HOME » NEWS » Trend » BTS DYNAMITE SETS NEW YOUTUBE RECORD FOR FASTEST VIDEO TO REACH 101 MN VIEWS IN 24 HOURS HG

24 ಗಂಟೆಯಲ್ಲಿ 101 ಮಿಲಿಯನ್ ವೀಕ್ಷಣೆ; ವಿಶ್ವ ದಾಖಲೆ ಬರೆದ ಕೊರಿಯನ್ ಡೈನಮೈಟ್ ಸಾಂಗ್!

BTS Dynamite: ಈವರೆಗೆ  ಡೈನಾಮೈಟ್​​ ಹಾಡು 19 ಕೋಟಿ ಗೂ ಅಧಿಕ ವೀಕ್ಷಣೆ ಕಂಡಿದೆ. 14 ಮಿಲಿಯನ್​​ ಜನರು ಹಾಡನ್ನು ಇಷ್ಟಪಟ್ಟಿದ್ದಾರೆ. 60 ಸಾವಿರ ಜನರು ಡಿಸ್​ಲೈನ್​ ಮಾಡಿದ್ದಾರೆ. 55 ಲಕ್ಷದಷ್ಟು ಜನರು ಕಾಮೆಂಟ್​ ಬರೆದಿದ್ದಾರೆ. ಅಷ್ಟು ಮಾತ್ರವಲ್ಲದೆ, ಯ್ಯೂಟೂಬ್​ನಲ್ಲಿ ಈ ಹಾಡು ಟಾಪ್​​​ 5 ಟ್ರೆಂಡಿಂಗ್​ನಲ್ಲಿ ಕಾಣಿಸಿಕೊಂಡಿದೆ.

news18-kannada
Updated:August 25, 2020, 5:16 PM IST
24 ಗಂಟೆಯಲ್ಲಿ 101 ಮಿಲಿಯನ್ ವೀಕ್ಷಣೆ; ವಿಶ್ವ ದಾಖಲೆ ಬರೆದ ಕೊರಿಯನ್ ಡೈನಮೈಟ್ ಸಾಂಗ್!
ಡೈನಮೈಟ್
  • Share this:
ಇತ್ತೀಚಿನ ದಿನಗಳಲ್ಲಿ ಜನರು ಕೊರಿಯನ್​ ಸಿನಿಮಾ, ವೆಬ್​ ಸಿರೀಸ್​, ಹಾಡುಗಳನ್ನು ಹೆಚ್ಚಾಗಿ ವೀಕ್ಷಿಸುತ್ತಿದ್ದಾರೆ. ಅದರಲ್ಲೂ  ಕೊರಿಯನ್​ ಪಾಪ್​​ ಸಿಂಗರ್​ಗಳ ಹಾಡನ್ನು ಹೆಚ್ಚಿನವರು ವೀಕ್ಷಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಹಿಟ್​ ಬಿಟ್​ ಲ್ಯಾಬ್ಸ್​ (ಬಿಟಿಎಸ್​​) ಯ್ಯೂಟೂಬ್​ ಖಾತೆ​ ಡೈನಮೈಟ್​ ಹಾಡನ್ನು ಬಿಡುಗಡೆ ಮಾಡಿತ್ತು. ಇದೀಗ ಈ ಹಾಡು ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ವೀಕ್ಷಣೆ ಕಾಣುವ ಮೂಲಕ ಹೊಸದೊಂದು ದಾಖಲೆಯನ್ನ ನಿರ್ಮಿಸಿದೆ.

ಯಂಗ್​ ಸಿಯೋಕ್​ ಚೋಯ್​ ನಿರ್ದೇಶನದಲ್ಲಿ ಮೂಡಿಬಂದ ಡೈನಾಮಿಕ್​ ಹಾಡನ್ನು ಅಗಸ್ಟ್​ 20ರಂದು ಹಿಟ್​​ ಬಿಟ್​ ಲ್ಯಾಬ್ಸ್​​ ಯ್ಯೂಟೂಬ್​ ಖಾತೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಹಾಡು ಬಿಡುಗಡೆಗೊಂಡ 24 ಗಂಟೆಯಲ್ಲಿ 101 ಮಿಲಿಯನ್​ ವೀಕ್ಷಣೆ ಕಂಡಿದೆ. ಆ ಮೂಲಕ ಕಡಿಮೆ ಅವಧಿಯಲ್ಲಿ ಹೆಚ್ಚು ವೀಕ್ಷಣೆ ಕಂಡ ಯ್ಯೂಟೂಬ್​ ವಿಡಿಯೋ ಸಾಂಗ್ ಎಂಬ ದಾಖಲೆಯನ್ನು ನಿರ್ಮಿಸಿದೆ.

ಈವರೆಗೆ  ಡೈನಾಮೈಟ್​​ ಹಾಡು 19 ಕೋಟಿ ಗೂ ಅಧಿಕ ವೀಕ್ಷಣೆ ಕಂಡಿದೆ. 14 ಮಿಲಿಯನ್​​ ಜನರು ಹಾಡನ್ನು ಇಷ್ಟಪಟ್ಟಿದ್ದಾರೆ. 60 ಸಾವಿರ ಜನರು ಡಿಸ್​ಲೈನ್​ ಮಾಡಿದ್ದಾರೆ. 55 ಲಕ್ಷದಷ್ಟು ಜನರು ಕಾಮೆಂಟ್​ ಬರೆದಿದ್ದಾರೆ. ಅಷ್ಟು ಮಾತ್ರವಲ್ಲದೆ, ಯ್ಯೂಟೂಬ್​ನಲ್ಲಿ ಈ ಹಾಡು ಟಾಪ್​​​ 5 ಟ್ರೆಂಡಿಂಗ್​ನಲ್ಲಿ ಕಾಣಿಸಿಕೊಂಡಿದೆ. ಅದರ ಜೊತೆಗೆ ಡೈನಮೈಟ್​ ಅಫೀಶಿಯಲ್​​ ಎಮ್​ವಿ(ಬಿ- ಸೈಟ್​) ಕೂಡ ಟ್ರೆಂಡಿಂಗ್​ನಲ್ಲಿದೆ.

Youtube Video


ಬಿಟಿಎಸ್​ ಯ್ಯೂಟೂಬ್​ ಖಾತೆ ಈವರೆಗೆ ಅನೇಕ ಹಾಡುಗಳನ್ನು ಯ್ಯೂಟೂಬ್​ನಲ್ಲಿ ಬಿಡುಗಡೆ ಮಾಡಿದೆ. ಟಿಎಕ್ಸ್​ಟಿ ಡ್ರಾಮಾ, ಟಿಎಕ್ಸ್​ಟಿ ಎಕ್ಸ್​ಟರ್​ನಲ್​, ಗರ್ಲ್​ಫ್ರೆಂಡ್​, ಸೆವೆಂಟೀನ್​​, ಐ ಲ್ಯಾಂಡ್​, ಸ್ಟೇ ಗೋಲ್ಡ್​ ಹಾಡುಗಳು ಬಿಡುಗಡೆಯಾಗಿವೆ. ಅವುಗಳಲ್ಲಿ ಹೆಚ್ಚಿನ  ವೀಡಿಯೋ ಸಾಂಗ್​ಗಳು ಜನಪ್ರಿಯತೆ ಗಳಿಸಿವೆ.
Published by: Harshith AS
First published: August 25, 2020, 5:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories