ಗರ್ಬಿಣಿಯರಿಗೆ ಬರ್ಗರ್ ಆಫರ್ ವಿವಾದ: ಸಾರ್ವಜನಿಕರ ಕ್ಷಮೆಯಾಚಿಸಿದ ಸಂಸ್ಥೆ

news18
Updated:June 23, 2018, 10:39 PM IST
ಗರ್ಬಿಣಿಯರಿಗೆ ಬರ್ಗರ್ ಆಫರ್ ವಿವಾದ: ಸಾರ್ವಜನಿಕರ ಕ್ಷಮೆಯಾಚಿಸಿದ ಸಂಸ್ಥೆ
news18
Updated: June 23, 2018, 10:39 PM IST
ನ್ಯೂಸ್ 18 ಕನ್ನಡ

ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ 2018ರ ಪಂದ್ಯಾವಳಿ ಕುತೂಹಲಕಾರಿ ಘಟ್ಟ ತಲುಪಿದೆ. ಇದೇ ವೇಳೆ ಬರ್ಗರ್ ಸಂಸ್ಥೆಯೊಂದು ರಷ್ಯನ್ ಯುವತಿಯರಿಗೆ ನೀಡಿದ ಆಫರ್ ಈಗ ತೀವ್ರ ವಿವಾದಕ್ಕೆ ಸಿಲುಕಿದೆ.

ವಿಶ್ವಕಪ್ ಫುಟ್ಬಾಲ್ ಆಟಗಾರರಿಂದ ಗರ್ಭಿಣಿಯಾಗುವ ಯುವತಿ ಅಥವಾ ಮಹಿಳೆಯರಿಗೆ ಜೀವಿತಾವಧಿಗೆ ಉಚಿತ ಬರ್ಗರ್ ಹಾಗೂ 47 ಸಾವಿರ ಡಾಲರ್ ನಗದು ನೀಡುವುದಾಗಿ ಘೋಷಿಸಿ, ಸಾರ್ವಜನಿಕರಿಂದ ತೀವ್ರ ಆಕ್ರೋಶಕ್ಕೆ ಸಿಲುಕಿದೆ. ಅಂತಾರಾಷ್ಟ್ರೀಯ ಬರ್ಗರ್ ತಯಾರಿಕಾ ಸಂಸ್ಥೆ-ಬರ್ಗರ್ ಕಿಂಗ್ ನೀಡಿರುವ ಈ ಆಫರ್ ಬಗ್ಗೆ ರಷ್ಯನ್ ಮಹಿಳೆಯರು ಕುಪಿತಗೊಂಡಿದ್ದಾರೆ. ವಿಶ್ವಕಪ್ ಫುಟ್ಬಾಲ್ ಪಂದ್ಯದಲ್ಲಿ ಕ್ರೀಡಾಭಿಮಾನಿಗಳಿಗೆ ಅನೇಕ ಸಂಸ್ಥೆಗಳು ವಿವಿಧ ಆಫರ್​ಗಳನ್ನು ನೀಡುತ್ತಿದೆ. ಆದರೆ ಈ ಸಂಸ್ಥೆಯ ಅತಿರೇಕದ ಆಫರ್​ಗೆ ವ್ಯಾಪಕ ಟೀಕೆ ಮತ್ತು ಆಕ್ರೋಶ ವ್ಯಕ್ತವಾಗಿದೆ.

ಸದ್ಯ ಇದರಿಂದ ಎಚ್ಚೆತ್ತುಕೊಂಡಿರುವ ಬರ್ಗರ್ ಕಿಂಗ್​ ಸಂಸ್ಥೆ ಕ್ಷಮೆ ಕೇಳಿದ್ದು, ಮುಂದೆ ನಮ್ಮಿಂದ ಈ ರೀತಿ ತಪ್ಪುಗಳು ಆಗುವುದಿಲ್ಲ ಎಂದು ಬಹಿರಂಗವಾಗಿ ಕ್ಷಮೆಯಾಚಿಸಿದೆ.

 

First published:June 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...