ಸೆಣಬಿನಿಂದ ಪರಿಸರ ಸ್ನೇಹಿ ಹೋಮ್‌ಸ್ಟೇ ನಿರ್ಮಾಣವಾಗಿದ್ದು ಹೀಗೆ..

ಕಟ್ಟಡ ನಿರ್ಮಾಣಕ್ಕೆ ಬಳಸಿರುವ ವಸ್ತುಗಳು ಹಗುರವಾಗಿದ್ದು ನಿರ್ಮಾಣದ ಅಡಿಪಾಯ ವೆಚ್ಚ ಕಡಿಮೆ ಹಾಗೂ ಇದು ಭೂಕಂಪ ನಿರೋಧಕವಾಗಿಸುತ್ತದೆ.

ಹೋಮ್‌ಸ್ಟೇ

ಹೋಮ್‌ಸ್ಟೇ

  • Share this:
ಉತ್ತರಾಖಂಡ್‌ನ (Uttarakhand) ಪೌರಿ ಗರ್ವಾಲ್ ಜಿಲ್ಲೆಯ ಹಿಮಾಲಯದ (Himalayas) ತಪ್ಪಲಿನಲ್ಲಿ ಋಷಿಕೇಶದಿಂದ(Rishikesh) ಸುಮಾರು 35 ಕಿಮೀ ದೂರದಲ್ಲಿರುವ ಫಲ್ದಕೋಟ್ ಮಲ್ಲ(Paldakot Malla) ಎಂಬ ಕುಗ್ರಾಮವಿದೆ. ಇಲ್ಲಿ 100ಕ್ಕೂ ಹೆಚ್ಚಿನ ನಿವಾಸಿಗಳು ವಾಸವಾಗಿದ್ದಾರೆ ಹಾಗೂ ಹಳ್ಳಿಯಿಂದ ಮೋಟಾರ್ (Motorized road) ವಾಹನ ರಸ್ತೆಗೆ ಬರಲು 40 ನಿಮಿಷದ ಚಾರಣವನ್ನು ಪರ್ವತಾರೋಹಿಗಳಿಗೆ ಒದಗಿಸುತ್ತದೆ. ಒಟ್ಟಿನಲ್ಲಿ ನಗರದ ಗೌಜು ಗದ್ದಲಗಳಿಂದ ದೂರವಿರಬೇಕೆಂಬ ಇಚ್ಛೆಯುಳ್ಳವರಿಗೆ ಈ ಸ್ಥಳ (Beautiful place)ರಮಣೀಯವಾಗಿದೆ.

ಸೆಣಬಿನಿಂದ ತಯಾರಿಸಿದ ಹೋಮ್‌ಸ್ಟೇ:
ಈ ಪ್ರದೇಶದಲ್ಲಿ ಬೆರಳೆಣಿಕೆಯಷ್ಟು ವಸತಿ ಸೌಲಭ್ಯಗಳು ಲಭ್ಯವಿದ್ದು ಸೆಣಬಿನಿಂದ ತಯಾರಿಸಿದ ಹೋಮ್‌ಸ್ಟೇ ಪ್ರಮುಖವಾಗಿ ಕಣ್ಮನ ಸೆಳೆಯುತ್ತದೆ. ಹಿಮಾಲಯದ ಸೆಣಬಿನ ಇಕೋ ಸ್ಟೇಗಳಲ್ಲಿ ಗಾಂಜಾ ಸಸ್ಯದ ಉಪ ಉತ್ಪನ್ನಗಳನ್ನು ಹೋಮ್ ಸ್ಟೇಯ ಮಹಡಿಗಳು, ಗೋಡೆಗಳು ಹಾಗೂ ಮೇಲ್ಛಾವಣಿಗಳಲ್ಲಿ ಮಾತ್ರವಲ್ಲದೆ ಒಳಾಂಗಣ ವಿನ್ಯಾಸಗಳಲ್ಲಿ ಕೂಡ ಕಾಣಬಹುದಾಗಿದೆ.

ಇದನ್ನೂ ಓದಿ: Eco Friendly Products: ಪರಿಸರ ಸ್ನೇಹಿ ವಸ್ತುಗಳನ್ನು ಖರೀದಿ ಮಾಡುವಾಗ ಈ ಅಂಶಗಳನ್ನು ನೆನಪಿನಲ್ಲಿಡಿ

ಹವಾಮಾನ-ನಿರೋಧಕ ಗುಣಲಕ್ಷಣ
ಈ ಪರಿಸರ ಸ್ನೇಹಿ ಹೋಮ್‌ಸ್ಟೇ ನಿರ್ಮಿಸಿದವರು ವಾಸ್ತುಶಿಲ್ಪಿ ವಿನ್ಯಾಸಕ ದಂಪತಿ ನಮ್ರತಾ ಕಂದಾಲ್ ಮತ್ತು ಗೌರವ್ ದೀಕ್ಷಿತ್. ಸೆಣಬಿನ ಜೈವಿಕ ಸುಟ್ಟ ಸುಣ್ಣದ ಕಾಂಕ್ರೀಟ್ ಘಟಕಗಳಿಂದ ನಿರ್ಮಾಣ ಮಾಡಿರುವ ಹೋಮ್‌ಸ್ಟೇ, ನೈಸರ್ಗಿಕ ಸಂಯೋಜನೆ ಮತ್ತು ಹವಾಮಾನ-ನಿರೋಧಕ ಗುಣಲಕ್ಷಣಗಳೊಂದಿಗೆ, ಭೂಕಂಪಗಳು, ಹಠಾತ್ ಪ್ರವಾಹಗಳು ಮತ್ತು ಕಾಡಿನ ಬೆಂಕಿಯಂತಹ ನೈಸರ್ಗಿಕ ವಿಪತ್ತುಗಳಿಗೆ ಒಳಗಾಗುವ ರಾಜ್ಯದಲ್ಲಿ ವಿಶ್ವಾಸಾರ್ಹ ವಾಸಕ್ಕೆ ಯೋಗ್ಯವಾಗಿದೆ. ಕಟ್ಟಡಕ್ಕೆ ಬಳಸಲಾಗಿರುವ ಅಡಿಗಲ್ಲುಗಳನ್ನು ಹೆಂಪ್‌ಕ್ರೀಟ್‌ ಎಂದು ಕರೆಯಲಾಗಿದ್ದು, ಸೆಣಬಿನ ಸಸ್ಯ ಶಾಖೆಗಳು, ಸುಣ್ಣದ ಕಟ್ಟುವಿಕೆ, ಕಲ್ಲಿದ್ದಲು ಬೂದಿ, ಹಾಗೂ ಖನಿಜಗಳ ಸೇರ್ಪಡೆಗಳ ಮಿಶ್ರಣದಿಂದ ತಯಾರಿಸಲಾಗಿದೆ.

ಈ ದಂಪತಿ 2018ರವರೆಗೆ ದೆಹಲಿಯಲ್ಲಿರುವ ಪ್ರಮುಖ ವಾಸ್ತುಶಿಲ್ಪ ಕಂಪನಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದರು. ತದನಂತರ ದಂಪತಿ ಗೊಹೆಂಪ್ ಅಗ್ರೊವೆಂಚರ್ಸ್ ಹೆಸರಿನ ಸ್ಟಾರ್ಟಪ್‌ ಪ್ರಾರಂಭಿಸಿದ್ದು ಸೆಣಬು ಆಧಾರಿತ ನಿರ್ಮಾಣ ಘಟಕಗಳು ಹಾಗೂ ತಂತ್ರಜ್ಞಾನ ಶೋಧಿಸಲು ಹಾಗೂ ಉತ್ತೇಜಿಸಲು ಈ ಗ್ರಾಮದಲ್ಲಿ ನೆಲೆ ಕಂಡುಕೊಂಡಿದ್ದೇವೆ ಎಂದು ತಿಳಿಸಿರುವ ದಂಪತಿ, ಸ್ಟಾರ್ಟಪ್ ಅನ್ನು ಇತರ ಮೂವರು ವಾಸ್ತುಶಿಲ್ಪಿಗಳ ಸಹಾಯದಿಂದ ನಿರ್ಮಿಸಿದ್ದಾರೆ.

ಶೂನ್ಯ ಶಕ್ತಿ ಮಾದರಿಯಲ್ಲಿ ಕಾರ್ಯನಿರ್ವಹಣೆ:
800 ಚದರ ಅಡಿ ಪ್ರದೇಶದಲ್ಲಿರುವ ಹಿಮಾಲಯನ್ ಹೆಂಪ್ ಇಕೋ ಸ್ಟೇಸ್ 3-ಕಿಲೋವ್ಯಾಟ್ ಮೇಲ್ಛಾವಣಿಯ ಸೌರ ಫಲಕಗಳು ಮತ್ತು 4,000-ಲೀಟರ್ ಭೂಗತ ಮಳೆನೀರು ಕೊಯ್ಲು ಟ್ಯಾಂಕ್‌ನೊಂದಿಗೆ 'ಶೂನ್ಯ-ಶಕ್ತಿ' ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ನಮ್ರತಾ ತಿಳಿಸಿದ್ದಾರೆ. ಆವರಣದಲ್ಲಿರುವ ತ್ಯಾಜ್ಯನೀರಿನಿಂದ ಸಂಸ್ಕರಿಸಿದ ನೀರನ್ನು ತಯಾರಿಸಿ ಉದ್ಯಾನದಲ್ಲಿರುವ ಹೂವು ಹಾಗೂ ತರಕಾರಿಗಳನ್ನು ಬೆಳೆಸುತ್ತಿದ್ದಾರೆ.

ಈ ಹೋಮ್ ಸ್ಟೇಯನ್ನು ಉತ್ತರಾಖಂಡ್‌ನ ಮಾಜಿ ಮುಖ್ಯಮಂತ್ರಿಗಳಾದ ತಿರತ್ ಸಿಂಗ್ ರಾವತ್ ಉದ್ಘಾಟಿಸಿದ್ದು, ಸುಮಾರು 10 ಪ್ರವಾಸಿಗರು ಈ ಹೋಮ್‌ಸ್ಟೇಯಲ್ಲಿ ತಂಗಿದ್ದಾರೆ. ಒಂದೇ ಸಮಯದಲ್ಲಿ ನಾಲ್ವರು ಇಲ್ಲಿ ತಂಗಬಹುದು ಹಾಗೂ ದಿನಕ್ಕೆ 2,400 ರೂ. ವೆಚ್ಚವಾಗುತ್ತದೆ ಎಂದು ನಮ್ರತಾ ತಿಳಿಸಿದ್ದಾರೆ.

ಭೂಕಂಪ, ನೀರು ಹಾಗೂ ಬೆಂಕಿ ನಿರೋಧಕ:
ಜನವರಿ 2020ರಲ್ಲಿ ಹೋಮ್‌ಸ್ಟೇ ನಿರ್ಮಾಣ ಯೋಜನೆ ಕೈಗೆತ್ತಿಕೊಂಡ ದಂಪತಿ ಸಾಂಕ್ರಾಮಿಕದಿಂದಾಗಿ ಕೊಂಚ ವಿಳಂಬ ಎದುರಿಸಬೇಕಾಯಿತು. ಹೆಂಪ್‌ಕ್ರಿಯೇಟ್‌ನಿಂದ ಕಟ್ಟಡದ ಘಟಕಗಳನ್ನು ನಿರ್ಮಿಸಲು 12 ಸ್ಥಳೀಯ ಕಾರ್ಮಿಕರಿಗೆ ದಂಪತಿ ತರಬೇತಿ ನೀಡಿದ್ದು. ಹೆಚ್ಚಿನ ಹೊರೆ ತಾಳಿಕೊಳ್ಳುವ ಸಾಮರ್ಥ್ಯ ಹೊಂದಿದ್ದು ಬ್ಯಾಕ್ಟೀರಿಯಾ ವಿರೋಧಿಯೂ ಆಗಿದೆ.

ಸಾಂಪ್ರದಾಯಿಕ ಕಾಂಕ್ರೀಟ್ ಸ್ತಂಭಗಳ ಬದಲಿಗೆ ಅಡಿಪಾಯದ ಚೌಕಟ್ಟುಗಳನ್ನು ನಿರ್ಮಿಸಲು ಕಲ್ಲು ಹಾಗೂ ಮಣ್ಣಿನ ಬಳಕೆ ಮಾಡಿದ್ದು, ಹೆಂಪ್ಕ್ರೀಟ್ ಕಲ್ಲುಗಳಿಂದ ಶೌಚಾಲಯ ನಿರ್ಮಿಸಿದ್ದರೆ, ಸ್ನಾನ ಗೃಹಗಳನ್ನು ನಿರ್ಮಿಸಲು ಹೆಂಪ್ಕ್ರೀಟ್ ಏಕಶಿಲೆಯ ಗೋಡೆಗಳನ್ನು ಬಳಸಲಾಗಿದೆ. ಸೆಣಬು ಆಧಾರವಾಗಿರುವ ಪ್ಲಾಸ್ಟರ್‌ಗಳನ್ನು ನಿರ್ಮಾಣಕ್ಕಾಗಿ ಬಳಸಿದ್ದು ಕೆಲವು ಕನಿಷ್ಠ ಮಣ್ಣಿನ ಪ್ಲಾಸ್ಟರ್‌ ಅನ್ನು ಮಣ್ಣು ಮತ್ತು ಸೆಣಬಿನ ನಾರಿನೊಂದಿಗೆ ವರ್ಧಿಸಲಾಗಿದೆ ಎಂದು ದಂಪತಿ ತಿಳಿಸಿದ್ದಾರೆ.

ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ ಕಟ್ಟಡ ನಿರ್ಮಾಣ:
ಹೆಂಪ್ಕ್ರೀಟ್ ಪ್ರಯೋಜನಗಳನ್ನು ವಿವರಿಸುವ ಗೌರವ್ ಬರೆದಿರುವ ಲೇಖನವನ್ನು ಹೊಸ ಕಟ್ಟಡ ಸಾಮಾಗ್ರಿ ತಂತ್ರಜ್ಞಾನವನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಲು, 1990ರಲ್ಲಿ ಭಾರತ ಸರಕಾರ ಸ್ಥಾಪಿಸಿದ ಸ್ವಾಯತ್ತ ಸಂಸ್ಥೆಯಾಗಿರುವ ಬಿಲ್ಡಿಂಗ್ ಮೆಟೀರಿಯಲ್ ಹಾಗೂ ಟೆಕ್ನಾಲಜಿ ಪ್ರಮೋಶನ್ ಕೌನ್ಸಿಲ್‌ ಪ್ರಕಟಿಸಿದೆ. ಕಟ್ಟಡ ನಿರ್ಮಾಣಕ್ಕೆ ಬಳಸಿರುವ ವಸ್ತುಗಳು ಹಗುರವಾಗಿದ್ದು ನಿರ್ಮಾಣದ ಅಡಿಪಾಯ ವೆಚ್ಚ ಕಡಿಮೆ ಮಾಡುತ್ತದೆ ಹಾಗೂ ಇದು ಭೂಕಂಪ ನಿರೋಧಕವಾಗಿಸುತ್ತದೆ. ಉತ್ತಮ ತೇವಾಂಶ ನಿಯಂತ್ರಕವಾಗಿರುವ ಕಟ್ಟಡಗಳು ಗೋಡೆಗಳಲ್ಲಿ ಶಿಲೀಂಧ್ರಗಳ ರಚನೆ ತಡೆಯುತ್ತದೆ ಹಾಗೂ ಹೆಂಪ್ಕ್ರೀಟ್‌ಗಳಲ್ಲಿ ಗೆದ್ದಲುಗಳು ವಾಸವಾಗಿರುವುದಿಲ್ಲ ಎಂದು ಗೌರವ್ ತಿಳಿಸಿದ್ದಾರೆ.

ಚಳಿಗಾಲದಲ್ಲಿ ಬೆಚ್ಚಗಿನ ಅನುಭವ:
ಇನ್ನು ನಮ್ರತಾ ತಿಳಿಸಿರುವಂತೆ ಕಡಿಮೆ ಸಾಂದ್ರತೆಯ ಸೆಣಬಿನ-ನಿಂಬೆ ಛಾವಣಿಯ ನಿರೋಧಕವು ಚಳಿಗಾಲದಲ್ಲಿ ಹೋಮ್‌ಸ್ಟೇಯ ಒಳಭಾಗವನ್ನು ಬೆಚ್ಚಗಿರಿಸುತ್ತದೆ ಹಾಗೂ ಆರ್ದ್ರತೆಯ ಮಟ್ಟ ನಿಯಂತ್ರಿಸುತ್ತದೆ. ಈ ವ್ಯವಸ್ಥೆಯು ನೈಸರ್ಗಿಕ ಗಾಳಿ ಶುದ್ಧಿಕಾರಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದ್ದಾರೆ. ಹೊರಾಂಗಣ ಫಲಕಗಳಲ್ಲಿನ ಸುಣ್ಣವು ಕ್ಯಾಲ್ಸಿಯಂ ಕಾರ್ಬೋನೇಟ್ ರೂಪಿಸಲು ಕಾರ್ಬನ್ ಡೈಆಕ್ಸೈಡ್ ಅನ್ನು ನಿರಂತರವಾಗಿ ಹೀರಿಕೊಳ್ಳುತ್ತದೆ, ಇದು ಕಟ್ಟಡದ ಅಡಿಪಾಯವು ಕಾಲಾನಂತರದಲ್ಲಿ ಬಲಗೊಳ್ಳುತ್ತದೆ ಎಂದು ಖಚಿತಪಡಿಸುತ್ತದೆ ಎಂಬುದಾಗಿ ಉಲ್ಲೇಖಿಸಿದ್ದಾರೆ.

ಸೀಮಿತ ಕೃಷಿ:
ನಾರ್ಕೋಟಿಕ್ಸ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್ ಕಾಯ್ದೆಯು (NDPS) ಗಾಂಜಾದ ರೆಸಿನ್‌, ಹೂವುಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸುತ್ತದೆ ಹಾಗೂ ಅದರ ಬೀಜ, ಕಾಂಡ ಮತ್ತು ಎಲೆಗಳನ್ನು ಕೈಗಾರಿಕಾ ಉದ್ದೇಶಗಳಿಗೆ ಬಳಸಲು ಅನುಮತಿಸುತ್ತದೆ. ಸೆಣಬು ಗಾಂಜಾ ಸಟಿವಾ ಕುಟುಂಬಕ್ಕೆ ಸೇರಿದ್ದರೂ ಸೇವನೆಯ ನಂತರ ಮಾದಕತೆ ಉಂಟುಮಾಡುವ ಅಂಶವು ಇದರಲ್ಲಿ 0.03%ಕ್ಕಿಂತ ಕಡಿಮೆ ಇರುತ್ತದೆ.
ಸೆಣಬಿನ ನಾರಿನಿಂದ ಜವಳಿ, ಔಷಧೀಯ ವಸ್ತುಗಳು, ಕಾಗದ, ಜೈವಿಕ ಇಂಧನ ಹಾಗೂ ವೈಯಕ್ತಿಕ ಆರೈಕೆಯ ಪರಿಕರಗಳನ್ನು ತಯಾರಿಸಲಾಗುತ್ತದೆ. ಆಹಾರ ಸುರಕ್ಷತೆ ಹಾಗೂ ಮಾನದಂಡಗಳ ನಿಯಮಗಳಿಗೆ ಇತ್ತೀಚಿನ ತಿದ್ದುಪಡಿಯು ಉಲ್ಲೇಖಿಸಿರುವಂತೆ ಸೆಣಬಿನ ಬೀಜಗಳು ಮತ್ತು ಅವುಗಳ ಉತ್ಪನ್ನಗಳನ್ನು ಆಹಾರ ಮೂಲವಾಗಿ ಅಧಿಕೃತವಾಗಿ ಗುರುತಿಸಿದೆ.

ವಿಶ್ವ ಪರಂಪರೆಯ ತಾಣ
2018ರಲ್ಲಿ, ಉತ್ತರಾಖಂಡವು ಕೈಗಾರಿಕಾ ಸೆಣಬಿನ ವಾಣಿಜ್ಯ ಕೃಷಿ ಅನುಮತಿಸಿದ ದೇಶದ ಮೊದಲ ರಾಜ್ಯವಾಯಿತು. ಆದರೂ, 2016ರಲ್ಲಿ ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ ಕೈಗೊಂಡ ಅಧ್ಯಯನದ ಪ್ರಕಾರ, ಸೆಣಬನ್ನು ನಿರ್ಮಾಣ ಪೂರಕವಾಗಿ ಬಳಸುವ ಇತಿಹಾಸವನ್ನು 6ನೇ ಶತಮಾನದಲ್ಲಿ ಕಂಡುಹಿಡಿಯಬಹುದಾಗಿದೆ ಎಂಬ ಅಂಶವನ್ನು ಉಲ್ಲೇಖಿಸಿದೆ. ಮಹಾರಾಷ್ಟ್ರದ ಎಲ್ಲೋರಾ ಗುಹೆಗಳನ್ನು ನಿರ್ಮಿಸಲು ಬಳಸಲಾದ ಸಂಯೋಜನೆಯ ವಸ್ತುವಿನಲ್ಲಿ ಸೆಣಬಿನ ಅಂಶಗಳು ಕಂಡುಬಂದಿದೆ ಮತ್ತು 1,500 ವರ್ಷಗಳಷ್ಟು ಹಳೆಯದಾದ UNESCO (ಯುನೆಸ್ಕೋ) ವಿಶ್ವ ಪರಂಪರೆಯ ತಾಣದ ಅವನತಿ ತಡೆಯಲು ಸಹಾಯ ಮಾಡಿದೆ ಎಂದು ಅಧ್ಯಯನದಲ್ಲಿ ತೊಡಗಿರುವ ಇತಿಹಾಸಕಾರರು ಹೇಳಿದ್ದಾರೆ. ಈ ತ್ಯಾಜ್ಯ ಸಂಸ್ಕರಣೆಗಾಗಿ ದಂಪತಿ 8 ತಿಂಗಳ ಹಿಂದೆ ಸಣ್ಣ ಸಂಸ್ಕರಣಾ ಘಟಕ ಸ್ಥಾಪಿಸಿದರು. ಇದು ನೀರನ್ನು ಬಳಸದೇ ವಿಶೇಷ ಡೆಕಾರ್ಟಿಕೇಟರ್ ಯಂತ್ರ ಬಳಸುತ್ತದೆ. ದೇಶದಲ್ಲಿ ಈ ಯಂತ್ರದ ಬಳಕೆ ಇದೇ ಪ್ರಥಮ ಬಾರಿಗೆ ನಡೆದಿದೆ ಎಂದು ತಿಳಿಸಿದ್ದಾರೆ.

3 ಟನ್ ಸೆಣಬಿನ ನಾರು
ಈ ಯಂತ್ರದಲ್ಲಿ ಸೆಣಬಿನ ಸಸ್ಯ ಹಾಕಿದರೆ ಸಾಕು ಅದರಲ್ಲಿರುವ ರೋಲರ್‌ಗಳು ಕವಚಒಡೆಯುತ್ತವೆ ಹಾಗೂ ಫೈಬರ್ ಪ್ರತ್ಯೇಕಿಸುವ ಕಾರ್ಯವಿಧಾನಗಳನ್ನು ಬಳಸುತ್ತವೆ. ಹೋಮ್‌ಸ್ಟೇಗಾಗಿ ನಿರ್ಮಾಣ ಸಾಮಗ್ರಿಗಳಲ್ಲಿ ಬಳಸಲು ನಾವು ಸುಮಾರು 3 ಟನ್ ಸೆಣಬಿನ ನಾರನ್ನು ಈ ರೀತಿಯಲ್ಲಿ ದಂಪತಿ ಸಂಸ್ಕರಿಸಿದ್ದಾರೆ ಎಂದು ಸುದ್ದಿಮಾಧ್ಯಮಕ್ಕೆ ತಿಳಿಸಿದ್ದಾರೆ. ಅಲ್ಲದೆ ದಂಪತಿಗಳ ಸಾಹಸೋದ್ಯಮವು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದೊಂದಿಗೆ ಅದರ ಕೈಗೆಟುಕುವ ಸುಸ್ಥಿರ ವಸತಿ ವೇಗವರ್ಧಕ (ASHA) ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ: ಪ್ರಾಣಿಗಳ ಚರ್ಮಕ್ಕೆ ಬದಲಾಗಿ ಬಂದಿದೆ ಅಣಬೆ ಚರ್ಮ, ಹೇಳದಿದ್ರೆ ಗೊತ್ತಾಗೋದೇ ಇಲ್ಲ: ಅಷ್ಟು ಹೋಲಿಕೆ!

ಪರಿಸರ ಸ್ನೇಹಿ ಕಟ್ಟಡ
2019ರಲ್ಲಿ, ಗೊಹೆಂಪ್ ಅಗ್ರೊವೆಂಚರ್ಸ್ ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್‌ನ ಐದು ವಿಜೇತರಲ್ಲಿ ಒಂದಾಗಿ ಖ್ಯಾತಿ ಪಡೆದುಕೊಂಡಿದೆ, ಅಲ್ಲದೆ ದೇಶಾದ್ಯಂತ ಸುಮಾರು 70 ಸುಸ್ಥಿರ ನಾವೀನ್ಯಕಾರರನ್ನು ಸೋಲಿಸಿ 2.5 ಲಕ್ಷ ರೂಗಳನ್ನು ಗೆದ್ದುಕೊಂಡಿದೆ. 2020ರಲ್ಲಿ, ನೇಪಾಳದಲ್ಲಿ ನಡೆದ ಏಷ್ಯನ್ ಹೆಂಪ್ ಶೃಂಗಸಭೆಯಲ್ಲಿ ಸಂಸ್ಥೆಯು ಅತ್ಯುತ್ತಮ ಉದ್ಯಮಿ ಪ್ರಶಸ್ತಿ ಪಡೆದುಕೊಂಡಿದೆ. ಕಳೆದ 3 ವರ್ಷಗಳಿಂದ ಪರಿಸರ ಸ್ನೇಹಿ ಕಟ್ಟಡಗಳ ನಿರ್ಮಾಣಗಳಲ್ಲಿ ತೊಡಗಿರುವ ದಂಪತಿ ಸುಸ್ಥಿರ ಕಾರ್ಯವಿಧಾನಗಳ ವ್ಯಾಪಕ ಸಂಶೋಧನೆ ಮತ್ತು ಪ್ರಾಯೋಗಗಳಲ್ಲಿ ನಿರತರಾಗಿದ್ದಾರೆ. ವಾಸ್ತುಶಿಲ್ಪದ ಸ್ಥಿರ ಸೇವೆಗಳನ್ನು ಒದಗಿಸುತ್ತಿರುವ ದಂಪತಿ, ಆಂತರಿಕ ಉತ್ಪಾದನಾ ಸೌಲಭ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
Published by:vanithasanjevani vanithasanjevani
First published: