ಮುಂಬೈ: ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ಮನೆಯಲ್ಲಿ ಮತ್ತೊಮ್ಮೆ ಸಂತಸ (Happiness) ಗರಿಗೆದರಿದೆ. ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ (Neeta Ambani) ಅವರ ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani) ನಿಶ್ಚಿತಾರ್ಥ ಸಮಾರಂಭ ನೆರವೇರಿದೆ. ಅನಂತ್ ಅಂಬಾನಿ ತನ್ನ ಗೆಳತಿ ರಾಧಿಕಾ ಮರ್ಚೆಂಟ್ (Radhika Merchant ) ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥ ಕಾರ್ಯಕ್ರಮ ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀನಾಥ್ ಜಿ ದೇವಸ್ಥಾನದಲ್ಲಿ ನಡೆದಿದೆ. ಇನ್ನು ಅನಂತ್ ಮತ್ತು ರಾಧಿಕಾ ಲವ್ ಬಗ್ಗೆ ಹಲವು ಊಹಾಪೋಹಗಳು ಇದ್ದವು. ಇದೀಗ ನಿಶ್ಚಿತಾರ್ಥ ನೆರವೇರುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಸದ್ಯಕ್ಕೆ ಇಬ್ಬರ ಮದುವೆ ಯಾವಾಗ ಎಂಬ ಬಗ್ಗೆ ಹೇಳಲಾಗಿಲ್ಲ.
ಸರಳ ಲೈಫ್ ಸ್ಟೈಲ್ ಲೀಡ್ ಮಾಡ್ತಾರೆ ರಾಧಿಕಾ ಮರ್ಚೆಂಟ್
ಇನ್ನು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ನಿಶ್ಚಿತಾರ್ಥದ ಬಳಿಕ ರಾಧಿಕಾ ಮರ್ಚೆಂಟ್ ಯಾರು, ಆಕೆಯ ಜೀವನಶೈಲಿ ಮತ್ತು ವಿದ್ಯಾಭ್ಯಾಸ, ಲವ್ ಲೈಫ್ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿಯಲು ಜನರು ಕಾತರರಾಗಿದ್ದಾರೆ.
ಅಂದ ಹಾಗೇ ರಾಧಿಕಾ ಮರ್ಚೆಂಟ್, ಎನ್ಕೋರ್ ಹೆಲ್ತ್ ಕೇರ್ ಸಿಇಒ ವೀರೇನ್ ಮರ್ಚೆಂಟ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ. ರಾಧಿಕಾ ಗೆ ಈಗ 28ರ ಹರೆಯ. ರಾಧಿಕಾ ಭರತನಾಟ್ಯ ಡ್ಯಾನ್ಸರ್ ಆಗಿದ್ದಾರೆ. ಶ್ರೀ ನಿಭಾ ಆರ್ಟ್ಸ್ನ ಗುರು ಭಾವನಾ ಠಾಕರ್ ಅವರಿಂದ ಭರತನಾಟ್ಯ ಕಲಿತಿದ್ದಾಳೆ.
ಅಂದ ಹಾಗೇ ರಾಧಿಕಾ ಮರ್ಚೆಂಟ್ ಕುಟುಂಬದ ಮೂಲ ಗುಜರಾತ್ ನ ಕಚ್ಛ್ ಪ್ರಾಂತ್ಯ. ರಿಲಯನ್ಸ್ ಗ್ರೂಪ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅವರೊಂದಿಗೆ ಈ ಹಿಂದೆ ರಾಧಿಕಾ ಮರ್ಚೆಂಟ್ ಕಾಣಿಸಿಕೊಂಡಿದ್ದು ಸುದ್ದಿಯಾಗಿತ್ತು.
ಅಲ್ಲದೇ ರಾಧಿಕಾ ಮರ್ಚೆಂಟ್, ಮುಖೇಶ್ ಅಂಬಾನಿ ಹಿರಿಯ ಪುತ್ರ ಆಕಾಶ್ ಅಂಬಾನಿ ಮದುವೆ ಮತ್ತು ನಿಶ್ಚಿತಾರ್ಥ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು. ನೀತಾ ಅಂಬಾನಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಈಗ ಅನಂತ್ ಮತ್ತು ರಾಧಿಕಾ ನಿಶ್ಚಿತಾರ್ಥ ನೆರವೇರಿದೆ.
ಯಾರು ಈ ರಾಧಿಕಾ ಮರ್ಚೆಂಟ್?
ರಾಧಿಕಾ ಮರ್ಚೆಂಟ್, ಎನ್ಕೋರ್ ಹೆಲ್ತ್ಕೇರ್ ಸಿಇಒ ವೀರೇನ್ ಮರ್ಚೆಂಟ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ. ವಯಸ್ಸು 28 ವರ್ಷ. ಭರತನಾಟ್ಯ ಡ್ಯಾನ್ಸರ್. ತಂಗಿಯ ಹೆಸರು ಅಂಜಲಿ ಮರ್ಚೆಂಟ್.
ರಾಧಿಕಾ ಮತ್ತು ಅನಂತ್ ಪರಸ್ಪರ ಸ್ನೇಹಿತರು. 28 ವರ್ಷದ ರಾಧಿಕಾ, ಭರತನಾಟ್ಯ ಮಾಡ್ತಾರೆ. ಹಲವು ವರ್ಷಗಳಿಂದ ರಾಧಿಕಾ ಅಂಬಾನಿ ಕುಟುಂಬದ ಎಲ್ಲಾ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡಿದ್ದಾರೆ.
2018ರಲ್ಲಿ ಅಂಬಾನಿ ಕುಟುಂಬದ ಜೊತೆ ಕಾಣಿಸಿಕೊಂಡಿದ್ದ ರಾಧಿಕಾ
ಇಶಾ ಮತ್ತು ಆಕಾಶ್ ಅಂಬಾನಿ ಅವರ ನಿಶ್ಚಿತಾರ್ಥ 2018 ರಲ್ಲಿ ನಡೆದಿತ್ತು. ಈ ವೇಳೆ ರಾಧಿಕಾ ಮರ್ಚೆಂಟ್ ತುಂಬಾ ಸಕ್ರಿಯರಾಗಿದ್ದರು. ನೀತಾ ಅಂಬಾನಿ ಮತ್ತು ಇಶಾ ಅಂಬಾನಿ ಜೊತೆಗೆ ರಾಧಿಕಾ ಆತ್ಮೀಯ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗಿದೆ.
ಇನ್ನು ರಾಧಿಕಾ ಅವರ ಸೋಷಿಯಲ್ ಮೀಡಿಯಾ ಪೇಜ್ನಲ್ಲಿ ನೀತಾ ಮತ್ತು ಮುಖೇಶ್ ಅಂಬಾನಿ ಜೊತೆಗಿನ ಹಲವು ಫೋಟೋಗಳಿವೆ. ಹೀಗಾಗಿ 2019 ರಲ್ಲೇ ಅನಂತ್ ಮತ್ತು ರಾಧಿಕಾ ನಿಶ್ಚಿತಾರ್ಥದ ವದಂತಿ ಹಬ್ಬಿತ್ತು. ಇದನ್ನು ರಿಲಯನ್ಸ್ ಗ್ರೂಪ್ ವದಂತಿ ಎಂದಿತ್ತು.
ಈ ವರ್ಷ ಮರ್ಚೆಂಟ್ ಮತ್ತು ಅಂಬಾನಿ ಕುಟುಂಬ ಬೃಹತ್ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. 2022ರ ಆರಂಭದಲ್ಲಿ ಮುಂಬೈನ ಜಿಯೋ ವರ್ಲ್ಡ್ ಸೆಂಟರ್ ನಲ್ಲಿ ರಂಗೇತ್ರಂ ಸಮಾರಂಭ ಆಯೋಜಿಸಲಾಗಿತ್ತು. ಇದರಲ್ಲಿ ಖ್ಯಾತ ನಟ ನಟಿಯರು, ಸೆಲೆಬ್ರಿಟಿಗಳು, ರಾಜಕಾರಣಿಗಳು, ಭಾಗವಹಿಸಿದ್ದರು.
ಅನಂತ್ ಮತ್ತು ರಾಧಿಕಾ ಲವ್ ಸ್ಟೋರಿ
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಅನಂತ್ ಮತ್ತು ರಾಧಿಕಾ ಒಳ್ಳೆಯ ಸ್ನೇಹಿತರಾಗಿದ್ದರು. ನಂತರ ಸ್ನೇಹ ಪ್ರೀತಿಗೆ ತಿರುಗಿದೆ. 2018ರಲ್ಲಿ ಅನಂತ್ ಮತ್ತು ರಾಧಿಕಾ ಒಬ್ಬರನ್ನೊಬ್ಬರು ಪ್ರೀತಿಯಿಂದ ನೋಡುತ್ತಿರುವ ಫೋಟೋ ವೈರಲ್ ಆಗಿದೆ.
ಅಂಬಾನಿ ಕುಟುಂಬದ ಪ್ರತೀ ಕಾರ್ಯಕ್ರಮದಲ್ಲೂ ಮರ್ಚೆಂಟ್ ಕುಟುಂಬ ಹಾಜರಿರುತ್ತೆ. ಅಲ್ಲಿ ರಾಧಿಕಾ ಕೂಡ ಇರ್ತಾರೆ. ಆದ್ರೆ ರಾಧಿಕಾ ಎಷ್ಟೇ ಐಷಾರಾಮಿ ಜೀವನ ಹೊಂದಿದ್ದರೂ ಸಹ ತುಂಬಾ ಸಿಂಪಲ್ ಆಗಿರ್ತಾರೆ. ಸರಳ ಜೀವನ ನಡೆಸುತ್ತಾರೆ. ಹೆಚ್ಚು ಮೇಕಪ್ ಇಲ್ಲದೇ, ಆಭರಣವಿಲ್ಲದೇ, ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಳ್ತಾರೆ.
ಇದನ್ನೂ ಓದಿ: ಬ್ಯುಸಿನೆಸ್ ಕುಟುಂಬದ ರಾಧಿಕಾ ಮರ್ಚೆಂಟ್ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿಗಳು
ರಾಧಿಕಾ ಟ್ರೆಕ್ಕಿಂಗ್ ಹೋಗುವುದು ಇಷ್ಟ ಪಡ್ತಾರೆ. ರಜಾ ದಿನಗಳನ್ನ ಪ್ರವಾಸ ಮಾಡಿ ಕಳೆಯಲು ಇಷ್ಟವಾಗುತ್ತಂತೆ. ಇನ್ನು ಹೆಚ್ಚಾಗಿ ವಿದೇಶಗಳಿಗೆ ಹೋಗದೇ, ದೇಶದಲ್ಲೇ ಹಲವು ಸ್ಥಳಗಳನ್ನು ಸುತ್ತಾಡಲು ಇಷ್ಟವಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ