Viral News: ದೇಶ ವಿಭಜನೆಯಾದ 74 ವರ್ಷಗಳ ನಂತರ ಒಂದಾದ ‌ʼಭಾಯಿಜಾನ್ʼ..!

partition reunite: ಈ ಇಬ್ಬರ ಪುನರ್‌ಮಿಲನ ಯಾವುದೇ ಬಾಲಿವುಡ್ ಚಿತ್ರಗಳಿಗಿಂತಲೂ ಕಮ್ಮಿ ಇರಲಿಲ್ಲ. ಇಷ್ಟು ದೀರ್ಘಾವಧಿಯ ನಂತರ ಭೇಟಿಯಾದ ಇಬ್ಬರೂ ಸಹೋದರರು ಒಬ್ಬರನ್ನೊಬ್ಬರು ಅಪ್ಪಿಕೊಂಡು ಕಣ್ಣೀರ ಧಾರೆ ಹರಿಸಿದ ದೃಶ್ಯ ಮನಕಲಕುವಂತಿತ್ತು.

ಸಹೋದರರು

ಸಹೋದರರು

  • Share this:
ದೇಶ ವಿಭಜನೆ(partition of a country) ಭಾರತದ(India) ಇತಿಹಾಸ(History) ಪುಟಗಳಲ್ಲಿರುವ ಕರಾಳ ಅಧ್ಯಾಯಗಳಲ್ಲೊಂದು(Bad Chapter). ಈ ವಿಭಜನೆಯಿಂದ ಇಡೀ ದೇಶ ರಕ್ತಸಿಕ್ತವಾಯಿತು. ಹಲವಾರು ಮಂದಿ ತಮ್ಮ ಆಪ್ತೇಷ್ಟರನ್ನು ಶಾಶ್ವತವಾಗಿ ಕಳೆದುಕೊಂಡರು. ಮಕ್ಕಳು ಅನಾಥರಾದರು(Orphan). ಹೆಣ್ಣುಮಕ್ಕಳ ಮೇಲೆ ಹೀನಾತಿಹೀನ ಲೈಂಗಿಕ ದೌರ್ಜನ್ಯ, ಅತ್ಯಾಚಾರ ನಡೆಯಿತು. ಈ ಹೃದಯವಿದ್ರಾವಕ ದೇಶ ವಿಭಜನೆಗೆ ಈಗಾಗಲೇ 74 ವರ್ಷ ತುಂಬಿದ್ದು, 75 ವರ್ಷ ಸಮೀಪಿಸುತ್ತಿದೆ. ಇಷ್ಟು ದೀರ್ಘಾವಧಿಯ ನಂತರ ದೇಶ ವಿಭಜನೆಯ ಸಂದರ್ಭದಲ್ಲಿ ಬೇರ್ಪಟ್ಟಿದ್ದ ಸಹೋದರರಿಬ್ಬರು ಮತ್ತೆ ಒಂದುಗೂಡಿದ್ದಾರೆ. ಈ ಅಪೂರ್ವ ಮಿಲನಕ್ಕೆ ಕಾರಣವಾಗಿರುವ ಕರ್ತಾರಪುರ ಕಾರಿಡಾರ್‌ಗೆ ಆ ಇಬ್ಬರು ಸಹೋದರರು ಹೃದಯಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ.

74 ವರ್ಷಗಳ ಬಳಿಕ ಸಹೋದರರ ಅಪೂರ್ವ ಸಂಗಮ

ಈ ಕುರಿತು ಫ್ರೀ ಪ್ರೆಸ್ ಜರ್ನಲ್ ವರದಿ ಮಾಡಿದ್ದು, ಪಾಕಿಸ್ತಾನದ ಫೈಸಲಾಬಾದ್ ನಿವಾಸಿ ಮೊಹಮ್ಮದ್ ಸಿದ್ದಿಕಿ ಮಸೀದಿಯೊಂದಕ್ಕೆ ಭೇಟಿ ನೀಡಿದ್ದಾಗ ಪಂಜಾಬ್‌ನ ಫುಲನ್‌ವಾಲಾ ಪ್ರದೇಶದಲ್ಲಿ ವಾಸಿಸುತ್ತಿರುವ ತನ್ನ ಸಹೋದರ ಹಬೀಬ್ ಅವರನ್ನು ಭೇಟಿ ಮಾಡಿದ್ದಾರೆ. ಪಂಜಾಬ್‌ನ ಅರ್ವಾಯ್ ನ್ಯೂಸ್ ಕೂಡಾ ಈ ಕುರಿತು ವರದಿ ಮಾಡಿದ್ದು, ಫೈಸಲಾಬಾದ್‌ನಲ್ಲಿ ವಾಸಿಸುತ್ತಿರುವ ಸಿದ್ದಿಕಿ 80 ವರ್ಷ ವಯೋಮಾನದವರಾಗಿದ್ದು, ಅವರ ಸಹೋದರ ಹಬೀಬ್ ಅಲಿಯಾಸ್ ಶೀಲಾ ಪಂಜಾಬ್ ನಿವಾಸಿಯಾಗಿದ್ದಾರೆ ಎಂದು ಹೇಳಿದೆ.ಮಂಗಳವಾರ ನಡೆದ ಈ ಇಬ್ಬರ ಪುನರ್‌ಮಿಲನ ಯಾವುದೇ ಬಾಲಿವುಡ್ ಚಿತ್ರಗಳಿಗಿಂತಲೂ ಕಮ್ಮಿ ಇರಲಿಲ್ಲ. ಇಷ್ಟು ದೀರ್ಘಾವಧಿಯ ನಂತರ ಭೇಟಿಯಾದ ಇಬ್ಬರೂ ಸಹೋದರರು ಒಬ್ಬರನ್ನೊಬ್ಬರು ಅಪ್ಪಿಕೊಂಡು ಕಣ್ಣೀರ ಧಾರೆ ಹರಿಸಿದ ದೃಶ್ಯ ಮನಕಲಕುವಂತಿತ್ತು.

ಇದನ್ನೂ ಓದಿ:  ಮಗನ ಸಾವು ಸಂತಸ ನೀಡಿದೆ ಎಂದು ಟಿಕ್​ಟಾಕ್​ನಲ್ಲಿ ವಿಡಿಯೋ ಹಂಚಿಕೊಂಡ ತಾಯಿ! ಹೀಗೇಕೆ ಹೇಳಿದ್ರು?

ದೇಶ ವಿಭಜನೆಯಲ್ಲಿ ದೂರಾಗಿದ್ದ ಸಹೋದರರು

ಈ ಘಟನೆ ಕುರಿತ ವಿಡಿಯೋವನ್ನು ಟ್ವಿಟ್ಟರ್‌ ಸಂದೇಶವೊಂದರಲ್ಲಿ ಹಂಚಿಕೊಂಡಿರುವ ಗಗನ್‌ದೀಪ್ ಸಿಂಗ್ ಎಂಬ ವ್ಯಕ್ತಿ, "ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ನೆರವಿನಿಂದ ಪಂಜಾಬ್ ಗಡಿ ಪ್ರದೇಶದ ಈ ಇಬ್ಬರು ವಯೋವೃದ್ಧ ಸಹೋದರರು 74 ವರ್ಷಗಳ ನಂತರ ಒಟ್ಟಾಗಿದ್ದಾರೆ. ಈ ಇಬ್ಬರು ಸಹೋದರರು ದೇಶ ವಿಭಜನೆಯ ಸಂದರ್ಭದಲ್ಲಿ ಬೇರ್ಪಟ್ಟಿದ್ದರು. ಕರ್ತಾರ್‌ಪುರ ಸಾಹಿಬ್ ಈ ಇಬ್ಬರ ಪಾಲಿಗೆ ಪುನರ್‌ ಮಿಲನದ ಕಾರಿಡಾರ್ ಆಗಿ ಬದಲಾಗಿದೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ತಮ್ಮಿಬ್ಬರ ಪುನರ್‌ ಮಿಲನಕ್ಕೆ ನೆರವಾದ ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಬಗ್ಗೆ ಹಬೀಬ್ ಮುಕ್ತಕಂಠದಿಂದ ಕೊಂಡಾಡುತ್ತಾರೆ. ಕಾರಿಡಾರ್ ಪ್ರಾರಂಭದಿಂದ ದೇಶವಿಭಜನೆಯ ಸಂದರ್ಭದಲ್ಲಿ ತಮ್ಮಂತೆಯೇ ಬೇರ್ಪಟ್ಟಿರುವ ಹಲವಾರು ಕುಟುಂಬಗಳಲ್ಲಿ ಭವಿಷ್ಯದಲ್ಲಿ ಸಂತೋಷದ ಕ್ಷಣಗಳನ್ನು ತರಲಿದೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ. ಈ ಇಬ್ಬರು ಸಹೋದರರು ಭಾರತ ಹಾಗೂ ಪಾಕಿಸ್ತಾನ ಸರ್ಕಾರಗಳೆರಡಕ್ಕೂ ಧನ್ಯವಾದ ಅರ್ಪಿಸಿದರು.



ಕಳೆದ ವರ್ಷ ಕೂಡಾ ಕರ್ತಾರ್‌ಪುರ ಕಾರಿಡಾರ್ ಇದೇ ರೀತಿಯಲ್ಲಿ ಭಾರತ-ಪಾಕಿಸ್ತಾನದಲ್ಲಿನ ಇಬ್ಬರು ಗೆಳೆಯರ ಪುನರ್‌ ಮಿಲನಕ್ಕೆ ಕಾರಣವಾಗಿತ್ತು. ನವೆಂಬರ್, 2021ರಲ್ಲಿ ಭಾರತ ನಿವಾಸಿ ಹಾಗೂ 94 ವರ್ಷದ ಸರ್ದಾರ್ ಗೋಪಾಲ್ ಸಿಂಗ್ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಲು ಮಸೀದಿಗೆ ತೆರಳಿದ್ದರು. ಆದರೆ, ತಮ್ಮ ಈ ಭೇಟಿಯ ಸಂದರ್ಭದಲ್ಲಿ ಬಹುಕಾಲದ ಹಿಂದೆಯೇ ಕಳೆದುಕೊಂಡಿದ್ದ, ಸದ್ಯ ಪಾಕಿಸ್ತಾನದ ನರೋವಲ್ ಪ್ರದೇಶದ ನಿವಾಸಿಯಾಗಿರುವ 91 ವರ್ಷ ವಯಸ್ಸಿನ ಗೆಳೆಯ ಮುಹಮ್ಮದ್ ಬಶೀರ್‌ನನ್ನು ಸಂಧಿಸುವ ಅವಕಾಶ ದೊರೆಯಬಹುದು ಎಂಬ ಯಾವುದೇ ಉಪಾಯವೂ ಇರಲಿಲ್ಲ. ಈ ಕುರಿತು ವರದಿ ಮಾಡಿದ್ದ ಡಾನ್ ಪತ್ರಿಕೆಯ ಸ್ಥಳೀಯ ಆವೃತ್ತಿ, ಪುನರ್‌ ಮಿಲನಗೊಂಡು ಇಬ್ಬರೂ ಸ್ನೇಹಿತರೂ ತಮ್ಮ ಬಾಲ್ಯದ ದಿನಗಳ ನೆನಪುಗಳನ್ನು ಹೆಕ್ಕಿಕೊಂಡರು ಎಂದು ಹೇಳಿತ್ತು.

ಇದರೊಂದಿಗೆ ದೇಶ ವಿಭಜನೆಯಾಗಿ ಪಾಕಿಸ್ತಾನ ರಚನೆಯಾಗುವ ಮುನ್ನ ಸಿಂಗ್ ಹಾಗೂ ಬಶೀರ್ ಯುವಕರಾಗಿದ್ದರು ಹಾಗೂ ಗುರುನಾನಕ್ ಗುರುದ್ವಾರಕ್ಕೆ ಭೇಟಿ ನೀಡಿದಾಗ ಇಬ್ಬರೂ ಒಟ್ಟಾಗಿ ಊಟ ಹಾಗೂ ಚಹಾ ಸೇವಿಸುತ್ತಿದ್ದರು ಎಂದೂ ತಿಳಿಸಿತ್ತು.

ಇದನ್ನೂ ಓದಿ: ನಿರ್ಗತಿಕ ವ್ಯಕ್ತಿಯನ್ನು ಅಪ್ಪಿಕೊಂಡು ಸಂತೈಸಿದ ನಾಯಿ, ಸಖತ್ ವೈರಲ್ ಆಗ್ತಿದೆ ವಿಡಿಯೋ

ಈ ಸುದ್ದಿಯು ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಈ ಇಬ್ಬರು ಸ್ನೇಹಿತರ ಪುನರ್‌ ಮಿಲನ ಥೇಟ್ ಸಿನಿಮಾದಂತೆಯೇ ಇದೆ ಎಂದು ನೆಟ್ಟಿಗರು ಹರ್ಷ ವ್ಯಕ್ತಪಡಿಸಿದ್ದರು. ಪಂಜಾಬ್‌ನ ಗುರುದಾಸ್‌ಪುರದಲ್ಲಿರುವ ಡೇರಾ ಬಾಬಾ ನಾನಕ್ ಸಾಹಿಬ್ ಗುರುದ್ವಾರದಿಂದ ಪಾಕಿಸ್ತಾನದ ದರ್ಬಾರ್ ಸಿಂಗ್ ಸಾಹಿಬ್ ಗುರುದ್ವಾರಕ್ಕೆ ಈ ಕಾರಿಡಾರ್ ಸಂಪರ್ಕ ಕಲ್ಪಿಸಿದ್ದು, ಆ ಮೂಲಕ ಸಿಖ್ ಯಾತ್ರಾರ್ಥಿಗಳು ವೀಸಾ ಅವಶ್ಯಕತೆ ಇಲ್ಲದೆ ಪಾಕಿಸ್ತಾನದಲ್ಲಿನ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಬೇಟಿ ನೀಡುವ ಅವಕಾಶ ಒದಗಿಸುತ್ತದೆ.
Published by:ranjumbkgowda1 ranjumbkgowda1
First published: