Viral Video: ತನ್ನ ಕೈಯಿಂದಲೇ ಹುಲಿಗೆ ಆಹಾರ ನೀಡ್ತಿದ್ದಾನೆ ಈ ವ್ಯಕ್ತಿ! ಏನ್ ಧೈರ್ಯ ಗುರು

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ತಾನು ಕುಳಿತಿರುವ ಬಸ್ಸಿನ ಕಿಟಕಿಯನ್ನು ತೆರೆದು ರಾಜಾ ರೋಷವಾಗಿ ಹುಲಿಗೆ ಆಹಾರ ನೀಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ ವ್ಯಕ್ತಿಯ ಈ ಕೃತ್ಯವನ್ನು ನೋಡಿ ಪ್ರತಿಯೊಬ್ಬರೂ ಆಶ್ಚರ್ಯಚಕಿತರಾಗಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗಂತೂ ಈ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಪ್ರತಿದಿನ ಹರಿದಾಡುವ ಕುತೂಹಲಕಾರಿ ವಿಡಿಯೋಗಳನ್ನು ಲೆಕ್ಕವಿಡುವುದಕ್ಕೆ ಸಾಧ್ಯವಾಗುವುದಿಲ್ಲ. ಅಷ್ಟರ ಮಟ್ಟಿಗೆ ಈ ವಿಡಿಯೋಗಳು (Videos) ನಮ್ಮ ಇಂಟರ್ನೆಟ್ ಜಗತ್ತನ್ನು ಅವರಿಸಿಕೊಂಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ವಿಡಿಯೋಗಳಲ್ಲಿ ತಮಾಷೆಯಾಗಿರುವ ವಿಡಿಯೋಗಳು (Funny Video), ಮನಸ್ಸಿಗೆ ಮುದ ನೀಡುವ ವಿಷಯಗಳು, ಬದುಕಿಗೆ ಸ್ಪೂರ್ತಿ ನೀಡುವ ವಿಷಯಗಳು, ಭಯಾನಕವಾಗಿರುವ ವಿಷಯಗಳು ಮತ್ತು ಕುತೂಹಲ ಕೆರಳಿಸುವ ವಿಡಿಯೋಗಳೆಲ್ಲವನ್ನು ಒಳಗೊಂಡಿರುತ್ತದೆ ಎಂದು ಹೇಳಿದರೆ ಸುಳ್ಳಲ್ಲ. ಈ ವಿಡಿಯೋಗಳಲ್ಲಿ ಈ ಪ್ರಾಣಿಗಳಿಗೆ (Animals) ಸಂಬಂಧಿಸಿದ ವೀಡಿಯೋಗಳು ಇತ್ತೀಚೆಗೆ ತುಂಬಾನೇ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ ಸಹ ಆಗುತ್ತಿವೆ.

ಅದರಲ್ಲೂ ಸಾಕು ನಾಯಿಗಳು ಮತ್ತು ಆನೆಗಳ ತರ್ಲೆ ತುಂಟಾಟಗಳ ವಿಡಿಯೋಗಳಂತೂ ತುಂಬಾನೇ ಹರಿದಾಡುತ್ತಿರುತ್ತವೆ.  ಈ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ತುಂಬಾನೇ ಇಷ್ಟಪಡುತ್ತಾರೆ, ಆದರೆ ಇತ್ತೀಚೆಗೆ ವೈರಲ್ ಆಗುತ್ತಿರುವ ವಿಡಿಯೋ ನೋಡುಗರಿಗೆ ಭಯ ಹುಟ್ಟಿಸುವುದಂತೂ ಗ್ಯಾರೆಂಟಿ ಅಂತ ಹೇಳಬಹುದು.

ಹುಲಿಗೆ ಆಹಾರ ನೀಡಿದ ಚಾಲಕ
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ತಾನು ಕುಳಿತಿರುವ ಬಸ್ಸಿನ ಕಿಟಕಿಯನ್ನು ತೆರೆದು ರಾಜಾ ರೋಷವಾಗಿ ಹುಲಿಗೆ ಆಹಾರ ನೀಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ ವ್ಯಕ್ತಿಯ ಈ ಕೃತ್ಯವನ್ನು ನೋಡಿ ಪ್ರತಿಯೊಬ್ಬರೂ ಆಶ್ಚರ್ಯಚಕಿತರಾಗಿದ್ದಾರೆ.

ವೈರಲ್ ವಿಡಿಯೋದಲ್ಲಿ ಇರುವುದೇನು 
ವಾಸ್ತವವಾಗಿ, ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಬಸ್ ಚಾಲಕನು ರಾಷ್ಟ್ರೀಯ ಉದ್ಯಾನವನದಲ್ಲಿ ಚಾಲನೆ ಮಾಡುತ್ತಿರುವುದನ್ನು ನಾವು ಕಾಣಬಹುದು. ವಿಡಿಯೋದಲ್ಲಿ ವ್ಯಕ್ತಿಯು ಬಸ್ ನ ಕಿಟಕಿಯಿಂದ ಮಾಂಸದ ತುಂಡನ್ನು ತೋರಿಸುವ ಮೂಲಕ ದೂರದಲ್ಲಿ ನಿಂತಿದ್ದ ಹುಲಿಯನ್ನು ಕರೆಯುವುದನ್ನು ನೀವು ನೋಡುತ್ತೀರಿ. ಹುಲಿ ತಕ್ಷಣವೇ ಮುಂದಕ್ಕೆ ಬರುತ್ತದೆ ಮತ್ತು ಕೋಲಿನಲ್ಲಿರುವ ಮಾಂಸದ ತುಂಡನ್ನು ಗಪಕ್ಕನೆ ಬಾಯಿಯಿಂದ ಎಳೆದುಕೊಂಡು ಅಗೆಯಲು ಶುರು ಮಾಡುತ್ತದೆ. ಈ ವಿಡಿಯೋವನ್ನು ನೋಡಿದ ನಂತರ, ಆಘಾತಕ್ಕೊಳಗಾದ ಸಾಮಾಜಿಕ ಮಾಧ್ಯಮ ಬಳಕೆದಾರರು ವಿಭಿನ್ನ ರೀತಿಯಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಇದನ್ನೂ ಓದಿ: Black Mumba: ಬೆಡ್ ರೂಮ್​ಗೆ ಬಂದ ಭಯಾನಕ ಬ್ಲ್ಯಾಕ್ ಮಾಂಬಾ! ಮನೆಮಂದಿ ಶಾಕ್




ಬಸ್ ಕಿಟಕಿಯಿಂದ ಆ ಮಾಂಸದ ತುಂಡನ್ನು ತೆಗೆದುಕೊಳ್ಳಲು ಎದ್ದು ನಿಂತ ಹುಲಿ ಆ ಮಾಂಸದ ತುಂಡನ್ನು ಬಾಯಿಗೆ ಹಾಕಿಕೊಂಡ ನಂತರ ತನ್ನ ಮುಖವನ್ನು ತನ್ನ ಕೈಯಿಂದ ಒರೆಸಿಕೊಳ್ಳುತ್ತದೆ. ಹುಲಿಗೆ ಆಹಾರ ನೀಡಿದ ನಂತರ, ಚಾಲಕ ಪ್ರಾಣಿಯನ್ನು ದೂರ ಹೋಗುವಂತೆ ಸೂಚಿಸುತ್ತಾನೆ ಮತ್ತು ಕಿಟಕಿಯನ್ನು ಮುಚ್ಚುತ್ತಾನೆ.

ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದು ಹೀಗೆ
ಈ ವಿಡಿಯೋವನ್ನು 'ದಿ ಅಮೇಜಿಂಗ್ ಟೈಗರ್ಸ್' ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದು, ಈಗಾಗಲೇ ಇದಕ್ಕೆ 32,000 ಕ್ಕೂ ಹೆಚ್ಚು ಲೈಕ್ ಗಳು ಲಭಿಸಿವೆ. ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಕೆಲವರು ಇದನ್ನು "ದಿಟ್ಟ ನಡೆ" ಎಂದು ಕರೆದರೆ, ಇನ್ನೂ ಕೆಲವರು ಚಾಲಕನನ್ನು ಪ್ರಶ್ನಿಸಿ ‘ಬಸ್ ಚಾಲಕನ ಈ ಕೃತ್ಯವು ಅವನಿಗೆ ಮಾರಣಾಂತಿಕವಾಗಿ ಪರಿಣಮಿಸಬಹುದಾಗಿತ್ತು’ ಎಂದು ಹೇಳಿದ್ದಾರೆ.

ಅದೇ ಸಮಯದಲ್ಲಿ, ಇನ್ನೂ ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಈ ಚಾಲಕನನ್ನು ದೊಡ್ಡ ಮೂರ್ಖ ಎಂದು ಸಹ ಕರೆದಿದ್ದಾರೆ. ಒಬ್ಬ ಬಳಕೆದಾರರು 'ಕೇವಲ ವಿಡಿಯೋದಲ್ಲಿ ಲೈಕ್ ಗಳು ಮತ್ತು ವೀಕ್ಷಣೆಗಳನ್ನು ಪಡೆಯಲು ಇಂತಹ ಮೂರ್ಖತನ ಮಾಡುವುದು ಸರಿಯಲ್ಲ ಬಿಡಿ' ಎಂದು ಕಾಮೆಂಟ್ ಮಾಡಿದ್ದಾರೆ. "ಹುಲಿ ಮತ್ತು ಸಿಂಹಗಳು ಒಂದೇ ಜಿಗಿತದಲ್ಲಿ ಯಾವುದೇ ಸ್ಥಳಕ್ಕೂ ಹೂಗಬಹುದು ಎಂದು ನಿಮಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ” ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. “ಲೈಕ್ ಗಳಿಗಾಗಿ ಇಂತಹ ಮೂರ್ಖತನವನ್ನು ಮಾಡುತ್ತಲೇ ಇರಿ" ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.

ಇದನ್ನೂ ಓದಿ:  Nagarahole Tiger: ಅರರೆ, ಹುಲಿರಾಯ! ವೈರಲ್ ಆಗ್ತಿದೆ ನಾಗರಹೊಳೆಯ ವಿಡಿಯೋ

ಇನ್ನೊಬ್ಬರು ಪ್ರತಿಕ್ರಿಯಿಸಿ "ಕಾಡು ಮೃಗಗಳು ಮನುಷ್ಯರನ್ನು ಕಂಡರೆ ಓಡಿ ಹೋಗುತ್ತವೆ. ಕೇವಲ ಇಂತಹ ವಿಡಿಯೋ ಮಾಡಲು ಮತ್ತು ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಲು ಪ್ರಾಣಿಗಳಿಗೆ ತೊಂದರೆ ನೀಡಬೇಡಿ" ಎಂದು ಹೇಳಿದ್ದಾರೆ.
Published by:Ashwini Prabhu
First published: