ಹೇಳಿ ಕೇಳಿ ಇದು ಸೆಕೆಗಾಲ (Summer Season). ಸೆಕೆಯಿಂದ ಹೇಗೆ ತಪ್ಪಿಸಿಕೊಳ್ಳಬಹುದು ಎಂದೇ ನಾವೆಲ್ಲರೂ ಯೋಚಿಸುತ್ತಿರುತ್ತೇವೆ. ಸೆಕೆಯಿಂದ ತಪ್ಪಿಸಿಕೊಳ್ಳಲು ದಿನಕ್ಕೆ ಐದಾರು ಬಾರಿ ಸ್ನಾನಮಾಡಿದ್ದೂ ಇದೆ. ಮನುಷ್ಯರ ಕಥೆ ಇದಾದರೆ ಪ್ರಾಣಿಗಳೂ (Animals) ಕೂಡ ಸೆಕೆಯಿಂದ ತಪ್ಪಿಸಿಕೊಳ್ಳಲು ನೀರಿನ ಮೂಲವನ್ನು ಹುಡುಕಿಕೊಂಡು ಹೋಗುತ್ತವೆ. ಕಾಡಿನಲ್ಲಿರುವ (Wild) ಪ್ರಾಣಿಗಳಂತೂ ನದಿಯಲ್ಲೇ ಈಜಾಡಿಕೊಂಡಿರುತ್ತವೆ.
ಹಳೆಯ ವಿಡಿಯೋ ವೈರಲ್
ಕಾಡಿನ ಪ್ರಾಣಿಗಳಿಗೆ ನದಿ ನೀರು ಸೆಕೆಯಿಂದ ತಪ್ಪಿಸಿಕೊಳ್ಳಲು ನೆರವಾದರೆ ಊರಿನಲ್ಲಿರುವ ಹಸು, ಎಮ್ಮೆ, ಹೋರಿಗಳಿಗೆ ನದಿಮೂಲಗಳು ದೊರೆಯುವುದಿಲ್ಲ. ಹಾಗಾಗಿ ಅವುಗಳು ಒಮ್ಮೊಮ್ಮೆ ಸ್ವಿಮ್ಮಿಂಗ್ ಪೂಲ್‌ಗೆ ಹೋಗಿ ಮೋಜು ನಡೆಸಿದ ಸಂಭವಗಳೂ ಇದೆ. ತಪ್ಪಿಸಿಕೊಂಡ ಎಮ್ಮೆಗಳ ಹಿಂಡೊಂದು ದಂಪತಿಗಳು ಹೊಸದಾಗಿ ನಿರ್ಮಿಸಿದ್ದ ಈಜುಕೊಳದಲ್ಲಿ ದಾಂಧಲೆ ನಡೆಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಇಂಗ್ಲೆಂಡ್‌ನ ಎಸೆಕ್ಸ್‌ನಲ್ಲಿ ಈ ಘಟನೆ ನಡೆದಿದ್ದು ಹೊಲದಿಂದ ತಪ್ಪಿಸಿಕೊಂಡ 18 ಎಮ್ಮೆಗಳು ಏಕಾಏಕಿ ಸ್ವಿಮ್ಮಿಂಗ್ ಪೂಲ್‌ಗೆ ನುಗ್ಗಿವೆ. ಬಿಬಿಸಿ ವರದಿಯ ಪ್ರಕಾರ ಸಿಸಿಟಿವಿ ಫೂಟೇಜ್ ಈ ತಮಾಷೆಯ ದೃಶ್ಯವನ್ನು ಸೆರೆಹಿಡಿದಿದ್ದು ಈಜುಕೊಳದಲ್ಲಿ ದಾಂಧಲೆ ನಡೆಸಿ ಬರೋಬ್ಬರಿ ರೂ 25,00,000 ನಷ್ಟವನ್ನುಂಟು ಮಾಡಿವೆ.
ಇದನ್ನೂ ಓದಿ: ಗಂಡ ಕಾಟ ಕೊಡ್ತಿದ್ದ ಅಂತ ನಿದ್ರೆ ಮಾತ್ರೆ ಕೊಟ್ಟು ಚಿರನಿದ್ರೆಗೆ ಕಳುಹಿಸಿದ ಹೆಂಡತಿ!
ದಂಪತಿಗಳು ಹೊಸದಾಗಿ ನಿರ್ಮಿಸಿದ ಈಜುಕೊಳದಲ್ಲಿ ದಾಂಧಲೆ ನಡೆಸಿದ ಎಮ್ಮೆಗಳು
ಆಂಡಿ ಮತ್ತು ಲಿನೆಟ್ ಸ್ಮಿತ್ ದಂಪತಿಗಳು ಪ್ರೀತಿಯಿಂದ ನಿರ್ಮಿಸಿದ್ದ ಈಜುಕೊಳದಲ್ಲೇ ಈ ಘಟನೆ ನಡೆದಿದ್ದು ಇದರಿಂದಾಗಿ ಅವರು ಒಂದು ರೀತಿ ಶಾಕ್‌ಗೆ ಒಳಗಾಗಿದ್ದಾರೆ. ಹೀಗೂ ನಡೆಯಬಹುದು ಎಂಬುದಾಗಿ ನಾವು ಎಂದಿಗೂ ಅಂದುಕೊಂಡಿರಲಿಲ್ಲ ಎಂದು ದಂಪತಿಗಳು ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈಜುಕೊಳದಲ್ಲಿ ಕುಣಿದು ಕುಪ್ಪಳಿಸಿದ ಎಮ್ಮೆಗಳು ಅಂದಾಜು ರೂ 71 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಈಜುಕೊಳದ ಮೇಲೆ ಹಾನಿಯನ್ನುಂಟು ಮಾಡಿವೆ.
ಎಂಟು ಎಮ್ಮೆಗಳು ಒಮ್ಮೆಲೆ ಈಜುಕೊಳಕ್ಕೆ ಧುಮುಕಿದರೆ ಇನ್ನುಳಿದವು ಅಲಂಕಾರಿಕ ವಸ್ತುಗಳನ್ನು ನಾಶಮಾಡಿವೆ. ಇವುಗಳ ಕಾಲ್ತುಳಿಕ್ಕೆ ಸಿಲುಕಿ ಈಜುಕೊಳದಲ್ಲಿದ್ದ ಹೂವಿನ ಬೆಡ್‌ಗಳು ಹಾನಿಗೊಳಗಾಗಿವೆ ಎಂದು ದಂಪತಿಗಳು ತಿಳಿಸಿದ್ದು, ಬೇಲಿ ಕೂಡ ನಾಶಗೊಂಡಿವೆ ಎಂದು ತಮಗಾದ ನಷ್ಟದ ಬಗ್ಗೆ ದೂರಿದ್ದಾರೆ.
ಬರೋಬ್ಬರಿ ರೂ 25,00,000 ನಷ್ಟ
ಈ ಘಟನೆಯಿಂದ ಪ್ರಾಣಿಗಳಿಗೆ ಯಾವುದೇ ಹಾನಿಯುಂಟಾಗಿಲ್ಲ ಎಂದು ತಿಳಿಸಿರುವ ಸ್ಮಿತ್ಸ್ ತಮಗಾದ ಭಾರೀ ನಷ್ಟಕ್ಕೆ ಸಂಕಟ ವ್ಯಕ್ತಪಡಿಸಿದ್ದಾರೆ. ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಎಮ್ಮೆಗಳು ಈಜುಕೊಳದಲ್ಲಿ ಬೀಳುವ ದೃಶ್ಯ ಹಾಗೂ ಅಲ್ಲಿ ದಾಂಧಲೆ ನಡೆಸಿರುವ ದೃಶ್ಯಾವಳಿಗಳು ಸಖತ್ ವೈರಲ್ ಆಗಿವೆ.
It's hot but it's not that hot! Moment herd of escaped water #buffalo stampede through couple's garden and take dip in their swimming pool - causing £25,000 in damage to their Colchester #Essex home pic.twitter.com/uYM8kZpwgP
— Hans Solo (@thandojo) May 23, 2023
ಇದೊಂದು ಆಕಸ್ಮಿಕ ಹಾಗೂ ಪ್ರಾಕೃತಿಕ ಹಾನಿಯಾಗಿರುವುದರಿಂದ ದಂಪತಿಗೆ ಕ್ಲೈಮ್ ಮಾಡಿದ ಹಣವನ್ನು ನೀಡಲಾಯಿತು ಎಂದು ವಕ್ತಾರರು ತಿಳಿಸಿದ್ದಾರೆ.
ಮೊಮ್ಮಕ್ಕಳ ಪೂಲ್ ಪಾರ್ಟಿಯ ಮರುದಿನ ನಡೆದ ಘಟನೆ
ಗಾರ್ಡಿಯನ್ ಪತ್ರಿಕೆಗೆ ಘಟನೆಯ ಕುರಿತು ಮಾಹಿತಿ ನೀಡಿದ್ದ ಆಂಡಿ ತಮ್ಮ ಪತ್ನಿ ಬೆಳಗ್ಗಿನ ಜಾವ ಚಹಾಮಾಡಲು ತೆರಳಿದ ಸಮಯದಲ್ಲಿ ಅಡುಗೆ ಮನೆಯ ಕಿಟಕಿಯಿಂದ ಸ್ವಿಮ್ಮಿಂಗ್ ಪೂಲ್‌ನಲ್ಲಿ ಎಂಟು ಎಮ್ಮೆಗಳು ದಾಂಧಲೆ ನಡೆಸುವುದನ್ನು ನೋಡಿದಳು ಎಂದು ತಿಳಿಸಿದ್ದಾರೆ.
ಕೂಡಲೇ 999 ಕ್ಕೆ ಕರೆ ಮಾಡಿದರೂ ಅಗ್ನಿಶಾಮಕ ದಳ ಇದೊಂದು ಸುಳ್ಳು ಎಂದು ಕರೆಯನ್ನು ನಿರಾಕರಿಸಿತು ಎಂದು ತಿಳಿಸಿದ್ದಾರೆ. ನಾವು ಹೇಳುತ್ತಿರುವ ವಿಷಯ ನಿಜವಾದುದು ಎಂಬುದಕ್ಕೆ ಅವರ ಮನವೊಲಿಸುವ ಅಗತ್ಯವಿರುತ್ತದೆ ಆದರೆ ಈ ವಿಷಯದಲ್ಲಿ ಇನ್ನಷ್ಟು ಸತ್ಯಪುರಾವೆಗಳನ್ನು ನಮಗೆ ನೀಡಲಾಗಲಿಲ್ಲ ಎಂದು ಆಂಡಿ ತಿಳಿಸುತ್ತಾರೆ. ದಂಪತಿಗಳು ಒಂದು ದಿನದ ಹಿಂದೆ ತಮ್ಮ ಚಿಕ್ಕ ಮೊಮ್ಮಕ್ಕಳಿಗಾಗಿ ಪೂಲ್ ಪಾರ್ಟಿಯನ್ನು ಆಯೋಜಿಸಿದ್ದರು ಎಂದು ಹೇಳಿದರು. ಒಂದು ವೇಳೆ ಈ ಘಟನೆ ಅಂದೇನಾದರೂ ನಡೆದಿದ್ದರೆ ಗಂಭೀರ ಪರಿಣಾಮ ಉಂಟಾಗುತ್ತಿತ್ತು ಎಂದು ದಂಪತಿಗಳು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ