ಫಾಸ್ಟ್‌ಫುಡ್‌ನಲ್ಲಿ ರಾಜನಂತಿರುವ ಬರ್ಗರ್ ಕಿಂಗ್‍ನ ಎಲ್ಲಾ ಸಿಬ್ಬಂದಿ ರಾಜೀನಾಮೆ ನೀಡಿದ್ದಾರೆ. ಅಮೆರಿಕಾದ ನೆಬ್ರಾಸ್ಕಾದ ಲಿಂಕಾನ್‍ನಲ್ಲಿನ ಬರ್ಗರ್ ಕಿಂಗ್ ಶಾಖೆಯ ಸಿಬ್ಬಂದಿಗಳು ಈ ದಿಢೀರ್ ನಿರ್ಧಾರಕ್ಕೆ ಬಂದಿದ್ದಾರೆ. ಈ ಬಗ್ಗೆ ಖುದ್ದು ಶಾಖೆಯ ಮುಂದಿನ ಬೋರ್ಡ್‍ನಲ್ಲಿ ಅನಾನುಕೂಲತೆಗಾಗಿ ಕ್ಷಮಿಸಿ. ನಾವೆಲ್ಲರೂ ರಾಜೀನಾಮೆ ನೀಡಿದ್ದೇವೆ ಎಂದು ಹಾಕಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಶಾಖೆಯ ಸಿಬ್ಬಂದಿ ರಾಚೆಲ್ ಫ್ಲೋರೆಸ್ ಎಂಬಾತ ಈ ಬಗ್ಗೆ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು, ಆಡಳಿತ ಮಂಡಳಿ ನಿರ್ವಹಣೆಯೇ ಈ ನಿರ್ಧಾರಕ್ಕೆ ಕಾರಣ ಎಂದು ರಾಜೀನಾಮೆ ಹಿಂದಿನ ವಿಚಾರವನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ತಿಳಿಸಿರುವ ಎಂಎಸ್ ಫೋರ್ಸ್ ಎಂಬುವವರು, ನಾವು ಕೆಲಸ ತ್ಯಜಿಸಿರುವುದನ್ನು ಆಡಳಿತ ಮಂಡಳಿ ತಮಾಷೆಯಾಗಿ ತೆಗೆದುಕೊಂಡಿತು. ನನ್ನ ಮತ್ತು ಇತರೆ ಉದ್ಯೋಗಿಗಳ ಮೇಲೆ ಕಾಳಜಿ ಹೊಂದಿರಲಿಲ್ಲ ಎಂದು ತಮ್ಮ ರಾಜೀನಾಮೆ ಹಿಂದಿನ ಕಾರಣ ಬಿಚ್ಚಿಟ್ಟಿದ್ದಾರೆ
ಈ ಬಗ್ಗೆ ವಾಹಿನಿಯೊಂದರ ಜೊತೆ ಮಾತನಾಡಿದ ಫ್ಲೋರೇಸ್, ಕಡಿಮೆ ಸಿಬ್ಬಂದಿ, ವ್ಯವಸ್ಥೆಯಲ್ಲಿನ ಏರುಪೇರು ಮತ್ತು ಹೆಚ್ಚು ಕೆಲಸದ ಒತ್ತಡದ ಕಾರಣ ಆರು ಮಂದಿ ಕೆಲಸಗಾರರು ರಾಜೀನಾಮೆ ನೀಡಿದ್ದಾರೆ. ಜನರಲ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದ್ದ ಫ್ಲೋರೇಸ್, ಆಡಳಿತ ಮಂಡಳಿಯಿಂದ ನಾವು ರೋಸಿಹೋಗಿದ್ದೇವೆ. ಅವರು ಎಂದೂ ನಮ್ಮ ಸಹಾಯಕ್ಕೆ ಬಂದಿಲ್ಲ ಮತ್ತು ನೌಕರರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ.
ಮುಖ್ಯಸ್ಥರಿಂದ ಹಿಡಿದು ಕೆಲಸ ಸೇರಿದಂತೆ ಪ್ರತಿ ವಿಚಾರದಲ್ಲೂ ಸಮಸ್ಯೆಗಳು ಎದುರಾಗಿದ್ದವು. ಆಡಳಿತ ಮಂಡಳಿಯ ಒತ್ತಡ ಹೆಚ್ಚಾಗಿತ್ತು. ಇಲ್ಲಿ ಕಡಿಮೆ ಸಿಬ್ಬಂದಿ ಇದ್ದರು. ಅಲ್ಲದೇ ಜನರಲ್ ಮ್ಯಾನೇಜರ್ ಬಹಳ ಜೋರಾಗಿ, ಹುಚ್ಚರಂತೆ ವರ್ತಿಸುತ್ತಿದ್ದರು. ಬಹಳ ವಾಗ್ವಾದಕ್ಕಿಳಿಯುತ್ತಿದ್ದರು ಎಂದು ಆರೋಪಿಸಿದರು.
ಬೇಸಿಗೆಯ ಪ್ರಾರಂಭದಲ್ಲಿ ತೀವ್ರ ಶೆಕೆ ಇರುತ್ತದೆ. ಅಡುಗೆ ಮನೆಯಲ್ಲಿ ಎಸಿ ಹಾಳಾಗಿತ್ತು. ಹಾಗಾಗಿ ಬಿಸಿಲಿನ ಬೇಗೆಗೆ ಅಡುಗೆ ಮನೆಯಲ್ಲಿ ನಿಂತುಕೊಳ್ಳಲು ಆಗುತ್ತಿರಲಿಲ್ಲ. ಎಸಿ ಹಾಳಾಗಿರುವ ಬಗ್ಗೆ ಮೂರು ಅಥವಾ ನಾಲ್ಕು ವಾರಗಳು ನಿರ್ವಹಣಾ ಮಂಡಳಿಗೆ ತಿಳಿಸಿದೆವು. ಜೊತೆಗೆ ನನಗೆ ನಿರ್ಜಲೀಕರಣವೂ ಉಂಟಾಯಿತು ಎಂದು ಹೇಳಿದರು
ಫ್ಲೋರೇಸ್ ಈ ಬಗ್ಗೆ ಸಹಿ ಮಾಡಿದ್ದರು. ಅವರ ಸಹಿ ಪ್ರತಿ ವೈರಲ್ ಆಗಿತ್ತು. ಇದಾದ ಕೆಲವೇ ದಿನಗಳ ಹಿಂದೆಯಷ್ಟೇ ಕೆಲಸ ತೊರೆದಿದ್ದರು. ನಮ್ಮ ಜೊತೆ ಸುಮಾರು ವರ್ಷಗಳಿಂದ ಜೊತೆಯಾಗಿದ್ದ ಗ್ರಾಹಕರಿಗೆ ಕ್ಷಮೆಯಾಚಿಸಿದ್ದರು. ನಮ್ಮವರ ಜೊತೆ ಸುಮಾರು ವರ್ಷಗಳಿಂದ ಜೊತೆಯಲ್ಲೇ ಇದ್ದ ಗ್ರಾಹಕರಿಗೆ ಕ್ಷಮೆಯಾಚಿಸುತ್ತೇವೆ. ನಾವೆಲ್ಲರೂ ನಿರ್ವಹಣೆ ಮಂಡಳಿ ನಮ್ಮನ್ನು ನಡೆಸಿಕೊಂಡ ಬಗೆಗೆ ಬೇಸರಗೊಂಡು ನಾವೆಲ್ಲರೂ ನಮ್ಮ ಕೆಲಸವನ್ನು ತೊರೆದಿದ್ದೇವೆ ಎಂದು ಪ್ರತಿಯಲ್ಲಿ ಹೇಳಿದ್ದರು.
ಕೆಲವು ಬಳಕೆದಾರರ ಸಹಿಯೊಂದಿಗೆ ಆ ಪ್ರತಿಯನ್ನು ಫೇಸ್‍ಬುಕ್‍ನಲ್ಲಿ ಶೇರ್ ಮಾಡಿದ್ದರು. ವರ್ಜಿನಿಯಾದಲ್ಲೂ ಇದೇ ರೀತಿ ಸಂಭವಿಸಿದೆ. ಅಧಿಕಾರದ ಲಾಭಕ್ಕಾಗಿ ಕೆಲಸಗಾರರನ್ನು ದುರುಪಯೋಗಪಡಿಸಿಕೊಳ್ಳಬೇಡಿ. ನಿಮ್ಮ ನಡೆ ಸರಿಯಾಗಿದೆ ಎಂದು ಅಮಾಂದ ಕೊಲೈಮನ್ ಎಂಬುವರು ಪ್ರತಿಕ್ರಿಯಿಸಿದ್ದರು.
ನಿಮ್ಮ ನಿರ್ಧಾರಕ್ಕೆ ನಮ್ಮದೊಂದು ನಮನ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದರೆ, ಇನ್ನೊಬ್ಬರು, ನಿಮಗೂ ಮತ್ತು ನಿಮ್ಮ ತಂಡಕ್ಕೂ ಅಭಿನಂದನೆಗಳು ಎಂದು ಹೇಳಿದ್ದಾರೆ. ಕೆಲವರು ಬೇರೆಡೆ ಕೆಲಸಕ್ಕೆ ಆಹ್ವಾನಿಸಿದರೆ, ಬ್ರಿಯಾನ್ ಎಂಬುವರು ಟೆಕ್ಸಾ ನಿಮ್ಮನ್ನು ಬೆಂಬಲಿಸುತ್ತದೆ. ವಾಟ್-ಎ-ಬರ್ಗರ್ಗೆ ನಿಮ್ಮನ್ನು ಆಹ್ವಾನಿಸುತ್ತದೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ