೆ ಒಂದು ರೀತಿಯ ಮನರಂಜನೆಯನ್ನು ನೀಡುತ್ತಿರುವ ವೀಡಿಯೋ ನೋಡಿದ್ದೆವು.


ಇದೊಂದೆ ಅಲ್ಲ, ಎಷ್ಟೋ ಜನರು ತಮ್ಮ ಮಾರಾಟ ಮಳಿಗೆಯಲ್ಲಿ ನಿಂತು ಗ್ರಾಹಕರನ್ನು ತಮ್ಮ ಕಡೆಗೆ ಸೆಳೆಯಲು ವಿಭಿನ್ನವಾದ ಧ್ವನಿಯಲ್ಲಿ ಮತ್ತು ಶೈಲಿಯಲ್ಲಿ ಕರೆಯುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಈ ರೀತಿಯ ವಿಭಿನ್ನವಾದ ಶೈಲಿಗಳು ನಿಜಕ್ಕೂ ಅನೇಕ ಗ್ರಾಹಕರ ಗಮನವನ್ನು ಸೆಳೆಯುತ್ತವೆ ಅಂತ ಹೇಳಬಹುದು. ಈಗೇಕೆ ನಾವು ಇದರ ಬಗ್ಗೆ ಇಷ್ಟೆಲ್ಲಾ ಮಾತಾಡುತ್ತಿದ್ದೇವೆ ಅಂತ ನಿಮಗೆ ಪ್ರಶ್ನೆ ಮೂಡಬಹುದು, ನಿಮ್ಮ ಪ್ರಶ್ನೆಗೆ ಉತ್ತರಿಸಲು ಇಲ್ಲೊಂದು ವೀಡಿಯೋ ಇದೆ ನೋಡಿ.


ಈ ಸರ್ವರ್ ಪಾಪ್‌ಕಾರ್ನ್ ಸರ್ವ್ ಮಾಡುವ ಸ್ಟೈಲ್ ತುಂಬಾ ವಿಭಿನ್ನ..


ಇಲ್ಲೊಬ್ಬ ಸರ್ವರ್ ಇದ್ದಾರೆ ನೋಡಿ.. ಆತನ ಬಳಿ ಹೋಗಿ ನಿಂತು ಅವನು ಪಾಪ್‌ಕಾರ್ನ್ ಸರ್ವ್ ಮಾಡುವುದನ್ನು ನೀವು ನೋಡಿದರೆ ಸಾಕು ಅವನ ಫ್ಯಾನ್ ಆಗುವುದು ಗ್ಯಾರೆಂಟಿ ಅಂತ ಹೇಳಬಹುದು.


ಇದನ್ನೂ ಓದಿ: ಹಾವಿನ ಜೊತೆ ಡೇಟಿಂಗ್​ ಮಾಡಿದ ಸುಂದರಿ, ನೆಟ್ಟಿಗರ ಹುಬ್ಬೇರಿಸಿದ ವಿಡಿಯೋ!


ಈ ಹೊಸ ಸರ್ವರ್ ಟೆಕ್ಸಾಸ್ ನ ಚಿತ್ರಮಂದಿರದಲ್ಲಿ ತಮ್ಮ ಸರ್ವಿಂಗ್ ಸ್ಟೈಲ್ ನಿಂದಾಗಿ ಅತಿಥಿಗಳನ್ನು ರಂಜಿಸುವುದರೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಸಹ ಆಗಿದೆ ಇವರ ವೀಡಿಯೋ ಅಂತಾನೆ ಹೇಳಬಹುದು.


ಜೇಸನ್ ಗ್ರೋಸ್ಬಾಲ್ ಟೆಕ್ಸಾಸ್ ನ ಕಾರ್ಪಸ್ ಕ್ರಿಸ್ಟಿ ಸೆಂಚುರಿ 16 ಥಿಯೇಟರ್ ನ ಉದ್ಯೋಗಿಯಾಗಿದ್ದಾರೆ. ಅವರು ಟಿಕ್‌ಟಾಕ್ ನಲ್ಲಿ 'ಪಾಪ್ಕಾರ್ನ್ ಗಾಯ್' ಅಂತಾನೆ ಜನಪ್ರಿಯರಾಗಿದ್ದಾರೆ.


ಸಿಕ್ಕಾಪಟ್ಟೆ ಹಿಟ್ ಆಗಿದೆ ಈ ಬಟರ್ ಕಿಂಗ್ ವೀಡಿಯೋ


ಅವರ ವೀಡಿಯೋಗಳು ಈಗ ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿಯೂ ಹಿಟ್ ಆಗಿರುವುದರಿಂದ, ಅವರನ್ನು ಅನೇಕರು 'ಬಟರ್ ಕಿಂಗ್' ಎಂದು ಸಹ ಕರೆಯುತ್ತಿದ್ದಾರೆ.


ಜೇಸನ್, ಚಲನಚಿತ್ರ ನೋಡಲು ಬಂದ ವೀಕ್ಷಕರಿಗಾಗಿ ಸಾಕಷ್ಟು ಪ್ರದರ್ಶನಗಳನ್ನು ನೀಡುತ್ತಾರೆ. ಅವರ ವಿಶಿಷ್ಟ ಶೈಲಿಯ ಬಟರ್ ಮತ್ತು ಪಾಪ್‌ಕಾರ್ನ್ ಸರ್ವ್ ಮಾಡುವುದು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಹಿಟ್ ಆಗಿದೆ.




ಜೇಸನ್ ಅವರ ಈ ಹೊಸ ವೀಡಿಯೋ 18 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಜೇಸನ್ ಅವರ ಕೌಶಲ್ಯ, ವರ್ತನೆ, ಜಾಣ್ಮೆ ಮತ್ತು ಒಟ್ಟಾರೆ ಆಕರ್ಷಣೆಯಿಂದ ನೆಟ್ಟಿಗರು ತುಂಬಾನೇ ಆಕರ್ಷಿತರಾಗಿದ್ದಾರೆ ಎಂದು ಹೇಳಬಹುದು.

First published: