Butter Coffee: ಡಲ್ಗೋನಾ ಕಾಫಿ ಬಳಿಕ ಈಗ ಬೆಣ್ಣೆ ಕಾಫಿಯದ್ದೇ ಹವಾ!; ಹೆಸರು ಕೇಳೇ ಮೂಗು ಮುರಿದ ಕಾಫಿ ಪ್ರಿಯರು

Butter Coffee Video: ಮೊದಲು ಕಾಫಿ ತಯಾರಿಸಿ ಅದಕ್ಕೆ ಹಾಲು ಬೆರೆಸುತ್ತಾರೆ. ನಂತರ ಅದಕ್ಕೆ ಒಂದು ದೊಡ್ಡ ಚಮಚದಷ್ಟು ಅಮೂಲ್ salted butter ಬೆರೆಸುತ್ತಾರೆ. ಇದಕ್ಕೆ ಮತ್ತಷ್ಟು ಕಾಫಿ ಸೇರಿಸಿ ಚೆನ್ನಾಗಿ ಬ್ಲೆಂಡ್ ಮಾಡುತ್ತಾರೆ.

  • Share this:
ಚಿತ್ರ ವಿಚಿತ್ರವಾದ ಆಹಾರಗಳು, ಅದರಲ್ಲಿ ನಡೆಯೋ ಕಂಡು ಕೇಳರಿಯದ ಪ್ರಯೋಗಗಳು ಹೊಸತೇನಲ್ಲ. ಅದ್ರಲ್ಲೂ Social Media ಬಂದ್ಮೇಲೆ ಅರ್ಥವೇ ಆಗದ ಅನೇಕ ಖಾದ್ಯಗಳ ಪ್ರಯೋಗ ನಡೆಯುತ್ತಲೇ ಇರೋದು ಗೊತ್ತಾಗುತ್ತಿರುತ್ತದೆ. ಇದಕ್ಕೆ ಹೊಸ ಸೇರ್ಪಡೆ Butter Coffee ಅಂದ್ರೆ ಬೆಣ್ಣೆಯ ಕಾಫಿ.

ದಕ್ಷಿಣ ಭಾರತೀಯರಿಗೆ ಕಾಫಿ ಬಗ್ಗೆ ಇರೋ ಒಲವೇ ಬೇರೆ. ಹಾಗಂತ ಕಾಫಿಯ ನಾನಾ ರೂಪಗಳನ್ನ ಅವರೇನೂ ತಿರಸ್ಕರಿಸಿಲ್ಲ. ಆದರೆ ಈ ಬೆಣ್ಣೆ ಕಾಫಿ ಕತೆ ಬೇರೆಯದ್ದೇ. ದೆಹಲಿಯ ಜಾಮಾ ಮಸ್ಜಿದ್ ಬಳಿಯ ಗಲ್ಲಿಯೊಂದರಲ್ಲಿ ‘ಅಮೂಲ್ ಬಟರ್ ಕಾಫಿ ಮತ್ತು ಬಟರ್ ಟೀ ಯನ್ನು ಮಾರುತ್ತಾ ಇದ್ದದ್ದನ್ನು ಖ್ಯಾತ vlogger ಅಮರ್ ಸಿರೋಹಿ ಗಮನಿಸಿದ್ದಾರೆ. ಕಳೆದ 20 ವರ್ಷಗಳಿಂದ ಈ ವಿಭಿನ್ನ, ವಿಚಿತ್ರ ಕಾಫಿ- ಟೀಗಳನ್ನು ಇಲ್ಲಿ ವ್ಯಾಪಾರ ಮಾಡಲಾಗ್ತಿದ್ಯಂತೆ.

ವ್ಯಾಪಾರಿ ಮೊದಲು ಕಾಫಿ ತಯಾರಿಸಿ ಅದಕ್ಕೆ ಹಾಲು ಬೆರೆಸುತ್ತಾರೆ. ನಂತರ ಅದಕ್ಕೆ ಒಂದು ದೊಡ್ಡ ಚಮಚದಷ್ಟು ಅಮೂಲ್ salted butter ಬೆರೆಸುತ್ತಾರೆ. ಇದಕ್ಕೆ ಮತ್ತಷ್ಟು ಕಾಫಿ ಸೇರಿಸಿ ಚೆನ್ನಾಗಿ ಬ್ಲೆಂಡ್ ಮಾಡುತ್ತಾರೆ. ನಂತರ ಇದನ್ನು ಲೋಟಗಳಿಗೆ ಹಾಕಿ ಮೇಲೆ ಕೊಕೊ ಪುಡಿಯನ್ನು ಉದುರಿಸುತ್ತಾರೆ. ನೋಡೋಕೆ ಇದೊಂದು ವಿಭಿನ್ನವಾದ ಮತ್ತು ವಿಚಿತ್ರವಾದ ಪೇಯ ಎನಿಸಿದರೂ ಅಮರ್ ಸಿರೋಹಿಗೆ ಇದರ ರುಚಿ ಇಷ್ಟವಾಗಲಿಲ್ಲವಂತೆ. Foodie.incarnate ಎನ್ನುವ ತಮ್ಮ Instagram ಪೇಜಿನಲ್ಲಿ ಅಮರ್ ಸಿರೋಹಿ ಬಟರ್ ಕಾಫಿ ತಯಾರಿಕೆಯ ವಿಡಿಯೋ ಹಂಚಿಕೊಂಡಿದ್ದಾರೆ.

ಕೆಲವು ಕಾಫಿ ಪ್ರಿಯರಂತೂ ಉಪ್ಪು ಹಾಕಿದ ಕಾಫಿ ಎನ್ನುವುದನ್ನು ಕೇಳಿಯೇ ಹೌಹಾರಿದರೆ ಮತ್ತೆ ಕೆಲವರು ಹೊಸ ಪ್ರಯೋಗವನ್ನು ಸ್ವಾಗತಿಸಿದ್ದಾರೆ. ಒಬ್ಬರಂತೂ, ಇದು ಬುಲೆಟ್ ಪ್ರೂಫ್ ಕಾಫಿ… ಕೆಲವರು ಬೆಣ್ಣೆ ಜೊತೆ ಮತ್ತೆ ಕೆಲವರು ಕೊಬ್ಬರಿ ಎಣ್ಣೆಯ ಜೊತೆಗೂ ಸೇವಿಸುತ್ತಾರೆ ಎಂದಿದ್ದಾರೆ. ಮತ್ತೊಬ್ಬರು, ಬೆಣ್ಣೆ ಕಾಫಿ ಹೊಸತೇನಲ್ಲ, ಇದು ಬಹಳ ಹಳೆಯದು ಮತ್ತು ಇದರ ರುಚಿ ಅದ್ಭುತ ಎಂದು ಹೊಗಳಿದ್ದಾರೆ.

ಮೆಣಸು ಮತ್ತು ಮಸಾಲೆ ಹಾಕಿದ ಜಿಲೇಬಿ ಕೂಡ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿರುವ ವಿಚಿತ್ರ ಖಾದ್ಯ. ನೋಡೋಕೆ ಚಿಲ್ಲಿ ಪನ್ನೀರ್ ಅಥವಾ ಚಿಲ್ಲಿ ಚಿಕನ್ ತಯಾರಿಸುವ ರೀತಿಯಲ್ಲೇ ಕಾಣುವ ಇದರ ವಿಧಾನ ತಿನ್ನಲು ಮನಸ್ಸು ಬಾರದಷ್ಟು ವಿಚಿತ್ರ ಎನಿಸುತ್ತದೆ.
Published by:Sushma Chakre
First published: